ಪ್ರೊ. ಕೃಷ್ಣಪ್ಪ ಭವನದಲ್ಲಿ ನಡೆದ ಎಸ್ಎಫ್ಐ ರಾಜ್ಯ ಅಧ್ಯಯನ ಶಿಬಿರದಲ್ಲಿ ಅಭಿಮತ
ಹರಿಹರ: ಕ್ಯಾಂಪಸ್ ಡೆಮಾಕ್ರಸಿ ಉಳಿಸಲು ಸೈದ್ಧಾಂತಿಕವಾಗಿ ಎದುರಿಸುವ ಶಕ್ತಿ ಎಸ್ಎಫ್ಐ ಸಂಘಟನೆ ಇದೆ. ಈ ಸೈದ್ಧಾಂತಿಕ ಗಟ್ಟಿತನದಿಂದ ಮಾತ್ರ ನಾಡಿಗೆ ಹೊಸ ಬೆಳಕನ್ನು ತರಲು ಸಾದ್ಯ ಎಂದು ವಿಶ್ವ ಮಾನವ ಮಂಟಪ ಸ್ಥಾಪಕರಾದ ಅವರಗೆರೆ ರುದ್ರಮುನಿ ಮಾತನಾಡಿದರು. ಕ್ಯಾಂಪಸ್
ನಗರದ ಹೊರವಲಯದಲ್ಲಿರುವ ಪ್ರೊ. ಕೃಷ್ಣಪ್ಪ ಭವನದಲ್ಲಿ ನಡೆದ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ, ಕ್ಯಾಂಪಸ್ ಡೆಮಾಕ್ರಸಿ ಉಳಿಸಲು, ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲು ಒತ್ತಾಯಿಸಿ ನಾಲ್ಕು ದಿನಗಳ ಕಾಲ ನಡೆಯಲ್ಲಿರುವ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ಮಟ್ಟದ ಅಧ್ಯಯ ಶಿಬಿರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಈ ಅಧ್ಯಾಯನ ಶಿಬಿರ ವೈಚಾರಿಕ ಚಿಂತನೆಗಳನ್ನು ಹುಟ್ಟುಹಾಕಲಿದೆ.
ಬಸವಣ್ಣ ಅವರ ವಚನ “ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ” ಎನ್ನುವಂತೆ ನಮ್ಮೊಳಗೆ ಎಲ್ಲವೂ ಅಡಗಿರುವಾಗ ನಾವು ಯಾವ ದೇವರನ್ನು ಪೂಜಿಸಿ ಏನು ಫಲ ವಚನವನ್ನ ಹಾಡುವ ಮೂಲಕ ನನಗೆ ಇಂದು ಬಹಳ ಸಂತೋಷವಾಗುತ್ತಿದೆ. ಕ್ಯಾಂಪಸ್
ಇದನ್ನೂ ಓದಿ: ಮಣಿಪುರ ಜನಾಂಗೀಯ ಹಿಂಸಾಚಾರ: 58,821 ಜನರು ಸ್ಥಳಾಂತರ, 217 ಸಾವು
ಎಸ್ಎಫ್ಐ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ರಾಜ್ಯಮಟ್ಟದ ಅಧ್ಯಯನ ಶಿಬಿರ ಹರಿಹರದಲ್ಲಿ ನಡೆಯುತ್ತಿದೆ ಎಂದರೆ, ಮುಂದೆ ಒಂದು ದಿನ ನಮ್ಮ ನಾಡಿಗೆ ಹೊಸ ಬೆಳಕನ್ನು ತರುವ ಸಂದರ್ಭ ಇದಾಗಿದೆ.
ಹಿಂದೆ ಚಳುವಳಿಯನ್ನು ಹುಟ್ಟು ಹಾಕಿದ ಅನೇಕ ಸಂಗಾತಿಗಳು ತ್ಯಾಗ ಸ್ಪೂರ್ತಿಯಾಗಬೇಕು. ಅವರೆಲ್ಲರ ಆಶಯಗಳನ್ನು ತಮ್ಮಗಳ ಘೋಷಣೆಗಳ ಮೂಲಕ ಇಂದು ಹಾಕುತ್ತಾ ಕೃಷ್ಣಪ್ಪ ಸಭಾಂಗಣಕ್ಕೆ ಬರುವಾಗ ಮತ್ತೆ ಕೃಷ್ಣಪ್ಪ ನಾಯಕ ಹುಟ್ಟಿ ಬರುವಂತಾಯಿತು. ಚರಿತ್ರೆ ಸೃಷ್ಟುವ ಈ ಅಧ್ಯಯನ ಶಿವರ ಯಶಸ್ವಿಯಾಗಲಿ ಮತ್ತು ಹೊಸ ನಾಯಕರು ಹುಟ್ಟಿ ಬರಲಿ ಎನ್ನುವ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ವಿಜ್ಞಾನಿಗಳು, ಚಿಂತಕರಾದ ಕಾಮ್ರೇಡ್ ಜಿ.ಎನ್ ನಾಗರಾಜ್ ಅವರು ಮಾತನಾಡುತ್ತಾ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಎನ್ನುವ ಅರ್ಥ ಎಷ್ಟೋ ಜನಗಳಿಗೆ ತಿಳಿದಿಲ್ಲ. ಇವತ್ತು ನಮಗೆ ಸ್ವಾತಂತ್ರ್ಯ ಸಿಕ್ಕಿದೆಯೇ ಧಕ್ಕಿದೆಯೇ? ಸ್ವಾತಂತ್ರ್ಯ ಅಂದರೆ ಏನು? ಫ್ರೀಡಂ ಎಂದರೆ ನಾವು ಮಾತನಾಡುವ, ಬದುಕುವ, ನಮ್ಮ ವಾತಾವರಣವನ್ನು ನಾವೇ ಕಲ್ಪಿಸಿಕೊಳ್ಳುವ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವುದಾಗಿದೆ. ಅದಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಟಿಸುವುದು ಫ್ರೀಡಂ ಆಗಿರುತ್ತದೆ.

