ಮುರಶಿದಾಬಾದ್‌ನಲ್ಲಿ ಧ್ವಂಸಗೊಂಡ ಲೆನಿನ್ ಪ್ರತಿಮೆ ಮರುಸ್ಥಾಪನೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರಶಿದಾಬಾದ್ ಜಿಲ್ಲೆಯ ಜಿಯಾಗಂಜ್ ಪ್ರದೇಶದಲ್ಲಿ ಧ್ವಂಸಗೊಳಿಸಲ್ಪಟ್ಟಿದ್ದ ಲೆನಿನ್ ಪ್ರತಿಮೆಯನ್ನು ಸಿಪಿಐ(ಎಂ) ಕಾರ್ಯಕರ್ತರು ಮರುಸ್ಥಾಪಿಸಿದ್ದಾರೆ. ಮುರಶಿದಾಬಾದ್‌

ವಿಧಾನಸಭೆ ಚುನಾವಣೆಯ ಬಳಿಕ ನಡೆದ ಹಿಂಸಾಚಾರದ ನಡುವೆ ಕೆಲ ದುಷ್ಕರ್ಮಿಗಳು ಲೆನಿನ್ ಪ್ರತಿಮೆಯನ್ನು ಹಾನಿಗೊಳಿಸಿದ್ದರು ಎಂದು ಸಿಪಿಐ(ಎಂ) ಆರೋಪಿಸಿದೆ. ಬಿಜೆಪಿ ಬೆಂಬಲಿಗರೇ ಈ ಕೃತ್ಯಕ್ಕೆ ಕಾರಣ ಎಂದು ಎಡಪಕ್ಷ ನಾಯಕರು ದೂರಿದ್ದಾರೆ.

ಪ್ರತಿಮೆ ಧ್ವಂಸವಾದ ಘಟನೆಗೆ ವಿರೋಧವಾಗಿ ಸ್ಥಳೀಯ ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ವೈರಲ್‌ ವಿಡಿಯೊ : “ಚುನಾವಣೆಯ ಬಳಿಕ ನುಸುಳುಕೋರರು ಬಂಗಾಳ ತೊರೆಯುತ್ತಿದ್ದಾರೆ”

ಇದಾದ ನಂತರ ಸಿಪಿಐ(ಎಂ) ಕಾರ್ಯಕರ್ತರು ಮತ್ತು ಸ್ಥಳೀಯರು ಸೇರಿ ಲೆನಿನ್ ಪ್ರತಿಮೆಯನ್ನು ಮತ್ತೆ ಅದೇ ಸ್ಥಳದಲ್ಲಿ ಮರುಸ್ಥಾಪಿಸಿದರು. “ಭಯ ಮತ್ತು ಹಿಂಸಾಚಾರದಿಂದ ಎಡಪಂಥೀಯ ಚಳವಳಿಯನ್ನು ಮೌನಗೊಳಿಸಲಾಗುವುದಿಲ್ಲ” ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ರಾಜಕೀಯ ಉದ್ವಿಗ್ನತೆ ಮತ್ತು ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಈ ನಡುವೆ ಪ್ರತಿಮೆ ಧ್ವಂಸದ ಘಟನೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಇದನ್ನೂ ನೋಡಿ : ಚುನಾವಣಾ ಫಲಿತಾಂಶ : ಹೆಚ್ಚಾದ ಹಿಂಸಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *