ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಹತ್ಯೆ

ಧಾರವಾಡ: ಧಾರವಾಡದ ಹಾಶ್ಮಿ ನಗರದ ಮನೆಯಲ್ಲಿ ನಗರದ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ರನ್ನು ಏಪ್ರಿಲ್‌ 10ರ ತಡರಾತ್ರಿ ಬರ್ಬರವಾಗಿ ಹತ್ಯೆ ಮಾಡಿಲಾಗಿದೆ ಎಂದು ತಿಳಿದುಬಂದಿದೆ.

ಅವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದ್ದು, ನಾಲ್ಕು ಜನ ದುಷ್ಕರ್ಮಿಗಳ ತಂಡ ಹತ್ಯೆಗೈದ ಪರಾರಿಯಾಗಿದ್ದು, ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಆಗಮಿಸಿ ಆರೋಪಿಗಳ‌ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಯೂಥ್ 

ರಾಜಕೀಯ ಪ್ರೇರಿತವಾದ ಹತ್ಯೆ ಎಂದು ಫೈರೋಜ್ ಮನೆಯವರು ಆರೋಪಿಸಿದ್ದು, ಮೃತ ಫೈರೋಜ್ ರಾಜಕೀಯವಾಗಿ ಸಾಕಷ್ಟು ಜನಪ್ರಿಯತೆ ಹೊಂದಿದ್ದರು, ಇದೇ ತಿಂಗಳು 24 ರಂದು ಮದುವೆ ಸಹ ನಿಶ್ಚಯವಾಗಿತ್ತು ಎಂಬ ಮಾಹಿತಿ ಕೂಡಾ ದೊರೆತಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ; ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್

ಘಟನೆ ನಡೆದ ಸ್ಥಳದ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎನ್ನುವ ಮಾಹಿತಿ ದೊರೆತಿದ್ದು, ಇದನ್ನು ಆಧರಿಸಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಸದ್ಯ ಸ್ಥಳಕ್ಕೆ ಹು-ಧಾ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಹು-ಧಾ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್​ ಮಾತನಾಡಿದ್ದು, ‘ಫೈರೋಜ್ ಪಠಾಣ್ ಅವರು ಮನೆಯಲ್ಲಿದ್ದ ಸಂದರ್ಭದಲ್ಲಿ ಮೂರರಿಂದ ನಾಲ್ಕು ಜನರ ತಂಡ ಹಲ್ಲೆ ಮಾಡಿದ್ದಾರೆ. ಫೈರೋಜ್ ತೀವ್ರ ರಕ್ತಸ್ರಾವ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕೊಲೆಯನ್ನು ನೋಡಿರುವ ಪ್ರತ್ಯಕ್ಷದರ್ಶಿಗಳು ಹಾಗೂ ಅವರ ಕುಟುಂಬ ಸದಸ್ಯರ ಮಾಹಿತಿ ಪಡೆಯುತ್ತಿದ್ದು, ಆರೋಪಿಗಳು ಯಾರು ಎಂಬ ಸುಳಿವು ಸಿಕ್ಕಿರುವ ಹಿನ್ನೆಲೆ ನಮ್ಮ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧನ ಮಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ನೋಡಿ: ಇರಾನ್ ಪ್ರತಿರೋಧ – ಯು.ಎಸ್ (ಅಮೆರಿಕ) ಪತನದ ಆರಂಭವೆ? ಡಾ. ಬಿ.ಆರ್. ಮಂಜುನಾಥ್ , ಗುರುರಾಜ ದೇಸಾಯಿ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *