ಪ್ರಜಾಪ್ರಭುತ್ವದ ಭವನದಲ್ಲಿ ‘ರಾಜದಂಡ’!

ವೇದರಾಜ್‌ ಎನ್‌.ಕೆ

 

ಕಳೆದ ಸುಮಾರು ಒಂದು ತಿಂಗಳ ಬೆಳವಣಿಗೆಗಳು ಕಾರ್ಟೂನಿಸ್ಟರನ್ನೇ ಹುಡುಕಿಕೊಂಡು ಬರುವಂತಿದ್ದವು. ಮೊದಲು ಕರ್ನಾಟಕದ ಚುನಾವಣೆಗಳಲ್ಲಿ ‘ಜೈಭಜರಂಗಬಲಿ’ ಅಥವ 40% ಕಟ್, ನಂತರ 2000ರೂ. ನೋಟಿಗೆ ಮತ್ತು ಅದರಲ್ಲಿದ್ದ ಚಿಪ್ಪಿಗೆ ಶ್ರದ್ಧಾಂಜಲಿ, ಅದರ ಬೆನ್ನ ಹಿಂದೆಯೇ ಹೊಸ ಸಂಸದ್‍ಭವನದ ಉದ್ಘಾಟನೆಯಸುತ್ತ ಹುಟ್ಟಿದ/ಹುಟ್ಟಿಸಿದವಿವಾದ,  ಅವನ್ನೆಲ್ಲ ಮೀರಿಸುವಂತೆ ‘ಸೆಂಗೋಲ್’ ರಂಗಪ್ರವೇಶ. ಮತ್ತು ಇವುಗಳ ನಡುವೆಯೇ ಕುಸ್ತಿಮಹಾ ಸಂಘದ ಅಧ್ಯಕ್ಷರು ಮತ್ತು ದಿಲ್ಲಿ ಪೋಲೀಸ್‍ ಪ್ರತಾಪಗಳು ಮತ್ತು ಹತ್ತನೇ ವರ್ಷದ ಆರಂಭ. ಇವೆಲ್ಲವುಗಳತ್ತ ಒಂದು ಪಕ್ಷಿನೋಟ:

ಕರ್ನಾಟಕ ಫಲಿತಾಂಶ-2023:

ಮೇ 10ರಂದು ಕರ್ನಾಟಕದ ಮತದಾರರ ತೀರ್ಪು ಹೊರಬಿತ್ತು. ಆಳುವ ಪಕ್ಷದಶಕ್ತಿ 104ರಿಂದ 66ಕ್ಕಿಳಿಯಿತು..

40% ಕಟ್ಟ್! ಪಂಜುಗಂಗೊಳ್ಳಿ, ದಿಸ್ಟೇಟ್

ಬಹುಶಃ ಮತದಾನ ಮಾಡುವಾಗ ಪ್ರಧಾನ ಮಂತ್ರಿಗಳ ಸಲಹೆಯಂತೆ ಜೈಭಜರಂಗಬಲಿ ಎಂದು ಮತದಾರರು ಧ್ಯಾನಿಸಿದರು,

“ಭಜರಂಗಬಲಿ ಎಂದು ಧ್ಯಾನಿಸಿದ ಮೇಲೆಸುಳ್ಳು ಹೇಳುವ, ಭ್ರಷ್ಟ ಮತ್ತು ವಿಭಜನ ಕಾರಿಯಾಗುವ ಪಕ್ಷಕ್ಕೆ ಓಟು ಕೊಡಲು ನನಗೆ ಸಾಧ್ಯವಾಗಲೇ ಇಲ್ಲ” (ಮಂಜುಲ್, ಫೇಸ್ಬುಕ್)
“ಭಜರಂಗಬಲಿ ಎಂದು ಧ್ಯಾನಿಸಿದ ಮೇಲೆ ಸುಳ್ಳು ಹೇಳುವ, ಭ್ರಷ್ಟ ಮತ್ತು ವಿಭಜನ ಕಾರಿಯಾಗುವ ಪಕ್ಷಕ್ಕೆ ಓಟು ಕೊಡಲು ನನಗೆ ಸಾಧ್ಯವಾಗಲೇ ಇಲ್ಲ” (ಮಂಜುಲ್, ಫೇಸ್ಬುಕ್)

ಗೃಹಮಂತ್ರಿಗಳು ಪಕ್ಕದಲ್ಲೇ ಇದೆ ಎಂದು ನೆನಪಿಸಿದ ಕೇರಳದತ್ತ ವೂಮತದಾರರು ಗಮನ ಹರಿಸಿದಂತೆ ಕಾಣುತ್ತದೆ!

