ಪದವಿ ವಿದ್ಯಾರ್ಥಿಗಳ ಪರೀಕ್ಷೆ ಶುಲ್ಕ ಹೆಚ್ಚಳ ಖಂಡಿಸಿ ಎಸ್ಎಫ್ಐ ಪ್ರತಿಭಟನೆ

ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ, ಏರಿಸಿ ಶುಲ್ಕ ಇಳಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಎದುರು ಪ್ರತಿಭಟನೆ ನಡೆಸಿ ಕಾಲೇಜಿನ ಪ್ರಾಂಶುಪಾಲರ ಮೂಲಕ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪದವಿ

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯವು 2025-26ರ ಸಾಲಿನಲ್ಲಿ ನಡೆಯುವ ಬಿಎ, ಬಿಕಾಂ, ಹಾಗೂ ಬಿಎಸ್ಸಿ ಪದವಿಯ ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳ ಶುಲ್ಕವನ್ನು ವಿಶ್ವವಿದ್ಯಾಲಯವು ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ, ಘಟಿಕೋತ್ಸವ ಅರ್ಜಿ ಸೇರಿದಂತೆ ವಿವಿಧ ಹೆಸರುಗಳಲ್ಲಿ 1095 ರೂಪಾಯಿಗಳು ಹಾಗೂ ವೃತಿಪರ ತರಬೇತಿ (Internship Fees) ಮೌಖಿಕ ಪರೀಕ್ಷೆ (vivo voice)ಗೆ 550 ರೂಪಾಯಿಗಳನ್ನು ತೆಗೆದುಕೊಳ್ಳುವುದನ್ನು ಎಸ್ಎಫ್ಐ ಹಾವೇರಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಅಲ್ಲದೆ ಬಿಎ, ಬಿಕಾಂ, ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಅರ್ಜಿ ಶುಲ್ಕವನ್ನು, ನಕಲು ಸರ್ಟಿಫಿಕೇಟ್, ಶ್ರೇಣಿ ಪ್ರಮಾಣ ಪತ್ರ (Rank certificate) ಸೇರಿದಂತೆ ಇತರೆ ಅನಾವಶ್ಯಕ ಶುಲ್ಕಗಳನ್ನು ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕು.‌ ಸರ್ಕಾರವು ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರಕಾರದ ಆದಾಯಮಿತಿ ಒಳಗೆ ಬರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿದ ವಿದ್ಯಾರ್ಥಿಗಳಿಗೆ ವಿನಾಯಿತಿ ಘೋಷಣೆ ಮಾಡಿರುತ್ತದೆ ಆದರೆ ಈ ವಿಶ್ವವಿದ್ಯಾಲಯವು ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಎಸ್ಸಿ ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿನಿಯರಿಂದ ಸಂಪೂರ್ಣ ಶುಲ್ಕವನ್ನು ತೆಗೆದುಕೊಳ್ಳುವ ಮೂಲಕ ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.

ಇದನ್ನೂ ಓದಿ: ನಗರದ ಕಸದ ಸಮಸ್ಯೆ ಗಂಭೀರ: ಮುಖ್ಯರಸ್ತೆಗಳ ಸ್ವಚ್ಛತೆಗೆ ವಿಶೇಷ ಅಭಿಯಾನಕ್ಕೆ ಆದೇಶ

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ಶುಲ್ಕ, ಅಂಕಪಟ್ಟಿ ಶುಲ್ಕಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ ಆದರೆ ಹಾವೇರಿ ವಿಶ್ವವಿದ್ಯಾಲಯದಲ್ಲಿ ಮಾತ್ರ ಹೆಚ್ಚುವರಿ ಶುಲ್ಕ ತೆಗೆದುಕೊಳ್ಳುವ ಮೂಲಕ ವಿಶ್ವವಿದ್ಯಾಲಯ ಕೇವಲ ಹಣ ಮಾಡವು ಉದ್ದೇಶವನ್ನು ಹೊಂದಿದಂತೆ ಕಾಣುತ್ತದೆ ಆದಕಾರಣ ಏರಿಸಿದ ಶುಲ್ಕ ಇಳಿಯಲೇ ಬೇಕು ವಿದ್ಯಾರ್ಥಿ ವಿರೋಧಿ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಮರುಪಾವತಿಸಿ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.

ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಏರಿಕೆ ಜೊತೆಗೆ ಪರೀಕ್ಷಾ ಫೀ ತುಂಬುವ ಸರ್ವರ್ ಬ್ಯೂಸಿ, ಅನೇಕ ವಿದ್ಯಾರ್ಥಿಗಳಿಗೆ ತಾಂತ್ರಿಕ ಸಮಸ್ಯೆ ಕಾಡುತ್ತಿದ್ದು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಫೀ ತುಂಬಿದ ವಿದ್ಯಾರ್ಥಿಗಳ ಹೆಸರು ತೋರಿಸುತ್ತಿಲ್ಲ, ಕೋರ್ಸ್ ರಿಜಿಸ್ಟರ್ ಆಗುತ್ತಿಲ್ಲ ಒಂದೆಡೆ ಪರೀಕ್ಷೆಗೆ ಓದಿಕೊಳ್ಳುವ ಸಮಯ ಹತ್ತಿರದಲ್ಲಿದೆ. ಇಷ್ಟೇಲಾ ಸಮಸ್ಯೆಗಳನ್ನು ಹರಿತು ವಿವಿ ಉಪ ಕುಲಪತಿಗಳು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ವಿದ್ಯಾರ್ಥಿ ವೀರೇಶ ಮಳಿಮಠ ಮಾತನಾಡಿ, ವಿಶ್ವವಿದ್ಯಾಲಯವು ದಿಢೀರ್ ಅಂತಾ ಪರೀಕ್ಷಾ ಶುಲ್ಕ ಏರಕೆ ಮಾಡಿದ್ದು, ಬಡ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಸರಕಾರಿ ಕಾಲೇಜ್‌, ವಿವಿಗಳಲ್ಲಿ ಇಷ್ಟೊಂದು ದುಬಾರಿ ಶುಲ್ಕ ಕೇಳಿದರೆ ಹೇಗೆ ವಿದ್ಯಾಭ್ಯಾಸ ಮಾಡಬೇಕು. ಸರ್ಕಾರ ಅಥವಾ ಸಂಬಂಧಿಸಿದ ಅಧಿಕಾರಿಗಳು, ಉಪಕುಲಪತಿಗಳು ಶುಲ್ಕ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಂಗಸ್ವಾಮಿ ಬಂಡಿವಡ್ಡರ, ನಾಗರಾಜ ಚೌಡಿ, ಮಂಜು ಅಸುಂಡಿ, ನಾಗರಾಜ ಇಪ್ಪಿಕೊಪ್ಪ, ಮೋಹನ ನರ್ತಿ, ರಾಜು ಬಂಕಾಪುರ, ಸಚಿನ್ ಎಸ್, ಹರೀಶ ಮರಿಯಮ್ಮನವರ, ಅನಂದ ಮ್ಯಾಗೇರಿ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಬೀಜ ಇಲ್ಲ, ಗೊಬ್ಬರ ಇಲ್ಲ, ಬಡವರಿಗೆ ಸೂರು ಇಲ್ಲ | ಸರ್ಕಾರದ ವಿರುದ್ಧ ಸಿಡಿದೆದ್ದ ಅನ್ನದಾತರು Janashakthi Media

Donate Janashakthi Media

Leave a Reply

Your email address will not be published. Required fields are marked *