ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ತೀವ್ರ: ಅಭಿಷೇಕ್ ಬಳಿಕ ಕಲ್ಯಾಣ್ ಬ್ಯಾನರ್ಜಿ ಮೇಲೂ ದಾಳಿ!

ಪಶ್ಚಿಮ ಬಂಗಾಳ: ಮೇ 30ರಂದು ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ ಮೇಲಿನ ಹಲ್ಲೆ ಬೆನ್ನಲ್ಲೆ ಮೇ 31ರಂದು ಮತ್ತೊಮ್ಮ ಟಿಎಂಸಿ ಸಂಸದ ಕಲ್ಯಾಣ್​ ಬ್ಯಾನರ್ಜಿ ಮೇಲೆ ದಾಳಿ ನಡೆದಿದ್ದು, ತಲೆಗೆ ತೀವ್ರ ಏಟಾಗಿದೆ ಎಂದು ವರದಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ, ಟಿಎಂಸಿ ಪಕ್ಷದ ಕಾರ್ಯಕರ್ತರ ಹಾಗೂ ನಾಯಕರ ಮೇಲೆ ಆಡಳಿತ ಪಕ್ಷ ಸುಳ್ಳು ಪ್ರಕರಣ ದಾಖಲಿಸುತ್ತಿದೆ ಎಂದು ಆರೋಪಿಸಿ ಧರಳಿ ನಿರತರಾಗಿದ್ದರು. ಮಾಹಿತಿ ಪ್ರಕಾರ, ಧರಣಿಗೆ ಕುಳಿತಿದ್ದ ಟಿಎಂಸಿ ಪಕ್ಷದವರು ತಮ್ಮ ಮನವಿ ಪತ್ರವನ್ನು ಚಂಡಿತಾಲಾ ಪೊಲೀಸ್ ಠಾಣೆಗೆ ಸಲ್ಲಸಲು ಹೋದಾಗ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ತಿಳಿದು ಬಂದಿದೆ.

ಏಕಾಏಕಿ ದಾಳಿ

ಟಿಎಂಸಿ ಪಕ್ಷದವರು ಹೇಳುತ್ತಿರುವ ಪ್ರಕಾರ, ಧರಳಿಯಲ್ಲಿ ನಿರತರಾಗಿದ್ದಾಗ ಬಿಜೆಪಿ ಕಾರ್ಯಕರ್ತರು ನಮ್ಮನ್ನು ಸುತ್ತುವರಿದರು. ನಂತರ ಅವರು ಕಲ್ಯಾಣ್​ ಬ್ಯಾನರ್ಜಿ ಕಳ್ಳ-ಕಳ್ಳ ಎಂದು ಘೋಷಣೆ ಕೂಗಲಾರಂಭಿಸಿದರು, ನಂತರ ಒಂದೇ ಸಮನೇ ನಮ್ಮ ಮೇಲೆ ಹಲ್ಲೆಗೆ ಮುಂದಾದರು ಎಂದು ಹೇಳಿದ್ದಾರೆ.

ಸದ್ಯ ಪರಿಸ್ಥಿತಿ ಉದ್ವಿಗ್ನ ಸ್ಥಿತಿಯಲ್ಲಿದ್ದು, ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಹಾಗೆಯೇ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸುವ ಕೆಲಸ ಭರದಿಂದ ಸಾಗಿದೆ ಎಂದು ಬಂಗಾಳ ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ.
ಅಭಿಷೇಕ್​ ಬ್ಯಾನರ್ಜಿ ಮೇಲೆ ದಾಳಿ

ಇದನ್ನೂ ಓದಿ: ಆಂಧ್ರ ಕಾಂಗ್ರೆಸ್ ಅಧ್ಯಕ್ಷೆಗೆ ಕರ್ನಾಟಕದಿಂದ ರಾಜ್ಯಸಭೆ ಟಿಕೆಟ್? ಕಾಂಗ್ರೆಸ್‌ನಲ್ಲಿ ಚರ್ಚೆ ಜೋರು

ಮೇ.30ರಂದು ದಕ್ಷಿಣದ 24 ಪರಣಗಣದ ಸೋನರ್​ಪುರ್​ನಲ್ಲಿ ಟಿಎಂಸಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್​ ಬ್ಯಾನರ್ಜಿ ಮೇಲೆ ಮೊಟ್ಟೆ, ಕಲ್ಲಿನಿಂದ ದಾಳಿ ನಡೆದಿದೆ.

ಅಭಿಷೇಕ್ ಬ್ಯಾನರ್ಜಿ ಚುನಾವಣಾ ನಂತರ ನಡೆದ ಹಿಂಸಾಚಾರದಲ್ಲಿ ತೊಂದರೆಗೆ ಒಳಗಾದವರನ್ನು ನೋಡಲು ಹೋದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ.

ಇದೊಂದು ಬಿಜೆಪಿ ಪ್ರಾಯೋಜಿತ ಕೊಲೆಯತ್ನವಾಗಿದೆ. ನಾನು ಹೆಲ್ಮೆಟ್​ ಧರಿಸದೆ ಹೋಗದಿದ್ದರೆ ಹೆಣವಾಗುತ್ತಿದ್ದೆ, ನಾನು ಈ ಘಟನೆಯನ್ನು ನ್ಯಾಯಲಯ ಮತ್ತು ರಾಜ್ಯಪಾಲರ ಮುಂದೆ ಇಡಲಿದ್ದೆನೆಂದು ಅಭಿಷೇಕ್​ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ನೋಡಿ: IPL 2026 | ಪ್ಲೇಆಫ್‌ ಪೈಪೋಟಿ: ನಾಲ್ಕು ತಂಡಗಳ ಪ್ಲಸ್‌, ಮೈನಸ್‌ ಮತ್ತು ಕಪ್‌ ಲೆಕ್ಕಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *