ಬಿಜೆಪಿಯ ‘ವಿನಾಶಕಾರಿ‘ ಯುಗಕ್ಕೆ ಅಂತ್ಯ ಹಾಡೋಣ
ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ನಿರ್ಣಾಯಕ ಅವಧಿಯಲ್ಲಿ ನಾವಿದ್ದೇವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಉತ್ತರದ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ರಾಜಕೀಯ ವಾತಾವರಣ ಮತ್ತು ದುಡಿಯುವ ಜನರ ಹೋರಾಟದ ಭಾವನೆಗಳು ದೇಶಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿವೆ. ಈ ಸಂದರ್ಭದಲ್ಲಿ, ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಕೊಯಮತ್ತೂರಿಗೆ ಬಂದಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ [ಸಿಪಿಐ(ಎಂ)] ನ ಪೊಲಿಟ್ ಬ್ಯೂರೋ ಸದಸ್ಯ ಡಾ. ವಿಜು ಕೃಷ್ಣನ್, ‘ತೀಕ್ಕದಿರ್’ ತಮಿಳುದಿನಪತ್ರಿಕೆಗೆ ವಿಶೇಷ ಸಂದರ್ಶನ ನೀಡಿದರು. ಬಂಗಾಳ
ಪ್ರಸ್ತುತ ತಮಿಳುನಾಡಿನಾದ್ಯಂತ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅವರು, ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯರ ಪುನರುಜ್ಜೀವನ, ಉತ್ತರ ರಾಜ್ಯಗಳ ಜನರ ಜೀವನೋಪಾಯ ಹೋರಾಟಗಳಿಂದ ಚುನಾವಣಾ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗಳು ಮತ್ತು ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ವ್ಯಾಪಾರ ಒಪ್ಪಂದದ ಹಿಂದಿನ ಅಪಾಯಗಳ ಬಗ್ಗೆ ವಿವರವಾಗಿ ಹಂಚಿಕೊಂಡರು. ಬಂಗಾಳ
ಪ್ರಶ್ನೆ: ದೀರ್ಘ ಸಮಯದ ನಂತರ ಪಶ್ಚಿಮ ಬಂಗಾಳದಲ್ಲಿ ಎಡರಂಗದ ಚುನಾವಣಾ ಕ್ಷೇತ್ರ ಹೇಗಿದೆ? ಅಲ್ಲಿಂದ ಬರುವ ಮಾಹಿತಿಯು ಯಾವ ರೀತಿಯ ಆಶಾವಾದವನ್ನು ನೀಡುತ್ತದೆ?
