“ಸುಪ್ರೀಂ ಕೋರ್ಟ್ ಅಭಿಪ್ರಾಯ ದೋಷಪೂರಿತ ನವ-ಉದಾರವಾದಿ ದೃಷ್ಟಿಕೋನವನ್ನು ಬಿಂಬಿಸುತ್ತದೆ”
ಮುಟ್ಟಿನ ರಜೆ ಒಂದು ರಿಯಾಯ್ತಿಯಲ್ಲ, ಅದು ವಾಸ್ತವಿಕ ಸಮಾನತೆ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳಿಗೆ ಒಂದು ಅಗತ್ಯವಾದ ಕ್ರಮವಾಗಿದೆ , ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳು ಅವರ ಉದ್ಯೋಗಕ್ಕೆ ಹೇಗೆ ಹಾನಿಕಾರಕವಾಗಬಹುದು ಎಂಬ ಗಂಡಾಳಿಕೆಯ ತರ್ಕಗಳು ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಬಲವಾದ ಕಾರ್ಮಿಕ ರಕ್ಷಣೆಗಳು, ಸಮಾನತೆಯ ಜಾರಿ ಮತ್ತು ಕೆಲಸದ ಸ್ಥಳದಲ್ಲಿ ಅವರ ಆರೋಗ್ಯ ಹಾಗೂ ಘನತೆಗೆ ಮಾನ್ಯತೆ ಎಂದು ಸಿಐಟಿಯು ಸಾರಿದೆ. ರಿಯಾಯ್ತಿ
ಭಾರತದ ಸರ್ವೋಚ್ಚ ನ್ಯಾಯಾಲಯ ಮಹಿಳೆಯರಿಗೆ ಮುಟ್ಟಿನ ರಜೆ ಕುರಿತಂತೆ ದೇಶವ್ಯಾಪಿ ನೀತಿಯನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ದೇಶದ ಪ್ರಮುಖ ಕೇಂದ್ರೀಯ ಕಾರ್ಮಿಕ ಸಂಘಟನೆ ಸಿಐಟಿಯು ಗಂಭೀರ ಆತಂಕ ಮತ್ತು ಗಾಢ ಅಸಮ್ಮತಿಯನ್ನು ವ್ಯಕ್ತಪಡಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಒಳಗೊಂಡ ಪೀಠವು, ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವುದು ಮಹಿಳೆಯರ ಉದ್ಯೋಗಾವಕಾಶಗಳಿಗೆ ಹಾನಿಕಾರಿಯಾಗಬಹುದು, ಏಕೆಂದರೆ ಉದ್ಯೋಗದಾತರು ಮಹಿಳೆಯರನ್ನು ನೇಮಕ ಮಾಡುವಲ್ಲಿ ಹಿಂಜರಿಯಬಹುದು ಎಂದು ಅಭಿಪ್ರಾಯಪಟ್ಟಿತು. ರಿಯಾಯ್ತಿ
ಈ ವಿಷಯದಲ್ಲಿ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ನೀತಿಯನ್ನು ರೂಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಅದು ನಿರ್ದೇಶನ ನೀಡಿದರೂ, ಮಹಿಳೆಯರ ಉದ್ಯೋಗಾವಕಾಶಗಳಿಗೆ ಹಾನಿಯಾಗಬಹುದು ಎಂದು ನ್ಯಾಯಾಲಯವು ಹೇಳಿರುವುದು “ವ್ಯವಹಾರದಲ್ಲಿ ಸುಗಮತೆ” ಎಂಬ ಹೆಸರಿನಲ್ಲಿ ಎಲ್ಲಾ ಕಾರ್ಮಿಕ ಹಕ್ಕುಗಳನ್ನು ಅಡೆತಡೆಗಳೆಂದು ಚಿತ್ರಿಸುವ ನವಉದಾರವಾದಿಗಳು ಸಾಮಾನ್ಯವಾಗಿ ನೀಡುವ ದೋಷಪೂರಿತ ಮತ್ತು ತಪ್ಪುದಾರಿಗೆಳೆಯುವ ಪ್ರತಿಕ್ರಿಯೆಯಾಗಿದೆ. ರಿಯಾಯ್ತಿ
ಇದನ್ನೂ ಓದಿ: ಇನ್ನೂ 2-3 ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ – ಐಎಂಡಿ
ಮನೆಕೆಲಸಗಾರರಿಗೆ ಕನಿಷ್ಠ ವೇತನವನ್ನು ಅನ್ವಯಿಸುವ ಕುರಿತು ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ಪ್ರತಿಕ್ರಿಯೆಯಲ್ಲಿಯೂ ಇದೇ ಕಾರ್ಮಿಕ ವಿರೋಧಿ, ಮಹಿಳಾ ವಿರೋಧಿ ದೃಷ್ಟಿಕೋನವು ಕಂಡು ಬಂದಿತ್ತು ಎಂದು ಸಿಐಟಿಯು ನೆನಪಿಸಿದೆ.
