‘ನಯಾ ಭಾರತ್‍’ನ ‘ನಯಾ ಇತಿಹಾಸ್’ಗಾಗಿ ಪಠ್ಯಪುಸ್ತಕಗಳನ್ನು ‘ಹಗುರ’ಗೊಳಿಸುವ ಕೆಲಸ


                                                                                                                                                          ವೇದರಾಜ್‌ ಎನ್‌.ಕೆ

ರಾಹುಲ್‍ ಗಾಂಧಿಯವರ ಲೋಕಸಭಾ ಸದಸ್ಯತ್ವದ ರದ್ದು, ಕರ್ನಾಟಕದ ವಿಧಾನಸಭಾ ಚುನಾವಣೆಗಳು, ಇದರ ಹಿನ್ನೆಲೆ-ಮುನ್ನೆಲೆಯಲ್ಲಿ ರಾಜ್ಯಕ್ಕೆ ಮತ್ತು ಪಕ್ಕದ ರಾಜ್ಯಗಳಿಗೆ ಕೇಂದ್ರ ಸರಕಾರದ ಉನ್ನತ ಮುಖಂಡರುಗಳ ಸಾಲು-ಸಾಲು ಭೇಟಿಗಳು, ಮತ್ತು ಭ್ರಷ್ಟಾಚಾರದ ಬಗ್ಗೆ ವಾಕ್ಸಮರದ ಜತೆಗೆ ಕಳೆದ ಕೆಲವು ದಿನಗಳಲ್ಲಿ ದೇಶದ ವ್ಯಂಗ್ಯಚಿತ್ರಕಾರರ ಗಮನ ಸೆಳೆದ ಮತ್ತೊಂದು ಮುಖ್ಯ ವಿಷಯವೆಂದರೆ ಎನ್‍ ಸಿ ಇ ಆರ್‍ ಟಿ ಪಠ್ಯಪುಸ್ತಕಗಳನ್ನು, ಅದರಲ್ಲೂ ಇತಿಹಾಸದ ಪಠ್ಯಗಳನ್ನು ‘ಹಗುರ’ಗೊಳಿಸುವ ನಡೆಗಳು. ಈ ವಾರ ಈ ಕೊನೆಯ ವಿಷಯದ ಮೇಲಿನ ವ್ಯಂಗ್ಯಚಿತ್ರಗಳತ್ತ ಒಂದು ನೋಟ.

ಕಳೆದ ವರ್ಷ, ಕೊವಿಡ್‍ ಕಾಲದಲ್ಲಿ ಮಕ್ಕಳ ಶಿಕ್ಷಣಕ್ಕೆ ಬಂದ ಕಂಟಕದ ಹಿನ್ನೆಲೆಯಲ್ಲಿ ಕೋವಿಡೋತ್ತರ ಕಾಲದಲ್ಲಿ ಮಕ್ಕಳ ಓದಿನ ಹೊರೆಯನ್ನು ಹಗುರಗೊಳಿಸಲೆಂದು ಮತ್ತು ‘ತರ್ಕಬದ್ಧ’ ( ಸಿಲಬಸ್‍ ರೇಶನಲೈಸೇಷನ್)ಗೊಳಿಸಲೆಂದು ಎನ್‍.ಸಿ.ಇ. ಆರ್‍.ಟಿ. ಶಾಲಾ ಪಠ್ಯಗಳಲ್ಲಿ ಕೆಲವನ್ನು ಕೈಬಿಡುವ ಯೋಜನೆಯನ್ನು ಪ್ರಕಟಿಸಿತ್ತು. ಅದರಲ್ಲಿ ಮೊಗಲ್‍ ದರ್ಬಾರ್‍ ಗಳು, ಕೈಗಾರಿಕಾ ಕ್ರಾಂತಿ, ಶೀತಲ ಸಮರ ಮತ್ತು ಗುಜರಾತ್‍ನ 2002ರ ಹಿಂಸಾಚಾರಗಳ ಬಗ್ಗೆ ಉಲ್ಲೇಖಗಳನ್ನು ತೆಗೆದು ಹಾಕುವುದಾಗಿ ಪ್ರಕಟಿಸಲಾಗಿತ್ತು. ಆದರೆ ಈಗ ಮುದ್ರಣಗೊಂಡು ಬಂದಿರುವ ಪುಸ್ತಕಗಳಲ್ಲಿ ಇವಲ್ಲದೆ, ಇನ್ನೂ ಹಲವಾರು ಅಂಶಗಳನ್ನು ಕೈಬಿಡಲಾಗಿದೆ ಎಂದು ಎಪ್ರಿಲ್‍ 5ರಂದು ಇಂಡಿಯನ್‍ ಎಕ್ಸ್ ಪ್ರೆಸ್‍ ಪ್ರಕಟಿಸಿದೆ. ಆಮೇಲೆ ಮಾಧ್ಯಮಗಳಲ್ಲಿ ಇನ್ನಷ್ಟು ವಿವರಗಳು ಪ್ರಕಟವಾಗಿವೆ. ಈಗ ಜನಜನಿತವಾಗುತ್ತಿರುವ ಬುಲ್‍ ಡೋಜರ್ ಪ್ರವೇಶವಾಗುತ್ತಿದೆಯೆಂದು ಸುಮಾರಾಗಿ ಎಲ್ಲ ವ್ಯಂಗ್ಯಚಿತ್ರಕಾರರ ಗಮನವನ್ನು ಇದು ಸೆಳೆದಿದೆ.