ಉತ್ತರ: ಪಶ್ಚಿಮ ಬಂಗಾಳದಲ್ಲಿಈಗನಡೆಯುತ್ತಿರುವಚುನಾವಣೆಯು ಬಹಳ ಮುಖ್ಯವಾದ ಬದಲಾವಣೆಯ ಸೂಚನೆಕಾಣುತ್ತಿದೆ.ಅಲ್ಲಿ, ಎಡರಂಗವು ವ್ಯಾಪಕವಾದ ಪ್ರಚಾರಗಳನ್ನು ನಡೆಸುತ್ತಿದೆ. ಹಿಂದೆ ಇದ್ದ ಒಂದು ರೀತಿಯ ನಿಶ್ಚಲತೆ ಮುರಿದುಹೋಗಿದೆ ಮತ್ತು ಈಗ ಎಡರಂಗದ ಅಭ್ಯರ್ಥಿಗಳಿಗೆ ಮತದಾರರಬೆಂಬಲ ಗಮನಾರ್ಹವಾಗಿ ಹೆಚ್ಚುತ್ತಿರುವುದನ್ನು ನಾವು ನೇರವಾಗಿ ನೋಡಬಹುದು. ಅಲ್ಲಿನ ನಮ್ಮ ಸಂಗಾತಿಗಳು ಏಕಕಾಲದಲ್ಲಿಕೋಮುವಾದಿ ಮತ್ತು ಜನವಿರೋಧಿ ಶಕ್ತಿಗಳಾದ ಬಿಜೆಪಿ ಮತ್ತುತೃಣಮೂಲ ಕಾಂಗ್ರೆಸ್ ಎರಡನ್ನೂ ಧೈರ್ಯದಿಂದ ಎದುರಿಸುತ್ತಿದ್ದಾರೆ. ಬಂಗಾಳ

ರಾಜ್ಯದಲ್ಲಿತೃಣಮೂಲಕಾಂಗ್ರೆಸ್ ನ ವ್ಯಾಪಕಭ್ರಷ್ಟಾಚಾರ ಮತ್ತುಬಿಜೆಪಿಯವಿಭಜನಕಾರಿನೀತಿಗಳು ಜನರಲ್ಲಿ ಅಸಹ್ಯಹುಟ್ಟಿಸಿದೆ. ಚುನಾವಣಾ ಕ್ಷೇತ್ರದಲ್ಲಿ ಎಡರಂಗದ ಕಾರ್ಯಕರ್ತರ ಗಂಭೀರ ಕೆಲಸವು ಆಶ್ಚರ್ಯಕರವಾಗಿದೆ. ಯುವಕರು ಕೆಂಪು ಧ್ವಜದ ಹಿಂದೆ ಒಟ್ಟುಗೂಡುತ್ತಿರುವುದು ಒಂದು ದೊಡ್ಡ ಬೆಳವಣಿಗೆಯ ಸಂಕೇತವಾಗಿದೆ. ಪಶ್ಚಿಮ ಬಂಗಾಳದ ಸಂಗಾತಿಗಳ ಕ್ಷೇತ್ರ ವರದಿಗಳು ಬಹಳ ಸ್ಪೂರ್ಥಿದಾಯಕವಾಗಿವೆ; ಈ ಚುನಾವಣೆಯಲ್ಲಿ ಎಡರಂಗವು ಗಮನಾರ್ಹ ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ರಾಜ್ಯದ ರಾಜಕೀಯದಲ್ಲಿ ತನ್ನ ಬಲವಾದ ಉಪಸ್ಥಿತಿಯನ್ನು ಪುನರುಚ್ಚರಿಸುತ್ತದೆ ಎಂಬುದು ಖಚಿತ. ಬಂಗಾಳ
ಪ್ರಶ್ನೆ: ನೀವು ಇತ್ತೀಚೆಗೆ ತ್ರಿಪುರದಲ್ಲಿದ್ದಿರಿ.ಅಲ್ಲಿನ ಬಿಜೆಪಿ ಆಳ್ವಿಕೆಯಲ್ಲಿ ರಾಜ್ಯದ ಜನರ ಮನಸ್ಥಿತಿ ಹೇಗೆ ಬದಲಾಗಿದೆ?
ಉತ್ತರ: ನಾನು ತ್ರಿಪುರಾದ ಧರ್ಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾಗವಹಿಸಿದ್ದೆ. ಅಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಬಿಜೆಪಿ ಗೂಂಡಾಗಳು ನಮ್ಮ ಪಕ್ಷದ ಕಚೇರಿಗಳು ಮತ್ತು ನಮ್ಮ ಬೆಂಬಲಿಗರ ಮನೆಗಳ ಮೇಲೆ ದಾಳಿ ಮಾಡಿ ಹಾನಿಗೊಳಿಸುತ್ತಿದ್ದಾರೆ. ಆದರೆ ಅಂತಹ ದಬ್ಬಾಳಿಕೆಯನ್ನು ಮೀರಿ, ಜನರು ಬದಲಾವಣೆ ಬಯಸುತ್ತಿದ್ದಾರೆ. ಎಡರಂಗದ ಆಳ್ವಿಕೆಯಲ್ಲಿ ಜನರು ಅನುಭವಿಸಿದ ಎಲ್ಲಾ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಲಾಗಿದೆ.
