ಮುಖ್ಯ ಚುನಾವಣಾ ಆಯುಕ್ತರಿಗೆ ಬ್ರಿಟ್ಟಾಸ್‌ ಪತ್ರ-ನಮೂನೆ ೬ರ ಹೆಚ್ಚುವರಿ ಘೋಷಣೆಯ ಅನುಷ್ಠಾನದ ಚರ್ಚೆಯನ್ನು ಪ್ರಕಟಪಡಿಸಿ, ಕಾನೂನಿನ ಆಧಾರವನ್ನು ಸ್ಪಷ್ಟಪಡಿಸಿ

ಸೆಪ್ಟೆಂಬರ್ 26 ರಂದು ಚುನಾವಣಾ ಆಯೋಗದ ಪತ್ರಿಕಾಗೋ಼ಷ್ಠಿಯ ನಂತರ, ರಾಜ್ಯಸಭೆಯಲ್ಲಿ ಸಿಪಿಐ(ಎಂ) ಗುಂಪಿನ ನಾಯಕ  ಜಾನ್ ಬ್ರಿಟ್ಟಾಸ್ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ, ಆನ್‌ಲೈನ್ ನಮೂನೆ 6 ರೊಂದಿಗೆ ಹೆಚ್ಚುವರಿ ಘೋಷಣೆಯ ಕುರಿತು ಆಯೋಗದ ಸ್ಪಷ್ಟೀಕರಣವು ಉತ್ತರಿಸಿದಕ್ಕಿಂತ ಹೆಚ್ಚಾಗಿ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಈ ಪತ್ರದಲ್ಲಿ ಅವರು ಹೇಳಿದ್ದಾರೆ. ಮುಖ್ಯ

ತಮ್ಮ ಪತ್ರದಲ್ಲಿ ಜಾನ್ ಬ್ರಿಟ್ಟಾಸ್, ನಮೂನೆ 6 ಮತದಾರರ ನೋಂದಣಿ ನಿಯಮಗಳು, 1960 ರ ಅಡಿಯಲ್ಲಿ ಸೂಚಿಸಲಾದ ಶಾಸನಬದ್ಧ ನಮೂನೆಯಾಗಿದ್ದು, ಆ ನಿಯಮಗಳಿಗೆ ಅದಕ್ಕೆ ಅನುಗುಣವಾದ ತಿದ್ದುಪಡಿಯಿಲ್ಲದೆ ಹೇಗೆ ಹೆಚ್ಚುವರಿ ಘೋಷಣೆಯನ್ನು ಸೇರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇಬ್ಬರು ಚುನಾವಣಾ ಆಯುಕ್ತರು ನಮೂನೆ 6 ರ ಮಾರ್ಪಾಡಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳ ಬಗ್ಗೆ ಅವರು ಸ್ಪಷ್ಟನೆ ಕೇಳಿದರು, ಆ ಆಕ್ಷೇಪಣೆಗಳನ್ನು ಹೇಗೆ ಪರಿಗಣಿಸಲಾಗಿದೆ ಮತ್ತು ಆಯೋಗದ ನಿಗದಿತ ನಿರ್ಧಾರ ತೆಗೆದುಕೊಳ್ಳುವ ವಿಧಾನವನ್ನು ಅನುಸರಿಸಲಾಗಿದೆಯೇ ಎಂದು ಬ್ರಿಟ್ಟಾಸ್‌ ಕೇಳಿದ್ದಾರೆ.

ಇದನ್ನೂ ಓದಿ : ಮೇಕೆದಾಟು: ಕೇಂದ್ರದ ಮಧ್ಯಸ್ಥಿಕೆಗೆ ಡಿಕೆಶಿ ಒತ್ತಾಯ; ಸ್ಥಳ ಪರಿಶೀಲನೆಗೆ ತಮಿಳುನಾಡಿಗೆ ಆಹ್ವಾನ

ಬ್ರಿಟ್ಟಾಸ್ ತಮ್ಮ ಪತ್ರದಲ್ಲಿ  ಹೆಚ್ಚುವರಿ ಘೋಷಣೆಯನ್ನು ಒದಗಿಸಲು ಸಾಧ್ಯವಾಗದ ಕಾರಣ ನಮೂನೆ 6 ನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಧ್ಯವಾಗದ ನಾಗರಿಕರ ದುಃಸ್ಥಿತಿಯನ್ನು ಮುಖ್ಯ ಚುನಾವಣಾ ಅಯುಕ್ತರ ಗಮನಕ್ಕೆ ತಂದಿದ್ದಾರೆ. ಮೊದಲ ಬಾರಿಗೆ ಮತದಾರರಾಗುವವರು, ಅನಾಥರು, ದತ್ತು ಪಡೆದವರು, ವಲಸೆ ಕಾರ್ಮಿಕರು, ಸ್ಥಳಾಂತರಗೊಂಡ ವ್ಯಕ್ತಿಗಳು ಮತ್ತು ಇತರರು ತಮ್ಮ ಕುಟುಂಬದ ಐತಿಹಾಸಿಕ ಚುನಾವಣಾ ದಾಖಲೆಗಳು ವಿಶ್ವಾಸಾರ್ಹ ಲಭ್ಯತೆಯನ್ನು ಹೊಂದಿರುವುದಿಲ್ಲ ಎಂದು ಸೂಚಿಸುತ್ತ, ಅಂತಹ ವಿವರಗಳನ್ನು ಒದಗಿಸಲು ಅವರು ಅಸಮರ್ಥರಾಗುವ ಕಾರಣಕ್ಕೆ ಮತದಾರರಾಗಿ  ದಾಖಲಾಗುವ ಅವರ ಹಕ್ಕನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಬ್ರಿಟ್ಟಾಸ್‌ ತಮ್ಮ ಪತ್ರದಲ್ಲಿ  ಒತ್ತಿ ಹೇಳಿದ್ದಾರೆ.

ಹೆಚ್ಚುವರಿ ಘೋಷಣೆಗೆ ಸಂಬಂಧಪಟ್ಟ ಕಡತಗಳಲ್ಲಿ ಇರುವ  ಅದರ ಅನುಷ್ಠಾನ ವಿಧಾನವನ್ನು ಕುರಿತಾದ  ಚರ್ಚೆಯ ಭಾಗವನ್ನು ಪ್ರಕಟಿಸಬೇಕು, ಅದರ ಕಾನೂನು ಆಧಾರವನ್ನು ಸ್ಪಷ್ಟಪಡಿಸಬೇಕು ಮತ್ತು ಆದಷ್ಟು ಬೇಗ ಆಕ್ಷೇಪಗಳನ್ನು ಪರಿಹರಿಸಬೇಕು  ಎಂದು ಜಾನ್‌  ಬ್ರಿಟ್ಟಾಸ್‌  ಚುನಾವಣಾ ಆಯೋಗವನ್ನು ಬಲವಾಗಿ ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ : “ಜೊಕುಮಾರಸ್ವಾಮಿ: ಜನಪದ ನಂಬಿಕೆ ಮತ್ತು ಆಚರಣೆ” — ಜೀವನ್‌ಸಾಬ್‌ ವಾಲೀಕಾರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *