ಕಮ್ಯುನಿಸ್ಟ್ ಮತ್ತು ದಲಿತ ಚಳುವಳಿಯ ಬೆಸುಗೆ RB ಮೋರೆ

ದಲಿತ ಚಳುವಳಿಯ ಜೊತೆಗೆ ಕಮ್ಯುನಿಸ್ಟ್ ಚಳುವಳಿಯನ್ನು ಬೆಸುಗೆ ಹಾಕಿದ ದೇಶದ ಮೊದಲ ದಲಿತ ಕಮ್ಯುನಿಸ್ಟ್ RB ಮೋರೆಯವರ ಜೀವನ ಚರಿತ್ರೆ ನಿಜಕ್ಕೂ ರೋಮಾಂಚನಕಾರಿ ಅನುಭವ ಮತ್ತು

– ಸುನಿಲ್ ಕುಮಾರ್ ಬಜಾಲ್

ಎಳೆಯ ಪ್ರಾಯದಲ್ಲೇ ಜಾತಿ ತಾರತಮ್ಯ, ಅಸ್ಪ್ರಶ್ಯತೆಯ ನೋವನ್ನುಂಡು ದಲಿತ ಸಮುದಾಯಕ್ಕಾಗುವ ಅವಮಾನ ಬೇಗುದಿಗಳನ್ನು ಸ್ವತಃ ಅನುಭವಿಸಿದ ಕಾಂ. ಆರ್ ಬಿ ಮೋರೆ ಈ ದೇಶ ಕಂಡಂತಹ ಮೊದಲ ದಲಿತ ಕಮ್ಯುನಿಸ್ಟ್. ಕಡು ಬಡತನ, ತೀವ್ರ ಸಂಕಷ್ಟಗಳನ್ನು ಎದುರಿಸಿದ ಮೋರೆಯವರು ಬಾಲ್ಯದಲ್ಲಿ ಶಿಕ್ಷಣ ಪಡೆಯಲಿಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದರು.ದಲಿತರ ನೋವಿಗೆ ಧ್ವನಿಯಾದ ಮೋರೆಯವರು ದಲಿತ ಚಳುವಳಿಗಾಗಿ ತನ್ನನ್ನು ತಾನು ಸಮರ್ಪಿಸುವ ಮೂಲಕ ಡಾ. ಬಿ ಆರ್ ಅಂಬೇಡ್ಕರ್ ರವರಿಗೆ ಅತ್ಯಂತ ಸನಿಹದ ಸಹವರ್ತಿಯಾದರು. ಮತ್ತು

ಮಹಾಡ್ ಚಳುವಳಿಗೆ ಅಂಬೇಡ್ಕರ್ ರವರನ್ನು ಕರೆತರುವ ಮೂಲಕ ಅಂಬೇಡ್ಕರ್ ರವರು ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡುವಲ್ಲಿ ಮೋರೆಯವರ ಪಾತ್ರ ಅಮೋಘ. ಇದನ್ನು ಸ್ವತಃ ಅಂಬೇಡ್ಕರ್ ರವರೇ ಸಾವಿರಾರು ಜನತೆ ಸೇರಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮೋರೆಯವರ ಬಗ್ಗೆ ಗುಣಗಾನ ಮಾಡುತ್ತಾರೆ. ಇಡೀ ಸಭೆಯೇ ಆಶ್ಚರ್ಯಚಕಿತಗೊಳ್ಳುತ್ತದೆ. ಕಾರ್ಯಕ್ರಮವನ್ನು ದೂರದಿಂದ ವೀಕ್ಷಿಸುತ್ತಿದ್ದ ಮೋರೆಯವರನ್ನು ಅದೆಷ್ಟೋ ದೂರದಿಂದಲೇ ನೋಡಿ ಗುರುತಿಸಿದ ಅಂಬೇಡ್ಕರ್ ರವರು ವೇದಿಕೆಗೆ ಬರುವಂತೆ ಬಲವಾಗಿ ಒತ್ತಾಯ ಮಾಡಿದಾಗ ವಿಧಿಯಿಲ್ಲದೆ ಮೋರೆಯವರು ವೇದಿಕೆಯತ್ತ ಧಾವಿಸಿದರು. ಇಡೀ ಸಭೆಯು ಭಾರೀ ಕರತಾಡನದ ಮೂಲಕ ಸ್ವಾಗತಿಸಿತು. ಮತ್ತು

