ನಮ್ಮನ್ನು ಕಾಡುತ್ತಿರುವ ಮಸ್ಕಿಸಂ

– ಟಿ.ಎಸ್. ವೇಣುಗೋಪಾಲ್

ಮಸ್ಕ್‌ ಕೇವಲ ಒಬ್ಬ ಮನುಷ್ಯ ಅಲ್ಲ. ಬದಲಿಗೆ ಒಂದು ಹೊಸ ಆಲೋಚನಾ ಶೈಲಿಯ ಸಂಕೇತ. ಫೋರ್ಡಿಸಂನಂತೆ ಮಸ್ಕಿಸಂ ಕೂಡ ಒಂದು ಆಧುನಿಕ ಆಲೋಚನೆ. ಫೋರ್ಡಿಸಂ ಇಪ್ಪತ್ತನೇ ಶತಮಾನದ ಬಂಡವಾಳಶಾಹಿ ವ್ಯವಸ್ಥೆಯ ಒಂದು ಸಂಕೇತವಾಗಿತ್ತು. ಅದು ಎಲ್ಲರ ಜೀವನಮಟ್ಟವನ್ನು ಹೆಚ್ಚಿಸುವ ಭರವಸೆಯನ್ನು ನೀಡಿತ್ತು.. ಆದರೆ ಮಸ್ಕಿಸಂ ಎಲ್ಲರಿಗೂ ಲಾಭ ಹಂಚಬೇಕು ಎಂದು ಹೇಳುವುದಿಲ್ಲ. ತಂತ್ರಜ್ಞಾನದ ಮೂಲಕ ಎಲ್ಲರನ್ನು ಸ್ವತಂತ್ರರನ್ನಾಗಿಸುತ್ತೇನೆ ಅನ್ನುತ್ತಿದೆ. ಮಸ್ಕ್  ಕ್ಷಣ ಕ್ಷಣಕ್ಕೂ ಬದಲಾಗುವ ಈ ಅಸ್ಥಿರ ಜಗತ್ತಿನಲ್ಲಿ, ಪ್ರಭುತ್ವಗಳು ಮತ್ತು ಸಾಮಾನ್ಯ ಜನರು ಅವನ ತಂತ್ರಜ್ಞಾನದ ಜಾಲಕ್ಕೆ ಸೇರಿಕೊಳ್ಳುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಎಂಬ ಕಾಲ್ಪನಿಕ ಭರವಸೆಯನ್ನು ಮಾರುತ್ತಿದ್ದಾನೆ. ಆದರೆ ಸಮಸ್ಯೆಯೆಂದರೆ — ಈ ಹಾದಿಯಲ್ಲಿ ನಡೆದಷ್ಟೂ ನೀವು ಮಸ್ಕ್‌ ಮೇಲೆ ಹೆಚ್ಚೆಚ್ಚು ಅವಲಂಬಿತರಾಗುತ್ತಾ ಹೋಗುತ್ತೀರಿ. ಸ್ವತಂತ್ರವಾಗುವುದು ಎಂದರೆ ಮಸ್ಕ್ ಕಟ್ಟಿದ ಕೋಟೆಯೊಳಗೆ ಬಂಧಿತರಾಗುವುದು.‌ ನಮ್ಮನ್ನು

 

ಇಲಾನ್ ಮಸ್ಕ್ ಯಾರು? ಪ್ರತಿಯೊಬ್ಬರಿಗೂ ಅವನ ಬಗ್ಗೆ ಅವರದ್ದೇ ಆದ ಅಭಿಪ್ರಾಯವಿದೆ. ಕೆಲವರಿಗೆ ಇವನು ತಂತ್ರಜ್ಞಾನದ ಸಾಮ್ರಾಟ್.‌ ಮನುಕುಲವನ್ನು ಹೊಸ ಯುಗಕ್ಕೆ ಕೊಂಡೊಯ್ಯುತ್ತಿರುವ ಬುದ್ದಿವಂತ ಉದ್ಯಮಿ. ಕೆಲವರಿಗೆ ಜೋಕರ್‌. ಇನ್ನು ಕೆಲವರಿಗೆ ವಿದೇಶಿ ವಲಸಿಗರ ದ್ವೇಷಿ. ಇನ್ನು ಕೆಲವರಿಗೆ ಇಂಟರ್‌ನೆಟ್‌ನಲ್ಲಿ ತಮಾಷೆ ಮಾಡುತ್ತಾ, ಜನರ ಕಾಲೆಳೆಯುತ್ತಾ ಹರಟೆ ಹೊಡೆಯುವವನು.

