ಇನ್ನೂ 2-3 ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ – ಐಎಂಡಿ

ಬೆಂಗಳೂರು: ಬೇಸಿಗೆ ಸಮಯದಲ್ಲಿ ಸುರಿದ ಮಳೆ ಪರಿಣಾಮ ಮಾವಿನ ಬೆಳೆ, ಬಾಳೆ ಸೇರಿದಂತೆ ಹಲವು ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ದಿನ

ಚಳಿಗಾಲ ಅನ್ನೋ ಹಾಗಿಲ್ಲ, ಬೇಸಿಗೆ ಕಾಲ ಅನ್ನೋ ಹಂಗೂ ಇಲ್ಲ. ಈ ರೀತಿ ಮಳೆ ಸುರಿಯುತ್ತಿರುವ ರೀತಿ ನೋಡಿದರೆ ಯಾವ ಕೇಡುಗಾಲ ಬಂದಿದೆಯೋ ಅಂತಾ ಈಗ ಜನ ಬೇಸರ ಹೊರ ಹಾಕುತ್ತಿದ್ದಾರೆ. ಈ ರೀತಿ ಬೇಸಿಗೆ ಕಾಲ ಬಂದಿದ್ದರೂ ಮಳೆ ತನ್ನ ಆರ್ಭಟ ನಿಲ್ಲಿಸುತ್ತಿಲ್ಲ. ಮಳೆಯ ಆರ್ಭಟ ಕಡಿಮೆ ಆಗುವ ಬದಲು ಹೆಚ್ಚಾಗ್ತಾ ಇದ್ದು ಆತಂಕದ ವಾತಾವರಣ ನಿರ್ಮಾಣ ಆಗಿದೆ. ದಿನ

ಇದನ್ನೂ ಓದಿ: ವೇತನ ಹೆಚ್ಚಳ, ಸೇವಾ ಭದ್ರತೆ ಬೇಡಿಕೆ: ಕಾರ್ಯಕರ್ತೆಯರ ಪರ ಶಾಸಕರ ಒತ್ತಾಯ

ಈಗಾಗಲೇ ಮುಂಗಾರು ಮಳೆಯ ಸಮಯದಲ್ಲಿ ಭರ್ಜರಿ ಮಳೆ ಬಂದು, ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಡ್ಯಾಂ, ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಇಂತಹ ಸಮಯದಲ್ಲೇ ವಾತಾವರಣ ಬದಲಾವಣೆ & ಭೂಮಿ ಮೇಲೆ ಹವಾಮಾನ ಕೆಟ್ಟು ಏರುಪೇರು ಆಗಿರುವ ಕಾರಣಕ್ಕೆ ಬೇಸಿಗೆಯಲ್ಲೂ ದೊಡ್ಡ ಮಟ್ಟಿಗೆ ಮಳೆ ಸುರಿಯುತ್ತಿದೆ.

ಮಳೆ ಇನ್ನಷ್ಟು ಸುರಿಯುತ್ತಾ? ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದು ಏನು?

ಅಂದಹಾಗೆ ಕರ್ನಾಟಕ ರಾಜ್ಯದಲ್ಲಿ ಈ ವರ್ಷದ ಮೊದಲ ಪೂರ್ವ ಮುಂಗಾರು ಮಳೆ, ಅಂದ್ರೆ ತುಂಬಾ ಜನಪ್ರಿಯವಾಗಿ “ಮ್ಯಾಂಗೋ ಶವರ್ಸ್” ಎಂದು ಕರೆಯುವ ಮಳೆ ಭರ್ಜರಿಯಾಗಿ ಬೀಳುತ್ತಿದೆ. ಕನ್ನಡ ನಾಡಿನ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ತುಮಕೂರು, ಧಾರವಾಡ, ದಾವಣಗೆರೆ ಹಾಗೂ ಇನ್ನೂ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬಿದ್ದಿದೆ.

ಮಳೆಯಿಂದ ಈಗ ಬಿಸಿಲು ಹೆಚ್ಚುತ್ತಿರುವ ಸಮಯದಲ್ಲೇ ಜನರಿಗೆ ಸ್ವಲ್ಪ ತಂಪು ತಂಪಿನ ವಾತಾವರಣ ಸಿಕ್ಕಿದ್ದು, ಖುಷಿಯಾಗಿದೆ ಕನ್ನಡಿಗರಿಗೆ. ಈ ಸಮಯದಲ್ಲೇ ಹವಾಮಾನ ಇಲಾಖೆ ಮತ್ತಷ್ಟು ಖುಷಿ ಸುದ್ದಿ ಕೊಟ್ಟಿದ್ದು, ಮಳೆ ಇನ್ನೂ 2-3 ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದಿದೆ. ಮಾರ್ಚ್ ತಿಂಗಳಲ್ಲಿ ಸಾಮಾನ್ಯವಾಗಿ ಬರುವ ಮಳೆ ಇದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ನೋಡಿ: ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆಗೆ ಖಂಡನೆ: ಸೌದೆ ಒಲೆ ಹಚ್ಚಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *