ಸಾಮ್ರಾಜ್ಯಶಾಹಿ, ತೈಲ ಬೆಲೆಗಳು ಮತ್ತು ವಿಶ್ವ ಅರ್ಥವ್ಯವಸ್ಥೆ- ಪ್ರೊ.ಪ್ರಭಾತ್ ಪಟ್ನಾಯಕ್

ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಇರಾನ್ ಕ್ರಮ ನಿಖರವಾಗಿ ಜಾಗತಿಕ ದಕ್ಷಿಣದ ದೇಶಗಳಲ್ಲಿ ಈ ಯುದ್ಧಕ್ಕೆ ವಿರೋಧವನ್ನು ಹುಟ್ಟಿಹಾಕುವ, ಇರಾನ್ ವಿರುದ್ಧದ ಯುದ್ಧವು ತಮ್ಮ ವಿರುದ್ಧದ ಯುದ್ಧವೂ ಆಗಿರುವುದರಿಂದ ಅವರು ಅದರ ಬಗ್ಗೆ ನಿರಾಸಕ್ತರಾಗುವುದು ಸಾಧ್ಯವಿಲ್ಲ ಎಂದು ಈ ದೇಶಗಳ ಮನವೊಲಿಸುವ ಉದ್ದೇಶ ಹೊಂದಿದೆ. ಈ ದೇಶಗಳ ಜನತೆ ಈಗ ತೋರುತ್ತಿರುವ ಮೌನವು, ದುಬಾರಿಯಾಗಿ ಪರಿಣಮಿಸಬಹುದು. ವಿಶ್ವ ತೈಲ ಬೆಲೆಗಳುಯುದ್ಧದ ದೇವಾರದಲ್ಲಿ ಸುಮಾರು ಒಂದೂವರೆ ಪಟ್ಟಿನಷ್ಟು ಏರಿಕೆಯಾಗಿವೆ. ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ತಮ್ಮ ತಂತ್ರಗಾರಿಕೆಯ ಭಾಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಒಂದು ಅತಿರೇಕದ ಹೆಜ್ಜೆಯ ಮೂಲಕ ಅವರು ಯುದ್ಧದ ಅವಧಿಯನ್ನು ಮೊಟಕುಗೊಳಿಸಲು ಪ್ರಯತ್ನಿಸಬಹುದು. ಆದರೆ ಇಡೀ ಜಗತ್ತು ಯುಎಸ್ ಸರ್ಕಾರ ಪ್ರಾರಂಭಿಸಿದ ಯುದ್ಧಕ್ಕೆ ತನ್ನ ನಿಸ್ಸಂದಿಗ್ಧ ವಿರೋಧವನ್ನು ವ್ಯಕ್ತಪಡಿಸದಿದ್ದರೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಬಗ್ಗೆ ಅದರ ಸಿನಿಕತನದ ತಿರಸ್ಕಾರಕ್ಕೆ ವಿರೋಧವನ್ನು ವ್ಯಕ್ತಪಡಿಸದಿದ್ದರೆ, ಮಹಾ ದುರಂತದ ಪುನರಾವರ್ತನೆಯ ಭಯ ನಿಜವಾಗಬಹುದು. ಸಾಮ್ರಾಜ್ಯಶಾಹಿ

ಪ್ರೊ. ಪ್ರಭಾತ್ ಪಟ್ನಾಯಕ್

ಅನು: ಕೆ.ಎಂ.ನಾಗರಾಜ್

ವಿಶ್ವ ತೈಲ ಬೆಲೆಗಳು ಕಳೆದ ವಾರಾಂತ್ಯದಲ್ಲಿ ಅಂತಿಮವಾಗಿ ಪ್ರತಿ ಬ್ಯಾರೆಲ್‌ಗೆ $100ರ ಮಟ್ಟವನ್ನು ದಾಟಿ $110ರ ಮಟ್ಟವನ್ನು ತಲುಪಿವೆ. ಇರಾನ್ ವಿರುದ್ಧ ಸಾಮ್ರಾಜ್ಯಶಾಹಿ ಯುದ್ಧ ಪ್ರಾರಂಭವಾಗುವ ಮೊದಲು ಪ್ರತಿ ಬ್ಯಾರೆಲ್ ಬೆಲೆ $69 ರಷ್ಟಿತ್ತು ಎಂಬ ಅಂಶವನ್ನು ಪರಿಗಣಿಸಿದರೆ, ಕೇವಲ ಒಂದು ವಾರದ ಅವಧಿಯಲ್ಲಿ ಅದು ಒಂದು ಹಠಾತ್ ಏರಿಕೆಯನ್ನು ಕಂಡಿದೆ. ಈ ಏರಿಕೆಯು ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದರಿಂದ ನಿಜಕ್ಕೂ ಉಂಟಾಗುವ ಕೊರತೆಯ ಕಾರಣಕ್ಕಿಂತ ಹೆಚ್ಚಾಗಿ ಅಂತಹ ಒಂದು ಕೊರತೆ ಉದ್ಭವಿಸುವ ನಿರೀಕ್ಷೆಯ ಕಾರಣದಿಂದ ಉಂಟಾಗಿದೆ. 1973ರಲ್ಲಿ ತೈಲದ ಬೆಲೆಗಳು ಏರಿಕೆಯಾಗಿದ್ದವು. ಆಗ ತೈಲ ಉತ್ಪಾದಕ ದೇಶಗಳೇ (OPEC) ತೈಲ ಬೆಲೆಗಳನ್ನು ಹಲವಾರು ಪಟ್ಟು ಏರಿಕೆ ಮಾಡಿದ್ದವು. ಈ ಏರಿಕೆಗೆ ತೈಲದ ಕೊರತೆ ಕಾರಣವಾಗಿರಲಿಲ್ಲ. 2008ರಲ್ಲಿ ಮತ್ತು 2022ರಲ್ಲಿ ತೈಲ ಬೆಲೆಗಳ ತೀವ್ರ ಏರಿಕೆ ಸಂಭವಿಸಿತ್ತು. ಆದರೆ, ಈಗಿನ ಬೆಲೆ ಏರಿಕೆಯು ಈ ಹಿಂದಿನ ಎಲ್ಲ ಏರಿಕೆಗಳಿಗಿಂತಲೂ ಭಿನ್ನವಾಗಿದೆ.