ಕೇರಳ-ಬಿಜೆಪಿ000 (ಪೆನ್ಸಿಲಾಶನ್, ಫೇಸ್ಬುಕ್)

 

***

2000ರೂ. ನೋಟಿನಕತೆ

ಮೇ 19ರಂದು ರಿಜರ್ವ್ ಬ್ಯಾಂಕ್‌ ವರ್ನರ್  ನವಂರ್ 08 , 2016ರಂದು ನೋಟು ರದ್ಧತಿಯೊಂದಿಗೆ ಪರಿಚಯಿಸಿದ 2000ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದು ಕೊಳ್ಳುತ್ತಿರುವುದಾಗಿ ಪ್ರಕಟಿಸಿದರು .

‘ಮಾಸ್ಟರ್ಸ್ಟ್ರೋಕ್‍’ ನಿಂದ ಕ್ಯೂನಲ್ಲಿನಿಧನ“ (ಸಜಿತ್‍ಕುಮಾರ್, ಡೆಕ್ಕನ್‍ಹೆರಾಲ್ಡ್)

 

ಈ ಕ್ರಮವೂ ಕಪ್ಪು ಹಣದ ನಿವಾರಣೆಗಾಗಿ ಎಂದು ಭಕ್ತರಲ್ಲಿ ಹಲವರು ಹೇಳುತ್ತಿದ್ದಾರೆ. ಹಾಗಿದ್ದರೆ ಆಗತಂದದ್ದಾದರೂ ಏಕೆ ಎಂದೇನೂ ಈಗ ಕೇಳಬೇಕಾಗಿಲ್ಲ. ಏಕೆಂದರೆ ಅದು ಒಂದು ವಿಶಿಷ್ಟನೋಟು, ಅದರಲ್ಲಿ ಒಂದು ಚಿಪ್ ಅಳವಡಿಸಲಾಗಿದೆ ಎಂದು ಆಗಲೇ ಆಂಕರ್‍ಗಳು ‘ಸ್ಪಷ್ಟ’’ಪಡಿಸಿದ್ದರು ತಾನೇ?.ಆಚಿಪ್‍ ಕತೆ ಏನಾಯ್ತು ಎಂದು ಈಗ ಕೇಳಬೇಕಷ್ಟೇ. ವಾಸ್ತವವಾಗಿ ಆಚಿಪ್ಪನ್ನು ಈ ನೋಟಿನಲ್ಲಲ್ಲ, ಗೋದೀ ಮೀಡಿಯಾದ ಆಂಕರುಗಳ ಮೆದುಳುಗಳಲ್ಲಿ ನೆಟ್ಟಿದ್ದಿರಬಹುದು ಎಂದೀಗ ಹೇಳಬಹುದೇನೋ –  ಈ ವ್ಯಂಗ್ಯಚಿತ್ರಕಾರರಂತೆ.

“ಕಟ್ಟೆಚ್ಚರಭಾಯ್, ಈ ಆಂಕರ್ಕಳೆದ ಆರು ಗಂಟೆಗಳಿಂದ ವಿಶ್ವ ಗುರು ಎಂದು ಹೇಳಿಲ್ಲ” (ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್)

***

ಕುಸ್ತಿ ಮಹಾ ಸಂಘದ ಅಧ್ಯಕ್ಷ ಮತ್ತು ಆಳುವ ಪಕ್ಷದ ಸಂಸದನ ವಿರುದ್ಧ ಮಹಿಳಾ ಕುಸ್ತಿಪಟುಗಳ  ಹೋರಾಟದ ಎರಡನೇ ಹಂತ ಜಂತರ್ಮಂತರ್‍ನಲ್ಲಿ ಮತ್ತೆ ಧರಣಿಯೊಂದಿಗೆ (ಎಪ್ರಿಲ್‍ 23ರಂದು) ಆರಂಭವಾಗಿ ತಿಂಗಳ ಮೇಲಾದರೂ ಕರ್ನಾಟಕದ ಚುನಾವಣೆಗಳಲ್ಲಿ ವ್ಯಸ್ತರಾಗಿದ್ದ ಪ್ರಧಾನಿಗಳ, ಗೃಹ ಮಂತ್ರಿಗಳ ದಿವ್ಯಮೌನ ಮುಂದುವರೆದಿತ್ತು ಎಂದಿನಂತೆ..

“ಅಕ್ಕ, ನಮ್ಮ ಬಾವುಟದ ಮೇಲಿನ ಪಟ್ಟಿ ಏನನ್ನು ಸೂಚಿಸುತ್ತದೆ?” “ಶಕ್ತಿಯನ್ನು..” “ಯಾರದ್ದು,ನೇತಾಗಳದ್ದೋ, ದೇಶದ್ದೋ?” (ಸಂದೀಪ ಅಧ್ವರ್ಯು, ಟೈಂಸ್ ಆಫ್ ಇಂಡಿಯ)

ನಂತರವೂ ದಿವ್ಯ ಮೌನ ಮುಂದುವರದಿದೆ. ಏಕೆಂದರೆ ಈವೇಳೆಗೆ ಪ್ರಧಾನಿಗಳ ,ಗೃಹಮಂತ್ರಿಗಳ ಗಮನವೆಲ್ಲ ಹೊಸ ಸಂಸದ್‍ ಭವನದ ಉದ್ಘಾಟನೆಯತ್ತ…

***

ಹೊಸ ಸಂಸದ್‍ ಭವನದ ‘ಗೃಹಪ್ರವೇಶ’.. ..!

ಅವರ  ಗಮನವಷ್ಟೇ ಅಲ್ಲ, ಎಲ್ಲರ ಗಮನ ಕರ್ನಾಟಕದಲ್ಲಿ 40%ಕಟ್, ನೋಟುರದ್ದತಿಕತೆ, ಜಂತರ್‍ಮಂತರ್‍ ಬಿಟ್ಟು ಹೊಸ ಸಂಸದ್‍ ಭವನದತ್ತ ತಿರುಗುವಂತೆ ಮಾಡಲಾಯಿತು ಎನ್ನುತ್ತಾರೆ ಕೆಲವು ರಾಜಕೀಯ ವೀಕ್ಷಕರು. – ಏಕೆಂದರೆ, ಈ ಉದ್ಘಾಟನೆಯನ್ನು ನಿರೀಕ್ಷೆಯಂತೆ, ಸಂಪ್ರದಾಯದಂತೆ, ಸಂಸತ್ತಿನ ಮುಖ್ಯಸ್ಥರಾದರಾಷ್ಟ್ರಪತಿಗಳಲ್ಲ- ಕೇವಲ ಕಾರ್ಯಾಂಗದ ಮುಖ್ಯಸ್ಥರಾದ ಪ್ರಧಾನ ಮಂತ್ರಿಗಳು ಮಾಡುತ್ತಾರೆ ಎಂದು ಸರಕಾರ ನಿರ್ಧರಿಸಿತು. ಈ ಸಮಾರಂಭಕ್ಕೆ ಸಂಸತ್ತಿನ ಎರಡೂ ಸದನಗಳ ಸಭಾಧ್ಯಕ್ಷರುಗಳಿಗೂ ಆಹ್ವಾನವಿಲ್ಲ! ಆದ್ದರಿಂದ ಪ್ರಮುಖ ವಿರೋಧ ಪಕ್ಷಗಳೆಲ್ಲವೂ ಸಮಾರಂಭವನ್ನು ಬಹಿಷ್ಕರಿಸಿದವು.

