ತಮಿಳುನಾಡಿನಲ್ಲಿ 1967ರಲ್ಲಿ ಅವಿಭಜಿತ ಡಿ.ಎಂ.ಕೆ ಅಧಿಕಾರಕ್ಕೆ ಬಂತು. ಡಿ.ಎಂ.ಕೆ 1977ರ ವರೆಗೆ ಮತ್ತು ಡಿ.ಎಂ.ಕೆ ವಿಭಜನೆಯಾದ ಮೇಲೆ (ಡಿ.ಎಂ.ಕೆ ಅಥವಾ ಎ.ಐ.ಡಿ.ಎಂ.ಕೆ ಅಥವಾ ಅವರ ನಾಯಕತ್ವದ ರಂಗಗಳು) ಸತತವಾಗಿ ಕಳೆದ ಆರು ದಶಕಗಳ ಕಾಲ ಸರಕಾರ ರಚಿಸಿದ್ದವು. ಈ ಬಾರಿ ಡಿ.ಎಂ.ಕೆ ಮತ್ತು ಎ.ಐ.ಡಿ.ಎಂ.ಕೆ ನಾಯಕತ್ವದ ಎರಡೂ ರಂಗಗಳು ಸರಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ. ಟಿವಿಕೆ ಎಂಬ ಜನಪ್ರಿಯ ನಟ ವಿಜಯ ಅವರ ನಾಯಕತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಎಂಬ ಹೊಸ ಪಕ್ಷ ಸರಕಾರ ರಚಿಸಲಿದೆ. ಆರು ದಶಕಗಳ ನಂತರ ಮೊದಲ ಬಾರಿಗೆ ಡಿ.ಎಂ.ಕೆಅಥವಾ ಎ.ಐ.ಡಿ.ಎಂ.ಕೆ ಇಲ್ಲದ ಸರಕಾರವೊಂದು ಬರಲಿದೆ. ಇದರರರ್ಥ ಕೆಲವರು ಹೇಳುವಂತೆ ದ್ರಾವಿಡಿಯನ್ ರಾಜಕೀಯ ಮತ್ತು ಸಿದ್ಧಾಂತದ ಕಾಲ ಮುಗಿಯಿತು ಅಂತಲೇ? ಚುನಾವಣೆಯ ಫಲಿತಾಂಶಗಳ ವಿವರಗಳನ್ನು ಇಟ್ಟುಕೊಂಡು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ. ರಾಜಕೀಯ
– ವಸಂತರಾಜಎನ್. ಕೆ
ತಮಿಳುನಾಡಿನಲ್ಲಿ ರಾಜಕೀಯ ಸುನಾಮಿ ಬಂದಿದೆ. ಈ ರಾಜ್ಯದಲ್ಲಿ ಮೊದಲ ಬಾರಿಗೆ ಬಹುಶಃ ಎರಡೂ ದ್ರಾವಿಡಿಯನ್ ಪಕ್ಷಗಳಿಲ್ಲದ (ಡಿ.ಎಂ.ಕೆ ಅಥವಾ ಎ.ಐ.ಎ.ಡಿ.ಎಂ.ಕೆ) ಸರಕಾರವೊಂದು ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ. ತಮಿಳು ನಾಡಿನಲ್ಲಿ ದೇಶದ ಹಲವು ರಾಜ್ಯಗಳಲ್ಲಿ (1957ರಲ್ಲೇ ಇದನ್ನು ಸಾಧಿಸಿದ ಕೇರಳ ಹೊರತು ಪಡಿಸಿ) ಆದಂತೆ1967ರಲ್ಲಿ ಕಾಂಗ್ರೆಸೇತರ ಸರಕಾರ ಅಧಿಕಾರಕ್ಕೆ ಬಂದಿತ್ತು.ತಮಿಳುನಾಡಿನಲ್ಲಿ1967ರಲ್ಲಿಅವಿಭಜಿತ ಡಿ.ಎಂ.ಕೆ ಅಧಿಕಾರಕ್ಕೆ ಬಂತು. ಆದರೆ ಈ ರಾಜ್ಯದ ಒಂದು ವಿಶೇಷತೆಯೆಂದರೆ, ಆ ನಂತರ ಇಲ್ಲಿಯವರೆಗೆ ಇಲ್ಲಿ ಕಾಂಗ್ರೆಸ್ ಅಥವಾ ಇತರ ಯಾವುದೇ ‘ರಾಷ್ಟ್ರೀಯ’ ಪಕ್ಷ ಅಧಿಕಾರಕ್ಕೆ ಬರಲಿಲ್ಲ.