ಮಸ್ಕ್‌ ಯಾರು ಅಂತ ಕೇಳುವದಕ್ಕಿಂತ ಮಸ್ಕ್‌ ಏನನ್ನು ಸಂಕೇತಿಸುತ್ತಾರೆ ಅಂತ ಕೇಳಿಕೊಳ್ಳುವುದು ಹೆಚ್ಚು ಸರಿ ಅನ್ನುವುದು ಕ್ವಿನ್ ಸ್ಲೋಬೋಡಿಯನ್ ಮತ್ತು ಬೆನ್‌ ಟರ್ನ್ಆಫ್‌ ಅವರ ಅಭಿಪ್ರಾಯ. ಇದನ್ನು ತಮ್ಮ ‘ಮಸ್ಕಿಸಂ’ ಎಂಬ ಕೃತಿಯಲ್ಲಿ ವಿವರವಾಗಿ ಚರ್ಚಿಸುತ್ತಾರೆ.  ಅವರ ದೃಷ್ಟಿಯಲ್ಲಿ ಇದಕ್ಕೆ ಉತ್ತರ ಸಿಕ್ಕರೆ ಮಸ್ಕ್‌ನನ್ನು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.

ಒಂದು ಶತಮಾನದ ಹಿಂದೆ, ಹೆನ್ರಿ ಫೋರ್ಡ್ ತನ್ನ ಬದುಕಿನ ಕಥೆಯನ್ನು ಬರೆದಾಗ, “ಫೋರ್ಡಿಸಂ” ಎಂಬ ಪದ ಹುಟ್ಟಿಕೊಂಡಿತು. ಫೋರ್ಡಿಸಂ ಎಂದರೆ ಬರೀ ಕಾರ್ಖಾನೆಯಲ್ಲಿ ಕಾರುಗಳನ್ನು ಸಾಲಾಗಿ ತಯಾರಿಸುವುದಷ್ಟೇ ಆಗಿರಲಿಲ್ಲ. ಅದು ಇಪ್ಪತ್ತನೇ ಶತಮಾನದ ಬಂಡವಾಳಶಾಹಿ ವ್ಯವಸ್ಥೆಯ ಒಂದು ಸಂಕೇತವಾಗಿತ್ತು. ಸಾಲಾಗಿ ವಸ್ತುಗಳನ್ನು ತಯಾರಿಸುವುದು ಮತ್ತು ಅದನ್ನು ಹೆಚ್ಚು ಹೆಚ್ಚು ಜನರು ಕೊಳ್ಳುವಂತೆ ಮಾಡುವುದನ್ನು ಅದು ಸಂಕೇತಿಸುತ್ತಿತ್ತು.

ಹಾಗೆಯೇ ಮಸ್ಕ್‌ ಕೂಡ ಕೇವಲ ಒಬ್ಬ ಮನುಷ್ಯ ಅಲ್ಲ. ಬದಲಿಗೆ ಒಂದು ಹೊಸ ಆಲೋಚನಾ ಶೈಲಿಯ ಸಂಕೇತ. ಫೋರ್ಡಿಸಂನಂತೆ ಮಸ್ಕಿಸಂ ಕೂಡ ಒಂದು ಆಧುನಿಕ ಆಲೋಚನೆ. ಆದರೆ ಫೋರ್ಡಿಸಂ ಎಲ್ಲರ ಜೀವನಮಟ್ಟವನ್ನು ಹೆಚ್ಚಿಸುವ ಭರವಸೆಯನ್ನು ನೀಡಿತ್ತು. ಎಲ್ಲರ ಮನೆಯಲ್ಲೂ ಕಾರು, ಫ್ರಿಡ್ಜ್ ಇರಬೇಕು ಮತ್ತು ಕೆಲಸಕ್ಕೆ ತಕ್ಕಂತೆ ಕೂಲಿ ಹೆಚ್ಚಾಗಬೇಕು ಎಂದು ಹೇಳುತ್ತಿತ್ತು. ಆದರೆ ಮಸ್ಕಿಸಂ ಎಲ್ಲರಿಗೂ ಲಾಭ ಹಂಚಬೇಕು ಎಂದು ಹೇಳುವುದಿಲ್ಲ. ತಂತ್ರಜ್ಞಾನದ ಮೂಲಕ ಎಲ್ಲರನ್ನು ಸ್ವತಂತ್ರರನ್ನಾಗಿಸುತ್ತೇನೆ ಅನ್ನುತ್ತಿದೆ. ಮಸ್ಕ್ ಬರೀ ಕಾರುಗಳು, ರಾಕೆಟ್‌ಗಳು ಅಥವಾ ಉಪಗ್ರಹಗಳನ್ನು ಮಾರುವುದಿಲ್ಲ. ಕ್ಷಣ ಕ್ಷಣಕ್ಕೂ ಬದಲಾಗುವ ಈ ಅಸ್ಥಿರ ಜಗತ್ತಿನಲ್ಲಿ, ರಾಜ್ಯಗಳು ಮತ್ತು ಸಾಮಾನ್ಯ ಜನರು ಅವನ
ತಂತ್ರಜ್ಞಾನದ ಜಾಲಕ್ಕೆ ಸೇರಿಕೊಳ್ಳುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಎಂಬ ಕಾಲ್ಪನಿಕ ಭರವಸೆಯನ್ನು ಮಾರುತ್ತಿದ್ದಾನೆ.