ರಸ್ತೆಗಳು ಹಾಳಾಗಿವೆ, ಉದ್ಯೋಗಗಳು ವಿರಳವಾಗಿವೆ, ಆಸ್ಪತ್ರೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಒಂದು ಕಾಲದಲ್ಲಿ ಶಾಂತಿಯ ಸ್ವರ್ಗವಾಗಿದ್ದ ತ್ರಿಪುರಾ ಇಂದು ಉದ್ವಿಗ್ನ ಪ್ರದೇಶವಾಗಿದೆ. ಬಿಜೆಪಿಯ “ಬದಲಾವಣೆ” ಎಂಬ ಸುಳ್ಳು ಭರವಸೆಯಿಂದ ತಾವು ಮೋಸ ಹೋಗಿದ್ದೇವೆಂದು ಜನರು ಈಗ ಅರಿತುಕೊಂಡಿದ್ದಾರೆ. ಬಿಜೆಪಿಯ “ಅಭಿವೃದ್ಧಿ” ಕೇವಲ ಪ್ರಚಾರದ ಅಬ್ಬರ ಎಂಬುದಕ್ಕೆ ತ್ರಿಪುರಾ ಸಾಕ್ಷಿಯಾಗಿದೆ.ತಮಿಳುನಾಡಿನ ಮತದಾರರು ಇದನ್ನು ಪಾಠವಾಗಿ ತೆಗೆದುಕೊಂಡು ಜಾಗರೂಕರಾಗಿರಬೇಕು.
ಪ್ರಶ್ನೆ: ಕೇರಳ ಚುನಾವಣಾ ಫಲಿತಾಂಶಗಳ ಬಗ್ಗೆ ನಿಮ್ಮ ಭವಿಷ್ಯ ಏನು? ಎಡ ಪ್ರಜಾಸತ್ತಾತ್ಮಕ ರಂಗ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ?
ಉತ್ತರ: ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರದ ಸಾಧನೆಗಳು ಜನರ ಮನಸ್ಸಿನಲ್ಲಿ ಆಳವಾಗಿ ಅಚ್ಚೊತ್ತಿವೆ. ಕೊರೊನಾ ಸಾಂಕ್ರಾಮಿಕ ಅಥವಾ ನೈಸರ್ಗಿಕ ವಿಕೋಪಗಳಾಗಲಿ, ಎಡಪಂಥೀಯರು ಎಲ್ಲಾ ಸಮಯದಲ್ಲೂ ಜನರನ್ನು ರಕ್ಷಿಸುವ ಭದ್ರಕೋಟೆಯಾಗಿದೆ ಎಂಬುದನ್ನು ಕೇರಳ ಮರೆತಿಲ್ಲ. ಪ್ರಚಾರಗಳಲ್ಲಿನ ನನ್ನ ನೇರ ಅನುಭವದಿಂದ ನಾನು ನಿಮಗೆ ಹೇಳಬಲ್ಲೆ, ಎಡಪಂಥೀಯ ರಂಗವು ಮೂರನೇ ಬಾರಿಗೆ ಗೆಲ್ಲುವುದು 100 ಪ್ರತಿಶತ ಖಚಿತ.ಕೇರಳವು ಕಳೆದ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಲಿದೆ.
ಪ್ರಶ್ನೆ: ಉತ್ತರ ರಾಜ್ಯಗಳಲ್ಲಿ ಮಾರ್ಕ್ಸ್ವಾದಿ ಪಕ್ಷ ಆಯೋಜಿಸಿದ್ದ ‘ಜನ್ ಆಕ್ರೋಶ್ ರ್ಯಾಲಿ‘ ಯಾವ ಪರಿಣಾಮ ಬೀರಿದೆ? ಅದು ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆಯೇ?
ಉತ್ತರ: ಮೋದಿ ಸರ್ಕಾರದ ನೀತಿಗಳಿಂದಾಗಿ ಉತ್ತರ ಭಾರತದ ಜನರು ಬಹಳವಾಗಿ ಬಳಲುತ್ತಿದ್ದಾರೆ.ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಸಿವಿನಿಂದಾಗಿ ಸಾವುಗಳು ಮುಂದುವರೆದಿವೆ. 100 ದಿನಗಳ ಕೆಲಸದ ಯೋಜನೆಯನ್ನು ಸ್ಥಗಿತಗೊಳಿಸಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗವು ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ 12 ರಾಜ್ಯಗಳಲ್ಲಿ 6 ಗುಂಪುಗಳಾಗಿ ವಿಂಗಡಿಸಿ ಈ ಪ್ರಚಾರ ಪ್ರವಾಸವನ್ನು ನಡೆಸಿದ್ದೇವೆ. ಪ್ರವಾಸ ಗುಂಪು ಹೋದಲ್ಲೆಲ್ಲಾ ದೊಡ್ಡ ಜನಸಮೂಹ ಸೇರಿತು ಮತ್ತು ಆಸಕ್ತಿಯಿಂದ ಆಲಿಸಿತು.