2008ರ ಮತ್ತು 2022ರ ಬೆಲೆ ಏರಿಕೆಗಳು ಸ್ವಭಾವತಃ ಅಲ್ಪಕಾಲಿಕವಾಗಿದ್ದವು: 2008ರ ತೈಲ ಬೆಲೆ ಏರಿಕೆಯು ಚೀನಾದ ಬೇಡಿಕೆಯ ಹೆಚ್ಚಳದ ಕಾರಣದಿಂದ ಮತ್ತು ತೈಲದ ಪೂರೈಕೆಯನ್ನು ನೈಜೀರಿಯಾ ಮತ್ತು ಪಶ್ಚಿಮ ಏಷ್ಯಾ ದೇಶವೊಂದು ಅಡ್ಡಿಪಡಿಸಿದ ಕಾರಣದಿಂದ ಉಂಟಾಗಿತ್ತು. ಇವೆರಡೂ ಅಂಶಗಳು ತಾತ್ಕಾಲಿಕವಾಗಿದ್ದವು. ಅದೇ ರೀತಿಯಲ್ಲಿ 2022ರ ತೈಲ ಬೆಲೆ ಏರಿಕೆಯು ಉಕ್ರೇನ್ ಯುದ್ಧದ ಕಾರಣದ ಮೇಲೆ ಪಾಶ್ಚ್ಯಾತ್ಯ ದೇಶಗಳು ರಷ್ಯಾದ ವಿರುದ್ಧ ಹೇರಿದ ನಿರ್ಬಂಧಗಳಿಂದಾಗಿ ಉಂಟಾಗಿತ್ತು. ಈ ನಿರ್ಬಂಧಗಳ ಹೊರತಾಗಿಯೂ ತೈಲದ ಅಧಿಕ ಪೂರೈಕೆಯನ್ನು ನಿರ್ವಹಿಸುವಲ್ಲಿ ರಷ್ಯಾವು ಯಶಸ್ವಿಯಾದ ಕಾರಣ ಮತ್ತು ರಷ್ಯಾದ ತೈಲದ ಬದಲಿಗೆ, ಅದರ ಬೆಲೆ ದುಬಾರಿಯಾದರೂ ಸಹ, ಯುಎಸ್ ಇಂಧನವು ಯುರೋಪಿನ ಮಾರುಕಟ್ಟೆಗೆ ಹರಿದ ಕಾರಣದಿಂದಾಗಿ ತೈಲಗಳ ಬೆಲೆಗಳು ಇಳಿಕೆಯಾದವು. ಸಾಮ್ರಾಜ್ಯಶಾಹಿ

ಇದನ್ನೂ ಓದಿ: ಇವಳು – ಅವಳು ನಮ್ಮವಳೆನಿಸುವುದು ಯಾವಾಗ ?

ತನ್ನ ವಿರುದ್ಧವಾಗಿ ಯುಎಸ್-ಇಸ್ರೇಲ್ ನಡೆಸಿದ ಆಕ್ರಮಣಕ್ಕೆ ಇರಾನ್‌ನ ಪ್ರತಿಕ್ರಿಯೆಯಿಂದ ಉಂಟಾದ ಪ್ರಸ್ತುತ ಬೆಲೆ ಏರಿಕೆಯು ಈ ಯುದ್ಧ ಮುಗಿಯುವ ವರೆಗಂತೂ ಇದ್ದೇ ಇರುತ್ತದೆ. ಅದು ಅಂತ್ಯವಾಗುವ ಸೂಚನೆಗಳೇ ಕಾಣುತ್ತಿಲ್ಲ. ಏಕೆಂದರೆ, ಇರಾನ್‌ನದ್ದು ಮಾತ್ರವಲ್ಲ, ಹಲವಾರು ದೇಶಗಳ ತೈಲ ಪೂರೈಕೆಗಳು ಈ ಜಲಸಂಧಿಯ ಮೂಲಕ ಹಾದುಹೋಗುತ್ತವೆ. ಈ ತೈಲ ಪೂರೈಕೆಯ ಒಟ್ಟು ಪ್ರಮಾಣವು ರಷ್ಯಾದ ಒಟ್ಟು ಉತ್ಪಾದನೆಯ ಎರಡರಷ್ಟಿದೆ. ಡೊನಾಲ್ಡ್ ಟ್ರಂಪ್ ತೈಲ ಬೆಲೆ ಸಂಬಂಧಿತ ಸಟ್ಟಾಬಾಜಿ-ಆಧರಿತ-ನಿರೀಕ್ಷೆಗಳನ್ನು ತಣ್ಣಗಾಗಿಸುವ ಪ್ರಯತ್ನಕ್ಕೇ ಹೋಗದೆ, ಬೆಲೆ ಏರಿಕೆಯ ವಿಷಯವನ್ನು ಲೇವಡಿಮಾಡಿದ್ದಾರೆ. ಯುದ್ಧದ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ “ತೆರಬೇಕಾದ ಒಂದು ಸಣ್ಣ ಬೆಲೆ” ಇದು ಎಂದಿದ್ದಾರೆ. ಸಾಮ್ರಾಜ್ಯಶಾಹಿ