 

ನಾನು ಹುಡುಗನಾಗಿದ್ದಾಗ ನಮಗೆ ದಪ್ಪನೆಯ ಚರಿತ್ರೆ ಪುಸ್ತಕ ಇತ್ತು! (ಪೊನ್ನಪ್ಪ, ಟ್ವಿಟರ್)
ನಾನು ಹುಡುಗನಾಗಿದ್ದಾಗ ನಮಗೆ ದಪ್ಪನೆಯ ಚರಿತ್ರೆ ಪುಸ್ತಕ ಇತ್ತು! (ಪೊನ್ನಪ್ಪ, ಟ್ವಿಟರ್)

ಹೌದು, ಈಗ ತೆಳ್ಳಗಾಗಿರುವ ಹಗುರವಾದ ಇತಿಹಾಸ ಪುಸ್ತಕಗಳನ್ನು ಓದಿ ಈಗಿನ ಹುಡುಗರು- ಮೊಗಲರು ಎನ್ನುವವರು ಇರಲೇ ಇಲ್ಲ, ಆರೆಸ್ಸೆಸ್‍ ನಿಷೇಧಕ್ಕೆ ಒಳಗಾಗಲೇ ಇಲ್ಲ, ಗುಜರಾತಿನಲ್ಲಿ 2002ರಲ್ಲಿ ಏನೂ ಆಗಿರಲಿಲ್ಲ ಎಂದೆಲ್ಲ ನಂಬಿಕೊಂಡೇ ಬೆಳೆಯುತ್ತಾರೆ ಎಂದಿದ್ದಾರೆ ಪತ್ರಕರ್ತ ವಿನಯ್‍ ಪಾಂಡೆ(ಲೀಫ್‍ ಲೆಟ್, ಎಪ್ರಿಲ್‍ 5).

“ ತುರ್ತು ಪರಿಸ್ಥಿತಿ ಕುರಿತ ವಿವಾದಗಳು” ಮತ್ತು “ಗುಜರಾತ್‍ ಗಲಭೆಗಳು” “ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ” , “ ಜನಪ್ರಿಯ ಹೋರಾಟಗಳು ಮತ್ತು ಆಂದೋಲನಗಳು”, “ ಪ್ರಜಾಪ್ರಭುತ್ವದ ಸವಾಲುಗಳು”, “ರಾಜಮನೆತನಗಳು, ರಾಜರುಗಳು ಮತ್ತು ಆರಂಭಿಕ ಗಣತಂತ್ರ” ಎಂಬ ಅಧ್ಯಾಯದಲ್ಲಿ ವರ್ಣಗಳ ಅನುವಂಶಿಕ ಸ್ವರೂಪ, ಅಸ್ಪೃಶ್ಯರೆಂದು ಜನಗಳ ವರ್ಗೀಕರಣ ಮತ್ತು ವರ್ಣ ವ್ಯವಸ್ಥೆಗೆ ತಿರಸ್ಕಾರ ಕುರಿತ ವಾಕ್ಯಗಳು- ಹೀಗೆ ‘ಹಗುರ’ಗೊಳಿಸುವ ಕ್ರಿಯೆಯಲ್ಲಿ ಹಲವಾರು ಅಧ್ಯಾಯಗಳನ್ನು ತೆಗೆಯಲಾಗಿದೆ.

ಅಲ್ಲದೆ 12ನೇ ತರಗತಿ ಪಠ್ಯದಿಂದ “ಸಮಕಾಲೀನ ವಿಶ್ವ ರಾಜಕೀಯ”ದಲ್ಲಿ “ಶೀತಲ ಸಮರದ ಯುಗ” ಮತ್ತು “ವಿಶ್ವ ರಾಜಕೀಯದಲ್ಲಿ ಅಮೆರಿಕಾದ
ಪ್ರಾಬಲ್ಯ” ಎಂಬ ಅಧ್ಯಾಯಗಳನ್ನುನ್ನೂ ತೆಗೆಯಲಾಗಿದೆಯಂತೆ.( ( ‘ಐತಿಹಾಸಿಕ ‘ ಬದಲಾವಣೆಗಳು- ಎನ್‍ ಸಿ ಇ ಆರ್‍ ಟಿ ಕೈಬಿಟ್ಟಿರುವದೇನು? ,
ಬಿಸಿನೆಸ್‍ ಸ್ಟಾಂಡರ್ಡ್, ಎಪ್ರಿಲ್‍ 5)

                                                                                “ಇತಿಹಾಸ ಈಗ ಮೊಗಲ್‌ – ಮುಕ್ತವಾಗಿದೆ”

“ ಮೊಗಲರ ಪೂರಾ ಇತಿಹಾಸವನ್ನು ಸಾಫ್ ಮಾಡಿದ್ದೇನೆ…”(ವಿನಯ್‍ ಚಾನೇಕರ್, ಫೇಸ್‍ ಬುಕ್)
“ ಮೊಗಲರ ಪೂರಾ ಇತಿಹಾಸವನ್ನು ಸಾಫ್ ಮಾಡಿದ್ದೇನೆ…” (ವಿನಯ್‍ ಚಾನೇಕರ್, ಫೇಸ್‍ ಬುಕ್)

                                                                          ಹೌದು, ಹುಮಾಯೂನ್, ಶಾಹಜಹಾನ್, ಅಕ್ಬರ್, ಜಹಾಂಗೀರ್ ಮತ್ತು ಔರಂಗಜೇಬ ಈ ಮೊಗಲ ಸಾಮ್ರಾಟರ ಸಾಧನೆಗಳನ್ನು ಉಲ್ಲೇಖಿಸುವ
ಎರಡು ಪುಟಗಳ ತಖ್ತೆಯನ್ನು ತೆಗೆಯಲಾಗಿದೆಯಂತೆ.

 “12ನೇ ತರಗತಿ ಪುಸ್ಯಕಗಳಿಂದ ಮೊಗಲ್‍ ಸಾಮ್ರಾಜ್ಯ ಕುರಿತ ಅಧ್ಯಾಯಗಳನ್ನು ತೆಗೆದು ಹಾಕಲಾಗಿದೆ-ಇದು ನಿನ್ನ ಭವಿಷ್ಯಕ್ಕೆ ಒಳ್ಳೇ ಸುದ್ದಿ”


                                                                            “ನಿರುದ್ಯೋಗಿಯಾಗಿರಲು ನೀನು ನನ್ನಷ್ಟು ಓದಬೇಕಾಗಿಲ್ಲ”
                                                                                 (ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

                  ***
ಇವೆಲ್ಲ “ಮತ್ತೆ-ಮತ್ತೆ ಬರುವ “, “ ಅಪ್ರಸ್ತುತ”ವಾದ ವಿಷಯಗಳು, ಆದ್ದರಿಂದಾಗಿ ಕೈಬಿಡಲಾಗಿದೆ, ಇವನ್ನೆಲ್ಲ ಕಳೆದ ವರ್ಷವೇ ಪ್ರಕಟಿದ್ದೇವೆ, ಈಗೇಕೆ ಗದ್ದಲ ಎಂದು ಈ ಬಗ್ಗೆ ಕೇಳಿದಾಗ ಎನ್‍,ಸಿ.ಇ.ಆರ್.ಟಿ. ನಿರ್ದೇಶಕರು ಹೇಳಿದ್ದಾರಂತೆ. ಆದರೆ ಗಾಂಧೀಜಿ ಮತ್ತು ಆರೆಸ್ಸೆಸ್‍ ಕುರಿತಂತೆ ಕೈಬಿಟ್ಟಿರುವ ಮಹತ್ವದ ಅಂಶಗಳ ಪ್ರಸ್ತಾಪ ಕಳೆದ ವರ್ಷದ ಈ ಕುರಿತ ಪ್ರಕಟಣೆಯಲ್ಲಿ ಇಲ್ಲವಲ್ಲ ಎಂದು ಕೇಳಿದಾಗ ಅದು ಕಣ್ತಪ್ಪಿನಿಂದ ಆಗಿರಬಹುದು ಎಂದು ಅವರು ಹೇಳಿರುವುದಾಗಿಯೂ ವರದಿಯಾಗಿದೆ.

