ಹಾವೇರಿ: ಹಾವೇರಿ ವಿಶ್ವವಿದ್ಯಾಲಯ ಸರ್ವಾಂಗೀಣ ಅಭಿವೃದ್ಧಿಗಾಗಿ ಜೂನ್-17 ರಂದು ಅನೇಕ ಅಡೆತಡೆಗಳ ಮದ್ಯೆಯು ಎಸ್ಎಫ್ಐ ಪ್ರಥಮ ಸಮ್ಮೇಳನ ನಡೆಯಿತು.
ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಉಳಿವಿಗಾಗಿ ಹಲವು ನಿರ್ಣಯಗಳನ್ನು ಕೈಗೊಂಡು ಸಮರ್ಪಕ ಜಾರಿಗಾಗಿ ಹಾವೇರಿ ವಿಶ್ವವಿದ್ಯಾಲಯದಲ್ಲಿ 21 ಜನರ ಎಸ್ಎಫ್ಐ ಪ್ರಥಮ ಘಟಕವನ್ನು ರಚನೆ ಮಾಡಲಾಯಿತು.
ಇದನ್ನೂ ಓದಿ: ಭಕ್ತಿಯಿಂದ ಪ್ರಶ್ನೆಗಳವರೆಗೆ: ಒಂದು ನಾಗರಿಕನ ಅಸಮಾಧಾನ
ಹಾವಿವಿ ಎಸ್ಎಫ್ಐ ಘಟಕ ನೂತನ ಅಧ್ಯಕ್ಷರಾಗಿ ಪೂಜಾ ಬಾರ್ಕಿ, ಕಾರ್ಯದರ್ಶಿ ಶಂಭುಲಿಂಗ ಸವದತ್ತಿ, ಉಪಾಧ್ಯಕ್ಷರು ಪರಶುರಾಮ ಎಸ್, ಬಸವರಾಜ ಎಸ್, ಕಾಂತೇಶ್ ಪಿ ಹಳ್ಳೆರ್, ನವೀನ ಎನ್ ಬಿ, ಸಹ ಕಾರ್ಯದರ್ಶಿ ಪ್ರವೀಣ್ ಮಟ್ಟೇರ, ಲೋಕೇಶ್ ಕೆಂಚಣ್ಣನವರ, ಶರಣ ಜೆ ಎಮ್, ಪೂರ್ಣಿಮಾ ಬಾರ್ಕಿ, ಚೈತ್ರಾ ಪಿಸೆ.
ಸದಸ್ಯರಾಗಿ ಅರುಣ ಜೋಗೇರ, ನಿಂಗರಾಜ ನೆರ್ಕಿ, ಶಶಾಂಕ ಬೋಗಾವಿ, ಶಿವರಾಜ ಲಮಾಣಿ, ಸಂತೋಷ ಪೂಜಾರ, ದಿವ್ಯ ಕುಲಕರ್ಣಿ, ಅಕ್ಷತಾ ಕಬ್ಬಕ್ಕಿ
ಜಗದೀಶ್ ಲಮಾಣಿ, ಈಶ್ವರಿ, ಓಲೇಕಾರ, ನಂದಿನಿ ಕೆ ಬಿ ಸರ್ವಾನುಮತದಿಂದ ಆಯ್ಕೆಯಾದರು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.
ಇದನ್ನೂ ನೋಡಿ: ಭೂಮಿ ಹೋಯ್ತು, ಉದ್ಯೋಗ ಸಿಗಲಿಲ್ಲ! 13 ವರ್ಷ ಕಳೆದರೂ ಸಿಗದ ನ್ಯಾಯ! Janashakthi Media