1973ರಲ್ಲಿ ತೈಲದ ಬೆಲೆಗಳು ಏರಿಕೆಯಾಗಿದ್ದವು. ಆಗ ತೈಲ ಉತ್ಪಾದಕ ದೇಶಗಳೇ (OPEC) ತೈಲ ಬೆಲೆಗಳನ್ನು ಹಲವಾರು ಪಟ್ಟು ಏರಿಕೆ ಮಾಡಿದ್ದವು. ಈ ಏರಿಕೆಗೆ ತೈಲದ ಕೊರತೆ ಕಾರಣವಾಗಿರಲಿಲ್ಲ. 2008ರಲ್ಲಿ ಮತ್ತು 2022ರಲ್ಲಿ ತೈಲ ಬೆಲೆಗಳ ತೀವ್ರ ಏರಿಕೆ ಸಂಭವಿಸಿತ್ತು. ಆದರೆ, ಈಗಿನ ಬೆಲೆ ಏರಿಕೆಯು ಈ ಹಿಂದಿನ ಎಲ್ಲ ಏರಿಕೆಗಳಿಗಿಂತಲೂ ಭಿನ್ನವಾಗಿದೆ.ತೈಲ ಬೆಲೆಗಳ ಏರಿಕೆಯು ಒಂದು ವೇಳೆ ಬಹಳ ಕಾಲ ಇದ್ದರೆ, ಜಾಗತಿಕ ಅರ್ಥವ್ಯವಸ್ಥೆಯ ಮೇಲೆ ಅದರ ಪರಿಣಾಮವು ಬಹಳ ಗಂಭೀರವಾಗಿರುತ್ತದೆ. ಸಾಮ್ರಾಜ್ಯಶಾಹಿ

ಹಣದುಬ್ಬರಕ್ಕೆ ಒತ್ತು -ತೈಲ ಬೆಲೆಯ ನಿರಂತರ ಏರಿಕೆ

ತೈಲ ಬೆಲೆಗಳ ಏರಿಕೆಯು ಒಂದು ವೇಳೆ ಬಹಳ ಕಾಲ ಇದ್ದರೆ, ಜಾಗತಿಕ ಅರ್ಥವ್ಯವಸ್ಥೆಯ ಮೇಲೆ ಅದರ ಪರಿಣಾಮವು ಬಹಳ ಗಂಭೀರವಾಗಿರುತ್ತದೆ. ಅದು ಹಣದುಬ್ಬರವನ್ನು ಜನರು ಖರೀದಿಸುವ ಇಂಧನ ಉತ್ಪನ್ನಗಳಿಂದಾಗಿ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುವ ಮೂಲಕ ಮಾತ್ರವಲ್ಲದೆ, ಅದಕ್ಕಿಂತಲೂ ಮುಖ್ಯವಾಗಿ, ತೈಲವು ಒಂದು ಲಾಗುವಾಡಾಗಿ ಪ್ರವೇಶಿಸುವ ಸರಕು ಮತ್ತು ಸೇವೆಗಳ ಒಂದಿಡೀ ಶ್ರೇಣಿಯ ಮೂಲಕ ಮತ್ತು ಈ ಸರಕು ಮತ್ತು ಸೇವೆಗಳು ಲಾಗುವಾಡುಗಳಾಗಿ ಪ್ರವೇಶಿಸುವ ಇತರ ಸರಕು ಮತ್ತು ಸೇವೆಗಳ ಮೂಲಕ ಉಲ್ಬಣಗೊಳಿಸುತ್ತದೆ. ಹೀಗಾಗಿ, ತೈಲದ ಬೆಲೆ ಏರಿಕೆಯಿಂದಾಗಿ ರಸಗೊಬ್ಬರಗಳ ಬೆಲೆಗಳ ಏರಿಕೆಯು ಆಹಾರ ಧಾನ್ಯಗಳ ಉತ್ಪಾದನಾ ವೆಚ್ಚವನ್ನು ಏರಿಕೆ ಮಾಡುತ್ತದೆ ಮತ್ತು ಅದರಿಂದಾಗಿ ಆಹಾರ ಧಾನ್ಯದ ಬೆಲೆಗಳು (ಆಹಾರ ಧಾನ್ಯ ಉತ್ಪಾದಕರ ಲಾಭದ ಅಂತರ ಕುಗ್ಗದಿದ್ದರೆ) ಏರುತ್ತವೆ. ಮತ್ತು ಇದೆಲ್ಲವೂ ಎಲ್ಲ ಸರಕುಗಳ ಸಾರಿಗೆ ವೆಚ್ಚಗಳ ಏರಿಕೆಯ ಹೊರತಾಗಿವೆ. ಸಮಗ್ರವಾಗಿ ಇವೆಲ್ಲವೂ ಹಣದುಬ್ಬರಕ್ಕೆ ಒಂದು ಒತ್ತು ನೀಡುತ್ತವೆ. ಸಾಮ್ರಾಜ್ಯಶಾಹಿ