 

“ಕೇವಲ ಒಂದು ಪಕ್ಷದೊಂದಿಗೆ ಗೃಹಪ್ರವೇಶ?” (ಇ.ಪಿ.ಉನ್ನಿ, ಇಂಡಿಯನ್ಎಕ್ಸ್ಪ್ರೆಸ್)

 

ಒಬ್ಬರ ಏಕಾಂಗಿ ಸಾಧನೆ!ಏಕ್ ಅಕೇಲಾ…

(ಸತೀಶ ಆಚಾರ್ಯ, ಫೇಸ್‍ ಬುಕ್‍)
(ಪಿ.ಮಹಮ್ಮದ್, ಫೇಸ್ ಬುಕ್)

***

ಸೆಂಗೋಲ್’ ರಂಗಪ್ರವೇಶ

ಇದ್ದಕ್ಕಿದ್ದಂತೆ, ಮೇ 24 ರಂದು ಗೃಹ ಮಂತ್ರಿಗಳು ಒಂದು ಪತ್ರಿ ಕಾಗೋಷ್ಠಿ ನಡೆಸಿ ಇದರಲ್ಲಿ ‘ಸೆಂಗೋಲ್’ ರಂಗ ಪ್ರವೇಶ ಮಾಡಿಸಿರುವುದು ಈಗ ಹಳೆಯಸುದ್ದಿ. ಇದಕ್ಕೆ ಸರಕಾರ ಪ್ರಚರಪಡಿಸಿದ ಕಥನ ಬಹುಪಾಲು ಕಟ್ಟು ಕತೆ ಎಂಬುದೂ ಈಗ ಗೋದೀ ಮೀಡಿಯಾದಲ್ಲಿ ಬಿಟ್ಟು ಇತರ ಎಲ್ಲ ಮಾಧ್ಯಮಗಳಲ್ಲಿ ಸಾಕಷ್ಟು ಬಯಲಿಗೆ ಬಂದಿದೆ. ಆದರೆ ಎಂದಿನಂತೆ ಸರಕಾರ ತನ್ನ ಕಥನಕ್ಕೆ ಅಂಟಿಕೊಂಡಿತು. ಏಕೆಂದರೆ ಇಂತಹ ಒಂದು ಕಥನ ಆಳುವಪಕ್ಷಕ್ಕೆ ಅಗತ್ಯವಾಗಿತ್ತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು..

“ನಿನ್ನ ಸೆಂಗೋಲ್ ಎಷ್ಟೊಂದು ಭವ್ಯ” (ಪೆನ್ಪೆನ್ಸಿಲ್ಡ್ರಾ, ಫೇಸ್ಬುಕ್)

 

ಈ ‘ರಾಜದಂಡ’ ದಮೂಲಕ ಹೊಸ ಭವನದ ಉದ್ಘಾಟನೆ ಪ್ರಧಾನ ಮಂತ್ರಿಗಳ ‘ಗೃಹಪ್ರವೇಶ’ದಿಂದ ‘ಪಟ್ಟಾಭಿಷೇಕ’ ದಸ್ವರೂಪ ಪಡೆಯಿತು.

(ಪಂಜುಗಂಗೊಳ್ಳಿ, ದಿಸ್ಟೇಟ್)

 

***

ಮೇ 27ರಂದು ತಮಿಳುನಾಡಿನಿಂದ ಮಠಾಧೀಶರುಗಳ, ಪುರೋಹಿತರುಗಳ ಒಂದು ಗುಂಪನ್ನು ಪ್ರಧಾನಿಗಳು ಬರಮಾಡಿಕೊಂಡರು.

“ರಾಜಚೌಕೀದಾರ’ (ಎಂಅಲಿ, ಆರೋಆನಂದಂ)

ದೇಶದ ಮೊದಲ ಪ್ರಧಾನಿಗೆ ಕೊನೆಯ ಬ್ರಿಟಿಶ್‍ವೈಸರಾಯ್‍ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಕೊಟ್ಟರೆನ್ನಲಾದ ಮತ್ತು ನೆಹರೂ ಅದನ್ನು ಕಡೆಗಣಿಸಿ ಮ್ಯೂಸಿಯಂಗೆ ಕಳಿಸಿದರೆನ್ನಲಾದ ‘ರಾಜದಂಡ’ವನ್ನು ಲೋಕಸಭೆಯ ಸಭಾಧ್ಯಕ್ಷರ ಪೀಠದ ಹಿಂದೆ ಪ್ರತಿಷ್ಠಾಪಿಸಲು ಈ ಮಠಾಧೀಶರುಗಳನ್ನು ದೇಶದ ಪ್ರಧಾನಿಗಳು ಹಿಂಬಾಲಿಸಿದ ಅಭೂತಪೂರ್ವ ದೃಶ್ಯವನ್ನು ದೇಶಕಂಡಿತು.