***

12ನೇ ತರಗತಿಯ ರಾಜಕೀಯ ಶಾಸ್ತ್ರ ಪಠ್ಯದಲ್ಲಿ “ಸ್ವಾತಂತ್ರ್ರ್ಯಾನಂತರದ ಭಾರತದಲ್ಲಿ ರಾಜಕೀಯ” ಎಂಬ ಅಧ್ಯಾಯದಲ್ಲಿ ಈ ಕೆಳಗಿನ
ವಿವರಣೆಯಿತ್ತು:

“ಹಿಂದೂಗಳು ಪ್ರತೀಕಾರಕ್ಕಿಳಿಯಬೇಕು ಎಂದು ಬಯಸುವವರು, ವಿಶೇಷವಾಗಿ ಮುಸ್ಲಿ ಮರಿಗೆ ಪಾಕಿಸ್ತಾನ ಇರುವಂತೆ ಭಾರತ ಹಿಂದೂಗಳ
ದೇಶವಾಗಬೇಕು ಎನ್ನುವವರು ಇದನ್ನು ಇಷ್ಟಪಡಲಿಲ್ಲ. ಅವರು ಗಾಂಧೀಜಿ ಮುಸ್ಲಿಮರು ಮತ್ತು ಪಾಕಿಸ್ತಾನದ ಹಿತದೃಷ್ಟಿಯಿಂದ ಕೆಲಸ
ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಈ ಜನ ತಪ್ಪು ದಾರಿಯತ್ತ ನಿರ್ದೇಶಿಸಲ್ಪಟ್ಟವರು ಎಂದು ಗಾಂಧೀಜಿ ಯೋಚಿಸಿದರು. ಭಾರತವನ್ನು ಹಿಂದೂಗಳಿಗೆ ಮಾತ್ರ ಎಂದು ಮಾಡುವ ಯಾವುದೇ ಪ್ರಯತ್ನ ಭಾರತವನ್ನು ಧ್ವಂಸ ಮಾಡುತ್ತದೆ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಹಿಂದೂ-ಮುಸ್ಲಿಂ ಐಕ್ಯತೆಗೆ ಅವರ ಅಚಲ ಬದ್ಧತೆ ಹಿಂದೂ ಉಗ್ರಗಾಮಿಗಳನ್ನು ಎಷ್ಟೊಂದು ಉದ್ರೇಕಿಸಿತೆಂದರೆ ಗಾಂಧೀಜಿಯ ಹತ್ಯೆಗೆ
ಅವರು ಹಲವು ಪ್ರಯತ್ನಗಳನ್ನು ಮಾಡಿದರು….”
ಅದನ್ನೀಗ ಕಿತ್ತು ಹಾಕಲಾಗಿದೆ.


ಗಾಂಧೀಜಿ ಒಂದು ತಿಕ್ಕಲು ಅಪಘಾತದಲ್ಲಿ ಸತ್ತರು ಎಂದು
                                                                            ನಂಬುವುದು ಕಷ್ಟ. ಒಂದು ಮಾನವ ರಹಿತ ಟೆಸ್ಲ ಕಾರ್ ಹೊಡೆಯಿತು!
                                                                                 ( ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

 

ತೆಗೆದು ಹಾಕಿದ ಇನ್ನೊಂದು ಪ್ಯಾರಾ…..

“ಗಾಂಧೀಜಿಯ ಸಾವು ದೇಶದಲ್ಲಿನ ಕೋಮು ಪರಿಸ್ಥಿತಿಯ ಮೇಲೆ ಸುಮಾರಾಗಿ ಜಾದೂವಿನಂತಹ ಪರಿಣಾಮ ಬೀರಿತು. ದೇಶ ವಿಭಜನೆಗೆ ಸಂಬಂಧಪಟ್ಟ ಕ್ರೋಧ ಮತ್ತು ಹಿಂಸಾಚಾರ ಇದ್ದಕ್ಕಿದ್ದಂತೆ ಇಳಿಯಿತು. ಸರಕಾರ ಕೋಮುವಾದಿ ದ್ವೇಷವನ್ನು ಹರಡುವ ಸಂಘಟನೆಗಳ ಮೇಲೆ ಕಠಿಣ ಕ್ರಮಗಳಿಗಿಳಿಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ಸಂಘಟನೆಗಳನ್ನು ಸ್ವಲ್ಪ ಸಮಯದವರೆಗೆ ನಿಷೇಧಿಸಲಾಯಿತು. ಕೋಮುವಾದಿ ರಾಜಕೀಯ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳಲಾರಂಭಿಸಿತು.………”

***

ಮೇ 23, 1987ರಂದು ಉತ್ತರಪ್ರದೇಶದ ಮೇರಠ್‍ ಜಿಲ್ಲೆಯ ಮಲಿಯಾನಾದಲ್ಲಿ ಪಿಎಸಿ (ಉತ್ತರ ಪ್ರದೇಶದ ಸಶಸ್ತ್ರ ಪೋಲೀಸ್‍ ಪಡೆ) ತಂಡವೊಂದು ನುಗ್ಗಿದ ಮೇಲೆ ನಡೆದ 72 ಮುಸ್ಲಿಮರ ಕಗ್ಗೊಲೆಯ ಪ್ರಕರಣ ಕುರಿತು ಸುಮಾರು 36 ವರ್ಷಗಳ ನಂತರ, 800 ವಿಚಾರಣೆಗಳ ನಂತರ ಬಂದಿರುವ ತೀರ್ಪು ಅದರಲ್ಲಿ ಆಪಾದಿತರಾಗಿದ್ದ ಎಲ್ಲರನ್ನೂ ಸಾಕಷ್ಟು ಪುರಾವೆಯಿಲ್ಲ ಎಂದು ಮುಕ್ತಗೊಳಿಸಿದೆ ಎಂಬ ಸುದ್ದಿ ಇದೇ ಮಾರ್ಚ್ 31ರಂದು ಬಂದಿದೆ. ಈ ಸುದ್ದಿ ಎನ್‍ ಸಿ ಇ ಆರ್‍ ಟಿ ಯ ಪಠ್ಯ ಕಡಿತಗಳ ಸುದ್ದಿಯ ಹಿನ್ನೆಲೆಯಲ್ಲಿ ಏನು ಹೇಳುತ್ತಿದೆ.. .. ..

“ಬಾಪು, ನಿಮ್ಮ ವಿಷಯದಲ್ಲೂ ಕೂಡ ಬುಲೆಟ್‍ಗಳು ದಿಕ್ಕೆಟ್ಟು
                                                                          ಸ್ವಯಂ-ಉದ್ಯೋಗಿ ಹಿಟ್‍ಮನ್‍ ಗಳಾಗಿ ಬಿಟ್ಟಿರಬೇಕು”

                                                                             (ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)
ನಿಜ, ಸರಕಾರದ ಬೆಂಬಲಿಗರು ಇದನ್ನೆಲ್ಲ ಒಪ್ಪುತ್ತಿಲ್ಲ.

“ಗಾಂಧೀಜಿಯೂ ಇದ್ದಾರೆ, ಮೊಗಲರೂ ಇದ್ದಾರೆ. ಒಂದೇ ಪ್ರಯೋಜನವೆಂದರೆ….”


            “ ಮಹಾತ್ಮ ಗಾಂಧಿ ಮೊಗಲರಿಂದ ಹತ್ಯೆಯಾದರು…”

( ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್)

                                                                                                                                                       ***
ಇಲ್ಲಿಯೂ ದುರಂತವನ್ನು ಅವಕಾಶವಾಗಿ ಪರಿವರ್ತಿಸುವ ತಮ್ಮ ತತ್ವದ ಅನುಸರಣೆಯನ್ನು ಮುಂದುವರೆಸುತ್ತ ಆಳುವ ಮಂದಿ ತಮ್ಮ ಅಜೆಂಡಾವನ್ನು
ಈಡೇರಿಸಿಕೊಳ್ಳುತ್ತಿದ್ದಾರೆ ಎಂದು ಈ ಇಡೀ ಪ್ರಕ್ರಿಯೆಯನ್ನು ಹಲವಾರು ಅಧ್ಯಯನಕಾರರು ವಿಮರ್ಶಿಸುತ್ತಿದ್ದಾರೆ.

ಈ ಮೇಲೆ ಪಟ್ಟಿ ಮಾಡಿರುವ, ಪಠ್ಯಗಳಲ್ಲಿ ಕೈಬಿಟ್ಟ ಅಂಶಗಳಿಂದ ಮೇಲ್ನೋಟಕ್ಕೇ ಈ ಭಾವನೆ ಮೂಡುವುದು ಸಹಜವೇ.

ಅಂತೂ ಮೊಗಲರು, ಸುಲ್ತಾನರುಗಳನ್ನು ಹೊರ ದಬ್ಬಿ ಹಿಸ್ಟರಿ ಅಪಾರ್ಟ್‍ಮೆಂಟ್‍ಗಳು ಸಿದ್ಧಗೊಳ್ಳುತ್ತಿವೆ!

