ಜಾಗತಿಕ ಸಂಕಷ್ಟಗಳಿಗೆ ಒಟ್ಟಾಗಿ ಪರಿಹಾರ ಕಂಡುಕೊಳ್ಳಿ: ಬ್ರಿಕ್ಸ್‌ಗೆ ಭಾರತ ಕರೆ

ನವದೆಹಲಿ: ಜಾಗತಿಕ ಸಂಘರ್ಷಗಳು, ಆರ್ಥಿಕ ಅಸ್ಥಿರತೆ ಮತ್ತು ವ್ಯಾಪಾರ ವ್ಯತ್ಯಯಗಳ ಪರಿಣಾಮಗಳನ್ನು ಒಟ್ಟಾಗಿ ಎದುರಿಸಲು “ಪ್ರಾಯೋಗಿಕ ಮಾರ್ಗಗಳನ್ನು” ಅನ್ವೇಷಿಸಲು ಬ್ರಿಕ್ಸ್ ರಾಷ್ಟ್ರಗಳು ಮುಂದಾಗಬೇಕೆಂದು ಭಾರತ ಮೇ 14ರಂದು ಕರೆ ನೀಡಿದೆ. ಈ ಸಂದರ್ಭದಲ್ಲಿ ಬ್ರಿಕ್ಸ್ ವಿದೇಶಾಂಗ ಸಚಿವರ ಮಹತ್ವದ ಎರಡು ದಿನಗಳ ಸಭೆ ನವದೆಹಲಿಯಲ್ಲಿ ಆರಂಭವಾಗಿದೆ. ಸಂಕಷ್ಟ

ರಷ್ಯಾ, ಇರಾನ್, ಬ್ರೆಜಿಲ್ ಸೇರಿದಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಜಗತ್ತು ಈಗ ಮಹತ್ವದ ಭೂರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಯ ಅವಧಿಯನ್ನು ಎದುರಿಸುತ್ತಿದೆ ಎಂದು ಹೇಳಿದರು.

“ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಭಾರೀ ಬದಲಾವಣೆಗಳ ಸಮಯದಲ್ಲಿ ನಾವು ಭೇಟಿಯಾಗುತ್ತಿದ್ದೇವೆ,” ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಸಂಕಷ್ಟ

ಇದನ್ನೂ ಓದಿ: ಸಮವಸ್ತ್ರದ ಹೆಸರಿನಲ್ಲಿ ತಾರತಮ್ಯ ಸಲ್ಲ; ಸರ್ಕಾರದ ಸುಧಾರಿತ ಆದೇಶವನ್ನು ಸಿಪಿಐ(ಎಂ) ಸ್ವಾಗತ

“ನಡೆಯುತ್ತಿರುವ ಸಂಘರ್ಷಗಳು, ಆರ್ಥಿಕ ಅನಿಶ್ಚಿತತೆಗಳು, ಹಾಗೂ ವ್ಯಾಪಾರ, ತಂತ್ರಜ್ಞಾನ ಮತ್ತು ಹವಾಮಾನ ಸಂಬಂಧಿತ ಸವಾಲುಗಳು ಜಾಗತಿಕ ಪರಿಸ್ಥಿತಿಯನ್ನು ರೂಪಿಸುತ್ತಿವೆ,” ಎಂದು ಅವರು ಹೇಳಿದರು.

ಈ ಸಭೆ ಪಶ್ಚಿಮ ಏಷ್ಯಾ ಸಂಕಷ್ಟದ ಹಿನ್ನಲೆಯಲ್ಲಿ, ವಿಶೇಷವಾಗಿ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ಇಂಧನ ಸರಬರಾಜಿನ ವ್ಯತ್ಯಯಗಳ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ ನಡೆಯುತ್ತಿದೆ.

ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳು ಜಾಗತಿಕ ಸವಾಲುಗಳನ್ನು ಎದುರಿಸಲು ಬ್ರಿಕ್ಸ್ ಮಹತ್ವದ ಪಾತ್ರ ವಹಿಸಬೇಕು ಎಂದು ನಿರೀಕ್ಷಿಸುತ್ತಿವೆ ಎಂದು ಜೈಶಂಕರ್ ಹೇಳಿದರು.

“ಈ ಹಿನ್ನೆಲೆಗಳಲ್ಲಿ, ಇಂದಿನ ನಮ್ಮ ಚರ್ಚೆಗಳು ಜಾಗತಿಕ ಹಾಗೂ ಪ್ರಾದೇಶಿಕ ಬೆಳವಣಿಗೆಗಳನ್ನು ಪರಿಶೀಲಿಸಲು ಮತ್ತು ಸಹಕಾರವನ್ನು ಬಲಪಡಿಸಲು ಪ್ರಾಯೋಗಿಕ ಮಾರ್ಗಗಳನ್ನು ಪರಿಗಣಿಸಲು ಒಂದು ಅವಕಾಶವಾಗಿದೆ,” ಎಂದರು.

ಹಲವು ರಾಷ್ಟ್ರಗಳು ಇಂಧನ, ಆಹಾರ, ರಸಗೊಬ್ಬರ ಮತ್ತು ಆರೋಗ್ಯ ಭದ್ರತೆ ಸೇರಿದಂತೆ ಹಣಕಾಸಿನ ಲಭ್ಯತೆ ಕೊರತೆ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಅವರು ತಿಳಿಸಿದರು.

“ಅಭಿವೃದ್ಧಿ ವಿಷಯಗಳು ಇನ್ನೂ ಕೇಂದ್ರಸ್ಥಾನದಲ್ಲಿವೆ. ಅನೇಕ ದೇಶಗಳು ಇಂಧನ, ಆಹಾರ, ರಸಗೊಬ್ಬರ ಹಾಗೂ ಆರೋಗ್ಯ ಭದ್ರತೆ, ಜೊತೆಗೆ ಹಣಕಾಸು ಪ್ರವೇಶದ ಸವಾಲುಗಳನ್ನು ಎದುರಿಸುತ್ತಿವೆ,” ಎಂದರು.

“ಈ ಸವಾಲುಗಳಿಗೆ ಪ್ರತಿಕ್ರಿಯಿಸಲು ಬ್ರಿಕ್ಸ್ ನೆರವಾಗಬಹುದು,” ಎಂದು ಅವರು ಹೇಳಿದರು.

ಆರ್ಥಿಕ ಸ್ಥೈರ್ಯವನ್ನು ಬಲಪಡಿಸಲು ವಿಶ್ವಾಸಾರ್ಹ ಸರಬರಾಜು ಸರಪಳಿ ಮತ್ತು ವಿಭಿನ್ನ ಮಾರುಕಟ್ಟೆಗಳ ಅಗತ್ಯವಿದೆ ಎಂದು ಜೈಶಂಕರ್ ಒತ್ತಿ ಹೇಳಿದರು.

“ಆರ್ಥಿಕ ಸ್ಥೈರ್ಯ ಅತ್ಯಂತ ಮುಖ್ಯ. ವಿಶ್ವಾಸಾರ್ಹ ಸರಬರಾಜು ಸರಪಳಿ ಮತ್ತು ವೈವಿಧ್ಯಮಯ ಮಾರುಕಟ್ಟೆಗಳು ಇದರ ಅವಿಭಾಜ್ಯ ಭಾಗಗಳು. ನಾವು ಈ ಎರಡರ ಮೇಲೂ ಗಮನ ಹರಿಸಬೇಕು,” ಎಂದರು.

ಜಾಗತಿಕ ಭದ್ರತೆ ಕುರಿತು ಮಾತನಾಡಿದ ಅವರು, ನಡೆಯುತ್ತಿರುವ ಸಂಘರ್ಷಗಳ ನಡುವೆ ಸಂವಾದ ಮತ್ತು ರಾಜತಾಂತ್ರಿಕತೆ ಅತ್ಯಂತ ಅಗತ್ಯವೆಂದು ಹೇಳಿದರು.

“ಶಾಂತಿ ಮತ್ತು ಭದ್ರತೆ ಜಾಗತಿಕ ವ್ಯವಸ್ಥೆಯ ಕೇಂದ್ರದಲ್ಲಿವೆ,” ಎಂದ ಅವರು, “ಇತ್ತೀಚಿನ ಸಂಘರ್ಷಗಳು ಸಂವಾದ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ಇನ್ನಷ್ಟು ಒತ್ತಿ ಹೇಳುತ್ತವೆ. ಭಯೋತ್ಪಾದನೆ ವಿರುದ್ಧ ಸಹಕಾರವನ್ನು ಬಲಪಡಿಸುವುದು ನಮ್ಮ ಸಾಮಾನ್ಯ ಹಿತಾಸಕ್ತಿಯಾಗಿದೆ,” ಎಂದು ಹೇಳಿದರು.

ಇದನ್ನೂ ನೋಡಿ: ಯುದ್ಧದಲ್ಲಿ ಸೋತ ಯು.ಎಸ್ ನ್ನು ಮಾತುಕತೆಯಲ್ಲಿ ಗೆಲ್ಲಲು ಬಿಡದ ಇರಾನ್ Janashakthi Media

Donate Janashakthi Media

Leave a Reply

Your email address will not be published. Required fields are marked *