ಡಿ.ಎಂ.ಕೆ 1977ರ ವರೆಗೆ ಮತ್ತು ಡಿ.ಎಂ.ಕೆ ವಿಭಜನೆಯಾದ ಮೇಲೆ (ಡಿ.ಎಂ.ಕೆ ಅಥವಾ ಎ.ಐ.ಡಿ.ಎಂ.ಕೆ ಅಥವಾ ಅವರ ನಾಯಕತ್ವದ ರಂಗಗಳು) ಸತತವಾಗಿ ಕಳೆದ ಆರು ದಶಕಗಳ ಕಾಲ ಸರಕಾರ ರಚಿಸಿದ್ದವು. ಈ ಬಾರಿ ಡಿ.ಎಂ.ಕೆಮತ್ತು ಎ.ಐ.ಡಿ.ಎಂ.ಕೆ ನಾಯಕತ್ವದ ಎರಡೂ ರಂಗಗಳು ಸರಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ. ಟಿವಿಕೆ ಎಂಬ ಜನಪ್ರಿಯ ನಟ ವಿಜಯ ಅವರ ನಾಯಕತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಎಂಬ ಹೊಸ ಪಕ್ಷ 108 ಸೀಟು ಗಳಿಸಿ ಬಹುಮತಕ್ಕೆ ಹತ್ತಿರ ಬಂದಿದೆ. ಸರಕಾರ ರಚಿಸಲು ಅದಕ್ಕೆ ಕೇವಲ 10 ಶಾಸಕರ ಬೆಂಬಲ ಗಳಿಸಿದರೆ ಸರಕಾರ ರಚಿಸಬಹುದಾದ ಪರಿಸ್ಥಿತಿಯಿದೆ. ಇದನ್ನು ಬಹುಶಃ ಡಿ.ಎಂ.ಕೆ ಅಥವಾ ಎ.ಐ.ಡಿ.ಎಂ.ಕೆ ಬಿಟ್ಟು ಇತರ ಪಕ್ಷಗಳ ಶಾಸಕರಿಂದ ಪಡೆಯಬಹುದು. ರಾಜಕೀಯ
ಫಲಿತಾಂಶಕ್ಕೆ ಹೋಗುವ ಮೊದಲು 2026ರ ಚುನಾವಣೆಯ ಮತದಾರರ ಸಂಖ್ಯೆ 5.73 ಕೋಟಿ ಇದೆ. ಇದು 2021ರ ಚುನಾವಣೆಯ ಮತದಾರರ ಸಂಖ್ಯೆ 6.29 ಕೋಟಿಗಿಂತ 56 ಲಕ್ಷ (ಅಂದರೆ 8.9%) ಕಡಿಮೆ. ತಮಿಳುನಾಡಿನಲ್ಲಿ ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್-ಸರ್) ನಲ್ಲಿ 74 ಲಕ್ಷ ಮತದಾರರನ್ನು ಬಿಡಲಾಗಿತ್ತು ಎಂದು ವರದಿಯಾಗಿದೆ. ಇದರರ್ಥ 18 ಲಕ್ಷ ಮತದಾರರನ್ನು ಸೇರಿಸಲಾಗಿದೆ. ಸರ್ ಪರಿಷ್ಕರಣೆ ಗೆ ಬಳಸಿದ ಮಾನದಂಡವೇನು? ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರನ್ನು ಕೈ ಬಿಡಲಾಗಿದೆ ಮತ್ತು ಸೇರಿಸಲಾಗಿದೆ, ಹೇಗೆಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇದು ಅತ್ಯಂತ ಅಪಾರದರ್ಶಕವಾಗಿದೆ. ಈ ರಾಜಕೀಯ ಸುನಾಮಿ ಫಲಿತಾಂಶದಲ್ಲಿ ಸರ್ ಪರಿಷ್ಕರಣೆಯ ಯೋಜಿತ ಅಥವಾ ಅಯೋಜಿತ ಪರಿಣಾಮ ಆಗಿದೆಯೆ ಎಂಬುದರ ಬಗ್ಗೆ ಸಹ ವಿಶ್ಲೇಷಣೆಯ ಅಗತ್ಯವಿದೆ. ರಾಜಕೀಯ