ನಮ್ಮ ಶಿಕ್ಷಣ ಇಂದಿನ ಬ್ರಿಟಿಷ್ ಕಾಲದ ವ್ಯವಸ್ಥೆಯನ್ನು ಮುಂದುವರಿಸಿದೆ ಇದು ಕೇವಲ ಕ್ಲಾರ್ಕ್‌ಗಳನ್ನ ಸೃಷ್ಟಿಸುವ ವ್ಯವಸ್ಥೆಯ ಭಾಗವಾಗಿದೆ. ಇಂತಹ ಸಂದರ್ಭದಲ್ಲಿ ಎಸ್ಎಫ್ಐ ತನ್ನ ನಾಯಕರಿಗೆ ಸೈದ್ಧಾಂತಿಕ ತರಗತಿಗಳನ್ನು ನೀಡುವ ಮೂಲಕ, ಶಿಕ್ಷಣ ವ್ಯವಸ್ಥೆಗೆ ತೊಡಕಾಗಿರುವ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ರೂಪಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದರು. ಇಂತಹ ವಿದ್ಯಾರ್ಥಿ ಸಂಘಟನೆ ಬೃಹತ್ ಮಟ್ಟದಲ್ಲಿ ಬೆಳೆದು ಹೊಸ ನಾಯಕತ್ವವನ್ನು ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್ ಮಾತನಾಡಿ, ದೇಶದ ಉದ್ದಗಲಕ್ಕೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಎಸ್ಎಫ್ಐ ಕೈಗೆತ್ತಿಕೊಂಡು ನಿರಂತರ ಹೋರಾಟಗಳನ್ನು ರೂಪಿಸುತ್ತಾ ಬರುತ್ತಿದೆ. ಕರ್ನಾಟಕದಲ್ಲಿ ಹಗಲಿರುಳು ವಿದ್ಯಾರ್ಥಿಗಳ ನಡುವೆ ದುಡಿಯುತ್ತಿದೆ. ವಿದ್ಯಾರ್ಥಿ ಚುನಾವಣೆ ಆರಂಭಗೊಳ್ಳಲಿದೆ ಇದರ ನಡುವೆ ಶಿಕ್ಷಣದ ಸಮಸ್ಯೆಗಳು ನಿರಂತರವಾಗಿ ದ್ವಿಗಣಗೊಳ್ಳುತ್ತಿವೆ ನಮ್ಮ ಮುಂದೆ ಅನೇಕ ಸವಾಲುಗಳಿವೆ, ವಿದ್ಯಾರ್ಥಿಗಳ ಮೇಲೆ ವಿದ್ಯಾರ್ಥಿನಿಯರ ಮೇಲೆ ನಡೆಯುವ ದಾಳಿ ದೌರ್ಜನ್ಯಗಳು, ಆಡಳಿತಾತ್ಮಕ ಸಮಸ್ಯೆಗಳ ಹೆಚ್ಚುತ್ತಿವೆ ಇದರ ನಡುವೆ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯು ಬೆಳೆದು ಬರುತ್ತಿದೆ.
ನಮ್ಮ ಮುಂದೆ ಅನೇಕ ಸೈದ್ಧಂತಿಕ ಪ್ರಶ್ನೆಗಳಿವೆ. ಇವೆಲ್ಲವುಗಳ ಪರಿಹಾರಕ್ಕಾಗಿ ಇಂದಿನಿಂದ ನಾಲ್ಕು ದಿನಗಳವರೆಗೆ ಶಿಬಿರ ನಡೆಯಲಿದೆ. ಈ ಶಿಬಿರಕ್ಕೆ ಇದು ನಾಡಿನಾದ್ಯಂತ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಅವರಿಗೆ ನಾಯಕತ್ವದ ಗುಣವನ್ನು ಬೆಳೆಸಲು ಈ ಶಿಬಿರ ನಡೆಯಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ.ಎಸ್ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್, ಗಣೇಶ ರಾಠೋಡ್, ದೊಡ್ಡ ಬಸವರಾಜ ಗುಳೆದಾಳ, ರಾಜ್ಯ ಸಮಿತಿ ಸದಸ್ಯೆ ರಜಿಯಾ ಯಾಸ್ಮಿನ್ ಇದ್ದರು. ಜಿಲ್ಲಾ ಸಂಚಾಲಕ ಅನಂತರಾಜ್ ಸ್ವಾಗತಿಸಿದರು. ಚಂದ್ರು ರಾಠೋಡ್ ನಿರೂಪಿಸಿದರು. ವಿರೇಶ ವಂದಿಸಿದ್ದರು. ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯರು, ಶಿಬಿರದ ಪ್ರತಿನಿಧಿ ಸಂಗಾತಿಗಳು ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಅಂಬೇಡ್ಕರ್–ಮಾರ್ಕ್ಸವಾದ: ಚಿಂತನೆ ಮತ್ತು ಹೋರಾಟ | ಕೆ.ಎನ್.ಉಮೇಶ್ Janashakthi Media