                                                                        “ಜಹಾಂಪನಾಹರಿಗೆ ಅರಮನೆ ಬೇಗನೇ ಸಿದ್ಧಗೊಳ್ಳಲಿದೆ!”
                                                                                    ( ಮಂಜುಲ್‍, ನ್ಯೂಸ್‍ ಲಾಂಡ್ರಿ)

***
ಚರಿತ್ರೆ ಹೋಗಿ ಅದು ಕತೆಯಾಗುತ್ತಿದೆ ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರರು.

‘ಹಿಸ್ಟೊರಿ’ ಯನ್ನು ಅಳಿಸಿ ‘ಸ್ಟೋರಿ’ ಮಾಡಲಾಗುತ್ತಿದೆ.

                                                                                           (ಎಂ ಅಲಿ, ಫೇಸ್‍ ಬುಕ್)

ಈಗ ಈ ಕತೆ ಬರೆಯುವವರು ಬೇಕಾಗಿದ್ದಾರೆ …. ಖಂಡಿತ ಬಾಲಿವುಡ್‍ ನಲ್ಲಿ ಸುಲಭವಾಗಿ ಸಿಗಬಹುದು.


(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

ಈ ಬಾಲಿವುಡ್‍ ಕತೆಗಾರರು ರಚಿಸುವ ಇತಿಹಾಸ ಪುಸ್ತಕ ಇನ್ನು ಆರು ವರ್ಷಗಳಲ್ಲಿ ಹೇಗಿರಬಹುದು……
ಊಹಿಸಿ ನೋಡಬೇಕಷ್ಟೇ. ಒಂದು ಊಹೆ ಇಲ್ಲಿದೆ…..

ಭಾರತೀಯ ಶಾಲಾ ಇತಿಹಾಸ ಪಠ್ಯಪುಸ್ತಕ, 2029

ಅಕ್ಬರ್… ….ಜವಹರಲಾಲ್‍ ನೆಹರೂ ಪ್ರಜಾಪ್ರಭುತ್ವದ ಮೂಲಗಳು – ಚಾತುರ್ವಣ್ಯ
                                                                        ಗುಜರಾತ್‍ 2002- ಛದ್ಮವೇಷ ಸ್ಪರ್ಧೆ ಆರೆಸ್ಸೆಸ್‍ ಸಂಸ್ಥಾಪಕ- ಗಾಂಧೀಜಿ

                                                                             ( ಪೆನ್‍ಪೆನ್ಸಿಲ್‍ಡ್ರಾ, ಟ್ವಿಟರ್)

