ಸಂಶೋಧಕಿ, ಲೇಖಕಿ ಮತ್ತು ಸಕ್ರಿಯ ಕಾರ್ಯಕರ್ತೆ ಮತ್ತು ಪ್ರಧಾನ ಮಂತ್ರಿಗಳನ್ನು ಮಣಿಸಿದ ರೈತರ ಐತಿಹಾಸಿಕ ಹೋರಾಟವನ್ನು ಸಕ್ರಿಯವಾಗಿ ಬೆಂಬಲಿಸಿದ ಡಾ. ನವಶರಣ್ ಸಿಂಗ್ ಅವರನ್ನು ಮೇ 10ರಂದು ಏಳು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ.) ಪಿಎಂಎಲ್‌ಎ(ಕಪ್ಪು ಹಣವನ್ನು ಬಿಳುಪು ಮಾಡುವುದನ್ನು ತಡೆಯುವ) ಕಾಯ್ದೆಯ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಿರುವುದಕ್ಕೆ ದೇಶ-ವಿದೇಶಗಳಲ್ಲಿ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗಳು ವ್ಯಕ್ತವಾಗಿವೆ. ರೈತ ಹೋರಾಟಕ್ಕೆ ನೇತೃತ್ವ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಒಂದು ಹೇಳಿಕೆಯನ್ನು ನೀಡಿ, ಡಾ. ನವಶರಣ ಅವರು ದಿಲ್ಲಿ ಗಡಿಗಳಲ್ಲಿ ಐತಿಹಾಸಿಕ ರೈತ ಚಳವಳಿಯ ಪ್ರಮುಖ ಬೆಂಬಲಿಗರಲ್ಲಿ ಒಬ್ಬರು, ರೈತರ ಹೋರಾಟದ ಸಂದೇಶವನ್ನು ಅಂತಾರಾಷ್ಟ್ರೀಯ ವೇಧಿಕೆಗಳಿಗೆ ಕೊಂಡೊಯ್ದರು. ಇದಕ್ಕಾಗಿಯೇ ಮೋದಿ ಸರ್ಕಾರ ಆಕೆಯ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ ಎನ್ನುತ್ತ ,ನ್ಯಾಯಕ್ಕಾಗಿ ಆಕೆಯ ಅನ್ವೇಷಣೆಯಲ್ಲಿ ಎಸ್‌ಕೆಎಂ ಅವರಿಗೆ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದೆ. ಇದು ಡಾ.ನವಶರಣ್ ಸಿಂಗ್ ಅವರಿಗೆ ಕಿರುಕುಳ ನೀಡುವ ಮತ್ತು ಬೆದರಿಸುವ ಬಿಜೆಪಿ ಸರ್ಕಾರದ ದುಷ್ಟ ಪ್ರಯತ್ನ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ತೀವ್ರವಾಗಿ ಖಂಡಿಸಿದೆ. ಪಿಎಂಎಲ್‌ಎ ಅಡಿಯಲ್ಲಿ ಅವರನ್ನು ಪ್ರಶ್ನಿಸುವ ಜಾರಿ ನಿರ್ದೇಶನಾಲದ ಕ್ರಮ ಭಿನ್ನಾಭಿಪ್ರಾಯದ ದನಿಗಳನ್ನು ಅಡಗಿಸುವ ಇನ್ನೊಂದು ಪ್ರಯತ್ನವಾಗಿದೆ. ಪ್ರಜಾಸತ್ತಾತ್ಮಕ ಹಕ್ಕುಗಳ ಪ್ರತಿಪಾದಕರಾಗಿ, ಸಾರ್ವಜನಿಕ ಚಿಂತಕರಾಗಿ ಮಹತ್ವದ ಪಾತ್ರ ವಹಿಸುತ್ತಿರುವ ಅವರು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರೈತ-ವಿರೋಧಿ ಮತ್ತು ಜನವಿರೋಧಿ ನೀತಿಗಳಿಗೆ ತಮ್ಮ ವಿರೋಧವನ್ನು ನಿರಂತರವಾಗಿ ವ್ಯಕ್ತಪಡಿಸುತ್ತ ಬಂದಿರುವವರು. ಖ್ಯಾತ ನಾಟಕಕಾರ ದಿವಂಗತ ಗುರುಶರಣ್ ಸಿಂಗ್ ಅವರ ಪುತ್ರಿಯಾಗಿರುವ ಅವರು ರೈತ ಚಳವಳಿಗಳ ಕಟ್ಟಾ ಬೆಂಬಲಿಗರಾಗಿ ಬಿಜೆಪಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ಎಐಕೆಎಸ್ ಕೂಡ ನೆನಪಿಸಿದೆ. ಖ್ಯಾತ ಹಕ್ಕು ಕಾರ್ಯಕರ್ತ ಹರ್ಷ್ ಮಂದರ್ ನೇತೃತ್ವದ ಟ್ರಸ್ಟ್ ‘ಅಮನ್ ಬಿರಾದಾರಿ’ ಮಂಡಳಿಯ ಸದಸ್ಯರಾಗಿರುವ ಅವರನ್ನು ಈ ಟ್ರಸ್ಟ್£ ಕೆಲವು ಹಣಕಾಸಿನ ವಹಿವಾಟುಗಳು ಮತ್ತು ಹರ್ಷಮಂದರ್ ಅವರೊಂದಿಗಿನ ಸಂಬAಧದ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ಜನರ ಹಕ್ಕುಗಳನ್ನು ಮತ್ತು ಕೋಮು ಸೌಹಾರ್ದವನ್ನು ಪ್ರತಿಪಾದಿಸುತ್ತ, ಈ ಹಕ್ಕುಗಳ ಮತ್ತು ಸೌಹಾರ್ದದ ಉಲ್ಲಂಘನೆಯ ವಿರುದ್ಧ ದೇಶವಿಡೀ ಸಂಚರಿಸುತ್ತಿರುವ ಮಾಜಿ ಉನ್ನತ ಸರಕಾರೀ ಅಧಿಕಾರಿ ಹರ್ಷ ಮಂದರ್ ಅವರ ದನಿಯನ್ನು ಅಡಗಿಸಲು ಆರಂಭಿಸಿರುವ ಈ ತನಿಖೆಯಲ್ಲಿ ಈಗ ನವಶರಣ್ ಸಿಂಗ್‌ರವರನ್ನು ಕೂಡ ಸೇರಿಸಿರುವುದು ದೇಶದಾದ್ಯಂತ ಬುದ್ಧಿಜೀವಿಗಳು ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಕಾರ್ಯಕರ್ತರನ್ನು ಗುರಿಯಾಗಿಸುವ ಮೋದಿ ಸರ್ಕಾರದ ವಿಶಾಲ ಮಾದರಿಯ ಭಾಗವಾಗಿದೆ ಎಂದಿರುವ ಎಐಕೆಎಸ್ ಪ್ರಗತಿಪರ ಮತ್ತು ಪ್ರಜಾಪ್ರಭುತ್ವವಾದಿ ದನಿಗಳ ಮೇಲೆ ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ದಾಳಿಗಳ ವಿರುದ್ಧ ದನಿ ಎತ್ತುವಂತೆ ಜನಾಂದೋಲನದ ಎಲ್ಲಾ ವಿಭಾಗಗಳಿಗೆ ಮನವಿ ಮಾಡಿದೆ. ಅಖಿಲ ಭಾರತ ಅರಣ್ಯ ದುಡಿಯುವ ಜನರ ಸಂಘ ಮತ್ತು ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ ಕೂಡ ಇದು ಭಿನ್ನಾಭಿಪ್ರಾಯದ ದನಿಗಳನ್ನು ತೊಡೆದುಹಾಕಲು ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸುವ ನಿಂದನೀಯ ಕೃತ್ಯ ಎಂದು ಖಂಡಿಸಿವೆ. ಡಾ.ನವಶರಣ್ ಸಿಂಗ್ ಕೆನಡಾದ ಕಾರ್ಲೆಟನ್ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅಲ್ಲಿಯೂ ಬೌದ್ಧಿಕ ವಲಯದಲ್ಲಿ ಖ್ಯಾತರಾಗಿರುವ ಅವರನ್ನು ಬೆಂಬಲಿಸಿ ಕೆನಡಾದ 20 ಕ್ಕೂ ಹೆಚ್ಚು ಸಂಸ್ಥೆಗಳು ಜಂಟಿ ಹೇಳಿಕೆಯನ್ನು ನೀಡಿದ್ದು, ಇ.ಡಿ. ಯ ಈ ಕ್ರಮವನ್ನು ಪ್ರಗತಿಪರ ಧ್ವನಿಗಳನ್ನು ಗುರಿಯಾಗಿಸಿಕೊಂಡಿರುವ ಮೋದಿ ಸರ್ಕಾರದ ಬಂಧನಗಳೋAದಿಗೆ ತಳುಕು ಹಾಕುತ್ತ “ದಕ್ಷಿಣ ಏಷ್ಯಾದ ಒಬ್ಬ ಸಾಧಕಿ, ವಿದ್ವಾಂಸೆ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಡಾ. ಸಿಂಗ್ ಅವರು ತಳಮಟ್ಟದ ಕೆಲಸದ ಸುದೀರ್ಘ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಅವರ ದಿವಂಗತ ತಂದೆಯಿAದ ಪಡೆದ ಪರಂಪರೆಯನ್ನು ಮುಂದಕ್ಕೊಯ್ಯುತ್ತಿದ್ದಾರೆ ಗ್ರಾಮೀಣ ಪಂಜಾಬ್ ಮತ್ತು ಇತರೆಡೆಗಳಲ್ಲಿ ಬಡವರು ಮತ್ತು ವಂಚಿತರನ್ನು ತಲುಪುವ ಮೂಲಕ, ಅವರ ಬೆಂಬಲ ಮತ್ತು ವಕಾಲತ್ತು ಅವರಿಗೆ ಜನಸಾಮಾನ್ಯರ ಪ್ರೀತಿ ಮತ್ತು ಗೌರವವನ್ನು ಗಳಿಸಿ ಕೊಟ್ಟಿದೆ. ಇದು ಅವರು ಮೋದಿಯ ಕಠೋರ ಕಾನೂನುಗಳ ವಿರುದ್ಧ ಭಾರತೀಯ ರೈತರ ಹೋರಾಟವನ್ನು ಧೈರ್ಯದಿಂದ ಬೆಂಬಲಿಸಿದಾಗ ಸ್ಪಷ್ಟವಾಗಿದೆ. …ಡಾ. ನವಶರಣ್ ಸಿಂಗ್ ಮತ್ತು ಅವರ ತಳಮಟ್ಟದ ಮತ್ತು ಶೈಕ್ಷಣಿಕ ಕೆಲಸಗಳ ಬಗ್ಗೆ ತಿಳಿದಿರುವ ಅಥವಾ ಪರಿಚಿತರಾಗಿರುವ ನಮಗೆ, ಆಡಳಿತದ ತನಿಖಾ ಸಂಸ್ಥೆಗಳಿAದ ಆಕೆಯ ಕಿರುಕುಳವು ಆಕ್ರೋಶ ಉಂಟು ಮಾಡಿದೆ, ಇದನ್ನು ಒಪ್ಪಲು ಸಾಧ್ಯವಿಲ್ಲ , ಅದನ್ನು ದೃಢವಾಗಿ ವಿರೋಧಿಸಬೇಕು” ಎಂದಿವೆ.
ಸಂಪಾದಕರ ಆಯ್ಕೆ ೨
- No categories
ಸಚಿವನನ್ನೇ ಸೋಲಿಸಿದ ಕೈ ಶಾಸಕನ ಹತ್ಯೆಗೆ ಸ್ಕೆಚ್ : ಶಾಸಕ ಜಸ್ಟ್ ಮಿಸ್!, ಇಬ್ಬರ ಬಂಧನ
ಬಳ್ಳಾರಿ: ರಾಜಕೀಯ ಗುರುವಿನ ವಿರುದ್ದ ಶಿಷ್ಯ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೆ ಕೈ ಶಾಸಕನ ಹತ್ಯೆಗೆ ಸಂಚು ರೂಪಿಸಿದ್ದ ವಿಚಾರ ಈಗ…
ಕರ್ನಾಟಕದ ಜನತೆಯಿಂದ ಬಿಜೆಪಿ ಸರಕಾರಕ್ಕೆ ಗೇಟ್ ಪಾಸ್ – ಭಾಗ 01
ವಸಂತರಾಜ ಎನ್.ಕೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಗೇಟ್ ಪಾಸ್ ನೀಡಿದ್ದಾರೆ. ಈ ಕುರಿತಾಗಿ ವಿವರವಾದ ಮಾಹಿತಿಯುಳ್ಳ ಲೇಖನವನ್ನು…
ಕಾಂಗ್ರೆಸ್‌ಗೆ ʼಅಧಿಕಾರ ಗದ್ದುಗೆʼ ಎನ್ನುತ್ತಿವೆ ಎಕ್ಸಿಟ್ ಪೋಲ್
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ತೆರೆ ಬೀಳುತ್ತಿದ್ದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳ ಭರಾಟೆ ಶುರುವಾಗಿದೆ. ರಾಷ್ಟ್ರೀಯ, ಸ್ಥಳೀಯ ಏಜೆನ್ಸಿಗಳಿಂದ…
ಗುಜರಾತ್: ಐದು ವರ್ಷದಲ್ಲಿ 41 ಸಾವಿರಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ!
ಅಹಮದಾಬಾದ್: ಗುಜರಾತ್ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 41 ಸಾವಿರಕ್ಕೂ ಅಧಿಕ ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯೊಂದು ಅಂಕಿ…
ಬಿಜೆಪಿ ಅಭ್ಯರ್ಥಿಯ ಕರಪತ್ರದಲ್ಲಿ ಜಗದೀಶ್ ಶೆಟ್ಟರ್ ಫೋಟೋ!
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ ಬಿಜೆಪಿ vs ಜಗದೀಶ್ ಶೆಟ್ಟರ್ ಅಂತ ಪೈಪೋಟಿ ಏರ್ಪಟ್ಟಿದೆ. ಇನ್ನು ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿಯ…
ಕುಸ್ತಿಪಟುಗಳ ಪ್ರತಿಭಟನಾ ಸ್ಥಳಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ : ಮೋದಿ ವಿರುದ್ಧ ಕಿಡಿ
ನವದೆಹಲಿ: ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಲವಾರು ಅಥ್ಲೀಟ್ಗಳಿಗೆ ಲೈಂಗಿಕ ಕಿರುಕುಳ…
ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲವಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆ
ಡಬ್ಲ್ಯುಎಫ್‌ಐ ಅಧ್ಯಕ್ಷರ ಲೈಂಗಿಕ ಕಿರುಕುಳದ ವಿರುದ್ಧ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ವಿದ್ಯಾರ್ಥಿ-ಯುವಜನ, ರೈತರು, ಕಾರ್ಮಿಕರು ಮತ್ತು ಕೃಷಿಕೂಲಿಕಾರರ ಸಂಘಟನೆಗಳ ಬೆಂಬಲ ಅಂತಾರಾಷ್ಟ್ರೀಯ…
ಯುವಂ 2023: ಕೇರಳದ ಯುವಜನರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಪ್ರಧಾನಿ
ಕೇರಳ : ಕೊಚ್ಚಿ ಜಲ ಮೆಟ್ರೊ ಮತ್ತು ವಂದೇಭಾರತ್ ರೈಲು ಉದ್ಘಾಟನೆಗೆ ಸೇರಿದಂತೆ ಕೇರಳಕ್ಕೆ ಎರಡು ದಿನಗಳ ಪ್ರಧಾನಿ ಭೇಟಿಯ ಕಾಲದಲ್ಲಿ…
ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಘೋಷಿಸಿ ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆ
ಬೆಂಗಳೂರು : ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್…
ಎನ್.ಸಿ.ಇ.ಆರ್.ಟಿ ಪಠ್ಯಗಳು: ಮೊಗಲರಷ್ಟೇ ಅಲ್ಲ, ಡಾರ್ವಿನ್ ಮತ್ತು ಪೈಥಾಗೊರಸ್‍ಗೂ ಖೊಕ್!
ವೇದರಾಜ್ ಎನ್.ಕೆ ಎನ್.ಸಿ.ಇ.ಆರ್.ಟಿ ಶಾಲಾ ಪಠ್ಯಪುಸ್ತಕಗಳಲ್ಲಿ ಕೊವಿಡ್ ಮಹಾಸೋಂಕಿನಿಂದಾಗಿ ಉಂಟಾದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಭಾರವನ್ನು ಇಳಿಸುವ ನೆಪದಲ್ಲಿ ಇತಿಹಾಸ,…
ಅಮೆರಿಕದ ಬ್ಯಾಂಕುಗಳು ಮುಳುಗಿರುವುದರ ಹಿಂದೆ ಏನಿದೆ?