ಇದನ್ನೂ ಓದಿ: ಖಾಸಗಿ ಹೂಡಿಕೆಯಲ್ಲಿ ‘ಆಲಸ್ಯ’ – ಕಾಂಗ್ರೆಸ್ ಟೀಕೆ
ಭಾರೀ ಪ್ರಮಾಣದ ರೆಕಾರ್ಡ್ ಮತದಾನ (85.1%) ಆಗಿದೆ. ಇದು ಹಿಂದಿಗಿಂತ 11,47% ಹೆಚ್ಚು ಎಂದು ಹೇಳಲಾಗಿತ್ತು. ಆದರೆ ಮತದಾನ ಮಾಡಿದವರ ಸಂಖ್ಯೆಯಲ್ಲಿ 2021ರಲ್ಲಿ 4,54 ಕೋಟಿಯಿಂದ 4.87 ಕೋಟಿಗೆ ಅಂದರೆ 7.2% ಮಾತ್ರ ಹೆಚ್ಚಾಗಿದೆ. ರಾಜಕೀಯ
ಫಲಿತಾಂಶದ ವಿಶ್ಲೇಷಣೆಗೆ ಹೋಗುವ ಮೊದಲು ಮತ್ತು ಇದಕ್ಕೆ ಆಧಾರವಾಗಿ ವಿವಿಧ ಪಕ್ಷಗಳು ಮತ್ತು ಪಕ್ಷಗಳ ರಂಗದ ಮತಪ್ರಮಾಣದ ವಿವರಗಳು ಕೋಷ್ಟಕದಲ್ಲಿವೆ. ಈ ಬಾರಿ ಡಿ.ಎಂ.ಕೆ ಮತ್ತು ಎ.ಐ.ಎ.ಡಿ.ಎಂ.ಕೆ ನಾಯಕತ್ವದ ಕೂಟಗಳು ಹಾಗೂ ವಿಜಯ್ ಅವರ ಟಿ,ವಿ.ಕೆ, ಎನ್.ಎಂ.ಕೆ ಸ್ವತಂತ್ರವಾಗಿ ಎಲ್ಲ ಸೀಟುಗಳಲ್ಲಿ ಸ್ಪರ್ಧಿಸಿದ್ದವು. ಮತಗಳಿಕೆಯ ಪ್ರಮಾಣ ಮತ್ತು ಗೆದ್ದ ಸೀಟುಗಳ ದೃಷ್ಟಿಯಿಂದ ಟಿವಿಕೆ ಮೊದಲ ಸ್ಥಾನದಲ್ಲಿದೆ. ಅದು 35.0% ಮತಗಳಿಸಿ 108 ಸೀಟುಗಳನ್ನು ಗಳಿಸಿದೆ. ರಾಜಕೀಯ
ಹಿಂದಿನ ಆಳುವ ಕೂಟವಾಗಿದ್ದ ಡಿ.ಎಂ.ಕೆ ನಾಯಕತ್ವದ ಸೆಕ್ಯುಲರ್ ಪ್ರೊಗ್ರೆಸಿವ್ ಅಲಯನ್ಸ್ (ಎಸ್.ಪಿ.ಎ) ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದ್ದು 31.4% ಮತಗಳಿಸಿದ್ದು, 73 ಸೀಟುಗಳಿಗೆ ತೃಪ್ತವಾಗಬೇಕಾಗಿದೆ. ಎ.ಐ.ಎ.ಡಿ.ಎಂ.ಕೆ ನಾಯಕತ್ವದ ನ್ಯಾಶನಲ್ ಡೆಮೊಕ್ರಾಟಿಕ್ ಅಲಾಯನ್ಸ್ (ಎನ್.ಡಿ.ಎ) ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು 27.2% ಮತ ಗಳಿಸಿ 53 ಸೀಟು ಪಡೆದಿದೆ. ಡಿ.ಎಂ.