ಇದನ್ನೂ ಓದಿ: ಕನಿಷ್ಠ ಕೂಲಿಗಾಗಿ ಹೋರಾಟ: ನೋಯ್ಡಾ ಕಾರ್ಮಿಕರಿಗೆ ಬೆಂಬಲ; ಯುಪಿ ಸರ್ಕಾರದ ಧಾಳಿ ಖಂಡಿಸಿ ಪ್ರತಿಭಟನೆ
ನಿರ್ದಿಷ್ಟವಾಗಿ ಹೇಳುವುದಾದರೆ, ಹಿಮಾಚಲ ಪ್ರದೇಶದ 7,000 ಅಡಿ ಎತ್ತರದಲ್ಲಿರುವ ಸೇಬು ತೋಟದ ರೈತರೊಂದಿಗೆ ನಾವು ಮಾತನಾಡಿದಾಗ, ವಿದೇಶಿ ಸೇಬು ಆಮದುಗಳಿಂದ ತಮ್ಮ ಜೀವನೋಪಾಯ ಹೇಗೆ ನಾಶವಾಗುತ್ತಿದೆ ಎಂಬುದನ್ನು ಅವರು ಕಣ್ಣೀರಿಡುತ್ತಾ ವಿವರಿಸಿದರು.ದೆಹಲಿ ರ್ಯಾಲಿಯಲ್ಲಿ ಕೇವಲ ಒಂದು ಜಿಲ್ಲೆಯಿಂದಲೇ 1000 ರೈತರು ಭಾಗವಹಿಸಿದ್ದರು ಎಂಬುದು ನಮಗೆ ಹೆಚ್ಚಿನ ಪ್ರೋತ್ಸಾಹ ನೀಡಿತು. ಅನೇಕ ರಾಜ್ಯಗಳಲ್ಲಿ ಹೊಸ ಸಂಪರ್ಕಗಳನ್ನು ಸೃಷ್ಟಿಸಲು ಸಾಧ್ಯವಾಗಿರುವ ಈ ಉಪಕ್ರಮವು ಹೋರಾಟದ ಪ್ರಜ್ಞೆಯನ್ನು ನಿರ್ಮಿಸುವ ಬಗ್ಗೆ ಹೆಚ್ಚಿನ ಭರವಸೆ ನೀಡುತ್ತದೆ.ಇದು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಮತಗಳಾಗಿ ಖಂಡಿತವಾಗಿಯೂ ಪರಿವರ್ತನೆಯಾಗುತ್ತದೆ.
ಪ್ರಶ್ನೆ: ಬಿಜೆಪಿಯ ವಿಭಜಕ ರಾಜಕೀಯವು ಜನರ ಹೋರಾಟಗಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ?
ಉತ್ತರ: ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿರಂತರವಾಗಿ ದುಡಿಯುವ ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸಲು ಮತ್ತು ಅವರ ಏಕತೆಯನ್ನು ನಾಶಮಾಡಲು ಪ್ರಯತ್ನಿಸುತ್ತಿವೆ. ಉದಾಹರಣೆಗೆ, ದೆಹಲಿ-ಹರಿಯಾಣ ಗಡಿಯಲ್ಲಿರುವ ಮೇವಾತ್ ಜಿಲ್ಲೆಯ ಮುಸ್ಲಿಂ ಜನಸಂಖ್ಯೆಯು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದೆ.ಅ ವರ ಜೀವನೋಪಾಯವನ್ನು ನಾಶಮಾಡಲು ಧಾರ್ಮಿಕ ದ್ವೇಷವನ್ನು ಪ್ರಚಾರ ಮಾಡಲಾಗುತ್ತಿದೆ.