ಪ್ರೊ.ಪ್ರಭಾತ್ ಪಟ್ನಾಯಕ್ ಅನು:ಕೆ.ಎಂ.ನಾಗರಾಜ್ ಎರಡು ಅಮೆರಿಕದ ಬ್ಯಾಂಕುಗಳ ಕುಸಿತ ಇಡೀ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಒಂದು ವೈರುಧ್ಯವನ್ನು ಬಿಂಬಿಸುತ್ತದೆ. ಬಂಡವಾಳಶಾಹಿಯ…
ಮಹಾರಾಷ್ಟ್ರದ ರೈತರ ಮತ್ತೊಂದು ಲಾಂಗ್ ಮಾರ್ಚ್-ಮತ್ತೊಂದು ಮಹತ್ವದ ವಿಜಯ
ಈರುಳ್ಳಿ ರೈತರಿಗೆ ಸಿಗುವ ಬೆಲೆಗಳಲ್ಲಿ ಭಾರೀ ಕುಸಿತದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರೈತರು ಈರುಳ್ಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕೆಂಬ ಪ್ರಮುಖ ಬೇಡಿಕೆಯ…
ಜಾತಿ ತಾರತಮ್ಯ, ಮೀಸಲಾತಿ, ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳಿಗೆ ʻಕೇಂದ್ರ ಕಾರಣʼ : ಮುಂಬೈ ಐಐಟಿ ಎಸ್‍ಸಿ/ಎಸ್‌ಟಿ ಸೆಲ್ ಸಮೀಕ್ಷೆ
ಆತನ ಸಾವಿಗೆ ಕ್ಯಾಂಪಸ್ ನಲ್ಲಿರುವ ತಾರತಮ್ಯದ ವಾತಾವರಣ ಕಾರಣ ಎಂಬ ತೀವ್ರ ಆರೋಪದ ಹಿನ್ನೆಲೆಯಲ್ಲಿ ಐಐಟಿ, ಬಾಂಬೆ ನೇಮಿಸಿದ ತನಿಖಾ ಸಮಿತಿ ಆತನ ಆತ್ಮಹತ್ಯೆಗೆ…
“ಬಯಲು ಶೌಚ ಮುಕ್ತ ಭಾರತ” – ಬರಿ ಓಳು!!
ಭಾರತದ ಎಲ್ಲ ಹಳ್ಳಿಗಳು ‘ಬಯಲು ಶೌಚ ಮುಕ್ತ’ (ODF – Open Defecation Free) ವಾಗಿವೆ ಎಂದು ಭಾರತ ಸರಕಾರ 2019ರಲ್ಲೇ…
ಕಳೆದ ನಾಲ್ಕು ವರ್ಷದಿಂದ ಖಾಲಿ ಉಳಿದಿದೆ ಲೋಕಸಭೆ ಉಪಸಭಾಪತಿ ಸ್ಥಾನ!
ನವದೆಹಲಿ: ಪ್ರಸ್ತುತ 17ನೇ ಲೋಕಸಭೆಯ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷವಷ್ಟೇ ಬಾಕಿ ಇದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಲೋಕಸಭೆಯ…
ವಲಸೆ ಕಾರ್ಮಿಕರ ಬಗ್ಗೆ ಸುಳ್ಳು ಹೇಳಿಕೆ; ತಮಿಳುನಾಡಿನಲ್ಲಿ ಬಿಜೆಪಿ ನಾಯಕನ ವಿರುದ್ಧ ಪ್ರಕರಣ
ಚೆನ್ನೈ: ಪ್ರದೇಶ ಮತ್ತು ಭಾಷೆಯ ಆಧಾರದ ಮೇಲೆ ಜನರ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ಬಿಜೆಪಿ ನಾಯಕನ…
ತ್ರಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಸಿಪಿಐಎಂಗೆ ಮತ ಹಾಕಿದ್ದಾರೆಂದು ಬಿಜೆಪಿ ಬೆಂಬಲಿಗರ ಗೂಂಡಾದಾಳಿ
ಅಗರ್ತಾಲ: ಇತ್ತೀಚಿಗೆ ವಿಧಾನಸಭಾ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದ್ದು, ಈ ವೇಳೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷಕ್ಕೆ ಮತ್ತು ವಿರೋಧ…
ʻಸರ್ಕಾರವನ್ನು ಟೀಕಿಸುವ ಕವಿತೆ ಓದಬೇಡಿʼ ಎಂದರು; ಗೋಷ್ಟಿಯಿಂದ ದೂರ ಉಳಿದ ಅಶೋಕ್ ವಾಜಪೇಯಿ
ನವದೆಹಲಿ: ರಾಜಕೀಯ ಅಥವಾ ಸರ್ಕಾರವನ್ನು ನೇರವಾಗಿ ಟೀಕಿಸುವ ಕವಿತೆಗಳನ್ನು ಓದಬೇಡಿ ಎಂದು ನನ್ನನ್ನು ಕೇಳಿಕೊಂಡರು. ಹಾಗಾಗಿ ನಾನು ಕಲ್ಚರ್ ಫೆಸ್ಟ್ ಕಾರ್ಯಕ್ರಮದಲ್ಲಿ…