***
ಶಾಲಾಮಕ್ಕಳ ಓದನ್ನು ‘ಹಗುರ’ ಗೊಳಿಸುವ ಹೆಸರಿನ ಈ ನಡೆ ಇತಿಹಾಸಕ್ಕಷ್ಟೇ ಸೀಮಿತವಾಗಿಲ್ಲ.

ಕರ್ನಾಟಕದಲ್ಲಿ ಪಿಯು-1 ಮತ್ತು ಪಿಯು-2ರ ವಿಜ್ಞಾನ ಮತ್ತು ವಾಣಿಜ್ಯ ಕೋರ್ಸ್‍ಗಳಿಗೆ ಎನ್‍.ಸಿ.ಇ.ಆರ್‍.ಟಿ. ಯ ಪಠ್ಯಕ್ರಮವನ್ನೇ ಅಳವಡಿಸಿಕೊಂಡಿರುವ ಪ್ರಿ-ಯೂನಿವರ್ಸಿಟಿ ಶಿಕ್ಷಣ ಇಲಾಖೆ 2023-24ರಲ್ಲಿ ಮೊದಲ ಪಿಯು (ಅರ್ಥಶಾಸ್ತ್ರ)ದ ಅಭಿವೃದ್ಧಿ ಅರ್ಥಶಾಸ್ತ್ರದ ಪಠ್ಯದಲ್ಲಿ
‘ಬಡತನ’ ಮತ್ತು ‘ಮೂಲರಚನೆ’ಯ ಅಧ್ಯಾಯಗಳನ್ನು ಕೈಬಿಟ್ಟಿದೆಯಂತೆ( ದಿ ಹಿಂದು, ಎಪ್ರಿಲ್‍ 7).
ಬಡತನ ಮತ್ತು ಮೂಲರಚನೆಯಂತ ಅಧ್ಯಾಯಗಳು ಭಾರತದ ಅರ್ಥವ್ಯವಸ್ಥೆಯನ್ನು ತಿಳಿಯಲು ಅತ್ಯಗತ್ಯವಾದ ವಿಷಯಗಳು. ಅವನ್ನು ದೇಶದ ಭವಿಷ್ಯ ರೂಪಿಸಲಿರುವ ವಿದ್ಯಾರ್ಥಿಗಳಿಂದ ಮುಚ್ಚಿಡುವ ಅಗತ್ಯವಾದರೂ ಏನು ಎಂದು ಹಲವು ಅಧ್ಯಾಪಕರುಗಳು ಪ್ರಶ್ನಿಸಿರುವುದಾಗಿಯೂ ಈ ಸುದ್ದಿ ಹೇಳುತ್ತದೆ. ಇದಕ್ಕೆ ಉತ್ತರ ಬಹುಶಃ ಜಿ-20ರ ಅಧ್ಯಕ್ಷತೆಯ ಸಂಭ್ರಮಾಚರಣೆಗೆ ಮುಂಬೈ, ನಾಗ್ಪುರ ಮತ್ತು ಈಗ ದಿಲ್ಲಿಯಲ್ಲಿಯೂ ಬಡಜನಗಳು ಜಿ-20
ಪ್ರತಿನಿಧಿಗಳ ಕಣ್ಣಿಗೆ ಬೀಳದಂತೆ ಮಾಡಲು ಬಹಳ ಶ್ರಮ ಪಟ್ಟಿದೆ ಎಂಬ ಸುದ್ದಿಗಳಲ್ಲಿ ಸ್ವಲ್ಪಮಟ್ಟಿಗೆ ಸಿಗುತ್ತದೆ.

ಜಿ-20 ಸಭೆಯ ಮೊದಲು ಭಿಕ್ಷುಕರು, ವಸತಿಹೀನರು ನಾಗ್ಪುರ ಬಿಡುವಂತೆ ತಾಕೀತು

ಅದೂ ನಮ್ಮನ್ನು ಫೋಟೋಗಳಿಂದ ಎಡಿಟ್‍ ಮಾಡಿ ಹೊರಹಾಕಲು ಸರಕಾರದ ಬಳಿ
                                                                          ಒಂದು ಉತ್ಕೃಷ್ಟ ಮೇಕ್‍-ಅಪ್‍ ತಂಡ ಮತ್ತು ಫೋಟೋಶಾಪ್ ಪರಿಣಿತರು ಇರುವಾಗ!

                                                                        (ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

ದಿಲ್ಲಿಯಲ್ಲೂ .. ..

                                                                      ಜಿ-20ರ ಪ್ರಯುಕ್ತ ದಿಲ್ಲಿಯನ್ನು ಭಿಕ್ಷುಕ-ಮುಕ್ತ ಪ್ರದೇಶವಾಗಿಸಲು ಒಂದು ಸಮಿತಿ ನೇಮಿಸಲಾಗಿದೆ!

… ಅಥವಾ ಗುಜರಾತಿನಂತೆ ಇಲ್ಲಿಯೂ ಒಂದು ವಿಕಾಸ ಗೋಡೆಯನ್ನೇಕೆ ಕಟ್ಟಬಾರದು…!

                                                                                     ( ಇರ್ಫಾನ್‍, ನ್ಯೂಸ್‍ಕ್ಲಿಕ್)

ಹೌದು , ಇಲ್ಲಿಯೂ ಗುಜರಾತೇ ‘ಮಾದರಿ’…

ಮೂರು ವರ್ಷಗಳ ಹಿಂದೆ ಅಧ್ಯಕ್ಷ ಟ್ರಂಪ್‍ರವರ ಅಹಮದಾಬಾದ್‍ ಭೇಟಿಯ ಸಂದರ್ಭದಲ್ಲಿ ಅವರು ಸಾಗುವ ದಾರಿಯಲ್ಲಿನ ಕೊಳೆಗೇರಿಗಳ
ದೃಶ್ಯವನ್ನು ಮರೆಮಾಚಲು ಗೋಡೆಯನ್ನೇ ರಚಿಸಲಾಯಿತು ಎಂಬುದು ದೊಡ್ಡ ಸುದ್ದಿಯಾಗಿತ್ತು.