ಅಂಬೇಡ್ಕರ್ ಜೊತೆಗೆ ಗುರುತಿಸಿ ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಮೋರೆಯವರು ಕಮ್ಯುನಿಸ್ಟ್ ಚಳುವಳಿಯ ಆಕರ್ಷಣೆಗೊಳಗಾಗುತ್ತಾರೆ. ಕಮ್ಯುನಿಸ್ಟ್ ಪಕ್ಷವನ್ನು ಸೇರಬೇಕೆಂಬ ತನ್ನ ಅದಮ್ಯ ಬಯಕೆಯನ್ನು ಅಂಬೇಡ್ಕರ್ ರವರಲ್ಲಿ ಹೇಳಿದಾಗ ಅತ್ಯಂತ ಸಂತೋಷದಿಂದ ಅಂಬೇಡ್ಕರ್ ರವರು ಒಪ್ಪಿಕೊಳ್ಳುತ್ತಾರೆ.ತನ್ನ ಕೊನೆಯ ಉಸಿರಿನವರೆಗೂ ಕಮ್ಯುನಿಸ್ಟರಾಗಿದ್ದ ಮೋರೆಯವರು ಅಂಬೇಡ್ಕರ್ ರವರ ಸಖ್ಯತೆಯನ್ನಾಗಲೀ, ದಲಿತ ಚಳುವಳಿಯೊಂದಿಗಿನ ತನ್ನ ಒಡನಾಟವನ್ನಾಗಲೀ ಕೊನೆಗೊಳಿಸಲಿಲ್ಲ. ಮತ್ತು

ಇದನ್ನೂ ಓದಿ: ವಿಕಲಚೇತನ ಬೀದಿಬದಿ ವ್ಯಾಪಾರಿಗಳ ಮೇಲೆ ನಗರಪಾಲಿಕೆ ಧಾಳಿ, ಅಧಿಕಾರಿಗಳ ವಿರುದ್ಧ ಆಕ್ರೋಶ

ದಲಿತ ಚಳುವಳಿಯೊಂದಿಗೆ ಕಮ್ಯುನಿಸ್ಟ್ ಚಳುವಳಿಯನ್ನು ಕೂಡ ಒಟ್ಟೊಟ್ಟಿಗೆ ಸಾಗಿಸಿದ ಕೀರ್ತಿ ಮೋರೆಯವರದು.ಆ ಕಾಲದಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಮೋರೆಯವರ ಪ್ರವೇಶ ಆನೆಬಲ ಒದಗಿಸುತ್ತದೆ.ಸಾವಿರಾರು ದಲಿತ ಬಂಧುಗಳು ಕಮ್ಯುನಿಸ್ಟ್ ಪಕ್ಷವನ್ನು ಸೇರುತ್ತಿರುವುದು ದಲಿತ ಚಳುವಳಿಯಲ್ಲಿ ಗುರುತಿಸಿಕೊಂಡ ಕೆಲವು ಸ್ಥಾಪಿತ ಹಿತಾಸಕ್ತಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಅನೇಕ ಕಡೆಗಳಲ್ಲಿ ಕಮ್ಯುನಿಸ್ಟ್ ಪಕ್ಷ ಸೇರಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆಗಳೂ ಕೂಡ ನಡೆಯುತ್ತದೆ.

