ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ನೀಡಿರುವ ಕೋರ್ಟ್ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದೂ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಅವರ ಜೀವನ ಶೈಲಿಯೇ ಬದಲಾಗಿದೆ.
ಜೈಲು ಅಧಿಕಾರಿಗಳು ವಿನಯ್ ಕುಲಕರ್ಣಿ ಮತ್ತು ಗ್ಯಾಂಗ್ಗೆ ಸಜಾ ಕೈದಿ ನಂಬರ್ ನೀಡಿದ್ದಾರೆ. ವಿನಯ ಕುಲಕರ್ಣಿ ಕೈದಿ ನಂಬರ್ 16110 ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ವಿನಯ್ ಕುಲಕರ್ಣಿ ಅವರು ಇನ್ಮುಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನದೂಡಬೇಕಿದೆ.
ಇನ್ಮುಂದೆ ಶಾಸಕ ವಿನಯ್ ಕುಲಕರ್ಣಿ 16110 ಸಜಾಬಂಧಿ ಆಗಿದ್ದಾರೆ. ಇನ್ಮೇಲೆ ವಿನಯ್ ಕುಲಕರ್ಣಿ ಅವರು ಜೈಲಿನಲ್ಲಿ ಸಜಾ ಕೈದಿಯಾಗಿ ಸೆರೆವಾಸ ಅನುಭವಿಸಬೇಕಿದೆ. ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಸಜಾ ಕೈದಿ ನಂಬರ್ ನೀಡಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ 2% ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
1. ವಿಕ್ರಂ ಬಳ್ಳಾರಿ CTP – 16097
2. ಕೀರ್ತಿ ಕುಮಾರ್ ಬೆಳ್ಳಟ್ಟಿ CTP – 16098
3. ಸಂದೀಪ್ ಸವದತ್ತಿ CTP – 16099
4. ವಿನಾಯಕ ಕಟಗಿ CTP – 16100
5. ಮಹಾಬಲೇಶ್ವರ ಹೊಂಗಳೇ CTP – 16101
6. ಸಂತೋಷ ಸವದತ್ತಿ CTP – 16102
7. ದಿನೇಶ್ CTP – 16103
8. ಅಶ್ವಥ್ CTP – 16104
9. ಸುನಿಲ್ CTP – 16105
10. ನಜೀರ್ ಅಹ್ಮದ್ CTP – 16106
11. ಶನವಾಜ್ CTP – 16107
12. ನೂತನ್ CTP – 16108
13. ಹರ್ಷೀತ್ CTP – 16109
14. ವಿನಯ್ ಕುಲಕರ್ಣಿ CTP – 16110
15. ಚಂದ್ರಶೇಖರ್ ಇಂಡಿ CTP – 16111
16. ವಿಕಾಸ್ ಕಲಬುರ್ಗಿ CTP – 16112
17. ಚನ್ನಕೇಶವ ಟಿಂಗರಿಕರ್ CTP – 16113
ತಿಂಗಳೊಳಗೆ ತಡೆಯಾಜ್ಞೆ ತರದಿದ್ದರೆ ಶಾಶ್ವತ ರದ್ದು!
ಜೀವಾವಧಿ ಶಿಕ್ಷೆಗೆ ಗುರಿಯಾದ ಕಾರಣಕ್ಕೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದಾಗಿದೆ. ಶಾಸಕ ಸ್ಥಾನ ಉಳಿಸಿಕೊಳ್ಳಲು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಒಂದು ತಿಂಗಳೊಳಗೆ ತಡೆಯಾಜ್ಞೆ ತರಬೇಕು. ಇಲ್ಲವಾದರೆ, ಶಾಸಕ ಸ್ಥಾನವನ್ನು ಶಾಶ್ವತವಾಗಿ ಕಳೆದುಕೊಳ್ಳಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಪಾಲಾಗಿರುವ ವಿನಯ್ ಕುಲಕರ್ಣಿ, ನಟ ದರ್ಶನ್ ಬ್ಯಾರಕ್ ಮಾರ್ಗವಾಗಿಯೇ ಸ್ವಲ್ಪ ದೂರದಲ್ಲಿರೋ ವಾಸ್ತವ್ಯದ ಬ್ಯಾರಕ್ನಲ್ಲಿದ್ದಾರೆ ಎಂಬ ಮಾಹಿತಿ ಜೈಲು ಮೂಲಗಳಿಂದ ಲಭ್ಯವಾಗಿದೆ. ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಮಂದಿ ಕೈದಿಗಳು ಒಂದೇ ಬ್ಯಾರಕ್ನಲ್ಲಿ ವಾಸ್ತವ್ಯ ಮಾಡಲಾಗಿದೆ.
ಇನ್ನು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ನಿನ್ನೆ ರಾತ್ರಿ ಬ್ಯಾರಕ್ನಲ್ಲಿ ಕಣ್ಣೀರು ಹಾಕಿದ್ದಾರಂತೆ, ಊಟ ಮಾಡದೆ ನಿದ್ದೆಯೂ ಸರಿಯಾಗಿ ಮಾಡದೆ ಬೇಸರದಲ್ಲಿದ್ದಾರಂತೆ. ವಿನಯ್ ಕುಲಕರ್ಣಿ ಅಲ್ಲದೇ ಉಳಿದ ಅಪರಾಧಿಗಳು ಸಹ ಕುಟುಂಬ ನೆನೆದು ಕಣ್ಣೀರು ಹಾಕಿದ್ದಾರಂತೆ. ಇನ್ನು ವಿನಯ್ ಕುಲಕರ್ಣಿ ಅವರು ರಾಜಕೀಯ ಭವಿಷ್ಯದ ಜೊತೆ ಕುಟುಂಬದ ವಿಚಾರವಾಗಿ ಚಿಂತೆಗೀಡಾಗಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ನೋಡಿ: ಡಿಲಿಮಿಟೇಶನ್: ನ್ಯಾಯದ ಮುಖವಾಡದಲ್ಲಿ ಪ್ರಾಬಲ್ಯದ ರಾಜಕಾರಣ! Janashakthi Media
