ಸಂವಿಧಾನ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ : ಕಾನೂನು ವಿದ್ಯಾರ್ಥಿಗಳಿಗೆ ಆಹ್ವಾನ

ಬೆಂಗಳೂರು : ಬೆಂಗಳೂರು ನಗರದ ಕ್ರೈಸ್ಟ್ ಅಕಾಡೆಮಿ ಕಾನೂನು ಮಹಾವಿದ್ಯಾಲಯ ಹಾಗೂ ‘ಸಂವಿಧಾನ ಓದು ಅಭಿಯಾನ – ಕರ್ನಾಟಕ’ ಸಹಯೋಗದಲ್ಲಿ ಕಾನೂನು ವಿದ್ಯಾರ್ಥಿಗಳಿಗಾಗಿ ಭಾರತದ ಸಂವಿಧಾನ ಕುರಿತ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜೂನ್‌ 13, 2026ರಂದು ಮಧ್ಯಾಹ್ನ 12 ಗಂಟೆಗೆ ಸ್ಪರ್ಧೆ ನಡೆಯಲಿದ್ದು, ಭವಿಷ್ಯದ ಕಾನೂನು ವೃತ್ತಿಪರರಲ್ಲಿ ಸಾಂವಿಧಾನಿಕ ವಿಚಾರಗಳ ಬಗ್ಗೆ ವಿಮರ್ಶಾತ್ಮಕ ಚಿಂತನೆ ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ 3 ವರ್ಷದ ಅಥವಾ 5 ವರ್ಷದ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿರುವ 25 ವರ್ಷದೊಳಗಿನ ವಿದ್ಯಾರ್ಥಿಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಪ್ರತಿ ಕಾಲೇಜಿನಿಂದ ಗರಿಷ್ಠ ಐದು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಗುರುತಿನ ಚೀಟಿ ಹಾಗೂ ಪ್ರಾಂಶುಪಾಲರಿಂದ ಪಡೆದ ಅನುಮತಿ ಪತ್ರವನ್ನು ಕಡ್ಡಾಯವಾಗಿ ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ನಿಗದಿತ ಸ್ಥಳದಲ್ಲೇ ಒಂದೂವರೆ ಗಂಟೆಯ ಅವಧಿಯಲ್ಲಿ ಪ್ರಬಂಧ ಬರೆಯಬೇಕಿದ್ದು, ಬರವಣಿಗೆಗಾಗಿ ಅಗತ್ಯ ಹಾಳೆಗಳನ್ನು ಸ್ಥಳದಲ್ಲೇ ಒದಗಿಸಲಾಗುತ್ತದೆ. “ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಸವಾಲುಗಳು”, “ಸಮಕಾಲೀನ ಭಾರತದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ”, “ಪ್ರಜಾಪ್ರಭುತ್ವಕ್ಕಿರುವ ಸವಾಲುಗಳು – ಮುಂದಿನ ದಾರಿಗಳು”, “ಭಾರತೀಯ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯ” ಹಾಗೂ “ಭಾರತೀಯ ಸಂವಿಧಾನದ ಅಡಿಯಲ್ಲಿ ಜಾತ್ಯತೀತತೆ” ವಿಷಯಗಳಲ್ಲಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಪ್ರಬಂಧ ಬರೆಯಬಹುದು.

ಇದನ್ನೂ ಓದಿ :ಪೆಟ್ರೋಲ್, ಡೀಸೆಲ್ ಬೆಲೆ ತಲಾ ₹3 ಹೆಚ್ಚಳ: ಪರಿಷ್ಕೃತ ದರ ಇಂದಿನಿಂದಲೇ ಜಾರಿ

ಅತ್ಯುತ್ತಮ ಪ್ರಬಂಧಗಳಿಗೆ ನಗದು ಬಹುಮಾನ ಘೋಷಿಸಲಾಗಿದೆ. ಪ್ರಥಮ ಬಹುಮಾನ ₹15 ಸಾವಿರ, ದ್ವಿತೀಯ ಬಹುಮಾನ ₹10 ಸಾವಿರ ಹಾಗೂ ತೃತೀಯ ಬಹುಮಾನ ₹5 ಸಾವಿರ ನೀಡಲಾಗುವುದು. ಇದಲ್ಲದೆ ಉತ್ತಮವಾಗಿ ಪ್ರಬಂಧ ಬರೆದ 25 ವಿದ್ಯಾರ್ಥಿಗಳಿಗೆ ತಲಾ ₹1,000 ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.

ಸ್ಪರ್ಧೆಯು ಬೆಂಗಳೂರು ಬೇಗೂರು-ಕೊಪ್ಪ ರಸ್ತೆಯ ಹುಲ್ಲಹಳ್ಳಿಯಲ್ಲಿರುವ ಕ್ರೈಸ್ಟ್ ಅಕಾಡೆಮಿ ಕಾನೂನು ಮಹಾವಿದ್ಯಾಲಯ ಆವರಣದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇನ್ಫೋಸಿಸ್ ಮೆಟ್ರೋ ನಿಲ್ದಾಣದಿಂದ ಕಾಲೇಜು ಆವರಣದವರೆಗೆ ಉಚಿತ ಬಸ್‌ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯೂ ಇರಲಿದೆ.

ಆಸಕ್ತ ವಿದ್ಯಾರ್ಥಿಗಳು ಜೂನ್‌ 1ರೊಳಗೆ ತಮ್ಮ ಪ್ರಾಂಶುಪಾಲರ ಅನುಮತಿ ಪತ್ರವನ್ನು ಅಪ್‌ಲೋಡ್‌ ಮಾಡುವ ಮೂಲಕ ನೋಂದಣಿ ಪೂರ್ಣಗೊಳಿಸಬೇಕು. ನೋಂದಣಿ ಶುಲ್ಕ ₹100 ನಿಗದಿಪಡಿಸಲಾಗಿದೆ.

ನೋಂದಣಿ ವಿವರಗಳು
ಆಸಕ್ತ ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲರ ಅನುಮತಿ ಪತ್ರವನ್ನು ಅಪ್‌ಲೋಡ್ ಮಾಡುವ ಮೂಲಕ ದಿನಾಂಕ 01-06-2026 ರೊಳಗೆ ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕು.

• ನೋಂದಣಿ ಲಿಂಕ್: https://forms.gle/eBm1kckAZhzkWbFj7

• ಪಾವತಿ ಲಿಂಕ್: https://rzp.io/rzp/W2r6cu6
• ಸ್ಥಳ: https://maps.app.goo.gl/bgZGXz7N5DR865aq5?g_st=ic

ಹೆಚ್ಚಿನ ಮಾಹಿತಿಗಾಗಿ, ವಿದ್ಯಾರ್ಥಿಗಳು ಮತ್ತು ಕಾಲೇಜುಗಳು ಶುಭಾ ಎಂ. (7483321694) ಅಥವಾ ಪ್ರೀತಿ ಮೆಹ್ರಾ (9823967628) ಅವರನ್ನು ಸಂಪರ್ಕಿಸಬಹುದು.

ಇದನ್ನೂ ನೋಡಿ : “ತಮಿಳುನಾಡು | ವಿಜಯ್‌ ಗೆದ್ದದ್ದು ಹೇಗೆ? : ಟಿವಿಕೆ ಉದಯದ ಒಳನೋಟ” | ಗುರುರಾಜ ದೇಸಾಯಿ Janashakthi Media

 

Donate Janashakthi Media

Leave a Reply

Your email address will not be published. Required fields are marked *