(ಪಂಜುಗಂಗೊಳ್ಳಿ, ದಿಸ್ಟೇಟ್)

ಮಹಾತ್ಮ ಗಾಂಧಿಯವರ ಚಾರಿತ್ರಿಕದಾಂಡೀಯಾತ್ರೆಯನ್ನು ಅಣಕಿಸುವಂತಿದ್ದ ರಾಜದಂಡಯಾತ್ರೆ, ವಾಸ್ತವವಾಗಿ ಇದರೊಂದಿಗೆ ಮುಂದಿನ ‘ದಂಡ’(ಡಂಡಾ ಅಂದರೆ ದೊಣ್ಣೆ) ಯಾತ್ರೆಯ ಉದ್ಘಾಟನೆಯೂ ಆಯಿತು.

ದಾಂಡೀಯಾತ್ರೆ ‘ದಂಡ’ಯಾತ್ರೆ (ಪೆನ್ಸಿಲಾಶನ್, ಫೇಸ್ಬುಕ್)

ತಮಿಳು ನಾಡಿನಿಂದ ಬಂದ ಪುರೋಹಿತರುಗಳನ್ನು ಉದ್ದೇಶಿಸಿ ಮಾತಾಡುತ್ತ “ಈ ಸೆಂಗೋಲನ್ನು ಪ್ರಯಾಗರಾಜ್‍ನ ಆನಂದಭವನದಲ್ಲಿ ವಾಕಿಂಗ್‍ಸ್ಟಿಕ್‍ ಎಂದು ಪ್ರದರ್ಶಿಸಲಾಗಿತ್ತು..ಈ ಸರಕಾರ ಅದನ್ನು ಆನಂದ ಭವನದಿಂದ ಹೊರತಂದಿತು” ಎಂದರಂತೆ. ಇದರಲ್ಲಿ ಯಾವಸಂಗತಿಯೂ ನಿಜವಲ್ಲ ಎನ್ನುತ್ತಾರೆ ಪರಿಣಿತರು.

ಇದನ್ನು ದಿಲ್ಲಿಯರಾಷ್ಟ್ರೀಯ ಸಂಗ್ರಹಾಲಯ ದಿಂದ ತರಲಾಗಿತ್ತು. ನವಂಬರ್ 2022ರಲ್ಲಿ ಅಲ್ಲಿಗೆ ಅಲಹಾಬಾದಿನ (ಈಗಪ್ರಯಾಗರಾಜ್‍) ನಮ್ಯೂಸಿಯಂ ನಿಂದತರಲಾಗಿತ್ತು. ನೆಹರೂರವರ ವಾಕಿಂಗ್‍ಸ್ಟಿಕ್ ಎಂದು ಅಲ್ಲಿ ಇಡಲಾಗಿತ್ತು ಎಂಬು ದೂನಿಜವಲ್ಲ- ಅವರಿಗೆ ಉಡುಗೊರೆಯಾಗಿ ನೀಡಿದ ಚಿನ್ನದ ದಂಡ (ಗೋಲ್ಡನ್‍ಸ್ಟಿಕ್) ಎಂದು ಬರೆಯಲಾಗಿತ್ತಷ್ಟೇ” (ಮೀತೂಜೈನ್‍, ದಿವೈರ್, ಮೇ 29)

ಇದು ಚೋಳ ಸಾಮ್ರಾಜ್ಯದ ರಾಜದಂಡ, ರಾಜ ಗೋಪಾಲಾಚಾರಿಯವರ ಸಲಹೆಯಂತೆ ಮೌಂಟ್‍ಬ್ಯಾಟನ್‍ ಅಧಿಕಾರದಹ ಸ್ತಾಂತರ ಸಂಕೇತವಾಗಿ ನೆಹರೂರವರಿಗೆ ಕೊಟ್ಟರು ಎಂಬುದೆಲ್ಲವೂ ಯಾವುದೇ ದಾಖಲೆಗಳಿಲ್ಲದ ‘ವಾಟ್ಸ್ಆಪ್‍ ಇತಿಹಾಸ’ ದಸೃಷ್ಟಿ ಎಂದು ಈಗ ಗೊತ್ತಾಗಿದೆ. ಏತಕ್ಕಾಗಿ ಈ ಸೃಷ್ಟಿ ಎಂದು ತಿಳಿಯಲು ಬಹಳ ತಿಣುಕಬೇಕಾಗಿಲ್ಲ.

