ಆನೇಕಲ್ : ಎಸ್ಎಪ್ಐ, ಸಿಐಟಿಯು ಹಾಗೂ ಎಐಡಿಡಬ್ಲೂಎ ಸಂಘಟನೆ ನೇತೃತ್ವದಲ್ಲಿ “ತಾಲೂಕಿನ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ, ಡೊನೇಷನ್ ಹಾವಳಿ” ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಶುಲ್ಕ
ಮುಖಂಡ ಬಿ.ಎನ್.ಮಂಜುನಾಥ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸೋ ಇಚ್ಛೆ ಹಣ ವಸೂಲಿ ಮಾಡುವ ದಂಧೆ ನಡೆಯುತ್ತಿದೆ. ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಕಟ್ಟಲೇಬೇಕಾದ ಪರಿಸ್ಥಿತಿ ನಿಮಾರ್ಣ ಆಗುತ್ತಿದ್ದು, ಸಾಲ ಮಾಡಿ ವರ್ಷಪೂರ್ತಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಖಾಸಗಿ ಶಾಲೆಗಳ ಹಣದಾಹಕ್ಕೆ ಜನ ತತ್ತರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಎಸ್‌ಎಸ್‌ಎಲ್‌ಸಿ 2ನೇ ಪರೀಕ್ಷೆಗೆ ದಿನಾಂಕ ಘೋಷಣೆ!
ಸಂಟನೆಯ ಅರ್ಪಿತಾ ಮಾತನಾಡಿ, ಇತ್ತೀಚೆಗೆ ಖಾಸಗಿ ಶಾಲೆಗಳು ಶಿಕ್ಷಣವನ್ನು ಸಂಪೂರ್ಣ ವ್ಯಾಪಾರೀಕರಣ ಮಾಡಿಕೊಂಡಿದ್ದಾರೆ. ಪ್ರಶ್ನೆ ಮಾಡಿದರೆ ಪಾಲಕರು ಹಾಗೂ ಮಕ್ಕಳ ವಿರುದ್ಧ ಶಾಲೆಯ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅತ್ತ ವಿರೋಧಿಸಲು ಆಗದೆ, ಇತ್ತ ಶಿಕ್ಷಣ ಕೊಡಿಸದೆ ಇರಲು ಆಗದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಟನೆ ಮುಖಂಡರಾದ ಪ್ರಭು, ರಾಜಿ, ಜಯಂತ್, ಅರ್ಚನಾ, ಬಿ.ಎನ್.ಮಂಜುನಾಥ್, ಪಿ.ಸುರೇಶ್, ಸುನೀಲ್, ಡಿ.ಮಹದೇಶ್, ನಾಗರಾಜು, ಹನುಮಯ್ಯ, ಸತ್ಯನಾರಾಯಣ, ಬಾಲರಾಜು, ಮಹೇಶ್ ಇತರರು ಭಾಗವಹಿಸಿದ್ದರು.
ಇದನ್ನೂ ನೋಡಿ: ಸಂವಿಧಾನ ಮೌಲ್ಯಗಳ ಪ್ರತಿಧ್ವನಿ: ಸಂವಿಧಾನ ಗೀತೆ | ರವಿ ಮರಿಯಪ್ಪ – ಗುರುರಾಜ ದೇಸಾಯಿ ಮಾತಯಕತೆ Janashakthi Media