ಆದರೆ ಸಮಸ್ಯೆಯೆಂದರೆ — ಈ ಹಾದಿಯಲ್ಲಿ ನಡೆದಷ್ಟೂ ನೀವು ಮಸ್ಕ್‌ ಮೇಲೆ ಹೆಚ್ಚೆಚ್ಚು ಅವಲಂಬಿತರಾಗುತ್ತಾ ಹೋಗುತ್ತೀರಿ. ಸ್ವತಂತ್ರವಾಗುವುದು ಎಂದರೆ ಮಸ್ಕ್ ಕಟ್ಟಿದ ಕೋಟೆಯೊಳಗೆ ಬಂಧಿತರಾಗುವುದು. ಅದರ ಕೀ ಅವನ ಕೈಯಲ್ಲಿದೆ. ಸರ್ಕಾರದ ರಕ್ಷಣಾ ಇಲಾಖೆ ಮತ್ತು ಬಾಹ್ಯಾಕಾಶ ಸಂಸ್ಥೆಗಳೂ ಅವನ ಕೋಟೆಯಲ್ಲಿ ಆಶ್ರಯ ಪಡೆದುಕೊಳ್ಳುತ್ತಿವೆ. ಯುದ್ಧಭೂಮಿಯಲ್ಲಿ ಮತ್ತು ಕಾಡುಗಳಲ್ಲಿ ಅವನ ಅಂತರ್ಜಾಲ ವ್ಯವಸ್ಥೆ ಅನಿವಾರ್ಯವಾಗಿದೆ. ಅವನ ಸಾಮಾಜಿಕ ಜಾಲತಾಣಗಳು ಸರ್ಕಾರದ ಭಾಗವಾಗುತ್ತಿವೆ. ಅವನಿಂದ ದೂರಸರಿಯಲು ನೀವು ಪ್ರಯತ್ನಿಸಿದಾಗೆಲ್ಲಾ, ನೀವು ಹೊರಬರುವುದಕ್ಕೆ ಬಳಸುತ್ತಿರುವ ಪ್ರತಿಯೊಂದು ದಾರಿಯೂ ಅವನದೇ ಎಂದು ನಿಮಗೆ ಗೋಚರವಾಗುತ್ತದೆ. ನಮ್ಮನ್ನು

ಮಸ್ಕಿಸಂನ ಒಂದು ಉದ್ದೇಶ ತಂತ್ರಜ್ಞಾನದ ಮೂಲಕ ಆಳುವುದು ಮತ್ತು ಇನ್ನೊಂದು ಉದ್ದೇಶ ತಮಗೆ ಒಲ್ಲದ್ದನ್ನು ʼಹೊರಹಾಕುವುದುʼ. ವಲಸಿಗರನ್ನು ಹೊರಹಾಕುವುದು, ಜಾಲತಾಣಗಳನ್ನು ʼಶುದ್ಧೀಕರಿಸುʼವುದು, ಕೃತಕ ಬುದ್ಧಿಮತ್ತೆಯನ್ನು ತನ್ನ ಆಲೋಚನೆಗೆ ತಕ್ಕಂತೆ ಬಳಸುವುದು, ಇತ್ಯಾದಿ ಇತ್ಯಾದಿ. ಕೊನೆಗೆ ಇವರ ಸಾಮ್ರಾಜ್ಯದಲ್ಲಿ ಕೇವಲ ಬಿಳಿಯರು ಮತ್ತವರ ಸಂಸ್ಕೃತಿ ಮಾತ್ರ ಸುರಕ್ಷಿತ.

ಈ ತಂತ್ರಜ್ಞಾನದ ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕೆಂಬುದು ಮಸ್ಕ್‌ ಇರಾದೆಯಲ್ಲ. ಕೆಲವರಿಗೆ ಸಿಗಬಾರದು ಎಂಬುದೇ ಅವನ ಅಸೆ. ವಲಸಿಗರು ಮತ್ತು ಅವರನ್ನು ಬೆಂಬಲಿಸುವವರನ್ನು ಕಂಡರೆ ಅವನಿಗೆ ಆಗುವುದಿಲ್ಲ. ಅವರನ್ನು ಹುಡುಕಿ ನಿರ್ನಾಮ ಮಾಡಬೇಕೆಂಬುದು ಅವನ ವಾದ. ಮಸ್ಕಿಸಂ ಈ ಜಗತ್ತನ್ನು ಒಂದು ಕೆಟ್ಟ ಕಂಪ್ಯೂಟರ್ ವ್ಯವಸ್ಥೆಯಂತೆ ನೋಡುತ್ತದೆ. ಬೇರೆಯವರಿಗೆ ಅನುಕಂಪ ತೋರುವುದು ಬುದ್ಧಿಮತ್ತೆಯ ಒಂದು ದೊಡ್ಡ ದೌರ್ಬಲ್ಯ ಎಂದು ಭಾವಿಸುತ್ತದೆ.