ಸ್ವಾಗತ ಟ್ರಂಪ್‍ ಭಾಯ್!
(ಸತೀಶ ಆಚಾರ್ಯ, ಸಿಫಿ.ಕಾಂ)

11ನೇ ತರಗತಿಯ ಸಮಾಜಶಾಸ್ತ್ರದ ಪಠ್ಯಪುಸ್ತಕ “ ಸಮಾಜವನ್ನು ಅರ್ಥಮಾಡಿಕೊಳ್ಳುವ ಬಗೆ’ ಪುಸ್ತಕದ ಮೂರನೇ ಅಧ್ಯಾಯ “ಪರಿಸರ ಮತ್ತು
ಸಮಾಜ”ದಲ್ಲಿ ಪರಿಸರ ಸಮಸ್ಯೆಗಳು ಸಾಮಾಜಿಕ ಸಮಸ್ಯೆಗಳು ಕೂಡ ಎನ್ನುತ್ತ ಎರಡು ಪ್ರಕರಣ ಅಧ್ಯಯನಗಳನ್ನು ಉದಾಹರಣೆಯಾಗಿ
ಕೊಡಲಾಗಿತ್ತು. ಇದನ್ನು ಬರೆದವರು ಖ್ಯಾತ ಪತ್ರಕರ್ತ ಪಿ.ಸಾಯಿನಾಥ್‍. ಅದನ್ನೀಗ ಕೈಬಿಡಲಾಗಿದೆಯಂತೆ( ದಿ ಹಿಂದು, ಎಪ್ರಿಲ್‍ 9)

***
ಪಠ್ಯಪುಸ್ತಕಗಳನ್ನು ಹಗುರಗೊಳಿಸುವ ಈ ಕ್ರಿಯೆಯಿಂದ ಪಾಲಕರಿಗೇನಾದರೂ ಪ್ರಯೋಜನವಿದೆಯೇ?

ಆಗಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆಯೇ?

“ಈಗ ಇಷ್ಟೊಂದು ಪಾಟ ಕಡಿಮೆ ಓದಿಸುವುದಾದರೆ,
                                                                        ಶುಲ್ಕಗಳನ್ನು ಕೂಡ ಕಡಿಮೆ ಮಾಡಿಯಲ್ಲಾ”
                                                                     

( ಕೀರ್ತಿಶ್, ಬಿಬಿಸಿ ನ್ಯೂಸ್‍ ಹಿಂದಿ)

***
ಇವೆಲ್ಲವುಗಳ ನಡುವೆ ಕೇಂದ್ರ ಸರಕಾರ ಮಾಹಿತಿ ತಂತ್ರಜ್ಞಾನ ನಿಯಮಗಳಲ್ಲಿ ತಿದ್ದುಪಡಿ ತಂದು ಕೇಂದ್ರ ಸರಕಾರಕ್ಕೆ ಸಂಬಂಧಪಟ್ಟಂತೆ
ಪ್ರಕಟವಾಗುವ ಸುದ್ದಿಗಳು ಹುಸಿಯೋ, ಸುಳ್ಳೋ ಅಥವ ತಪ್ಪು ದಾರಿಗೆಳೆಯುವಂತದ್ದೋ ಎಂದು ನಿರ್ಧರಿಸುವ ( ಫ್ಯಾಕ್ಟ್-ಚೆಕ್‍ ಮಾಡುವ )ಮತ್ತು ಸಾಮಾಜಿಕ ಮಾಧ್ಯಮಗಳು, ಇಂಟರ್ನೆಟ್ ಸೇವೆಗಳನ್ನು ಒದಗಿಸುವವರು ಮತ್ತು ಇತರ ಸೇವೆಗಳನ್ನು ಒದಗಿಸುವವರು ಇಂತಹ ಅಂಶಗಳನ್ನು
ಹಾಕಬಾರದು ಎಂಬ ನಿರ್ದೇಶನಗಳನ್ನು ಕೊಡುವ ಅಧಿಕಾರವನ್ನು ಪ್ರೆಸ್‍ ಇನ್‍ಫೋರ್ಮೇಷನ್‍ ಬ್ಯುರೊ(ಪಿಐಬಿ)ಗೆ ಕೊಟ್ಟಿರುವ ಸುದ್ದಿಯೂ ಬಂದಿದೆ.


                                                                      “ಸರ್, ಎನ್‍.ಸಿ.ಇ.ಆರ್.ಟಿ. ಫ್ಯಾಕ್ಟ್- ಚೆಕ್ ಮಾಡುವವರ ಬಗ್ಗೆ ಏನು ಮಾಡುವುದು?”
                                                                              (ಸಂದೀಪ್‍ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

Donate Janashakthi Media

Leave a Reply

Your email address will not be published. Required fields are marked *