ಪಾಕಿಸ್ತಾನ| ಸ್ವಾತ್ ಶಾಂತಿ ರ‍್ಯಾಲಿ ವೇಳೆ ಸ್ಫೋಟ: 17 ಮಂದಿ ಸಾವು

ಪೇಶಾವರ್: ಪಾಕಿಸ್ತಾನದ ಉತ್ತರ ಪಶ್ಚಿಮ ಭಾಗದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದಲ್ಲಿ ಶಾಂತಿ ರ‍್ಯಾಲಿ ವೇಳೆ ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ನಡೆದ ಆತ್ಮಾಹುತಿ ದಾಳಿಯಲ್ಲಿ ಸಾವಿನ ಸಂಖ್ಯೆ ಆಗಸ್ಟ್‌ 3ರಂದು 17ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನ

ಆಗಸ್ಟ್‌ 2ರಂದು ಸ್ವಾತ್ ಜಿಲ್ಲೆಯ ಕಬಲ್ ಪಟ್ಟಣದಲ್ಲಿ ಪೊಲೀಸ್ ಠಾಣೆಯ ಎದುರು ಸ್ವಾತ್ ಶಾಂತಿ ರ‍್ಯಾಲಿ ನಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿತ್ತು.

ಈ ದಾಳಿಯಲ್ಲಿ ಆಗಸ್ಟ್‌ 2ರಂದು ಕನಿಷ್ಠ 14 ಮಂದಿ, ಅದರಲ್ಲಿ ಐದು ಭದ್ರತಾ ಸಿಬ್ಬಂದಿ ಸೇರಿ, ಸಾವನ್ನಪ್ಪಿದ್ದರು ಮತ್ತು ಹನ್ನೆರಡು ಮಂದಿಗೂ ಹೆಚ್ಚು ಮಂದಿ ಗಾಯಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹರಿಯಾಣ| ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ವಿರೋಧ: ರೈತ–ಕಾರ್ಮಿಕರ ಹೋರಾಟ ಘೋಷಣೆ

ಸೋಮವಾರ, ಗಾಯಗೊಂಡವರಲ್ಲಿ ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟ ಪರಿಣಾಮ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಏಳು ಪೊಲೀಸ್ ಸಿಬ್ಬಂದಿ ಹಾಗೂ ಹತ್ತು ನಾಗರಿಕರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡವರಲ್ಲಿ 12 ಮಂದಿ ಇನ್ನೂ ಸೈದು ಶರೀಫ್ ಟೀಚಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಎಂಟು ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ನಾಲ್ವರು ನಾಗರಿಕರು ಸೇರಿದ್ದಾರೆ.

ಈ ದಾಳಿಯ ಹೊಣೆಗಾರಿಕೆಯನ್ನು ಯಾವುದೇ ಸಂಘಟನೆ ಅಥವಾ ವ್ಯಕ್ತಿ ತಕ್ಷಣವಾಗಿ ಹೊತ್ತಿಕೊಂಡಿಲ್ಲ.

ಸ್ವಾತ್ ಅಮನ್ ಜಿರ್ಗಾ (ಸ್ಥಳೀಯ ಜನಾಂಗೀಯ ಮಂಡಳಿ) ಈ ಶಾಂತಿ ರ್ಯಾಲಿಯನ್ನು ಆಯೋಜಿಸಿತ್ತು. ಪ್ರತಿಭಟನಾಕಾರರು ಶಾಂತಿಗಾಗಿ ಘೋಷಣೆಗಳನ್ನು ಕೂಗಿ ಫಲಕಗಳನ್ನು ಹಿಡಿದು ಭಾಗವಹಿಸಿದ್ದರು.

ಕಳೆದ ಕೆಲವು ತಿಂಗಳುಗಳಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ಪೊಲೀಸ್ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಇದನ್ನೂ ನೋಡಿ: ಕನಿಷ್ಠ ವೇತನ ಪುನರ್‌ಪರಿಶೀಲಿಸಿದರೆ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ! | ಕಾರ್ಮಿಕರ ಎಚ್ಚರಿಕೆ Janashakthi Media

Donate Janashakthi Media

Leave a Reply

Your email address will not be published. Required fields are marked *