ಮಸ್ಕಿಸಂನ ಒಂದು ಉದ್ದೇಶ ತಂತ್ರಜ್ಞಾನದ ಮೂಲಕ ಆಳುವುದು ಮತ್ತು ಇನ್ನೊಂದು ಉದ್ದೇಶ ತಮಗೆ ಒಲ್ಲದ್ದನ್ನು ʼಹೊರಹಾಕುವುದುʼ. ವಲಸಿಗರನ್ನು ಹೊರಹಾಕುವುದು, ಜಾಲತಾಣಗಳನ್ನು ʼಶುದ್ಧೀಕರಿಸುʼವುದು, ಕೃತಕ ಬುದ್ಧಿಮತ್ತೆಯನ್ನು ತನ್ನ ಆಲೋಚನೆಗೆ ತಕ್ಕಂತೆ ಬಳಸುವುದು, ಇತ್ಯಾದಿ ಇತ್ಯಾದಿ. ಕೊನೆಗೆ ಇವರ ಸಾಮ್ರಾಜ್ಯದಲ್ಲಿ ಕೇವಲ ಬಿಳಿಯರು ಮತ್ತವರ ಸಂಸ್ಕೃತಿ ಮಾತ್ರ ಸುರಕ್ಷಿತ. ನಮ್ಮನ್ನು

ಇದನ್ನೂ ಓದಿ : ಬೆಂಗಳೂರಿನ ‘ಕಬ್ಬನ್ ವಾಕ್ಸ್’ಗೆ ಒಂದು ವರ್ಷ; 100 ಪರಂಪರೆ ಸಂಚಾರ ಯಶಸ್ವಿ

ಈ ಆಲೋಚನಾ ವಿಧಾನವನ್ನು ಅರ್ಥಮಾಡಿಕೊಂಡರೆ ಮಾತ್ರ ಮಸ್ಕ್‌ ಅಂತಹವರನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಅನೇಕರು ಭಾವಿಸಿರುವಂತೆ ಇವನು ಸರ್ಕಾರವನ್ನು ದ್ವೇಷಿಸುವ ಸ್ವತಂತ್ರ ಆಲೋಚಕ ಖಂಡಿತಾ ಅಲ್ಲ. ಮಸ್ಕ್ ಸರ್ಕಾರಗಳ ಜೊತೆ ಕೈಜೋಡಿಸಿಯೇ ತನ್ನ ಸಾಮ್ರಾಜ್ಯವನ್ನು ಕಟ್ಟಿರುವುದು.  ಅವನು ಪದೇ ಪದೇ ಮಂಗಳ ಗ್ರಹಕ್ಕೆ ಹೋಗುವ ಬಗ್ಗೆ ಮಾತನಾಡುತ್ತಾನೆ, ಅದೇ ತನ್ನ ಜೀವನದ ಮುಖ್ಯ ಕೆಲಸ ಎನ್ನುತ್ತಾನೆ. ಅದು ಬರೀ ಜನರನ್ನು ಆಕರ್ಷಿಸಿ ತನ್ನ ತಂತ್ರಜ್ಞಾನದ ವ್ಯವಸ್ಥೆಯನ್ನು ಬೆಳೆಸಿಕೊಳ್ಳಲು ಬಳಸುವ ಅಸ್ತ್ರ.

ಮಸ್ಕ್ ಜಗತ್ತಿನಲ್ಲಿ ಮಾನವೀಯತೆಗೆ ಸ್ಥಾನವೇ ಇಲ್ಲ. ಯಂತ್ರಗಳನ್ನು ಬಳಸಿ ಮನುಷ್ಯರನ್ನು ಕೆಲಸದಿಂದ ಹೊರಹಾಕಲು ತುದಿಗಾಲಿನಲ್ಲಿ ನಿಂತಿದ್ದಾನೆ.  ಸಾಮಾಜಿಕ ಜಾಲತಾಣಗಳು, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಮನುಷ್ಯರನ್ನು ಹಾಗೂ ಯಂತ್ರಗಳನ್ನು ಒಂದು ಮಾಡುತ್ತಿದ್ದಾನೆ.

ಮಸ್ಕಿಸಂ ಬೆಳೆಯಲು ಈಗ ಪರಿಸ್ಥಿತಿ ಸೂಕ್ತವಾಗಿದೆ. ಪ್ರಜಾಪ್ರಭುತ್ವದ ದೇಶಗಳಲ್ಲಿ ಜನರಿಗೆ ಸರ್ಕಾರದ ಮೇಲಿರುವ ನಂಬಿಕೆ ತೀರಾ ಕಡಿಮೆಯಾಗಿದೆ. ವಲಸಿಗರ ಮೇಲೆ ಬೆಳೆಯುತ್ತಿರುವ ದ್ವೇಷದಿಂದ ಬಲಪಂಥೀಯರಿಗೆ ಹೊಸ ಶಕ್ತಿ ಬಂದಿದೆ. ಅದಕ್ಕೆ ಮಸ್ಕ್ ದೊಡ್ಡ ಧ್ವನಿಯಾಗಿದ್ದಾನೆ. ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಜಾಗತಿಕ ನಿಯಮಗಳನ್ನು ಮುರಿಯುತ್ತಿದ್ದಾನೆ. ಅಮೆರಿಕ ಮತ್ತು ಚೀನಾ ನಡುವಿನ ಜಗಳ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಗತ್ತು ಭಯ ಮತ್ತು ಯುದ್ಧದ ವಾತಾವರಣದಲ್ಲಿದೆ. ಗಾಜಾದಲ್ಲಿ ನಡೆಯುತ್ತಿರುವ ಘಟನೆಗಳು ಜಾಗತಿಕ ಕಾನೂನುಗಳಿಗೆ ಬೆಲೆಯೇ ಇಲ್ಲದಂತೆ ಮಾಡಿವೆ.

ಮಸ್ಕಿಸಂ ಇಂತಹ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಇಂದು ಜಾಗತಿಕ ಒಕ್ಕೂಟಗಳು ದುರ್ಬಲವಾಗುತ್ತಿವೆ. ದೇಶಗಳು ತಮ್ಮ ಸ್ವಂತ ಬಲವನ್ನು ಹೆಚ್ಚಿಸಿಕೊಳ್ಳುವ ಕಡೆ ಒಲವು ತೋರುತ್ತಿವೆ. ಮಸ್ಕಿಸಂ ಬೆಳೆಯುವುದಕ್ಕೆ ಇಂತಹ ರಾಜಕೀಯ ತುಂಬಾ ಅನುಕೂಲವಾಗಿದೆ. ಕೆಲವರಿಗೆ ಮಾತ್ರ ಸ್ವಾತಂತ್ರ್ಯ, ಇನ್ನು ಕೆಲವರಿಗೆ ಬಹಿಷ್ಕಾರ ಎಂಬ ನಿಯಮವು ಇಂದಿನ ಕ್ರೂರ ರಾಜಕೀಯಕ್ಕೆ ಸಾಥ್ ನೀಡುತ್ತದೆ. ಮನುಷ್ಯರನ್ನು ಯಂತ್ರಗಳನ್ನಾಗಿ ಮಾಡುವ ಅವನ ಆಸೆಯು, ನಮ್ಮ ಜೀವನವನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲು ಹೊರಟಿರುವ ದೊಡ್ಡ ಉದ್ಯಮಿಗಳ ಆಸೆಗೆ ತಕ್ಕಂತಿದೆ. ನಮ್ಮನ್ನು

ಮಸ್ಕ್ ಜಗತ್ತಿನಲ್ಲಿ ಮಾನವೀಯತೆಗೆ ಸ್ಥಾನವೇ ಇಲ್ಲ. ಯಂತ್ರಗಳನ್ನು ಬಳಸಿ ಮನುಷ್ಯರನ್ನು ಕೆಲಸದಿಂದ ಹೊರಹಾಕಲು ತುದಿಗಾಲಿನಲ್ಲಿ ನಿಂತಿದ್ದಾನೆ.  ಸಾಮಾಜಿಕ ಜಾಲತಾಣಗಳು, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಮನುಷ್ಯರನ್ನು ಹಾಗೂ ಯಂತ್ರಗಳನ್ನು ಒಂದು ಮಾಡುತ್ತಿದ್ದಾನೆ. ಮಸ್ಕಿಸಂ ಬೆಳೆಯಲು ಈಗ ಪರಿಸ್ಥಿತಿ ಸೂಕ್ತವಾಗಿದೆ. ಪ್ರಜಾಪ್ರಭುತ್ವದ ದೇಶಗಳಲ್ಲಿ ಜನರಿಗೆ ಸರ್ಕಾರದ ಮೇಲಿರುವ ನಂಬಿಕೆ ತೀರಾ ಕಡಿಮೆಯಾಗಿದೆ. ವಲಸಿಗರ ಮೇಲೆ ಬೆಳೆಯುತ್ತಿರುವ ದ್ವೇಷದಿಂದ ಬಲಪಂಥೀಯರಿಗೆ ಹೊಸ ಶಕ್ತಿ ಬಂದಿದೆ. ಅದಕ್ಕೆ ಮಸ್ಕ್ ದೊಡ್ಡ ಧ್ವನಿಯಾಗಿದ್ದಾನೆ.

ಮಸ್ಕ್ ಯಾವುದೋ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಆಧರಿಸಿ ಇವೆಲ್ಲವನ್ನು ಮಾಡುತ್ತಿದ್ದಾನೆ ಅನ್ನೋದು ಲೇಖಕರ ಅಭಿಪ್ರಾಯವಲ್ಲ. ಎಲ್ಲವನ್ನು ವ್ಯವಸ್ಥಿತವಾಗಿ ಯೋಚಿಸಿ ಮಾಡುತ್ತಿದ್ದಾನೆ ಅಂತಲೂ ಅವರು ಹೇಳುತ್ತಿಲ್ಲ. ಅವನ ಬೆಳವಣಿಯ ಜೊತೆಗೆ ಅವನನ್ನು ರೂಪಿಸಿದ ಐತಿಹಾಸಿಕ ಶಕ್ತಿಗಳನ್ನು ಅರ್ಥಮಾಡಿಕೊಳ್ಳುವ ಕೆಲಸವನ್ನು ಅವರು ಮಾಡಿದ್ದಾರೆ. ಮಸ್ಕ್ ರೂಪಿಸಿದ ಜಗತ್ತನ್ನು ಅರ್ಥಮಾಡಿಕೊಳ್ಳಬೇಕಾದರೆ, ಮಸ್ಕ್‌ನನ್ನು ರೂಪಿಸಿದ ಜಗತ್ತನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ನಮ್ಮನ್ನು