ವರ್ಗ ಹೋರಾಟವನ್ನೇ ಪ್ರಧಾನ ಅಸ್ತ್ರವನ್ನಾಗಿಸಿದ ಕಮ್ಯುನಿಸ್ಟ್ ಪಕ್ಷಕ್ಕೆ ಜಾತಿ ತಾರತಮ್ಯ, ಅಸ್ಪ್ರಶ್ಯತೆಯ ಪ್ರಶ್ನೆಗಳನ್ನೂ ಕೂಡ ಮುನ್ನಲೆಗೆ ತರಲು ಸಾಧ್ಯವಾಗಬೇಕೆಂದು ಕಾಂ.ಮೋರೆಯವರು ಹಲವಾರು ಬಾರಿ ಪಕ್ಷಕ್ಕೆ ಮನವರಿಕೆ ಮಾಡಿಕೊಡುತ್ತಾರೆ.ಅದರ ಫಲವಾಗಿ ಕಮ್ಯುನಿಸ್ಟ್ ಪಕ್ಷವು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ.ರೈತ ಕಾರ್ಮಿಕರ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದ ಮೋರೆಯವರು ಪ್ರಾರಂಭದಲ್ಲಿ ವಿವಿಧ ವಿಭಾಗದ ಕಾರ್ಮಿಕರ ಸಂಘಗಳಲ್ಲಿ ಕೆಲಸ ನಿರ್ವಹಿಸುತ್ತಾ ಕಾರ್ಮಿಕ ನಾಯಕರಾಗುತ್ತಾರೆ.ದುಡಿಯುವ ವರ್ಗದ ಸಿದ್ದಾಂತವಾದ ಮಾರ್ಕ್ಸ್‌ವಾದವನ್ನು ಸರಿಯಾಗಿ ಅರ್ಥೈಸಿ ಅದೇ ದಾರಿಯಲ್ಲಿ ಮುನ್ನಡೆದರು.1945ರಲ್ಲಿ ಪ್ಯಾರಿಸಿನಲ್ಲಿ ಜರುಗಿದ ಅಂತರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸುವಂತಹ ಸುವರ್ಣಾವಕಾಶ ಮೋರೆಯವರಿಗೆ ದೊರೆಯಿತು. ಇದಕ್ಕೆ ಕಾರಣ ಡಾ.ಬಿ ಆರ್ ಅಂಬೇಡ್ಕರ್ ರವರು. ಮತ್ತು

ಭಾರತದಿಂದ ವಿವಿಧ ಕಾರ್ಮಿಕ ಸಂಘಟನೆಗಳಿಂದ ಭಾಗವಹಿಸುವವರ ಪಟ್ಟಿ ಅಂಬೇಡ್ಕರ್ ರವರ ಕೈ ಸೇರಿತು. ಅದರಲ್ಲಿ AITUC ಯಿಂದ ಆಯ್ಕೆಯಾದ ಇತರ 4 – 5 ಮಂದಿಯ ಹೆಸರಿತ್ತೇ ಹೊರತು ಮೋರೆಯವರ ಹೆಸರಿರಲಿಲ್ಲ. ಅಂಬೇಡ್ಕರ್ ರವರು ಕೂಡಲೇ ತನ್ನ ಅಧಿಕಾರವನ್ನು ಬಳಸಿ ಮೋರೆಯವರ ಹೆಸರನ್ನು AITUC ಪಟ್ಟಿಯಲ್ಲಿ ಸೇರಿಸಿದ್ದು ಎಲ್ಲರನ್ನೂ ಆಶ್ಚರ್ಯಗೊಳಿಸಿತು.ಅದಕ್ಕೆ ಪೂರಕವೆಂಬಂತೆ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಮೋರೆಯವರ ಭಾಷಣ ಅತ್ಯದ್ಭುತವಾಗಿತ್ತು. ಮತ್ತು

ಕಾರ್ಮಿಕರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದ ಮೋರೆಯವರು ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ ಜಾತಿ ವ್ಯವಸ್ಥೆ ಅಸ್ಪ್ರಶ್ಯತೆ ಎಷ್ಟೊಂದು ಆಳವಾಗಿ ಬೇರೂರಿದೆ,ಅದರಿಂದ ಕೆಳವರ್ಗದ ಶೋಷಿತ ಸಮುದಾಯದ ಕಾರ್ಮಿಕರ ಬವಣೆಗಳನ್ನು ವಿವರಿಸಿದಾಗ ಇಡೀ ಸಭೆಯು ಸ್ತಬ್ದಗೊಳ್ಳುತ್ತದೆ. ಅಲ್ಲಿಯ ತನಕ ಇಂತಹ ವಿಚಾರಗಳನ್ನು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಯಾರೂ ಮಾತಾಡಿರಲಿಲ್ಲ.ಬಳಿಕ ಮೋರೆಯವರ ಈ ಭಾಷಣ ಜಾಗತಿಕ ಮಟ್ಟದಲ್ಲಿ ಹಾಗೂ ಭಾರತದ ಒಳಗೂ ಭಾರೀ ಸದ್ದು ಮಾಡುತ್ತದೆ.