ಅವರ ಜೀವನೋಪಾಯವಾಗಿರುವ ಹಾಲು ಕರೆಯುವ ಹಸುಗಳನ್ನುಸಾಗಾಣಿಕೆಮಾಡಿದರೆ,ʼಗೋವುಗಳ ಕಳ್ಳಸಾಗಣೆʼ ಎಂಬ ಸುಳ್ಳು ಆರೋಪಹೊರಿಸಿ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಸಾಮಾನ್ಯ ಜನರು ತಮ್ಮ ಜೀವನೋಪಾಯದ ಸಮಸ್ಯೆಗಳನ್ನು ಪರಿಹರಿಸಲು ಒಗ್ಗೂಡುವುದನ್ನು ತಡೆಯಲು ಇಂತಹ ಧಾರ್ಮಿಕ ದ್ವೇಷವನ್ನು ರಾಜಕೀಯಗೊಳಿಸಲಾಗುತ್ತಿದೆ.
ಪ್ರಶ್ನೆ: ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದ ಭಾರತಕ್ಕೆ ಪ್ರಯೋಜನಕಾರಿ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳುತ್ತಾರೆ? ಇದರ ಸತ್ಯವೇನು?
ಉತ್ತರ: ಇದು ಶುದ್ಧ ಸುಳ್ಳು. ಈ ಒಪ್ಪಂದವು ಕೊಯಮತ್ತೂರು ಮತ್ತು ತಿರುಪ್ಪೂರಿನಂತಹ ಜವಳಿ ಉದ್ಯಮಗಳಿರುವ ಜಿಲ್ಲೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಭಾರತದ ಸಿದ್ಧ ಉಡುಪುಗಳ ಮೇಲೆ ಅಮೆರಿಕ ಶೇಕಡಾ 18 ರಷ್ಟು ಸುಂಕ ವಿಧಿಸಿದ್ದರೆ, ಬಾಂಗ್ಲಾದೇಶಕ್ಕೆ ಶೇಕಡಾ ಸೂನ್ಯ ಸುಂಕವಿಧಿಸಿದೆ. ಇದು ಭಾರತೀಯ ಉತ್ಪನ್ನಗಳನ್ನು ಸ್ಪರ್ಧಾತ್ಮಕವಲ್ಲದಂತೆ ಮಾಡುತ್ತದೆ. ಇದುಗೊತ್ತಿದ್ದೂಅವರು ಚುನಾವಣೆಪ್ರಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ.
ಕೃಷಿಯ ವಿಷಯದಲ್ಲಿ, ಅಮೆರಿಕ ತನ್ನ 18 ಲಕ್ಷ ರೈತರಿಗೆ 4.02 ಲಕ್ಷ ಕೋಟಿ ರೂ. ಸಬ್ಸಿಡಿಗಳನ್ನು ನೀಡುತ್ತದೆ (ತಲಾ 21.56 ಲಕ್ಷ ರೂ.). ಆದರೆ ಭಾರತವು 14.6 ಕೋಟಿ ರೈತರಿಗೆ ಕೇವಲ 1.37 ಲಕ್ಷ ಕೋಟಿ ರೂ.ಗಳನ್ನು (ತಲಾ 34 ಸಾವಿರ ರೂ.) ಹಂಚಿಕೆ ಮಾಡುತ್ತದೆ. ಸರಾಸರಿ 2.67 ಎಕರೆ ಮಾತ್ರ ಹೊಂದಿರುವ ಭಾರತದ ರೈತರು ಅಮೆರಿಕದ ದೊಡ್ಡ ಪ್ರಮಾಣದ ಕೃಷಿ ವ್ಯವಸ್ಥೆಯೊಂದಿಗೆ ಸ್ಪರ್ಧಿಸಲುಹೇಗೆಸಾಧ್ಯ? ಇದು ಭಾರತದ ಕೃಷಿಯನ್ನು ನಾಶಮಾಡುವ ಒಪ್ಪಂದವಾಗಿದೆ.