ಇತ್ತೀಚೆಗೆ ಇಲಾನ್ ಮಸ್ಕ್ ಅವರು  ಹಣ ಮಾಡಿಕೊಳ್ಳುವುದಕ್ಕೆ ಸ್ಪೇಸ್‌ಎಕ್ಸ್ ಸಂಸ್ಥೆಯ ಸಾರ್ವಜನಿಕ ಷೇರುಗಳನ್ನು ಬಿಡುಗಡೆ (IPO) ಮಾಡಿ ಬರೋಬ್ಬರಿ $75 ಬಿಲಿಯನ್ ಹಣವನ್ನು ಸಂಗ್ರಹಿಸಿದ್ದಾನೆ. ಸಾರ್ವಜನಿಕ ವಹಿವಾಟಿನ ಕಂಪನಿ’ (Publicly Traded Corporation) ಎಂಬ ಇಡೀ ವ್ಯವಸ್ಥೆಯನ್ನೇ ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸುವಲ್ಲಿ ಯಶಸ್ವಿಯಾಗಿದ್ದಾನೆ.  ಕಾರ್ಪೊರೇಟ್ ನಿಯಮಗಳನ್ನೇ ತಮಗೆ ಬೇಕಾದಂತೆ ಅತ್ಯಂತ ಜಾಣ್ಮಿಯಿಂದ ಬದಲಾಯಿಸಿಕೊಂಡಿದ್ದಾನೆ. ಅವನ ಸಂಸ್ಥೆಯಲ್ಲಿ “ಡ್ಯುಯಲ್ ಕ್ಲಾಸ್ ಷೇರು ವ್ಯವಸ್ಥೆ”ಯನ್ನು ಇಟ್ಟುಕೊಳ್ಳಲಾಗಿದೆ. ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಎಲ್ಲರಿಗೂ ಒಂದು ಷೇರಿಗೆ ಒಂದು ಮತವಿರುತ್ತದೆ. ಆದರೆ  ‘ಡ್ಯುಯಲ್ ಕ್ಲಾಸ್’ ವ್ಯವಸ್ಥೆಯಲ್ಲಿ ಮಾಲೀಕರ ಬಳಿ ಇರುವ ಒಂದು ಷೇರಿಗೆ 10 ಅಥವಾ 20 ವೋಟಿಂಗ್ ಹಕ್ಕು ಇದ್ದರೆ, ಸಾರ್ವಜನಿಕರ ಬಳಿ ಇರುವ ಷೇರಿಗೆ ಕೇವಲ ಒಂದು ವೋಟ್ ಇರುತ್ತದೆ. ಈ ಚಾಣಾಕ್ಷ ತಂತ್ರದಿಂದಾಗಿ ಸ್ಪೇಸ್‌ಎಕ್ಸ್ ಕಂಪನಿಯಲ್ಲಿ ಇಲಾನ್ ಮಸ್ಕ್ ಬಳಿ ಶೇಕಡಾ 85ರಷ್ಟು ಮತದಾನದ ಹಕ್ಕು ಇದೆ. ಇದರ ಅರ್ಥ, ಆ ಕಂಪನಿಯಲ್ಲಿ ಮಸ್ಕ್ನನ್ನು ಸಿಇಒ ಹುದ್ದೆಯಿಂದ ತೆಗೆದುಹಾಕಲು ಆತನೊಬ್ಬನಿಗೆ ಮಾತ್ರ ಸಾಧ್ಯ! ಮಸ್ಕ್‌ ಸ್ವತಃ ತಾನೇ ರಾಜೀನಾಮೆ ನೀಡದ ಹೊರತು ಬೇರೆ ಯಾರೂ ಆತನನ್ನು ಅಲ್ಲಾಡಿಸುವುದಕ್ಕೆ ಸಾಧ್ಯವಿಲ್ಲ. ೨೦೨೧ರಲ್ಲಿ ಮಸ್ಕ್, ಟೆಸ್ಲಾ ಕಂಪನಿಯಲ್ಲಿ ತಮ್ಮ ಹುದ್ದೆಯ ಹೆಸರನ್ನು ಸಿಇಒ ಎಂಬುದರಿಂದ ‘ಟೆಕ್ನೋಕಿಂಗ್’ ಎಂದು ಬದಲಿಸಿಕೊಂಡಿದ್ದಾನೆ.  ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಪತ್ತು ಮತ್ತು ಅಧಿಕಾರ
ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತವಾಗುತ್ತಾ ಹೋದಂತೆ ಆಗುವುದೇ ಹೀಗೆ. ನಾಯಕತ್ವ ಸರ್ವಾಧಿಕಾರಿ ರೂಪ ಪಡೆದುಕೊಳ್ಳುತ್ತದೆ.