ತೈಲ ಬೆಲೆ ಏರಿಕೆಯ ಫಲಾನುಭವಿಗಳು ಅನಿರೀಕ್ಷಿತವಾಗಿ ಬಂದ ತಮ್ಮ ಲಾಭವನ್ನು ತಕ್ಷಣವೇ ಗಣನೀಯವಾಗಿ ಬ್ಯಾಂಕ್ ಠೇವಣಿಗಳಾಗಿ ಇಟ್ಟುಕೊಳ್ಳುವುದರಿಂದ, ಅದು ಸರಕು ಮತ್ತು ಸೇವೆಗಳಿಗೆ ನೇರ ಬೇಡಿಕೆಯನ್ನು ಸೃಷ್ಟಿಸುವುದಿಲ್ಲ. ಆದರೆ ಹಣದುಬ್ಬರದಿಂದ ನಷ್ಟ ಅನುಭವಿಸುವವರು ಸರಕು ಮತ್ತು ಸೇವೆಗಳ ಮೇಲಿನ ತಮ್ಮ ಒಟ್ಟು ಬೇಡಿಕೆಯನ್ನು ವಾಸ್ತವಿಕವಾಗಿ ಕಡಿತಗೊಳಿಸಬೇಕಾಗುತ್ತದೆ. ಇಂಥಹ ಒಂದು ಹಣದುಬ್ಬರವು ವಿಶ್ವದ ಒಟ್ಟು ಬೇಡಿಕೆಯ ಮಟ್ಟವನ್ನು ಕುಗ್ಗಿಸುವ ಪರಿಣಾಮವನ್ನು ಬೀರುತ್ತದೆ ಮತ್ತು ಅದು ವಿಶ್ವ ಅರ್ಥವ್ಯವಸ್ಥೆಯಲ್ಲಿ ಒಂದು ಹಿಂಜರಿತವನ್ನು ಉಂಟುಮಾಡುತ್ತದೆ. ಇಲ್ಲಿ ನಾವು ಮತ್ತೊಮ್ಮೆ ಪ್ರಸ್ತುತ ತೈಲ ಬೆಲೆ ಏರಿಕೆಯ ನಿರ್ದಿಷ್ಟ ಸ್ವರೂಪವನ್ನು ನೋಡೋಣ. ಸಾಮ್ರಾಜ್ಯಶಾಹಿ

ಈ ತೈಲ ಬೆಲೆ ಏರಿಕೆ ಪೂರೈಕೆ ಕೊರತೆಯಿಂದಾಗಿ ಉಂಟಾಗದೆ, ಉತ್ಪಾದಕರು ಒಟ್ಟಾಗಿ ಕೈಗೊಂಡ ಕ್ರಮದಿಂದಾಗಿ ಉಂಟಾಗಿರುವುದರಿಂದಾಗಿ ಬಾಧಿತ ದೇಶಗಳ ಸರ್ಕಾರಗಳು ಒಟ್ಟು ಬೇಡಿಕೆಯ ಮಟ್ಟವನ್ನು ಉಳಿಸಿಕೊಳ್ಳಲು ಮತ್ತು ಹಿಂಜರಿತದ ಬೆದರಿಕೆಯನ್ನು ಎದುರಿಸಲು ವಿಸ್ತರಣಾ ಹಣಕಾಸು ನೀತಿಗಳನ್ನು ಮತ್ತು ವಿತ್ತೀಯ ನೀತಿಗಳನ್ನು ಅನುಸರಿಸಬೇಕಾಗುತ್ತದೆ (1970ರ ದಶಕದ ಆರಂಭ ಕಾಲದ ಹಣದುಬ್ಬರದ ಸಂದರ್ಭದಲ್ಲಿ ಸರ್ಕಾರಗಳು ಈ ಕ್ರಮವನ್ನು ಕೈಗೊಂಡಿರಲಿಲ್ಲ). ಆದರೆ, ಬೆಲೆ ಏರಿಕೆಯು ಒಂದು ವೇಳೆ ಪೂರೈಕೆ ಕೊರತೆಯ ಕಾರಣದಿಂದ ಉಂಟಾಗಿದ್ದರೆ, ಅದನ್ನು ಆ ರೀತಿಯಲ್ಲಿ ನಿರ್ವಹಿಸಲಾಗದು. ಅಂತಹ ಸಂದರ್ಭಗಳಲ್ಲಿ ಆರ್ಥಿಕ ಹಿಂಜರಿತ ಅನಿವಾರ್ಯ ಮಾತ್ರವಲ್ಲ, ಅದು ಪೂರೈಕೆಯ ಕೊರತೆಯನ್ನು ನಿವಾರಿಸುವ ಒಂದು ಸಾಧನವೂ ಆಗುತ್ತದೆ. ಆದ್ದರಿಂದ ವಿಶ್ವ ಅರ್ಥವ್ಯವಸ್ಥೆಯಲ್ಲಿ ಹಣದುಬ್ಬರದಿಂದ ಕೂಡಿದ ಹಿಂಜರಿತವು ತೈಲ ಬೆಲೆಯ ನಿರಂತರ ಏರಿಕೆಯನ್ನು ಕಾಣಬೇಕಾಗುತ್ತದೆ. ಸಾಮ್ರಾಜ್ಯಶಾಹಿ

ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತವೂ

ಇದು ಎಲ್ಲ ದೇಶಗಳಿಗೂ ಅನ್ವಯಿಸುತ್ತದೆ (ತೈಲ ಉತ್ಪಾದಿಸುವ ದೇಶಗಳಿಗೂ ಅನ್ವಯಿಸುತ್ತದೆ, ಒಂದು ವೇಳೆ ಅವರು ಸುಲಭವಾಗಿ ಕೈಗೊಳ್ಳಬಹುದಾದ ಯಾವುದೇ ಪ್ರತಿ-ಕ್ರಮಗಳನ್ನು ಕೈಗೊಳ್ಳದಿದ್ದರೆ). ಆದರೆ, ಜಾಗತಿಕ ದಕ್ಷಿಣದ ದೇಶಗಳಿಗಂತೂ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ, ಈ ಕೆಳಗಿನ ಒಂದು ಅಧಿಕ ಕಾರಣದಿಂದಾಗಿ.

ತೈಲ ಆಮದು ಮಾಡಿಕೊಳ್ಳುವ ಎಲ್ಲ ದೇಶಗಳಿಗೂ ತೈಲ ಬೆಲೆಗಳು ಏರಿಕೆಯಾದ ಕಾರಣದಿಂದಾಗಿ ಅವುಗಳ ಪಾವತಿ ಶೇಷದ ಚಾಲ್ತಿ ಖಾತೆಯಲ್ಲಿ ಕೊರತೆಯ ಪರಿಸ್ಥಿತಿ ಹದಗೆಡುತ್ತಾ ಹೋಗುತ್ತದೆ. ಈ ಅಂಶವನ್ನು ನಾವು ಈ ಹಿಂದೆ ಗಣನೆಗೆ ತೆಗೆದುಕೊಂಡಿರಲಿಲ್ಲ. ಅಂದರೆ, ವಿದೇಶಿ ವಿನಿಮಯದ ಕೊರತೆಯನ್ನು ನಿಭಾಯಿಸುವುದು ಸಮಸ್ಯೆಯಾಗುವುದಿಲ್ಲ ಎಂದು ನಾವು ಭಾವಿಸಿದ್ದೆವು. ಏಕೆಂದರೆ, ತೈಲ ರಫ್ತು ಮಾಡುವ ದೇಶಗಳ ವೃದ್ಧಿಸಿದ ಬ್ಯಾಂಕ್ ಠೇವಣಿಗಳನ್ನು ಈ ಬ್ಯಾಂಕ್‌ಗಳು ತೈಲ ಆಮದು ಮಾಡಿಕೊಳ್ಳುವ ದೇಶಗಳಿಗೆ ತಮ್ಮ ಕೊರತೆಯನ್ನು ಸರಿದೂಗಿಸಿಕೊಳ್ಳಲು ಸಾಲ ನೀಡಲು ಬಳಸುತ್ತವೆ ಎಂದು ಭಾವಿಸಿದ್ದೆವು. ಆದರೆ, ಪಾಶ್ಚ್ಯಾತ್ಯ ಬ್ಯಾಂಕ್‌ಗಳ ಅಥವಾ ಇತರ ಅಂತರರಾಷ್ಟ್ರೀಯ ಸಾಲದಾತರ ದೃಷ್ಟಿಯಲ್ಲಿ ಜಾಗತಿಕ ದಕ್ಷಿಣದ ದೇಶಗಳು, ಜಾಗತಿಕ ಉತ್ತರದ ದೇಶಗಳಂತಲ್ಲದೆ, ಸಾಲಕ್ಕೆ ಸಾಕಷ್ಟು ಅರ್ಹರಲ್ಲ. ಹಾಗಾಗಿ ಜಾಗತಿಕ ದಕ್ಷಿಣದ ದೇಶಗಳು ತಮ್ಮ ಚಾಲ್ತಿ ಖಾತೆಯಲ್ಲಿ ವೃದ್ಧಿಸುತ್ತಿರುವ ಕೊರತೆಯನ್ನು ನಿಭಾಯಿಸಲು ಕಷ್ಟಪಡುತ್ತವೆ.

ಆನಂತರ ಅವರ ಕರೆನ್ಸಿಗಳು ಅಪಮೌಲ್ಯಗೊಳ್ಳಲು ಪ್ರಾರಂಭಿಸುತ್ತವೆ. ಈ ಪರಿಸ್ಥಿತಿಯನ್ನು ನಿಭಾಯಿಸಲು, “ಮಿತವ್ಯಯ” ನೀತಿಗಳನ್ನು ಒಪ್ಪಿಕೊಳ್ಳುವ ಮೂಲಕ ಅಥವಾ ವಿದೇಶಿ ಸಾಲಗಾರರಿಗೆ ತಮ್ಮ ಖನಿಜ ಸಂಪನ್ಮೂಲಗಳನ್ನು ಒತ್ತೆ ಇಡುವ ಮೂಲಕ ಕಠಿಣ ಶರತ್ತುಗಳ ಮೇಲೆ ಬಾಹ್ಯ ಸಾಲ ಮಾಡಬೇಕಾಗುತ್ತದೆ. ತದನಂತರವೂ ಈ ದೇಶಗಳ ಹಣದುಬ್ಬರದ ಪರಿಸ್ಥಿತಿಯು ತೀವ್ರವಾಗಿಯೇ ಇರುತ್ತದೆ, ತೈಲ ಬೆಲೆ ಏರಿಕೆ ಮತ್ತು ಅದರ ಪರಿಣಾಮಗಳ ಕಾರಣದಿಂದ ಮಾತ್ರವಲ್ಲ, ಅವರ ಕರೆನ್ಸಿಯು ಅಪಮೌಲ್ಯಗೊಳ್ಳುವ ಕಾರಣದಿಂದಾಗಿ ಎಲ್ಲ ಆಮದುಗಳ ಬೆಲೆಗಳೂ ಏರಿಕೆಯಾಗುತ್ತವೆ. ಸಾಮ್ರಾಜ್ಯಶಾಹಿ