ಕೆ ಕೂಟ 14.4% ಮತಗಳನ್ನು ಮತ್ತು 86 ಸೀಟುಗಳನ್ನು ಟಿವಿಕೆಗೆ ಕಳೆದುಕೊಂಡಿದೆ. . ಡಿ.ಎಂ.ಕೆ ಕೂಟದಲ್ಲಿ ಕಾಂಗ್ರೆಸ್, ಡಿ.ಎಂ.ಡಿ.ಕೆ, ವಿ.ಸಿ.ಕೆ, ಸಿಪಿಐ, ಸಿಪಿಐಎಂ, ಮುಸ್ಲಿಂ ಲೀಗ್ ಪಕ್ಷಗಳಿದ್ದವು. ಸೀಟುಗಳಿಗೆ ಭಾರೀ ಚೌಕಾಸಿ ಮಾಡಿ ಟಿವಿಕೆ ರಂಗಕ್ಕೆ ಹೋಗುವ ಬೆದರಿಕೆ ಹಾಕಿದ್ದ ಕಾಂಗ್ರೆಸ್ 28 ಸೀಟುಗಳಲ್ಲಿ ಸ್ಪರ್ಧಿಸಿ 3.4% ಮತ ಗಳಿಸಿ ಕೇವಲ 5 ಸೀಟು ಗೆದ್ದಿದೆ. ಈ ಕೂಟದಲ್ಲಿ ಸ್ಪರ್ಧಿಸಿದ ಸೀಟುಗಳಲ್ಲಿ ಗೆದ್ದ ಸೀಟುಗಳ ಪ್ರಮಾಣದಲ್ಲಿ ಕಾಂಗ್ರೆಸ್ ಡಿ.ಎಂ.ಡಿ.ಕೆ ಬಿಟ್ಟರೆ ಅತಿ ಕಡಿಮೆ.
ಎ.ಐ.ಎ.ಡಿ.ಎಂ.ಕೆ ಕೂಟದಿಂದ 14.85 % ಮತಗಳನ್ನು ಮತ್ತು 22 ಸೀಟುಗಳನ್ನು ಟಿವಿಕೆಗೆ ಕಸಿದುಕೊಂಡಿದೆ.ಎ.ಐ.ಎ.ಡಿ.ಎಂ.ಕೆ ಕೂಟದಲ್ಲಿ ಬಿಜೆಪಿ, ಪಿ.ಎಂ.ಕೆ, ಎ.ಎಂ.ಎಂ.ಕೆ ಪಕ್ಷಗಳಿವೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎನ್.ಎಂ.ಕೆ ಸಹ 2.9% ಮತ ಕಳೆದುಕೊಂಡ ಶೂನ್ಯ ಸಂಪಾದನೆ ಮುಂದುವರೆಸಿದೆ. ಎರಡು ಪ್ರಮುಖ ಕೂಟಗಳಲ್ಲಿದ್ದ ಪಕ್ಷಗಳ ಮತಗಳಿಕೆ ಮತ್ತು ಸ್ಪರ್ಧಿಸಿದ/ಗೆದ್ದ ಸೀಟುಗಳ ವಿವರ ಕೋಷ್ಟಕ 1 ರಲ್ಲಿದೆ. ಹೆಚ್ಚಿನ ಪಕ್ಷಗಳು ಮತಪ್ರಮಾಣ ಮತ್ತು ಸೀಟು ಎರಡನ್ನೂ ಕಳೆದುಕೊಂಡಿವೆ. ಹಿಂದೆ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಸರಕಾರ ರಚಿಸುವ ಬಗ್ಗೆ ಬಹಳ ಸದ್ದು ಮಾಡಿದ್ದ ಬಿಜೆಪಿ 33 ಸೀಟುಗಳಲ್ಲಿ ಸ್ಪರ್ಧಿಸಿ ಬರಿಯ 3% ಮತ ಗಳಿಸಿ 1 ಸೀಟು ಮಾತ್ರ ಗೆದ್ದಿದೆ. ಈ ಕೂಟದಲ್ಲಿ ಸ್ಪರ್ಧಿಸಿದ ಸೀಟುಗಳಲ್ಲಿ ಗೆದ್ದ ಸೀಟುಗಳ ಪ್ರಮಾಣದಲ್ಲಿ ಬಿಜೆಪಿಯದ್ದು ಅತಿ ಕಡಿಮೆ. ಬಿಜೆಪಿಯಿಂದ ಎ.ಐ.ಎ.ಡಿ.ಎಂ.