ಪ್ರಶ್ನೆ: ಹತ್ತಿ ಆಮದು ಮತ್ತು ಮುಕ್ತ ವ್ಯಾಪಾರ ಒಪ್ಪಂದಗಳ ಪರಿಣಾಮಗಳನ್ನು ವಿವರಿಸಿ?
ಉತ್ತರ: ವಿಶ್ವದ ಅತಿದೊಡ್ಡ ಹತ್ತಿ ಉತ್ಪಾದಕ ರಾಷ್ಟ್ರವಾದ ಭಾರತವು ಪ್ರಸ್ತುತ 41.3 ಲಕ್ಷ ಬೇಲ್ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತದೆ. ಅಮೆರಿಕದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು ಶೇಕಡಾ 11 ರಷ್ಟು ಆಮದು ಸುಂಕವನ್ನು ತೆಗೆದುಹಾಕಿದೆ. ಇದು ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ಹಲವುರಾಜ್ಯಗಳಲ್ಲಿನ ಹತ್ತಿ ರೈತರನ್ನು ಆತ್ಮಹತ್ಯೆಯ ಅಂಚಿಗೆ ತಳ್ಳುತ್ತದೆ.
ಇದನ್ನೂ ನೋಡಿ: ಡಿಲಿಮಿಟೇಶನ್ ಎನ್ನುವ ಟಿಕ್ ಟಿಕ್ ಬಾಂಬ್.. ಇದು ಸ್ಪೋಟಿಸುವುದೇ? Janashakthi Media
ಶ್ರೀಲಂಕಾದೊಂದಿಗಿನ ಒಪ್ಪಂದದಿಂದಾಗಿ ಕೇರಳದ ರಬ್ಬರ್ ಮತ್ತು ಮೆಣಸಿನಕಾಯಿ ರೈತರ ಅವನತಿಯನ್ನು ನಾವು ಈಗಾಗಲೇ ನೋಡಿದ್ದೇವೆ. ಈಗ ಇಡೀ ಭಾರತದ ಕೃಷಿಯು ಕಾರ್ಪೊರೇಟ್‌ಗಳ ಹಿಡಿತದಲ್ಲಿ ಸಿಲುಕಿಕೊಂಡಿದೆ.
ಪ್ರಶ್ನೆ: ಈ ಜನವಿರೋಧಿ ಪ್ರವೃತ್ತಿಗಳ ವಿರುದ್ಧದ ಹೋರಾಟದ ಮುಂದಿನ ಹಂತ ಯಾವುದು?
ಉತ್ತರ: ದೆಹಲಿ ರೈತರ ಪ್ರತಿಭಟನೆಯ ನಂತರ, ನಾವು ‘ಸಂಯುಕ್ತ ಕಿಸಾನ್ ಮೋರ್ಚಾ’ (ಎಸ್ ಕೆಎಂ) ದ ಚಟುವಟಿಕೆಗಳನ್ನು ರಾಷ್ಟ್ರವ್ಯಾಪಿ ವಿಸ್ತರಿಸುತ್ತಿದ್ದೇವೆ. ನಾವು ಅನೇಕ ರಾಜ್ಯಗಳಲ್ಲಿ ಹೊಸ ರೈತ ಸಂಘಗಳನ್ನು ಸಂಘಟಿಸುತ್ತಿದ್ದೇವೆ. ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡ ವಿಶಾಲವಾದ ಸಾಮೂಹಿಕ ಹೋರಾಟದ ವೇದಿಕೆಯನ್ನು ನಾವು ರಚಿಸುತ್ತಿದ್ದೇವೆ. ಮೋದಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬೃಹತ್ ಜನಬೆಂಬಲದೊಂದಿಗೆಚಳುವಳಿಗಾಗಿಸಿಪಿಐ(ಎಂ)ನ ಪ್ರಯಾಣ ಮುಂದುವರೆದಿದೆ.
(ಸಂದರ್ಶನ: ಎಸ್.ಎ. ಮಾಣಿಕ್ಕಮ್- ಕನ್ನಡಕ್ಕೆ: ಸಿಚಿ)
