ಪುರುಷರು ಕ್ರೌರ್ಯ ಬಿಟ್ಟು ಮಾನವೀಯರಾದಾಗ ಮಹಿಳಾ ಸಮಾನತೆಗೆ ಅರ್ಥ – ಜಿ. ಡಿ. ಮನೋಜೆ

ಕಾರವಾರ: “ದಿಟ್ಟ ಹೋರಾಟದ ಬೆನ್ನೆಲುಬು ದುಡಿಯುವ ಮಹಿಳೆಯರು. ಹುಟ್ಟಿಸುವ ಮತ್ತು ಲಯ ಮಾಡುವೆರಡೂ ಶಕ್ತಿ ಮಹಿಳೆಯಲ್ಲಿದ್ದರೂ ಅವಳು ನಾಶಕ್ಕೆ ಎಂದಿಗೂ ಕೈಹಾಕುವದಿಲ್ಲ. ವಿಶ್ವವನ್ನೇ ರಕ್ಷಿಸುವವಳು. ಇಡೀ ಸಮಾಜವನ್ನೇ ನಿರ್ಮಿಸುವ ಸಲುವಾಗಿ ತನ್ನ ಜೀವ ಪಣಕ್ಕಿಟ್ಟವಳು. ಆದರೆ ಇಂದು ತನ್ನ ಅಸ್ತಿತ್ವ ಕಾಯ್ದುಕೊಳ್ಳಲು ಹೋರಾಟ ನಡೆಸುವ ಪರಿಸ್ಥಿತಿ ಇದೆ. ಇದಕ್ಕೇ ಹಲವು ಕಾರಣ. ಪುರುಷರು ಕ್ರೌರ್ಯ ಬಿಟ್ಟು ಮಾನವೀಯರಾಗದ ವಿನಃ ಮಹಿಳೆಯರು ಸಮಾನತೆಯತ್ತ ಸಾಗಲು ಸಾಧ್ಯವಿಲ್ಲ. ಪುರುಷರು

ಡಾ. ಅಂಬೇಡ್ಕರ್ ಅವರು ಹೇಳಿದಂತೆ ವಾಸ್ತವಿಕ ಜೀವನದಲ್ಲಿ ಮಹಿಳೆ ಸಶಕ್ತರಾಗಿದ್ದರೆ ಮಾತ್ರ ಸಮಾಜ ಪ್ರಗತಿ ಸಾಧ್ಯ ಎಂಬುದು ಸತ್ಯ ವೇದಗಳ ಕಾಲದಿಂದ ಹಿಡಿದು ಇತ್ತೀಚಿನ ಶತಮಾನಗಳ ತನಕವೂ ಹೆಣ್ಣು ಮಕ್ಕಳಿಗೆ ಒಂದಿಷ್ಟೂ ಹಕ್ಕುಗಳಿರಲಿಲ್ಲ. ಫುಲೆ ದಂಪತಿಗಳನ್ನು ಒಳಗೊಂಡು ಅನೇಕರು ನಡೆಸಿದ ಸತತ ಹೋರಾಟ, ತ್ಯಾಗ ಮತ್ತು ಪರಿಶ್ರಮದಿಂದಾಗಿ ಶಿಕ್ಷಣ ಪಡೆಯುವಂತಾಗಿ ಇಂದು ತುಂಬಾ ಬದಲಾವಣೆಗಳನ್ನು ನೋಡುತ್ತಿದ್ದೇವೆ. ಪುರುಷರು

ಹೆರಿಗೆ ರಜೆಯನ್ನೂ ಒಳಗೊಂಡು ಮಹಿಳಾಪರವಾದ ಯಾವುದೇ ಕಾಯ್ದೆ ಹಿಂದೆ ಅಂಬೇಡ್ಕರ್ ಮುಂದಾಲೋಚನೆ ಹಾಗೂ ಹೋರಾಟಗಾರರ ಚಿಂತನೆ ಇದೆ. ಆದರೆ ಸಂವಿಧಾನವನ್ನು ಒಪ್ಪದ ಕೋಮುವಾದಿಗಳು ಪ್ರಭುತ್ವಕ್ಕೆ ಬಂದು ಹೋರಾಟದಿಂದ ಪಡೆದ ಹಕ್ಕುಗಳನ್ನು ಕಸಿದು ಸಮಾಜವನ್ನು ಹದಗೆಡಿಸುತ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕಿದೆ” ಎಂದು ಎಸ್.ಸಿ.ಎಸ್.ಟಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಜಿ.ಡಿ. ಮನೋಜೆಯವರು ಹೇಳಿದರು. ಪುರುಷರು

ಇದನ್ನೂ ಓದಿ: ಏ. 10ರಂದು ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಬೃಹತ್ ಜನ ಸಮಾವೇಶ