ಕೆ ಕೂಟಕ್ಕೆ ಹೆಚ್ಚಿನ ಲಾಭವಾಗಿಲ್ಲ. ನಷ್ಟವಾಗಿದೆ ಎಂದೇ ಹೇಳಬೇಕು. ಬಿಜೆಪಿ ಮತಗಳಿಕೆ ಹೆಚ್ಚಾಗಿದ್ದರೂ, ಅದು ಸ್ಪರ್ಧಿಸಿದ (ಕಳೆದ ಬಾರಿ 20ರಿಂದ 33 ಕ್ಕೆ ಏರಿಕೆ ) ಹೆಚ್ಚಿನ ಸೀಟುಗಳ ಪ್ರಮಾಣಕ್ಕಿಂತ ಕಡಿಮಯೇ ಇದೆ. ಅದು ಕಳೆದ ಬಾರಿಗೆ ಹೋಲಿಸಿದರೆ 3 ಸೀಟು ಕಳೆದುಕೊಂಡಿದೆ. ರಾಜಕೀಯ
ಕೋಷ್ಟಕ 1 :ತಮಿಳುನಾಡು 2026 ವಿಧಾನಸಭಾ ಚುನಾವಣೆಯ ಫಲಿತಾಂಶ

*ಪಕ್ಷಗಳು ಸ್ಪರ್ಧಿಸಿದ ಸೀಟುಗಳ ಸಂಖ್ಯೆ ಮತ್ತುಇದ್ದ ಕೂಟಗಳಲ್ಲಿ 202 1ಮತ್ತು 2026ರ ಚುನಾವಣೆಗಳಲ್ಲಿ ಸ್ವಲ್ಪ ಭಿನ್ನವಾಗಿ ಇರುವುದರಿಂದ ಪಕ್ಷಗಳ ಮತ ಪ್ರಮಾಣ ಮತ್ತು ಸೀಟುಗಳಿಕೆಯಲ್ಲಿ ವ್ಯತ್ಯಾಸಗಳನ್ನು ಆಯಾ ಪಕ್ಷದ ಸಾಧನೆ/ವೈಫಲ್ಯವೆಂದು ಸರಳೀಕರಿಸಲಾಗದು.
ರಾಜ್ಯದ ವಿವಿಧ ಪ್ರದೇಶಗಳಲ್ಲಿ ಈ ಮೂರು ಕೂಟಗಳ ಸಾಧನೆ ನೋಡೋಣ. ಡಿ.ಎಂ.ಕೆ ಕೂಟದ ಭದ್ರಕೋಟೆಯಾಗಿದ್ದ ಬೃಹತ್ ಚೆನ್ನೈ ಪ್ರದೇಶದಲ್ಲಿ ಟಿವಿಕೆ 45% ಮತ ಪಡೆದು 37ರಲ್ಲಿ 32 ಸ್ಥಾನ ಗಳಿಸಿ ಎರಡೂ ಕೂಟಗಳನ್ನು ಧ್ವಂಸ ಮಾಡಿದೆ. ಪಶ್ಚಿಮ ವಲಯದಲ್ಲಿ ಸಹ ಟಿವಿಕೆ ಮತಗಳಿಕೆ ಮತ್ತು ಸೀಟು ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಕೇಂದ್ರ ಮತ್ತು ದಕ್ಷಿಣವಲಯಗಳಲ್ಲಿಟಿವಿಕೆ ಮತಗಳಿಕೆ ಮತ್ತು ಸೀಟು ಗಳಲ್ಲಿ ಎರಡನೇ ಸ್ಥಾನದಲ್ಲಿದೆ.ಉತ್ತರ ವಲಯದಲ್ಲಿಮಾತ್ರ ಟಿವಿಕೆ ಮತಗಳಿಕೆಯಲ್ಲಿ ಎರಡನೇ ಮತ್ತು ಸೀಟು ಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೇಂದ್ರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಮಾತ್ರ ಡಿ.ಎಂ.ಕೆ ಕೂಟ ಮತಗಳಿಕೆ ಮತ್ತು ಸೀಟು ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಉತ್ತರ ವಲಯದಲ್ಲಿ ಎರಡನೇ ಮತ್ತು ಪಶ್ಚಿಮ ವಲದಲ್ಲಿ ಮಾತ್ರ ಮೂರನೇ ಸ್ಥಾನದಲ್ಲಿದೆ. ಎ.