“ಇಂತಹ ಅಪಪ್ರಚಾರಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಅಗ್ಗದ ಚುನಾವಣಾ ಲಾಭಗಳಿಗಾಗಿ ಹರಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಗೆ ಉಣಿಸುವ ಒಂದು ಸಂಘಟನೆಯಾಗಿ ಪರಿಣಮಿಸಿದೆಯೇಕೆಂದು “ಕಾಂಗ್ರೆಸ್ ಪಕ್ಷ ಬಿಜೆಪಿಗೆ ಉಣಿಸುವ ಒಂದು ಸಂಘಟನೆಯಾಗಿ ಪರಿಣಮಿಸಿದೆಯೇಕೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು”-ಸಿಪಿಐ(ಎಂ) ಪೊಲಿಟ್‍ಬ್ಯುರೊ ರಾಹುಲ್
ಕಾಂಗ್ರೆಸ್ ಮುಖಂಡರಾದ ಶ್ರೀ ರಾಹುಲ್ ಗಾಂಧಿ ರಾಹುಲ್ ಗಾಂಧಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ, ಹಿರಿಯ ನಾಯಕರು ಅಂತಹ ಹೇಳಿಕೆಗಳಿಂದ ದೂರವಿರಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ, ಪಟ್ಟಣಂತಿಟ್ಟದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ತ್ರಿಪುರಾದಲ್ಲಿ ಕಾಂಗ್ರೆಸ್ ಮತಗಳು ಬಿಜೆಪಿಗೆ ಪಲ್ಲಟಗೊಂಡವು, ಅದು ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿತು ಮತ್ತು ಅರುಣಾಚಲ ಪ್ರದೇಶದಲ್ಲಿ ಸ್ವತಃ ಕಾಂಗ್ರೆಸ್ಸೇ ಬಿಜೆಪಿಯಾಗಿ ರೂಪಾಂತರಗೊಂಡಿತು ಎಂದು ಅವರು ಹೇಳಿದರು. ದೆಹಲಿಯಲ್ಲಿ ಕೂಡ ಕಾಂಗ್ರೆಸ್ ನಾಯಕತ್ವದ ನಿಲುವು ಬಿಜೆಪಿಗೆ ಸಹಾಯ ಮಾಡಿತು ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್‌ನಲ್ಲಿ ಬಿಜೆಪಿ ಹಾಲಿ ಕಾಂಗ್ರೆಸ್ ಸ್ಥಾನವನ್ನು ಗೆದ್ದಿದೆ ಎಂದು ಮುಂದುವರೆದು ಅವರು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಶ್ರೀ ರಾಹುಲ್ ಗಾಂಧಿ ಹಾಗೂ ಶ್ರೀ ಮಲ್ಲಿಕಾರ್ಜುನ ಖರ್ಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವುದನ್ನು ಸಿಪಿಐ(ಎಂ) ಖಂಡಿತವಾಗಿಯೂ ಒಪ್ಪುವುದಿಲ್ಲ ಎಂದು ಪಕ್ಷದ ಪೊಲಿಟ್ ಬ್ಯೂರೋ ಹೇಳಿದೆ. ಇಂತಹ ಅಪಪ್ರಚಾರಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಅಗ್ಗದ ಚುನಾವಣಾ ಲಾಭಗಳಿಗಾಗಿ ಹರಡಲಾಗುತ್ತಿದೆ. ಬಿಜೆಪಿಯನ್ನು ಗುರಿಯಾಗಿಸಬೇಕಾದಲ್ಲಿ ಸಿಪಿಐ(ಎಂ) ಅನ್ನು ಗುರಿಯಾಗಿಸುವ ಮೂಲಕ ಕಾಂಗ್ರೆಸ್ ಮುಖಂಡರು ಕೋಮುವಾದಿ- ಸರ್ವಾಧಿಕಾರಶಾಹಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತೇವೆನ್ನುವ ತಮ್ಮ ಹೇಳಿಕೆಗಳಿಂದ ಪತಿತರಾಗುತ್ತಿದ್ದಾರೆ. ಕೇರಳದ ಜನತೆ ಈ ದುಷ್ಟ ಅಜೆಂಡಾದ ಮರ್ಮವನ್ನು ಅರಿಯುತ್ತಾರೆ ಎಂದು ಅದು ಖಾರವಾಗಿ ಹೇಳಿದೆ.