ಮೊದಲೇ ಕಷ್ಟಜೀವಿಯಾಗಿ ಹುಟ್ಟಿ ಬೆಳೆದ ಮೋರೆಯವರು ದಲಿತ ಸಮುದಾಯಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸಿರುವುದು ಮಾತ್ರವಲ್ಲದೆ ದೇಶದ ಮೊದಲ ದಲಿತ ಕಮ್ಯುನಿಸ್ಟರಾಗಿ ದುಡಿಯುವ ವರ್ಗಕ್ಕಾಗಿ ಅರ್ಪಣಾ ಮನೋಭಾವದಿಂದ ತನ್ನ ಕೊನೆಯ ಉಸಿರಿರುವವರೆಗೂ ದುಡಿದಿರುವುದು ಇತಿಹಾಸ. ಮಾತ್ರವಲ್ಲ ಜೈಲುವಾಸ, ಭೂಗತ ಜೀವನದಂತಹ ಕಷ್ಟಕರ ಕಾಲದಲ್ಲೂ ತಾನು ನಂಬಿದ್ದ ಕಮ್ಯುನಿಸ್ಟ್ ಸಿದ್ದಾಂತಕ್ಕೆ ಬದ್ದರಾಗಿದ್ದರೇ ಹೊರತು ವಿಚಲಿತರಾಗಲಿಲ್ಲ.ತೀವ್ರ ಆರ್ಥಿಕ ಸಮಸ್ಯೆ, ಬಡತನದಿಂದಾಗಿ ತನ್ನ ಸಂಸಾರವೇ ಬೀದಿಪಾಲಾಗುವಂತಹ ಪರಿಸ್ಥಿತಿ ಬಂದರೂ, ತನ್ನೆರಡು ಮಕ್ಕಳನ್ನು ಕಳೆದುಕೊಂಡರೂ ಅವೆಲ್ಲವನ್ನೂ ಅತ್ಯಂತ ಧೈರ್ಯದಿಂದ ಎದುರಿಸಿದ್ದರು.

ಒಟ್ಟಿನಲ್ಲಿ ಕಾಮ್ರೇಡ್ ಮೋರೆಯವರ ಬದುಕು – ಜೀವನದ ಕಥೆಯನ್ನು ಅಲ್ಪಮಟ್ಟಿಗೆ ಸ್ವತಃ ಅವರೇ ಬರೆದಿದ್ದರೂ,ಉಳಿದ ವಿಚಾರಗಳನ್ನು ಅವರ‌ ಮಗನಾದ ಸತ್ಯೇಂದ್ರ ಮೋರೆಯವರು ದಾಖಲಿಸುವ ಮೂಲಕ ನಿಜವಾದ ಅರ್ಥವನ್ನು ಕಲ್ಪಿಸಿದ್ದಾರೆ.ದಲಿತ ಚಳುವಳಿ,ಕಮ್ಯುನಿಸ್ಟ್ ಚಳುವಳಿ ಹಾಗೂ ಜನಪರವಾಗಿ ಚಿಂತಿಸುವ ಪ್ರತಿಯೊಂದು ಮನಸುಗಳು ಮೋರೆಯವರ ಜೀವನಚರಿತ್ರೆ ಪುಸ್ತಕವನ್ನು ಓದಲೇಬೇಕಾಗಿದೆ.

ಎಂತಹ ಸಂಕಷ್ಟದ ಸಂದರ್ಭದಲ್ಲೂ ತಾನು ನಂಬಿದ್ದ ಸಿದ್ದಾಂತವನ್ನು ಹಾಗೂ ಶೋಷಿತ ಸಮುದಾಯವನ್ನು ಅತ್ಯಂತ ದೃಢವಾಗಿ ನಂಬುತ್ತಾ ಕೊನೆಯ ಉಸಿರಿನವರೆಗೂ ಸಾಮಾನ್ಯರಲ್ಲಿ ಅತೀ ಸಾಮಾನ್ಯರಾಗಿ ಬಾಳಿ ಬದುಕಿದ ಕಾಂ.ಮೋರೆಯವರು ಇಂದಿನ ಕಾಲಘಟ್ಟದಲ್ಲಿ ಬದಲಾವಣೆ ಬಯಸುವ ಮನಸುಗಳಿಗೆ ತೀರಾ ಹತ್ತಿರವಾಗುತ್ತಾರೆ. ಮತ್ತು

ಇದನ್ನೂ ನೋಡಿ: ಹೋರ್ಮುಜ್ ಜಲಸಂಧಿ | 107 ದಿನಗಳಿಂದ ಸಮುದ್ರದಲ್ಲೇ ಸಿಲುಕಿರುವ 562 ಭಾರತೀಯ ನಾವಿಕರು Janashakthi Media

Donate Janashakthi Media

Leave a Reply

Your email address will not be published. Required fields are marked *