ಐ.ಎ.ಡಿ.ಎಂ.ಕೆ ಕೂಟಉತ್ತರ ವಲಯದಲ್ಲಿ ಮಾತ್ರ ಮೊದಲನೆಯ ಸ್ಥಾನದಲ್ಲಿದೆ ಮತ್ತು ಪಶ್ಚಿಮ ವಲದಲ್ಲಿ ಮಾತ್ರ ಎರಡನೇ ಸ್ಥಾನದಲ್ಲಿದೆ. ಉಳಿದೆಲ್ಲ ವಲಯಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಬೃಹತ್ ಚೆನ್ನೈಯ 45% ಬಿಟ್ಟರೆ ಎಲ್ಲ ವಲಯಗಳಲ್ಲಿ ಅದರ ಮತಗಳಿಕೆ ಪ್ರಮಾಣ 31-34% ಇದೆ. ರಾಜಕೀಯ
ಎರಡು ಕೂಟಗಳು ಮತಗಳಿಕೆಯಲ್ಲಿ ಭಾರೀ ಕಡಿತ ಅನುಭವಿಸಿದರೂ, ಮೂರೂ ಕೂಟಗಳ ಮತಗಳಿಕೆಯಲ್ಲಿ (1 ಮತ್ತು 2 ನೇ ಸ್ಥಾನ, 2 ಮತ್ತು 3 ನೇ ಸ್ಥಾನದ ನಡುವೆ) 4% ಅಷ್ಟೇ ವ್ಯತ್ಯಾಸವಿದೆ. ಆದರೆ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಆಗುವಂತೆ ಸೀಟು ಗಳಿಕೆಯಲ್ಲಿ ಬಾರೀ ವ್ಯತ್ಯಾಸವಾಗಿದೆ. ಟಿವಿಕೆ 35% ಮತ ಗಳಿಸಿ 46% ಸೀಟು ಗಳಿಸಿದೆ. ಡಿಎಂಕೆ ಕೂಟ 31% ಮತ ಗಳಿಸಿ 32% ಸೀಟು ಗಳಿಸಿದೆ. ಎ.ಐ.ಎ.ಡಿ.ಎಂ.ಕೆ ಕೂಟ 27% ಮತ ಗಳಿಸಿ 22% ಸೀಟು ಗಳಿಸಿದೆ. ಟಿವಿಕೆ ಮೂರು ಕೂಟಗಳ ಸರಿಸುಮಾರು ಸಮಾನ ತ್ರಿಕೋಣ ಸ್ಪರ್ಧೆಯ ಪ್ರಯೋಜನ ಪಡೆದಿದೆ. ರಾಜಕೀಯ
ಟಿವಿಕೆ ನಗರ ಪ್ರದೇಶಗಳಲ್ಲಿ ಪ್ರಬಲವಾಗಿದ್ದ ಡಿಎಂಕೆ ಕೂಟ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಬಲವಾಗಿದ್ದ ಎ.ಐ.ಎ.ಡಿ.ಎಂ.ಕೆ ಕೂಟ ಎರಡಕ್ಕೂ ಸವಾಲೆಸೆದು ಎಲ್ಲ ಪ್ರದೇಶಗಳಿಂದ ಮತಗಳಿಕೆ ಮಾಡಿದೆ. ಆದರೆ ಹೆಚ್ಚೆಚ್ಚು ನಗರ ಪ್ರದೇಶಗಳಿಂದ ಹೆಚ್ಚೆಚ್ಚು ಗ್ರಾಮೀಣ ಪ್ರದೇಶಗಳಿಗೆ ಹೋದಂತೆ ಟಿವಿಕೆ ಯ ಮತಗಳಿಕೆ ಕಡಿಮೆಯಾಗುತ್ತಾ ಹೋಗುವುದು ಕಂಡು ಬಂದಿದೆ. ಚೆನ್ನೈಯಂತಹ ದೊಡ್ಡ ನಗರ ಪ್ರದೇಶಗಳಲ್ಲಿ ಅದರ ಮತಗಳಿಕೆ 46.5% ನಿಂದ 30.5% ಗೆ ಇಳಿಯುತ್ತದೆ. ಇದೇ ರೀತಿ ಟಿವಿಕೆ ಯುವಜನರಲ್ಲಿ ಅತ್ಯಂತ ಹೆಚ್ಚು ಮತ್ತು ವೃದ್ಧರಲ್ಲಿ ಅತಿ ಕಡಿಮೆ ಮತಗಳಿಕೆ ಸಾಧಿಸಿದೆ. ಮಹಿಳೆಯರಲ್ಲಿ ಸಹ ಪುರುಷರಿಗಿಂತ ಹೆಚ್ಚಿನ ಮತಗಳಿಕೆ ಸಾಧಿಸಿದೆ ಎಂದು ಎಕ್ಸಿಟ್ ಪೋಲ್ ಗಳು ಹೇಳಿವೆ. ಎಸ್.ಸಿ/ಎಸ್.ಟಿ ಮೀಸಲಿಟ್ಟ 46 ಕ್ಷೇತ್ರಗಳಲ್ಲಿ ಸಹ ಟಿವಿಕೆ 34.5% ಮತ ಪಡೆದು 24 ಸೀಟುಗಳನ್ನು ಗೆದ್ದಿದೆ. ಎಲ್ಲ ಜಾತಿಗಳಿಂದಲೂ ಟಿವಿಕೆ ಗೆ ಸರಿ ಸುಮಾರು ಒಂದೇ ಪ್ರಮಾಣದಲ್ಲಿ ಮತ ಬಂದಿದೆ ಎಂದು ಎಕ್ಸಿಟ್ ಪೋಲ್ ಗಳಲ್ಲಿ ಹೇಳಲಾಗಿದೆ. ರಾಜಕೀಯ
ಮೂರೂ ಕೂಟಗಳ ಪ್ರಣಾಳಿಕೆ, ಆಶ್ವಾಸನೆಗಳಲ್ಲಿ ಏನು ವ್ಯತ್ಯಾಸವಿದೆ? ಯಾವ ಅಂಶ ಟಿವಿಕೆ ವಿಜಯಕ್ಕೆ ಕಾರಣವಾಯಿತು? ಎಂಬ ವಿಶ್ಲೇಷಣೆ ಇನ್ನಷ್ಟೇ ನಡೆಯಬೇಕು. ಆದರೆ ವಿಜಯ್ ಚುನಾವಣೆಯಲ್ಲಿ ಭ್ರಷ್ಟಾಚಾರದ ನಿರ್ಮೂಲನೆಯನ್ನೇ ಪ್ರಮುಖ ವಿಷಯವಾಗಿ ಎತ್ತಿದರು. ಅವರ ಪ್ರಚಾರ ದುಬಾರಿಯಾಗಿರಲಿಲ್ಲ. ಸರಳವಾಗಿತ್ತು. ಉಳಿದ ಎರಡೂ ಕೂಟಗಳಂತೆ ಅವರು ಹಣವನ್ನೂ ಹಂಚಲಿಲ್ಲ. ಕ್ಷೇತ್ರದಲ್ಲಿ ನಿರ್ದಿಷ್ಟ ಜಾತಿ ಧರ್ಮದ ಜನರ ಪ್ರಮಾಣದ ಆಧಾರದ ಮೇಲೆ ಆಯಾ ಜಾತಿ-ಧರ್ಮದ ಸ್ಪರ್ಧಿಗೆ ಟಿಕೆಟ್ ಕೊಡುವ ಸಾಮಾನ್ಯ ನಿಯಮವನ್ನೂ ಟಿವಿಕೆ ಮುರಿದಿದೆ. ಬ್ರಾಹ್ಮಣ ಬಾಹುಳ್ಯ ಪ್ರದೇಶದಲ್ಲಿ ಮುಸ್ಲಿಂ ಅಭ್ಯರ್ಥಿ, ವಣಿಯಾರ್ ಬಾಹುಳ್ಯ ಪ್ರದೇಶದಲ್ಲಿ ಎಸ್.ಸಿ ಅಭ್ಯರ್ಥಿ ಹಾಕಲು ಹಿಂಜರಿಯಲಿಲ್ಲ, ಗೆದ್ದ 108 ಅಥವಾ ಸ್ಪರ್ಧಿಸಿದ 234 ಅಭ್ಯರ್ಥಿಗಳು ಎಲ್ಲ ಜಾತಿ, ವರ್ಗ, ಧರ್ಮ, ವೃತ್ತಿಗೆ ಸೇರಿದವರಾಗಿದ್ದರು. ಯಾವುದೇ ಕೆಲವು ಸಮುದಾಯಗಳ ಪ್ರಾಬಲ್ಯವಿಲ್ಲ. ಚೆನ್ನೈ ನ ಒಂದು ಕ್ಷೇತ್ರದಲ್ಲಿ ವಿಜಯ್ ಡ್ರೈವರ್ ಮಗ ಸ್ಪರ್ಧಿಯಾಗಿದ್ದನೆಂದು ವರದಿಯಾಗಿದೆ.