ಮುಟ್ಟಿನ ರಜೆ ನೀತಿಯನ್ನು ರೂಪಿಸುವುದು ಎಲ್ಲಾ ಕ್ಷೇತ್ರಗಳಲ್ಲಿನ ದುಡಿಯುವ ಮಹಿಳೆಯರ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ, ವಿಶೇಷವಾಗಿ ಭಾರತಂಥ ದೇಶದಲ್ಲಿ ಮುಟ್ಟಿನ ಆರೋಗ್ಯವನ್ನು ಇನ್ನೂ ಕಳಂಕಿತವಾಗಿ ನೋಡಲಾಗುತ್ತದೆ, ಅದಕ್ಕೆ ಆದ್ಯತೆ ನೀಡಲಾಗುತ್ತಿಲ್ಲ. ಈ ನೀತಿಯನ್ನು ಜಾರಿಗೊಳಿಸುವುದು ಅನೇಕ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಅತ್ಯಂತ ಅಗತ್ಯ. ನಮ್ಮ ದೇಶದ ಜನಸಂಖ್ಯೆಯ ಸುಮಾರು 26% (ಸುಮಾರು 36 ಕೋಟಿ )ಮಹಿಳೆಯರು ಮಾಸಿಕ ಚಕ್ರವನ್ನು ಅನುಭವಿಸುತ್ತಾರೆ. ಇದು ಸಹಜವಾದ ಜೈವಿಕ ಪ್ರಕ್ರಿಯೆಯಾಗಿದ್ದು, ಅನೇಕ ಅಧ್ಯಯನಗಳು 50-90% ಮಹಿಳೆಯರು ಈ ಸಂದರ್ಭದಲ್ಲಿ ಪ್ರತಿತಿಂಗಳು ಹೊಟ್ಟೆ ನೋವು ಅನುಭವಿಸುತ್ತಾರೆ ಎಂದು ಸೂಚಿಸುತ್ತವೆ. ಎಂಡೋಮೆಟ್ರಿಯೊಸಿಸ್, ಅಡಿನೋಮಿಯೋಸಿಸ್ ಮತ್ತು ಪಾಲಿಸಿಸ್ಟಿಕ್ ಓವೇರಿ ಸಿಂಡ್ರೋಮ್ ಮೊದಲಾದ ಗರ್ಭಕೋಶಕ್ಕೆ ಸಂಬಂಧಪಟ್ಟ ದೀರ್ಘಕಾಲೀನ ಸಮಸ್ಯೆಗಳು ತೀವ್ರ ನೋವು, ಹೆಚ್ಚಿನ ರಕ್ತಸ್ರಾವ, ದಣಿವು ಮತ್ತು ಇತರೆ ಲಕ್ಷಣಗಳೊಂದಿಗೆ ಸಂಬಂಧಿತವಾಗಿವೆ. ಕೆಲಸದ ಸ್ಥಳಗಳಲ್ಲಿ ಸಾಂಸ್ಥಿಕ ಬೆಂಬಲದ ಅಗತ್ಯವನ್ನು ನಿರಾಕರಿಸುವುದು ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಅದೃಶ್ಯಗೊಳಿಸುತ್ತದೆ ಎಂದು ಸಿಐಟಿಯು ಆತಂಕ ವ್ಯಕ್ತಪಡಿಸಿದೆ. ರಿಯಾಯ್ತಿ
ಅನೇಕ ಅಧ್ಯಯನಗಳು 50-90% ಮಹಿಳೆಯರು ಮಾಸಿಕ ಚಕ್ರದ ಸಂದರ್ಭದಲ್ಲಿ ಪ್ರತಿತಿಂಗಳು ಹೊಟ್ಟೆ ನೋವು ಅನುಭವಿಸುತ್ತಾರೆ ಎಂದು ಸೂಚಿಸುತ್ತವೆ. ಎಂಡೋಮೆಟ್ರಿಯೊಸಿಸ್, ಅಡಿನೋಮಿಯೋಸಿಸ್ ಮತ್ತು ಪಾಲಿಸಿಸ್ಟಿಕ್ ಓವೇರಿ ಸಿಂಡ್ರೋಮ್ ಮೊದಲಾದ ಗರ್ಭಕೋಶಕ್ಕೆ ಸಂಬಂಧಪಟ್ಟ ದೀರ್ಘಕಾಲೀನ ಸಮಸ್ಯೆಗಳು ತೀವ್ರ ನೋವು, ಹೆಚ್ಚಿನ ರಕ್ತಸ್ರಾವ, ದಣಿವು ಮತ್ತು ಇತರೆ ಲಕ್ಷಣಗಳೊಂದಿಗೆ ಸಂಬಂಧಿತವಾಗಿವೆ. ಕೆಲಸದ ಸ್ಥಳಗಳಲ್ಲಿ ಸಾಂಸ್ಥಿಕ ಬೆಂಬಲದ ಅಗತ್ಯವನ್ನು ನಿರಾಕರಿಸುವುದು ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಅದೃಶ್ಯಗೊಳಿಸುತ್ತದೆ ಎಂದು ಸಿಐಟಿಯು ಆತಂಕ ವ್ಯಕ್ತಪಡಿಸಿದೆ.
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಪ್ರತಿ ತಿಂಗಳಿಗೆ ಒಂದು ದಿನದ ಮುಟ್ಟಿನ ರಜೆಯನ್ನು ವೈದ್ಯಕೀಯ ಪ್ರಮಾಣಪತ್ರವಿಲ್ಲದೆ ಔಪಚಾರಿಕ ಮತ್ತು ಸರಕಾರೀ ಕ್ಷೇತ್ರದ ಉದ್ಯೋಗಿಗಳಿಗೆ ಕಡ್ಡಾಯಗೊಳಿಸಲಾಗಿದೆ. ಎಂದು ಇಲ್ಲಿ ಉಲ್ಲೇಖಿಸಬಹುದು. ಬಿಹಾರ ಮತ್ತು ಒಡಿಶಾ ಮುಂತಾದ ಕೆಲವು ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೂ ಮುಟ್ಟಿನ ರಜೆ ಲಭ್ಯವಿದೆ. ಕೇರಳದಲ್ಲಿ ವಿದ್ಯಾರ್ಥಿಗಳಿಗೆ ಮುಟ್ಟಿನ ರಜೆ ನೀಡಲಾಗುತ್ತಿದೆ. ಜಪಾನ್, ಇಂಡೋನೇಷ್ಯಾ, ಜಾಂಬಿಯಾ, ಇಟಲಿ, ಸ್ಪೇನ್, ಐರ್ಲೆಂಡ್ ಹಾಗೂ ಚೀನಾದ ಕೆಲವು ಪ್ರಾಂತ್ಯಗಳು ಮತ್ತು ದಕ್ಷಿಣ ಕೊರಿಯಾ ಮುಂತಾದ ದೇಶಗಳಲ್ಲಿ ಇಂತಹ ನೀತಿಗಳು ಈಗಾಗಲೇ ಜಾರಿಗೆ ಬಂದು ಉತ್ತಮ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ, ನಮ್ಮ ದುಡಿಯುವ ಮಹಿಳೆಯರು ಸಮರ್ಪಕವಾಗಿ ವಿಶ್ರಾಂತಿ ಪಡೆಯಲು ಮತ್ತು ಉದ್ಯೋಗ ಸಂಬಂಧಿತ ಪರಿಣಾಮಗಳ ಭಯವಿಲ್ಲದೆ ಅಗತ್ಯ ವೈದ್ಯಕೀಯ ಸಹಾಯ ಪಡೆಯಲು ಯಾವುದೇ ಸಾಧ್ಯವಾಗುವಂತೆ ದೇಶವ್ಯಾಪಿ ಮುಟ್ಟಿನ ರಜೆ ನೀತಿಯನ್ನು ರೂಪಿಸುವುದು ಇನ್ನಷ್ಟು ಮಹತ್ವದ್ದಾಗಿದೆ ಎಂದು ಸಿಐಟಿಯು ಹೇಳಿದೆ. ರಿಯಾಯ್ತಿ
ಸರ್ವೋಚ್ಚ ನ್ಯಾಯಾಲಯ ವ್ಯಕ್ತಪಡಿಸಿರುವ ಕಾರಣಗಳು ಆಳವಾದ ದೋಷಪೂರ್ಣ ಹಾಗೂ ಮಾಲಕರ ಪರವಾದ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಇದು ಕಾರ್ಮಿಕ ಮಾರುಕಟ್ಟೆಯಲ್ಲಿ ಇರುವ ಸಂರಚನಾತ್ಮಕ ತಾರತಮ್ಯವನ್ನು ಎದುರಿಸುವ ಬದಲು ಅದರ ಭಾರವನ್ನು ಮಹಿಳಾ ಕಾರ್ಮಿಕರ ಮೇಲೇ ವರ್ಗಾಯಿಸುತ್ತದೆ. ಮಾಲಕರು ನೇಮಕಾತಿಯಲ್ಲಿ ಮಹಿಳೆಯರ ವಿರುದ್ಧ ಭೇದಭಾವ ಮಾಡಬಹುದು ಎಂಬ ಕಾರಣಕ್ಕೆ ಮಹಿಳೆಯರ ಉದ್ಯೋಗದ ಹಕ್ಕುಗಳನ್ನು ಕಡಿತಗೊಳಿಸಬೇಕು ಎಂಬ ವಾದವನ್ನು ಯಾವುದೇ ರೀತಿಯಲ್ಲೂ ಒಪ್ಪಲಾಗುವುದಿಲ್ಲ. ಆ ತರ್ಕದ ಪ್ರಕಾರ, ಹೆರಿಗೆ ಸೌಲಭ್ಯಗಳು, ಕೆಲಸದ ಸ್ಥಳದಲ್ಲಿ ಸುರಕ್ಷತಾ ಮಾನದಂಡಗಳು ಮತ್ತು ಸಮಾನ ಅವಕಾಶ ಕ್ರಮಗಳು ಸೇರಿದಂತೆ ಮಹಿಳೆಯರಿಗಾಗಿ ರೂಪಿಸಲಾದ ಅನೇಕ ಪ್ರಗತಿಪರ ಶ್ರಮ ರಕ್ಷಣೆ ಕ್ರಮಗಳನ್ನು ಕುರಿತ ಶಾಸನಗಳನ್ನೇ ತರಬಾರದಿತ್ತು!