ಆರ್ಥಿಕ ಹಿಂಜರಿತವೂ ತೀವ್ರವಾಗಿಯೇ ಇರುತ್ತದೆ, ಹಣದುಬ್ಬರದಿಂದಾಗಿ ಸರಕು ಮತ್ತು ಸೇವೆಗಳಿಗೆ ಅವರ ದೇಶೀಯ ಬೇಡಿಕೆಯು ಇಳಿಕೆಯಾದ ಕಾರಣದಿಂದ ಮಾತ್ರವಲ್ಲ, ವಿದೇಶಿ ಸಾಲಗಾರರು ವಿಧಿಸಿದ “ಮಿತವ್ಯಯ” ಕ್ರಮಗಳಿಂದಾಗಿಯೂ ಸಹ. ಆದ್ದರಿಂದ ಅವರ ಜನತೆಯ ಸಂಕಷ್ಟಗಳು ಇನ್ನಷ್ಟು ಹೆಚ್ಚುತ್ತವೆ. ಹಾಗಾಗಿ, ಸಂಪೂರ್ಣವಾಗಿ ಅನೈತಿಕವಾಗಿರುವ ಮತ್ತು ಕಾನೂನು ಬಾಹಿರವಾಗಿರುವ ಈ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ಮೇಲೆ ಒತ್ತಡ ಹೇರುವುದು ಜಾಗತಿಕ ದಕ್ಷಿಣದ ದೇಶಗಳಿಗೆ ತುರ್ತಿನ ವಿಷಯವಾಗುತ್ತದೆ. ಸಾಮ್ರಾಜ್ಯಶಾಹಿ

ಅದೇ ರೀತಿಯಲ್ಲಿ ಅವರ ಆರ್ಥಿಕ ಹಿಂಜರಿತವೂ ತೀವ್ರವಾಗಿಯೇ ಇರುತ್ತದೆ, ಹಣದುಬ್ಬರದಿಂದಾಗಿ ಸರಕು ಮತ್ತು ಸೇವೆಗಳಿಗೆ ಅವರ ದೇಶೀಯ ಬೇಡಿಕೆಯು ಇಳಿಕೆಯಾದ ಕಾರಣದಿಂದ ಮಾತ್ರವಲ್ಲ, ವಿದೇಶಿ ಸಾಲಗಾರರು ವಿಧಿಸಿದ “ಮಿತವ್ಯಯ” ಕ್ರಮಗಳಿಂದಾಗಿಯೂ ಸಹ. ಆದ್ದರಿಂದ ಅವರ ಜನತೆಯ ಸಂಕಷ್ಟಗಳು ಇನ್ನಷ್ಟು ಹೆಚ್ಚುತ್ತವೆ. ಹಾಗಾಗಿ, ಸಂಪೂರ್ಣವಾಗಿ ಅನೈತಿಕವಾಗಿರುವ ಮತ್ತು ಕಾನೂನು ಬಾಹಿರವಾಗಿರುವ ಈ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ಮೇಲೆ ಒತ್ತಡ ಹೇರುವುದು ಅವರಿಗೆ ತುರ್ತಿನ ವಿಷಯವಾಗುತ್ತದೆ. ಸಾಮ್ರಾಜ್ಯಶಾಹಿ

ವಿಶ್ವ ತೈಲ ಬೆಲೆಗಳ ನಿರಂತರ ಏರಿಕೆಯಿಂದ ಭಾರತವು ತೀವ್ರ ಸ್ವರೂಪದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಾರ್ಮುಜ್ ಜಲಸಂಧಿಯ ಮೂಲಕ ಹರಿಯುವ ಕಚ್ಚಾ ತೈಲದ ಸುಮಾರು ಶೇ. 84ರಷ್ಟು ಚೀನಾ, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಏಷ್ಯಾದ ದೇಶಗಳಿಗೆ ಹೋಗುತ್ತದೆ. ಆದ್ದರಿಂದ, ಜಲಸಂಧಿಯನ್ನು ಮುಚ್ಚುವುದು, ವಿಶ್ವ ತೈಲ ಬೆಲೆಗಳು ಮತ್ತು ವಿನಿಮಯ ದರಗಳ ಮೇಲೆ ಅದು ಬೀರುವ ಪ್ರಭಾವದ ಹೊರತಾಗಿಯೂ, ಪ್ರಮುಖವಾಗಿ ಭಾರತವೂ ಸೇರಿದಂತೆ ಈ ದೇಶಗಳಿಗೆ ತೈಲದ ಭೌತಿಕ ಪೂರೈಕೆಯ ಸಕಾಲಿಕ ಲಭ್ಯತೆಯ ಮೇಲೂ ನೇರ ಪರಿಣಾಮ ಬೀರುತ್ತದೆ. ತೈಲ ಬೆಲೆಗಳ ಏರಿಕೆಯ ಪರಿಣಾಮದಿಂದ ತಪ್ಪಿಸಿಕೊಳ್ಳಲು ಒಂದು ತಿಂಗಳ ಅವಧಿಗೆ ರಷ್ಯಾದ ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಳ್ಳಲು ಡೊನಾಲ್ಡ್ ಟ್ರಂಪ್ “ಅನುಮತಿಸಿದ್ದಾರೆ”.