ಡಿ.ಎಂ.ಕೆಮತ್ತು ಎ.ಐ.ಎ.ಡಿ.ಎಂ.ಕೆ ಪಕ್ಷ ಸರಕಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದು ಮಾತ್ರಕ್ಕೆ, ನಾವು ಮೇಲೆ ನೊಡಿದ ಅಂಕೆಸಂಖ್ಯೆಗಳು ದ್ರಾವಿಡಿಯನ್ (ಡಿ.ಎಂ.ಕೆ ಮತ್ತು ಎ.ಐ.ಎ.ಡಿ.ಎಂ.ಕೆ)ಪಕ್ಷಗಳ ಕತೆ ಮುಗಿಯಿತು ಎಂದು ವ್ಯಾಪಕವಾಗ ಕೊಡಲಾಗುತ್ತಿರುವ ‘ತೀರ್ಪ’ನ್ನು ಸಮರ್ಥಿಸುತ್ತಿಲ್ಲ. ಇನ್ನೂ ಮುಂದುವರೆದು ದ್ರಾವಿಡಿಯನ್ ಸಿದ್ಧಾಂತದ ಕಾಲ ಮುಗಿಯಿತು ಎಂದು ಘೋಷಿಸಲಾಗುತ್ತಿದೆ.. ಯಾಕೇಂದರೆ ಟಿವಿಕೆ ಯ ವಿಜಯ್ ಸಹ ತಾನು ಪೆರಿಯಾರ್ ಸಿದ್ಧಾಂತದ, ಬೆಂಬಲಿಗ, ತಮಿಳು ಭಾಷೆ ಮತ್ತು ತಮಿಳು ರಾಷ್ಟ್ರೀಯತೆ ಗಳನ್ನು, ಸೆಕ್ಯುಲರ್ ಹಾಗೂ ಫೆಡರಲ್ ತತ್ವಗಳನ್ನು ಎತ್ತಿ ಹಿಡಿಯುವವನು. . ಬಿಜೆಪಿ ತನ್ನ ಸೈದ್ಧಾಂತಿಕ ಎಂದಿದ್ದಾರೆ. ಗೆದ್ದ ನಂತರವೂ ಸರಕಾರ ರಚಿಸಲು ಸೆಕ್ಯುಲರ್ ಪಕ್ಷಗಳ ಬೆಂಬಲ ಮಾತ್ರ ಪಡೆಯುವುದಾಗಿ ಹೇಳಿದ್ದಾರೆ. ಹಾಗಾಗಿ ದ್ರಾವಿಡಿಯನ್ ಸಿದ್ಧಾಂತದ ಕಾಲ ಮುಗಿಯಿತು ಎನ್ನುವುದಂತೂ ಬರಿಯ ಬೊಗಳೆಯಾಗುತ್ತದೆ.
ಇದನ್ನೂ ನೋಡಿ: ಚುನಾವಣಾ ಫಲಿತಾಂಶ: ಗೆದ್ದವರು ಸೋಲಿಸಿದ್ದು ಯಾರನ್ನು? ಏನನ್ನು? Janashakthi Media
