ಉದ್ಯಾನ ಭೂಮಿಗೂ ಕತ್ತರಿ: ಶೇ.5ರಷ್ಟು ಅನ್ಯ ಬಳಕೆಗೆ ಅವಕಾಶ ನೀಡುವ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ

ಬೆಂಗಳೂರು: ರಾಜ್ಯದ ಸರ್ಕಾರಿ ಉದ್ಯಾನಗಳು ಮತ್ತು ಉದ್ಯಾನವನಗಳ ಒಟ್ಟು ಪ್ರದೇಶದ ಗರಿಷ್ಠ ಶೇ.5ರಷ್ಟು ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಕರ್ನಾಟಕ ಸರ್ಕಾರದ ಉದ್ಯಾನಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆಗೆ ವಿಧಾನಸಭೆ ಸೋಮವಾರ ಅಂಗೀಕಾರ ನೀಡಿದೆ. ಮಸೂದೆಗೆ ಯಾವುದೇ ವಿಸ್ತೃತ ಚರ್ಚೆ ನಡೆಯದೆ ಅಂಗೀಕಾರ ನೀಡಲಾಯಿತು. ಉದ್ಯಾನ

ತಿದ್ದುಪಡಿಯ ಪ್ರಕಾರ, ಸರ್ಕಾರದ ಉದ್ಯಾನ ಅಥವಾ ಉದ್ಯಾನವನದ ಭೂಮಿಯನ್ನು ಮಾರಾಟ, ಗುತ್ತಿಗೆ, ವರ್ಗಾವಣೆ, ದಾನ, ವಿನಿಮಯ, ಅಡಮಾನ ಅಥವಾ ಇತರ ರೀತಿಯಲ್ಲಿ ಅನ್ಯ ಬಳಕೆಗೆ ನೀಡಬಹುದು. ಆದರೆ ಈ ರೀತಿಯಲ್ಲಿ ಬಳಸಬಹುದಾದ ಭೂಮಿಗೆ ಒಟ್ಟು ಶೇ.5ರ ಮಿತಿ ನಿಗದಿಪಡಿಸಲಾಗಿದೆ. ಈ ಮಿತಿಯಲ್ಲಿ ಈ ಹಿಂದೆ ಅನ್ಯ ಬಳಕೆಗೆ ನೀಡಿರುವ ಭೂಮಿಯನ್ನೂ ಸೇರಿಸಲಾಗುತ್ತದೆ. ಪ್ರಸ್ತಾವನೆಗಳನ್ನು ಸರ್ಕಾರದ ಮುಂದೆ ಮಂಡಿಸುವ ಮೊದಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯ ಪರಿಶೀಲನೆ ಕಡ್ಡಾಯವಾಗಲಿದೆ.

ಇದನ್ನೂ ಓದಿ : ದೇವಸ್ಥಾನದಲ್ಲಿ ಪೊಲೀಸ್‌ ಅಧಿಕಾರಿಗೆ ಬಿಜೆಪಿ ಶಾಸಕರ ಪುತ್ರಿಯಿಂದ ಕಪಾಳಮೋಕ್ಷ: ಸಿಸಿಟಿವಿಯಲ್ಲಿ ದೃಶ್ಯ ಬಹಿರಂಗ

ಸಾರ್ವಜನಿಕ ಮೂಲಸೌಕರ್ಯ ಮತ್ತು ಸಾರ್ವಜನಿಕ ಉಪಯುಕ್ತತೆ ಯೋಜನೆಗಳಿಗಾಗಿ ಉದ್ಯಾನಗಳಲ್ಲಿರುವ ಭೂಮಿ ಅಥವಾ ಕಟ್ಟಡಗಳನ್ನು ಬಳಸುವುದಕ್ಕೂ ಮಸೂದೆ ಅವಕಾಶ ನೀಡುತ್ತದೆ. ತೋಟಗಾರಿಕೆ ಇಲಾಖೆಯ ಆಡಳಿತಾತ್ಮಕ ಮತ್ತು ಸಂಬಂಧಿತ ಸ್ವಂತ ಬಳಕೆಯ ಕಾಮಗಾರಿಗಳಿಗೆ ಶೇ.5ರ ಮಿತಿ ಅನ್ವಯಿಸುವುದಿಲ್ಲ. ತೋಟಗಾರಿಕಾ ಫಾರಂಗಳಲ್ಲಿಯೂ ಸಂಸ್ಕರಣಾ ಘಟಕಗಳು, ಶೀತಲಗೃಹಗಳು, ಸುಧಾರಿತ ತಳಿಗಳ ಉತ್ಪಾದನೆ ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳಂತಹ ಕೆಲವು ಯೋಜನೆಗಳಿಗೆ ನಿರ್ದಿಷ್ಟ ಷರತ್ತುಗಳೊಂದಿಗೆ ಅವಕಾಶ ಕಲ್ಪಿಸಲಾಗಿದೆ.

ಮಸೂದೆ ಅಂಗೀಕಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿಧಾನಸಭೆಯಲ್ಲಿ ಚರ್ಚೆಯಿಲ್ಲದೆ ಮಸೂದೆ ಅಂಗೀಕರಿಸಿರುವುದನ್ನು ಟೀಕಿಸಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಶೇ.5ರಷ್ಟು ಲಾಲ್‌ಬಾಗ್‌ ಭೂಮಿ ಎಂದರೆ 10 ಎಕರೆಗೂ ಅಧಿಕ ಪ್ರದೇಶವಾಗಲಿದೆ ಎಂದು ಹೇಳಿ, ಬೆಂಗಳೂರಿನ ಉದ್ಯಾನ ಭೂಮಿಯ ಮೇಲೆಯೂ ಸರ್ಕಾರ ಕಣ್ಣು ಹಾಕಿದೆ ಎಂದು ಆರೋಪಿಸಿದ್ದಾರೆ. ಅದೇ ವೇಳೆ, ಲಾಲ್‌ಬಾಗ್‌ ಭೂಮಿಯನ್ನು ಸುರಂಗ ರಸ್ತೆ ಯೋಜನೆಗೆ ಬಳಸುವ ಉದ್ದೇಶದಿಂದಲೇ ತಿದ್ದುಪಡಿ ತರಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಇದನ್ನೂ ನೋಡಿ :RSS ಕಚೇರಿಯಲ್ಲಿ ‘ನಮಸ್ತೆ ಸದಾ ವತ್ಸಲೆ’ ಬದಲು ‘ವಂದೇ ಮಾತರಂ’ ಹಾಡಿ! ಪ್ರಿಯಾಂಕ್ ಖರ್ಗೆ ಸವಾಲು Janashakthi Media

Donate Janashakthi Media

Leave a Reply

Your email address will not be published. Required fields are marked *