ಮಾಲಕರು ನೇಮಕಾತಿಯಲ್ಲಿ ಮಹಿಳೆಯರ ವಿರುದ್ಧ ಭೇದಭಾವ ಮಾಡಬಹುದು ಎಂಬ ಕಾರಣಕ್ಕೆ ಮಹಿಳೆಯರ ಉದ್ಯೋಗದ ಹಕ್ಕುಗಳನ್ನು ಕಡಿತಗೊಳಿಸಬೇಕು ಎಂಬ ವಾದವನ್ನು ಯಾವುದೇ ರೀತಿಯಲ್ಲೂ ಒಪ್ಪಲಾಗುವುದಿಲ್ಲ. ಆ ತರ್ಕದ ಪ್ರಕಾರ, ಹೆರಿಗೆ ಸೌಲಭ್ಯಗಳು, ಕೆಲಸದ ಸ್ಥಳದಲ್ಲಿ ಸುರಕ್ಷತಾ ಮಾನದಂಡಗಳು ಮತ್ತು ಸಮಾನ ಅವಕಾಶ ಕ್ರಮಗಳು ಸೇರಿದಂತೆ ಮಹಿಳೆಯರಿಗಾಗಿ ರೂಪಿಸಲಾದ ಅನೇಕ ಪ್ರಗತಿಪರ ಶ್ರಮ ರಕ್ಷಣೆ ಕ್ರಮಗಳನ್ನು ಕುರಿತ ಶಾಸನಗಳನ್ನೇ ತರಬಾರದಿತ್ತು!
ಹೆರಿಗೆ ರಜೆ ಮುಂತಾದ ಸೌಲಭ್ಯಗಳನ್ನು ಬಳಸುವುದರಿಂದ ಮಹಿಳಾ ಉದ್ಯೋಗಿಗಳು ನೇಮಕಾತಿ, ಪದೋನ್ನತಿ ಮುಂತಾದ ವಿಷಯಗಳಲ್ಲಿ ಭೇದಭಾವವನ್ನು ಅನುಭವಿಸುತ್ತಾರೆ ಎಂಬದು ವಾಸ್ತವ ಸಂಗತಿ. ಅದಕ್ಕಾಗಿ ಪ್ರಭುತ್ವ ಮತ್ತು ನ್ಯಾಯಾಂಗವು ಭೇದಭಾವ ವಿರೋಧಿ ನಿಯಮಗಳ ಕಟ್ಟುನಿಟ್ಟಿನ ಜಾರಿಯನ್ನು ಖಚಿತಪಡಿಸಬೇಕು ಮತ್ತು ಜೀವಶಾಸ್ತ್ರೀಯ ಹಾಗೂ ಆರೋಗ್ಯ ಸಂಬಂಧಿತ ಅಗತ್ಯಗಳಿಗಾಗಿ ಮಹಿಳೆಯರನ್ನು ಶಿಕ್ಷಿಸಲು ಮಾಲಕರಿಗೆ ಅವಕಾಶವಿಲ್ಲದಂತಹ ಪರಿಸ್ಥಿತಿಗಳನ್ನು ನಿರ್ಮಿಸಬೇಕೇ ಹೊರತು, ಈಗಿರುವ ರಕ್ಷಾತ್ಮಕ ಕ್ರಮಗಳನ್ನು ದುರ್ಬಲಗೊಳಿಸಲು ಅಥವಾ ವಿರೋಧಿಸಲು ಮುಂದಾಗಬಾರದು.
ಸ್ವತಃ ಸುಪ್ರೀಂ ಕೋರ್ಟ್ ಇತ್ತೀಚೆಗೆ ಮುಟ್ಟಿನ ಆರೋಗ್ಯ ಮತ್ತು ಸ್ವಚ್ಛತೆಯನ್ನು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ “ಜೀವನ ಮತ್ತು ಘನತೆಯ ಹಕ್ಕಿನ ಭಾಗ” ಎಂದು ಗುರುತಿಸಿದೆ. ಇದು ಮಹಿಳೆಯರ ಆರೋಗ್ಯ ಮತ್ತು ಘನತೆಯನ್ನು ರಕ್ಷಿಸುವ ಪರಿಸ್ಥಿತಿಗಳನ್ನು ಖಚಿತಪಡಿಸಲು ಪ್ರಭುತ್ವವು ಬಾಧ್ಯವಾಗಿದೆ ಎಂಬುದನ್ನು ದೃಢಪಡಿಸುತ್ತದೆ. ಹೀಗಿರುವಾಗ , ಮುಟ್ಟಿನ ರಜೆಯ ಪ್ರಶ್ನೆ ಮಹಿಳೆಯರ ಉದ್ಯೋಗಾವಕಾಶಗಳಿಗೆ ಹಾನಿಕಾರಿಯಾಗಬಹುದು ಮತ್ತು “ವ್ಯವಹಾರದಲ್ಲಿ ಸುಗಮತೆ”ಗೆ ಅಡ್ಡಿಯಾಗಬಹುದು ಎಂದು ಈಗ ಹೇಳಿರುವುದು ವಿಶೇಷವಾಗಿ ಆಶ್ಚರ್ಯಕರ ಸಂಗತಿ ಎಂದು ಸಿಐಟಿಯು ಹೇಳಿದೆ. ಮುಟ್ಟಿನ ಆರೋಗ್ಯವು ಮೂಲಭೂತ ಹಕ್ಕು ಆಗಿದ್ದರೆ, ಕೆಲಸದ ಸ್ಥಳದ ನೀತಿಗಳು ಈ ಸಂವಿಧಾನಿಕ ಬದ್ಧತೆಯನ್ನು ಬಿಂಬಿಸಲೇಬೇಕು ಸಿಐಟಿಯುನ ಅಖಿಲ ಭಾರತ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸರ್ಕಾರವು ಮುಟ್ಟಿನ ಆರೋಗ್ಯ ಮತ್ತು ಕೆಲಸದ ಸ್ಥಳದ ಹಕ್ಕುಗಳ ಕುರಿತು ಸಮಗ್ರ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು ಎಂದು ಬಹಳ ಕಾಲದಿಂದ ಆಗ್ರಹಿಸಿಕೊಂಡು ಬಂದಿದೆ ಎಂದಿರುವ ಸಿಐಟಿಯು, ಇದರ ಜೊತೆಗೆ, ಮಹಿಳೆಯರ (ದುಡಿಯುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ) ಮುಟ್ಟಿನ ರಜೆ ಹಕ್ಕು ಮತ್ತು ಮುಟ್ಟಿಗೆ ಸಂಬಂಧಪಟ್ಟ ಉತ್ಪನ್ನಗಳಿಗೆ ಉಚಿತ ಲಭ್ಯತೆಯನ್ನು ಖಚಿತಪಡಿಸುವ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದೆ. ರಿಯಾಯ್ತಿ
ಸ್ವತಃ ಸುಪ್ರೀಂ ಕೋರ್ಟ್ ಇತ್ತೀಚೆಗೆ ಮುಟ್ಟಿನ ಆರೋಗ್ಯ ಮತ್ತು ಸ್ವಚ್ಛತೆಯನ್ನು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ “ಜೀವನ ಮತ್ತು ಘನತೆಯ ಹಕ್ಕಿನ ಭಾಗ” ಎಂದು ಗುರುತಿಸಿದೆ. ಇದು ಮಹಿಳೆಯರ ಆರೋಗ್ಯ ಮತ್ತು ಘನತೆಯನ್ನು ರಕ್ಷಿಸುವ ಪರಿಸ್ಥಿತಿಗಳನ್ನು ಖಚಿತಪಡಿಸಲು ಪ್ರಭುತ್ವವು ಬಾಧ್ಯವಾಗಿದೆ ಎಂಬುದನ್ನು ದೃಢಪಡಿಸುತ್ತದೆ. ಹೀಗಿರುವಾಗ , ಮುಟ್ಟಿನ ರಜೆಯ ಪ್ರಶ್ನೆ ಮಹಿಳೆಯರ ಉದ್ಯೋಗಾವಕಾಶಗಳಿಗೆ ಹಾನಿಕಾರಿಯಾಗಬಹುದು ಮತ್ತು “ವ್ಯವಹಾರದಲ್ಲಿ ಸುಗಮತೆ”ಗೆ ಅಡ್ಡಿಯಾಗಬಹುದು ಎಂದು ಈಗ ಹೇಳಿರುವುದು ವಿಶೇಷವಾಗಿ ಆಶ್ಚರ್ಯಕರ ಸಂಗತಿ, ಮುಟ್ಟಿನ ಆರೋಗ್ಯವು ಮೂಲಭೂತ ಹಕ್ಕು ಆಗಿದ್ದರೆ, ಕೆಲಸದ ಸ್ಥಳದ ನೀತಿಗಳು ಈ ಸಂವಿಧಾನಿಕ ಬದ್ಧತೆಯನ್ನು ಬಿಂಬಿಸಲೇಬೇಕು ಎಂದು ಸಿಐಟಿಯು ಹೇಳಿದೆ.