ಇದನ್ನೂ ನೋಡಿ: ಯುವತಲೆಮಾರಿಗೆ ಕುವೆಂಪು ಓದು; ಸಾಹಿತ್ಯ ಚಿಂತನೆಗಳ ಸಡಗರ Janashakthi Media

(ಸುಮಾರು ಎಂಟು ದಶಕಗಳ ಕಾಲದಿಂದಲೂ ಸ್ವತಂತ್ರವಾಗಿರುವ ನಮಗೆ, ನಮ್ಮ ಆಯ್ಕೆಯ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ನಮಗೆ “ಅನುಮತಿ”ಸಬೇಕಾಗಿರುವುದು ನಮ್ಮ ವಸಾಹತುಶಾಹಿ ವಿರೋಧಿ ಹೋರಾಟಕ್ಕೆ ಮಾಡಿದ ಒಂದು ಭಾರೀ ಅವಮಾನ; ಮತ್ತು ಟ್ರಂಪ್‌ಗೆ ನಮ್ಮ ಕೋಪವನ್ನು ತೋರಿಸುವುದರ ಬದಲು ಅವರ “ಅನುಮತಿಯನ್ನು” ಸೌಮ್ಯವಾಗಿ ಸ್ವೀಕರಿಸುವ ಸರ್ಕಾರವೊಂದು ನಮ್ಮಲ್ಲಿರುವುದು ಒಂದು ನಾಚಿಕೆಗೇಡಿನ ಸಂಗತಿಯೇ ಸರಿ). ಆದರೆ, ಈ “ಅನುಮತಿ” ಕೂಡ ಒಂದು ತಿಂಗಳಿಗೆ ಮಾತ್ರ. ತದನಂತರ ಮೇಲೆ ಚಿತ್ರಿಸಿದ ಸನ್ನಿವೇಶವು ನಮಗೆ ಎದುರಾಗಲಿದೆ. ಆದ್ದರಿಂದ, ಯುಎಸ್-ಇಸ್ರೇಲಿ ಆಕ್ರಮಣದ ವಿರುದ್ಧ ಭಾರತವು ಮೌನ ತಳೆದಿರುವುದು ಮತ್ತು ಈ ದುರಾಕ್ರಮಣವನ್ನು ಪ್ರತಿಭಟಿಸದೇ ಇರುವುದು ಆತ್ಮಹತ್ಯಾಕಾರಿಯಾದ ಒಂದು ವರ್ತನೆಯಾಗುತ್ತದೆ. ಸಾಮ್ರಾಜ್ಯಶಾಹಿ

ದೇಶಗಳ ಮನವೊಲಿಸುವ ಉದ್ದೇಶ

ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಮತ್ತು ಆ ಮೂಲಕ ವಿಶ್ವ ತೈಲ ಬೆಲೆಗಳ ಏರಿಕೆಗೆ ಕಾರಣವಾಗುವ ಇರಾನ್‌ನ ಈ ಕೃತ್ಯವು ನಿಖರವಾಗಿ ಜಾಗತಿಕ ದಕ್ಷಿಣದ ದೇಶಗಳಲ್ಲಿ ಈ ಯುದ್ಧಕ್ಕೆ ವಿರೋಧವನ್ನು ಹುಟ್ಟಿಹಾಕುವ ಮತ್ತು ಇರಾನ್ ವಿರುದ್ಧದ ಯುದ್ಧವು ತಮಗೆ ಬಹಳಷ್ಟು ಕಷ್ಟ-ನಷ್ಟಗಳನ್ನು ತರುವುದರಿಂದ ಅದು ತಮ್ಮ ವಿರುದ್ಧದ ಯುದ್ಧವೂ ಆಗಿರುವುದರಿಂದ ಅವರು ಅದರ ಬಗ್ಗೆ ನಿರಾಸಕ್ತರಾಗುವುದು ಸಾಧ್ಯವಿಲ್ಲ ಎಂದು ಈ ದೇಶಗಳ ಮನವೊಲಿಸುವ ಉದ್ದೇಶ ಹೊಂದಿದೆ. ಇರಾನ್‌ನ ಮಿಲಿಟರಿ ಕಮಾಂಡರ್‌ಗಳು ಜಾಗತಿಕ ತೈಲ ಬೆಲೆಗಳು ಬ್ಯಾರೆಲ್‌ಗೆ $200ರ ಮಟ್ಟಕ್ಕೆ ಏರಿಕೆಯಾಗಬಹುದೆಂದೂ ಹೇಳುತ್ತಾರೆ.. ಇದು ವಿಶ್ವದ ಜನರಿಗೆ, ವಿಶೇಷವಾಗಿ ಮೂರನೇ ಜಗತ್ತಿನ ಜನರಿಗೆ ಬಲು ಕಷ್ಟವಾಗಿ ಪರಿಣಮಿಸುತ್ತದೆ, ಅವರು ಸಾಮ್ರಾಜ್ಯಶಾಹಿ ಆಕ್ರಮಣವನ್ನು ತಕ್ಷಣವೇ ಹಿಮ್ಮೆಟ್ಟಿಸದಿದ್ದರೆ.