ಕಂಪನಿಯ ಮೇಲಿನ ತನ್ನ ನಿಯಂತ್ರಣವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಮಸ್ಕ್ ಮತ್ತೊಂದು ದಾರಿ ಕಂಡುಕೊಂಡಿದ್ದಾನೆ. ಅಮೇರಿಕೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಕಾನೂನು ನಿಯಮಗಳಿವೆ. ಡೆಲವೇರ್‌ನಲ್ಲಿನ ಕಾನೂನು ವ್ಯವಸ್ಥೆ ಹೂಡಿಕೆದಾರರಿಗೆ ಹೆಚ್ಚು ರಕ್ಷಣೆ ಕೊಡುತ್ತದೆ. ಹಾಗಾಗಿ ಮಸ್ಕ್‌ ತನ್ನ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ ಕಂಪೆನಿಗಳನ್ನು ‘ಟೆಕ್ಸಾಸ್’ಗೆ ಬದಲಿಸಿಬಿಟ್ಟ. ಯಾಕೆಂದರೆ ಟೆಕ್ಸಾಸ್ನಲ್ಲಿ ಕಾನೂನು ವ್ಯವಸ್ಥೆ ಸಿಇಒಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತವೆ. ಮತ್ತು ಅಲ್ಲಿ ಷೇರುದಾರರಿಗೆ ಕಂಪನಿಯ ವಿರುದ್ಧ ಮೊಕದ್ದಮೆ ಹೂಡುವುದು ಕಷ್ಟ. ಇದೇ ಹಾದಿಯನ್ನು ಈಗ ಉಳಿದ ಕಂಪೆನಿಗಳೂ ಅನುಸರಿಸುತ್ತಿವೆ. ಮಸ್ಕ್‌ನ ತಂತ್ರಗಾರಿಕೆ ಎಷ್ಟು ಪ್ರಸಿದ್ದವಾಗಿದೆಯೆಂದರೆ ಅಮೆರಿಕದ ಯುಸಿಎಲ್‌ಎ ವಿಶ್ವವಿದ್ಯಾಲಯದಲ್ಲಿ ಈಗ “ಇಲಾನ್ ಮಸ್ಕ್ ಅವರ ಕಾರ್ಪೊರೇಟ್ ಮತ್ತು ಸೆಕ್ಯುರಿಟೀಸ್ ಕಾನೂನು” ಎಂಬ ಪ್ರತ್ಯೇಕ ಕೋರ್ಸ್ಅನ್ನೇ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ! ನಮ್ಮನ್ನು

ಸಾಮಾನ್ಯವಾಗಿ ಯಾವುದೇ ಕಂಪೆನಿ ಷೇರು ಮಾರುಕಟ್ಟೆಗೆ ಮೊಟ್ಟ ಮೊದಲ ಬಾರಿಗೆ ಪ್ರವೇಶಿಸಿದಾಗ ಕೆಲವು ನಿಯಮಗಳನ್ನು ಅನುಸರಿಸಲಾಗುತ್ತದೆ. ಉದಾಹರಣೆಗೆ ಅವುಗಳನ್ನು ತಕ್ಷಣ ಸೂಚ್ಯಂಕಕ್ಕೆ ಸೇರಿಸಿಕೊಂಡು ಬಿಡುವುದಿಲ್ಲ. ನಿರ್ದಿಷ್ಟ ಅವಧಿ ಕಾಯಬೇಕು.ನಿರ್ದಿಷ್ಟ ಪ್ರಮಾಣದ ಲಾಭ ಇರಬೇಕು. ನಿರ್ದೇಶಕರ ಮಂಡಳಿ ಇರಬೇಕು, ಇತ್ಯಾದಿ. ಆದರೆ ಈ ಎಲ್ಲಾ ನಿಯಮಗಳನ್ನೂ ಈಗ ಮಸ್ಕಗಾಗಿ ಸಡಿಲಿಸಲಾಗಿದೆ. ಅಷ್ಟೇ ಅಲ್ಲ, ಇವರ ಕಂಪೆನಿ ಸಾಧಾರಣ ಕಂಪೆನಿಯಲ್ಲ. ಈಗ ಇಡೀ ದೇಶದ ಆರ್ಥಿಕ ಸೂಚ್ಯಂಕದಲ್ಲಿ ಇವರ ಕಂಪೆನಿಗಳಿಗೆ ಪ್ರಮುಖ ಸ್ಥಾನ ಸಿಕ್ಕಿದೆ. ಒಂದು ವೇಳೆ ಸ್ಪೇಸ್‌ಎಕ್ಸ್ ನಷ್ಟದಲ್ಲಿ ಮುಳುಗಿದರೆ, ಜನರ ಪಿಂಚಣೆ ಹಣ ಉಳಿಸಲು ಸರ್ಕಾರವೇ ಸಾರ್ವಜನಿಕರ ತೆರಿಗೆ ದುಡ್ಡು ಬಳಸಿ, ಈ ಕಂಪೆನಿಗಳನ್ನು ಸಂಕಟದಿಂದ ಪಾರು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮನ್ನು