ಮುಟ್ಟಿನ ರಜೆ ಒಂದು ರಿಯಾಯ್ತಿಯಲ್ಲ, ಅದು ವಾಸ್ತವಿಕ ಸಮಾನತೆ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳಿಗೆ ಒಂದು ಅಗತ್ಯವಾದ ಕ್ರಮವಾಗಿದೆ ಎಂದಿರುವ ಸಿಐಟಿಯು, ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳು ಅವರ ಉದ್ಯೋಗಕ್ಕೆ ಹೇಗೆ ಹಾನಿಕಾರಕವಾಗಬಹುದು ಎಂಬ ಗಂಡಾಳಿಕೆಯ ತರ್ಕಗಳು ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಬಲವಾದ ಕಾರ್ಮಿಕ ರಕ್ಷಣೆಗಳು, ಸಮಾನತೆಯ ಜಾರಿ ಮತ್ತು ಕೆಲಸದ ಸ್ಥಳದಲ್ಲಿ ಅವರ ಆರೋಗ್ಯ ಹಾಗೂ ಘನತೆಗೆ ಮಾನ್ಯತೆ ಎಂದು ಅದು ಸ್ಪಷ್ಟವಾಗಿ ಸಾರಿದೆ. ರಿಯಾಯ್ತಿ
ಸಿಐಟಿಯು ಮತ್ತು ಅಖಿಲ ಭಾರತ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ(ಸಿಐಟಿಯು) ದೇಶದಾದ್ಯಂತ ಸಮಗ್ರ ಕಾರ್ಮಿಕ ಹಕ್ಕುಗಳು ಮತ್ತು ಕೆಲಸದ ಸ್ಥಳಗಳಲ್ಲಿ ಲಿಂಗ-ನ್ಯಾಯದ ನೀತಿಗಳಿಗಾಗಿ ಅಣಿನೆರಿಕೆ ಮತ್ತ ಹೋರಾಟವನ್ನು ಮುಂದುವರಿಸುತ್ತವೆ ಎಂದು ದೃಢಪಡಿಸುತ್ತ, ಕಾರ್ಮಿಕರ ಸರ್ವಸಾಮಾನ್ಯ ಬೇಡಿಕೆಗಳೊಂದಿಗೆ ಮುಟ್ಟಿನ ರಜೆ ಕುರಿತ ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತ ಲಿಂಗ -ನಿರ್ದಿಷ್ಟ ಪ್ರಶ್ನೆಗಳ ಕುರಿತ ಹೋರಾಟವನ್ನು ತೀವ್ರಗೊಳಿಸಬೇಕು, ಈ ಮೂಲಕ ಆಳುವ ವರ್ಗದ ಪ್ರತಿಗಾಮಿ ನೀತಿಗಳ ವಿರುದ್ಧ ಐಕ್ಯ ವರ್ಗ ಪ್ರತಿರೋಧವನ್ನು ಒಡ್ಡಬೇಕು ಎಂದು ಎಲ್ಲಾ ದುಡಿಯುವ ಜನಗಳಿಗೆ, ನಿರ್ದಿಷ್ಟವಾಗಿ ತನ್ನ ತನ್ನ ಸಂಯೋಜಿತ ಸಂಘಟನೆಗಳಿಗೆ ಕರೆ ನೀಡಿದೆ.
ಇದನ್ನೂ ನೋಡಿ: ಸೈಬರ್ ಹರಾಶ್ಮೆಂಟ್ ಕೂಡಾ ಲೈಂಗಿಕ ದೌರ್ಜನ್ಯ – ಡಾ. ನಂದಿನಿ ಬಿ.ಎನ್ Janashakthi Media