ಇದನ್ನೂ ಓದಿ : ರಾಜಕೀಯ ಪಕ್ಷದ ಮುದ್ರೆಯಿರುವ ದಾಖಲೆಯ ಪ್ರಸರಣವನ್ನು “ಕ್ಲೆರಿಕಲ್” ದೋಷವೆಂದು ತಳ್ಳಿಹಾಕಲಾಗುವುದಿಲ್ಲ – ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಒಂದಾದ ಮೇಲೊಂದರಂತೆ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರುತ್ತಿರುವುದೇಕೆ ಎಂಬುದರ ಬಗ್ಗೆ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಬೇಕು. ಇಂದಿನ ಅಸ್ಸಾಂ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸಿಕೊಂಡಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ತ್ರಿಪುರಾದಲ್ಲಿ, 2018ರಲ್ಲಿ ಎಡರಂಗವನ್ನು ಸೋಲಿಸಲು ಕಾಂಗ್ರೆಸ್‌ನ ಸಮಸ್ತ ನಾಯಕತ್ವವೇ ಬಿಜೆಪಿಗೆ ಸೇರಿತು. ಕೇಂದ್ರ ಸರ್ಕಾರದ ಅನೇಕ ಸಚಿವರು ಹಾಗೂ ಬಿಜೆಪಿ ಸಂಸದರು ಹಿಂದೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಆಗಿದ್ದವರು. ಕಾಂಗ್ರೆಸ್ ಪಕ್ಷ ಬಿಜೆಪಿಗೆ ಉಣಿಸುವ ಒಂದು ಸಂಘಟನೆಯಾಗಿ ಪರಿಣಮಿಸಿದೆ ಎಂದು ಸಿಪಿಐ(ಎಂ) ಟೀಕಿಸಿದೆ.
ಪ್ರಸ್ತುತ ಎಲ್‌ಡಿಎಫ್ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ ಕೇರಳದಲ್ಲಿ ಒಂದು ಕೂಡ ಕೋಮುವಾದಿ ಗಲಭೆ ಸಂಭವಿಸಿಲ್ಲ, ಆದರೆ ರಾಜ್ಯದಲ್ಲಿನ ಅತಿ ಭೀಕರ ಮರಾದ್ ಕೋಮು ಗಲಭೆ ನಡೆದದ್ದು ಯುಡಿಎಫ್ ಸರ್ಕಾರದ ಕಾಲದಲ್ಲಿ. ಈ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಅಲ್ಪಸಂಖ್ಯಾತ ಮೂಲಭೂತವಾದಿ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್-ಲೀಗ್-ಬಿಜೆಪಿ ನಂಟು ಕೇರಳದ ವಿವಿಧ ಚುನಾವಣೆಗಳಲ್ಲಿ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಬಯಲಿಗೆ ಬಂದಿದೆ.
ಸಿಪಿಐ(ಎಂ) ನಿರಂತರವಾಗಿ ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗವನ್ನು ವಿರೋಧಿಸುತ್ತ ಬಂದಿದೆ. ಆದರೆ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ, ಇ.ಡಿ. ಮತ್ತು ಇತರ ಕೇಂದ್ರೀಯ ಸಂಸ್ಥೆಗಳ ಮೂಲಕ ಒಬ್ಬ ಪ್ರತಿಪಕ್ಷದ ಮುಖ್ಯಮಂತ್ರಿಯನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. ಇದೇ ರೀತಿ ದೆಹಲಿಯ ಮಾಜಿ ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೂ ಕಾಂಗ್ರೆಸ್ ಕರೆ ನೀಡಿತ್ತು ಎಂಬುದನ್ನು ಮರೆಯಬಾರದು.