ಅದೇ ದಿನ, ಕೆಲವೇ ಮೀಟರುಗಳ ದೂರದಲ್ಲಿ ಜಂತರ್‍ಮಂತರ್‍ನಲ್ಲಿ ಈ ಹೊಸ‘ ರಾಜ ದಂಡ’ ದಲೈವ್‍ ಪ್ರದರ್ಶನವೂ ನಡೆಯಿತು.

(ಮಂಜುಲ್, ಫೇಸ್ಬುಕ್)

ಬ್ರಿಟಿಶ್ವೈಸರಾಯ್ಕೊಟ್ಟರೆನ್ನಲಾದ, ಇದುವರೆಗೆ ಮ್ಯೂಸಿಯಂನಲ್ಲಿ ಸುಮ್ಮನೇ ಇರಿಸಲಾಗಿತ್ತು ಎನ್ನಲಾದ, ಮಠಾಧೀಶರುಗಳ ಆಶೀರ್ವಾದ ಪಡೆದ‘ ರಾಜದಂಡ’ ದಪ್ರಯೋಗ-ನ್ಯಾಯ ಕೇಳಿದ ಯುವ ಕುಸ್ತಿಪಟುಗಳ ಮೇಲೆ.

‘ನ್ಯಾಯ’ (ಸತೀಶ ಆಚಾರ್ಯ, ಫೇಸ್ ಬುಕ್)

ಕೇಂದ್ರ ಗೃಹಮಂತ್ರಿಗಳ ಅಡಿಯಲ್ಲಿರುವ ದಿಲ್ಲಿ ಪೋಲೀಸರ ಮೇ 28ರ ಸಾಧನೆ ‘ರಾಜದಂಡ’ ಅವರಿಗೆ ಕೊಡಮಾಡಿದ ಶಕ್ತಿ

 (ಪಿ.ಮಹಮ್ಮದ್, ಫೇಸ್ಬುಕ್)
“ಹೇ! ಕ್ಯಾಮರಾ! ಫೋಕಸ್ಇತ್ತಇರಲಿ!!” (ಅಲೋಕ್ನಿರಂತರ್, ಫೇಸ್ಬುಕ್)

***

ಪ್ರಧಾನಿಗಳ ಪ್ರಕಾರ ಇದು ನವ ಭಾರತದ ಇನ್ನೊಂದು ಸಂಕೇತ..

“ವಸಾಹತುಶಾಹೀಉಳಿಕೆ ಅಂತ್ಯಗೊಂಡಿದೆ” (ಸಂದೀಪ ಅಧ್ವರ್ಯು, ಫೇಸ್ಬುಕ್)

ಅವರನುಡಿಗಳು ಈ ರೀತಿಯಲ್ಲಿ ಅಕ್ಷರಶಃ ನಿಜ ಎಂದು ವ್ಯಂಗ್ಯ ಚಿತ್ರಕಾರರುಗಳೂ ಅನು ಮೋದಿಸುತ್ತಿದ್ದಾರೆ ..

ಹಳೆಯ ಸಂಸತ್ತು ಅಸ್ತಂಗತವಾಗಿದೆ..
ಹೊಸ ಸಂಸತ್ತು ಉದಯವಾಗಿದೆ… (ಪೊನ್ನಪ್ಪ, ಫೇಸ್ ಬುಕ್) ಮತ್ತದೇ ‘ಅಚ್ಛೇದಿನ್’…ಈ ಬಾರಿ ರಾಜದಂಡ ದೊಂದಿಗೆ (ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್)

9 ವರ್ಷಗಳು ಮುಗಿದಿವೆ.. ..ಹತ್ತನೇ ವರ್ಷ ಆರಂಭವಾಗಿದೆ...‘ರಾಜದಂಡ’ ದೊಂದಿಗೆ

(ಮಂಜುಲ್, ನ್ಯೂಸ್ ಲಾಂಡ್ರಿ)

*****

Donate Janashakthi Media

Leave a Reply

Your email address will not be published. Required fields are marked *