ನಾನು ಇರಾನ್ ಸಂಕಟಪಡುವಂತೆ ಮಾಡುತ್ತಿದ್ದೇನೆ”
ವ್ಯಂಗ್ಯಚಿತ್ರ: ಅಲೋಕ್, ಸಕಾಳ್

ಈ ದೇಶಗಳ ಜನತೆ ಈಗ ತೋರುತ್ತಿರುವ ಮೌನವು, ಇನ್ನೊಂದು ಹೆಚ್ಚು ಅನಿಷ್ಟಕಾರಿ ಅರ್ಥದಲ್ಲಿ ದುಬಾರಿಯಾಗಿ ಪರಿಣಮಿಸಬಹುದು. ಡೊನಾಲ್ಡ್ ಟ್ರಂಪ್ ನಡೆಸುತ್ತಿರುವ ಯುದ್ಧದ ಪರಿಣಾಮವಾಗಿ ಉಂಟಾದ ಹಣದುಬ್ಬರದಿಂದ ಕೂಡಿದ ಹಿಂಜರಿತದಿಂದಾಗಿ ಅಮೆರಿಕದೊಳಗೆ ಜನತೆಯ ಕೋಪವನ್ನು ಅವರು ಎದುರಿಸುತ್ತಿರುವಾಗ, ತಮ್ಮ ಸ್ವಂತ ದೇಶದಲ್ಲೇ ಜನಪ್ರಿಯತೆಯನ್ನು ಅವರು ಹೇಗೂ ಕಳೆದುಕೊಂಡಿದ್ದಾರೆ, ಇರಾನ್ ವಿರುದ್ಧ ತಮ್ಮ ತಂತ್ರಗಾರಿಕೆಯ ಭಾಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಒಂದು ಅತಿರೇಕದ ಹೆಜ್ಜೆಯ ಮೂಲಕ ಅವರು ಯುದ್ಧದ ಅವಧಿಯನ್ನು ಮೊಟಕುಗೊಳಿಸಲು ಪ್ರಯತ್ನಿಸಬಹುದು. ಮತ್ತೊಂದು ದೇಶದ ಮೇಲೆ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದ ವಿಶ್ವದ ಏಕೈಕ ದೇಶವೆಂದರೆ ಅದು ಅಮೆರಿಕವೇ. ಸಾಮ್ರಾಜ್ಯಶಾಹಿ

ಆ ಮಹಾದುರಂತದ ಪುನರಾವರ್ತನೆ ಸಲ್ಲದು ಎಂದು ಆಂತರಿಕವಾಗಿ ನೀಡಿದ ಸಲಹೆಯ ಕನಿಷ್ಠ ಮೂರು ಸಂದರ್ಭಗಳನ್ನು ಅಮೆರಿಕದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜೆ ಕೆ ಗಾಲ್‌ಬ್ರೈತ್ ಉಲ್ಲೇಖಿಸುತ್ತಾರೆ (The Delphi Initiative, ಮಾರ್ಚ್ 9). ಇಡೀ ಜಗತ್ತು ಅಮೆರಿಕ ಸರ್ಕಾರದ ಎದುರು ದೃಢವಾಗಿ ನಿಲ್ಲದಿದ್ದರೆ ಮತ್ತು ಅದು ಪ್ರಾರಂಭಿಸಿದ ಯುದ್ಧಕ್ಕೆ ತನ್ನ ನಿಸ್ಸಂದಿಗ್ಧ ವಿರೋಧವನ್ನು ವ್ಯಕ್ತಪಡಿಸದಿದ್ದರೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಬಗ್ಗೆ ಅಮೆರಿಕದ ಸಿನಿಕತನದ ತಿರಸ್ಕಾರಕ್ಕೆ ವಿರೋಧವನ್ನು ವ್ಯಕ್ತಪಡಿಸದಿದ್ದರೆ, ಆ ಮಹಾ ದುರಂತದ ಪುನರಾವರ್ತನೆಯು ಒಂದು ನಿಜ ಸಾಧ್ಯತೆಯಾಗಬಹುದು. ಸಾಮ್ರಾಜ್ಯಶಾಹಿ

ಸುಮಾರು ಎಂಟು ದಶಕಗಳ ಕಾಲದಿಂದಲೂ ಸ್ವತಂತ್ರವಾಗಿರುವ ನಮಗೆ, ನಮ್ಮ ಆಯ್ಕೆಯ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ನಮಗೆ “ಅನುಮತಿ”ಸಬೇಕಾಗಿರುವುದು ನಮ್ಮ ವಸಾಹತುಶಾಹಿ ವಿರೋಧಿ ಹೋರಾಟಕ್ಕೆ ಮಾಡಿದ ಒಂದು ಭಾರೀ ಅವಮಾನ; ಮತ್ತು ಟ್ರಂಪ್‌ಗೆ ನಮ್ಮ ಕೋಪವನ್ನು ತೋರಿಸುವುದರ ಬದಲು ಅವರ “ಅನುಮತಿಯನ್ನು” ಸೌಮ್ಯವಾಗಿ ಸ್ವೀಕರಿಸುವ ಸರ್ಕಾರವೊಂದು ನಮ್ಮಲ್ಲಿರುವುದು ಒಂದು ನಾಚಿಕೆಗೇಡಿನ ಸಂಗತಿಯೇ ಸರಿ
Donate Janashakthi Media

Leave a Reply

Your email address will not be published. Required fields are marked *