ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರಚೋದನಕಾರಿ ಸುಳ್ಳು ದಾವೆ ಬಯಲಿಗೆಳೆದ ಫ್ಯಾಕ್ಟ್ ಚೆಕ್
ಉತ್ತರ ಪ್ರದೇಶದ ಮೀರತ್ನಲ್ಲಿ ಆರು ಮಸೀದಿಗಳನ್ನು ಧ್ವಂಸ ಮಾಡಲಾಗಿದೆ, 52 ಮುಸ್ಲಿಂ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಹಾಗೂ ಹಲವರನ್ನು ಜೀವಂತವಾಗಿ ಸುಟ್ಟಿದ್ದಾರೆ ಎಂಬ ಭಾರೀ ಆತಂಕ ಹುಟ್ಟಿಸುವ ದಾವೆಯೊಂದಿಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೇಸರಿ ಧ್ವಜ ಹಿಡಿದ ಗುಂಪೊಂದು ಕಟ್ಟಡಗಳ ಮೇಲೆ ಹತ್ತಿ ದಾಂಧಲೆ ನಡೆಸುತ್ತಿರುವ ದೃಶ್ಯಗಳಿರುವ ಈ ವಿಡಿಯೋ ದೊಡ್ಡ ಮಟ್ಟದಲ್ಲಿ ಹಂಚಿಕೆಯಾಗಿದ್ದು, ರಾಜ್ಯದಲ್ಲಿ ಮತ್ತೆ ಸಾಮುದಾಯಿಕ ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂಬ ಚರ್ಚೆಗೂ ಕಾರಣವಾಗಿತ್ತು. ಮೀರತ್
ಬೆಂಕಿ ಹೊತ್ತಿ ಉರಿಯುತ್ತಿರುವ ಕಟ್ಟಡಗಳು, ಓಡಾಡುತ್ತಿರುವ ಜನ, ಮೇಲ್ಛಾವಣಿಗಳ ಮೇಲೆ ನಿಂತು ಘೋಷಣೆ ಕೂಗುತ್ತಿರುವ ಗುಂಪು — ಇಂತಹ ಉದ್ವಿಗ್ನ ದೃಶ್ಯಗಳಿದ್ದ ವಿಡಿಯೋ ಅನೇಕ ಮಂದಿಯಲ್ಲಿ ಭಯ ಮತ್ತು ಆಕ್ರೋಶ ಹುಟ್ಟಿಸಿತು. ಕೆಲವರು ಇದನ್ನು “ಮೀರತ್ನಲ್ಲಿ ಮುಸ್ಲಿಮರ ಮೇಲೆ ದೊಡ್ಡ ದಾಳಿ” ಎಂದು ಬರೆದು ಹಂಚಿಕೊಂಡರೆ, ಇನ್ನೂ ಕೆಲವರು ಸರ್ಕಾರ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದರು. ಕೆಲ ಖಾತೆಗಳು “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ” ಎಂಬ ಸಂದೇಶಗಳನ್ನೂ ಜೊತೆಗೆ ಹಂಚಿಕೊಂಡವು.
ಇದನ್ನೂ ನೋಡಿ : ಕರ್ನಾಟಕಕ್ಕೂ ಬಂದೇ ಬಿಡ್ತು..SIR….ಎಚ್ಚರ ಎಚ್ಚರ Janashakthi Media