ಈ ಟೆಕ್‌ದೊರೆಗಳು ಆದಾಯ ತೆರಿಗೆ ವ್ಯವಸ್ಥೆಯನ್ನೂ ಬದಲಿಸಿದ್ದಾರೆ. ಫೋರ್ಡ್ ಮತ್ತು ಮಸ್ಕ್ ಇವರೆಲ್ಲರ ಸಂಪತ್ತು ಸುಲಭವಾಗಿ ನಿಮ್ಮ ಕೈಗೆ ಸಿಗುವಂಥದ್ದಲ್ಲ. 1950ರ ದಶಕದಲ್ಲಿ ಸಿಇಒಗಳಿಗೆ ಸಂಬಳ ನೀಡಲಾಗುತ್ತಿತ್ತು ಮತ್ತು ಅದಕ್ಕೆ ಶೇಕಡಾ 90ರಷ್ಟು ತೆರಿಗೆ ಕಟ್ಟಬೇಕಿತ್ತು. ಅದನ್ನು ತಪ್ಪಿಸಿಕೊಳ್ಳುವುದಕ್ಕೆ 1990ರ ನಂತರ ಸಂಬಳದ ಬದಲಿಗೆ ಕಂಪನಿಯ ಷೇರುಗಳನ್ನೇ ಸಂಭಾವನೆಯಾಗಿ ನೀಡಲಾಗುತ್ತಿದೆ. ಈಗ ಇವರ ಆಸ್ತಿ ಸಂಪೂರ್ಣ ತಮ್ಮ ಕಂಪೆನಿಗಳ ಷೇರುಗಳ ರೂಪದಲ್ಲಿದೆ. ಅವರ ಆಸ್ತಿ ಅಂದರೆ ಅವರ ಕಂಪೆನಿಯ ಷೇರುಗಳೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ಮಸ್ಕ್‌ ಹೇಳಿದಂತೆ: “ಒಂದು ವೇಳೆ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಗಳು ಸಾಲಕ್ಕೆ ಸಿಲುಕಿ ಮುಳುಗಿದರೆ, ನಾನು ತಕ್ಷಣವೇ ಭಿಕ್ಷುಕನಾಗುತ್ತೇನೆ.”

ಮಸ್ಕ್ ಕಂಪನಿಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಷೇರುಗಳನ್ನು ಪಡೆಯುತ್ತಿದ್ದಾನೆ. ಆದರೆ ಅದು ಆದಾಯವಲ್ಲ. ಅದನ್ನು ಮಾರಿದರೆ ಮಾತ್ರ ಆದಾಯವಾಗುತ್ತದೆ. ಹಾಗಾಗಿ ಆದಾಯ ತೆರಿಗೆಯನ್ನೂ ಕಟ್ಟಬೇಕಾಗಿಲ್ಲ! ಜೊತೆಗೆ ತೆರಿಗೆಮುಕ್ತ ರಾಜ್ಯವಾದ ಟೆಕ್ಸಾಸ್‌ಗೆ ವಾಸ್ತವ್ಯ ಬದಲಾಯಿಸಿರುವುದರಿಂದ ಇನ್ನೂ ಅನುಕೂಲವಾಯಿತು.

ಹಾಗಾದರೆ ಅವರಿಗೆ ದಿನಬಳಕೆಗೆ ನಗದು ಹಣ ಎಲ್ಲಿಂದ ಬರುತ್ತದೆ? ಮಸ್ಕ್ ಹಣ ಬೇಕಾದಾಗ ತನ್ನ ಬಳಿಯಿರುವ ಷೇರುಗಳನ್ನೇ ಅಡಮಾನವಿಟ್ಟು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯುತ್ತಾನೆ.  (ಈ ತಂತ್ರವನ್ನು ‘ಖರೀದಿಸು, ಸಾಲ ಮಾಡು, ಸಾಯುವವರೆಗೂ ತೆರಿಗೆ ಕಟ್ಟಬೇಡ’ ಎನ್ನುತ್ತಾರೆ). ಪರಿಣಾಮವಾಗಿ, ಎಲಾನ್‌ ಮಸ್ಕ್‌ ಅಂದರೆ ಸ್ಪೇಸ್‌ ಎಕ್ಸ್‌ ಮಾತ್ರವಲ್ಲ, ಮಸ್ಕ್‌ ಸ್ವತಃ ತೆರಿಗೆ ಸ್ವರ್ಗವೂ ಆಗಿದ್ದಾನೆ. ತೆರಿಗೆ ತಪ್ಪಿಸಿಕೊಳ್ಳಲು ತೆರಿಗೆ ಇಲ್ಲದೆ ಬೇರೆ ದೇಶಗಳನ್ನು ಹುಡುಕಿಕೊಂಡು ಹೋಗಬೇಕಾಗಿಯೂ ಇಲ್ಲ. ಫ್ರೆಂಚ್ ದೊರೆ ೧೪ನೇ ಲೂಯಿ ‘ನಾನೇ ರಾಜ್ಯ’ ಎಂದುಕೊಳ್ಳುತ್ತಿದ್ದ. ಈಗ ಎಲಾನ್‌ ಮಸ್ಕ್‌ ೧೪ನೇ ಲೂಯಿಯನ್ನು ಮೀರಿಸಿದ್ದಾನೆ. ನಮ್ಮನ್ನು

ಇದನ್ನೂ ನೋಡಿ : “ಮುತ್ತು ಬಂದಿದೆ ಕೇರಿಗೆ” — ಕನಕದಾಸರ ಕುರಿತ ನೃತ್ಯ ರೂಪಕ Janashakthi Media

Donate Janashakthi Media

Leave a Reply

Your email address will not be published. Required fields are marked *