ಇದು ಅವರ ಸಮಯಸಾಧಕ ನಿಲುವನ್ನು ಬಯಲಿಗೆ ತರುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಕಳೆದ ಹತ್ತು ವರ್ಷಗಳಲ್ಲಿ ಎಲ್‌ಡಿಎಫ್ ಆಳ್ವಿಕೆಯ ಅಡಿಯಲ್ಲಿ ಅಭೂತಪೂರ್ವ ಅಭಿವೃದ್ಧಿ ಮತ್ತು ಕೋಮು ಸಾಮರಸ್ಯವವನ್ನು ಅನುಭವಿಸಿರುವ ಕೇರಳದ ಜನತೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಎರಡಕ್ಕೂ ತಕ್ಕ ಪ್ರತ್ಯುತ್ತರವನ್ನು ನೀಡುವರು ಎಂದು ಹೇಳಿದೆ.
ಸ್ವತಃ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಪ್ರತಿಕ್ರಿಯಿಸುತ್ತ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಪದೇ ಪದೇ ಬಿಜೆಪಿಗೆ ಪ್ರಯೋಜನಕಾರಿಯಾದ ಮತ್ತು ಪ್ರತಿಪಕ್ಷಗಳ ಐಕ್ಯತೆಯನ್ನು ದುರ್ಬಲಗೊಳಿಸುವ ನಿಲುವುಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ಬಿಜೆಪಿ ಕಥನಗಳನ್ನು ಎದುರಿಸಲು ಕಾಂಗ್ರೆಸ್ ವಿಫಲವಾಯಿತು, ಬದಲಾಗಿ ದೆಹಲಿಯಲ್ಲಿ ಅದರ ಮೇಲೆಯೇ ಗುರಿಯಿಟ್ಟಿತು, ಇದು ಬಿಜೆಪಿಗೆ ಚುನಾವಣಾ ಸಹಾಯ ಮಾಡಿತು.
ಹರಿಯಾಣ ಮತ್ತು ಬಿಹಾರದಂತಹ ರಾಜ್ಯಗಳನ್ನು ಉಲ್ಲೇಖಿಸಿ, ಬಿಜೆಪಿ ವಿರುದ್ಧ ಐಕ್ಯರಂಗವನ್ನು ನಿರ್ಮಿಸುವ ಪ್ರಯತ್ನಗಳನ್ನು ಕಾಂಗ್ರೆಸ್ ವಿರೋಧಿಸಿತು ಎಂದ ವಿಜಯನ್, ಇದು ಬಿಜೆಪಿ-ವಿರೋಧಿ ಮತಗಳಲ್ಲಿ ವಿಭಜನೆಗೆ ಮತ್ತು ಬಿಜೆಪಿ ಗೆಲುವು ಸಾಧಿಸಲು ಕಾರಣವಾಯಿತು ಎಂದು ಹೇಳಿದರು. ಸಮಾನ ಮನಸ್ಕ ಪಕ್ಷಗಳ ನಡುವೆ ಐಕ್ಯತೆಯನ್ನು ಪೋಷಿಸುವ ಬದಲು, ಕಾಂಗ್ರೆಸ್ ವಿಭಜನೆಗಳನ್ನು ಸೃಷ್ಟಿಸಿದೆ, ಆದರೆ ಸಿಪಿಐ(ಎಂ) ಸದಾ ಬಿಜೆಪಿಯ ವಿರುದ್ಧ ಯಾವುದೇ ರಾಜಿಯಿಲ್ಲದ ನಿಲುವು ತಳೆದಿದೆ ಎಂದು ಹೇಳಿದರು.
ಇದನ್ನೂ ನೋಡಿ : “ನಮ್ಮ ಆರೋಗ್ಯ ಮತ್ತು ಕರ್ನಾಟಕ ಬಜೆಟ್ 2026–27” Janashakthi Media
