ಅಮರಾವತಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಂಧ್ರಪ್ರದೇಶ ಮರುಸಂಘಟನೆ (ತಿದ್ದುಪಡಿ) ಕಾಯ್ದೆ-2026ಕ್ಕೆ ಅಧಿಕೃತವಾಗಿ ಅಂಕಿತ ಹಾಕುವ ಮೂಲಕ, ಅಮರಾವತಿಯು ರಾಜ್ಯದ ಕಾನೂನುಬದ್ಧ ರಾಜಧಾನಿಯಾಗಿ ಹೊರಹೊಮ್ಮಿದೆ.
ವಿಶೇಷವಾಗಿ ಅಮರಾವತಿಯ ರೈತರನ್ನು ಸ್ಮರಿಸಿರುವ ನಾಯ್ಡು, “ಇದು ನನ್ನ ಜನರ ಮತ್ತು ಭೂಮಿ ನೀಡಿದ ರೈತರ ಹೋರಾಟಕ್ಕೆ ಸಂದ ಜಯ” ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಎಲ್‌ಪಿಜಿ ಹಾಹಾಕಾರ: ಸಂಕಷ್ಟದಲ್ಲಿ ಸಿಲುಕಿರುವ ಆಟೋಚಾಲಕರು
ರಾಜ್ಯದ ಐಟಿ ಮತ್ತು ಶಿಕ್ಷಣ ಸಚಿವ ನಾರಾ ಲೋಕೇಶ್ ಪ್ರತಿಕ್ರಿಯಿಸಿ, “ಇದು ಪ್ರತಿಯೊಬ್ಬ ಆಂಧ್ರದ ಪ್ರಜೆಯ ಪಾಲಿಗೆ ಐತಿಹಾಸಿಕ ದಿನ. ರೈತರ ತಾಳ್ಮೆ, ಬಲಿದಾನ ಮತ್ತು ಜನರ ಸಂಕಲ್ಪಕ್ಕೆ ಇಂದು ನ್ಯಾಯ ಸಿಕ್ಕಿದೆ” ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಪಿ.ವಿ.ಎನ್. ಮಾಧವ್ ಅವರು ಕೂಡ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ರಾಷ್ಟ್ರಪತಿಗಳ ಅಂಕಿತ ಮತ್ತು ಅಧಿಕೃತ ಗೆಜೆಟ್ ಅಧಿಸೂಚನೆಯೊಂದಿಗೆ ಅಮರಾವತಿಗೆ ಈಗ ಶಾಶ್ವತ ಮಾನ್ಯತೆ ಲಭಿಸಿದೆ, ಇದು ರಾಜ್ಯದ ಅಭಿವೃದ್ಧಿಗೆ ಹೊಸ ತಿರುವು ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿನ್ನೆಲೆ:
2014ರಲ್ಲಿ ರಾಜ್ಯ ವಿಭಜನೆಯಾದಾಗಿನಿಂದಲೂ ರಾಜಧಾನಿ ವಿಚಾರವಾಗಿ ಆಂಧ್ರಪ್ರದೇಶದಲ್ಲಿ ಸಾಕಷ್ಟು ರಾಜಕೀಯ ಸಂಘರ್ಷಗಳು ನಡೆದಿದ್ದವು. ಈ ಹೊಸ ಕಾಯ್ದೆಯು ಆ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ರಾಜ್ಯದ ಅಭಿವೃದ್ಧಿಗೆ ಸ್ಪಷ್ಟ ಹಾದಿ ಮಾಡಿಕೊಟ್ಟಿದೆ.
ಇದನ್ನೂ ನೋಡಿ: ಎಲ್‌ಪಿಜಿ ಬಿಕ್ಕಟ್ಟು | ಗ್ಯಾಸ್ ಸಿಗದೆ ನಿಂತ ಆಟೋಗಳು; ದಿನವೂ ಕಿ.ಮೀ.ಗಟ್ಟಲೆ ಸಾಲು! Janashakthi Media