ಅವರು ಸಿಐಟಿಯು, ರೈತ ಸಂಘಟನೆ ಕೆ.ಪಿ.ಆರ್.ಎಸ್, ಜನವಾದಿ ಮಹಿಳಾ ಸಂಘಟನೆ ಹಾಗೂ ವಿದ್ಯಾರ್ಥಿ ಸಂಘಟನೆ ಎಸ್.ಎಫ್.ಐ ಜಂಟಿಯಾಗಿ ಕಾರವಾರದಲ್ಲಿ ಆಯೋಜಿಸಿದ್ದ 118ನೆಯ ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಗಣತಂತ್ರವನ್ನು ಉಳಿಸಿ, ಸಾರ್ವಭೌಮತೆಯನ್ನು ರಕ್ಷಿಸಿ, ಸಮಾನತೆಗಾಗಿ ಹೋರಾಡಿ, ಲಿಂಗ ತಾರತಮ್ಯವನ್ನು ವಿರೋಧಿಸಿ, ಜೀವನೋಪಾಯದ ಮೇಲಿನ ದಾಳಿಗಳನ್ನು ಖಂಡಿಸಿ ಎಂಬ ಮುಖ್ಯ ಘೋಷಣೆಗಳ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಕಾಜುಬಾಗದಲ್ಲಿ ನಡೆಸಲಾಗಿತ್ತು.

ಅತಿಥಿಗಳಾಗಿ ಆಗಮಿಸಿದ ಲೇಖಕ ಎನ್.ಜಿ. ನಾಯ್ಕ ಮಾತನಾಡುತ್ತ, ಮನಸ್ಮೃತಿ ಸೃಷ್ಟಿಸಿದ ಅತ್ಯಂತ ಅಮಾನವೀಯ ಸಾಂಸ್ಕೃತಿಕ ಧಾಳಿಗಳ ವಿರುದ್ಧ ಸಮಾನತೆಯತ್ತ ಸಾಗಲು ಹೋರಾಟವೊಂದೇ ದಾರಿ. ಮಹಿಳೆಯರಲ್ಲಿ ಜಾಗೃತಿ ಬರಬೇಕು ಮತ್ತು ಗಂಡು ಹೆಣ್ಣು ಇಬ್ಬರೂ ಕೂಡಿ ಕೆಲಸ ಮಾಡಿದರೆ ಮಾತ್ರವೇ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.ಪುರುಷರು

ರೈತ ಹೋರಾಟಗಾರ ಕೆ.ಪಿ.ಆರ್.ಎಸ್ ಜಿಲ್ಲಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಅವರು ಮಾತನಾಡಿ ಸಮಾಜದಲ್ಲಿ ಮಹಿಳೆಯರನ್ನು ಮತ್ತು ದಲಿತರನ್ನು ಕೀಳಾಗಿ ನಡೆಸಿಕೊಂಡಿದ್ದರಿಂದ ಅಭಿವೃದ್ಧಿಯ ಆಶಯಗಳಿಗೆ ತಡೆಯಾಗಿದೆ ಎಂದರು .

ಎಸ್.ಎಫ್.ಐ ಸಂಚಾಲಕ ವೀರೇಶ ರಾಠೋಡ ಮಾತನಾಡುತ್ತ “ಬ್ರಿಟಿಷ್ ಅಧಿಪತ್ಯದ ತನಕವೂ ಭಾರತದಲ್ಲಿ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಉತ್ತಮವಾಗಿರಲಿಲ್ಲ. ಮೂಢನಂಬಿಕೆಗಳು ಮತ್ತು ಅನೇಕ ಕಂದಾಚಾರಗಳಿಂದ ಸುತ್ತುವರಿದ ಭಾರತೀಯ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಲಿಂಗ ತಾರತಮ್ಯ ಮತ್ತು ಶೋಷಣೆ ವಿಧಾನ ಆಳವಾಗಿ ಬೇರು ಬಿಟ್ಟಿದ್ದವು.

ಅದನ್ನು ಬದಿಗೊತ್ತಲು ಸಾವಿತ್ರಿಬಾಯಿಯಂತವರ ಕೆಚ್ಚೆದೆಯ ಹೋರಾಟ ಶತಮಾನಗಳ ಕಾಲ ನಡೆಯಿತು. ಇವತ್ತು ನಾವು ಮೂಢನಂಬಿಕೆಗಳಿಂದ ಹೊರಗೆ ಬರಬೇಕೆಂದರೆ ಮೊದಲು ತಾಯಂದಿರು ಮಹಿಳೆಯರು ಮೌಡ್ಯತೆಯಿಂದ ದೂರ ಇರಬೇಕು. ಭವಿಷ್ಯದಲ್ಲಿ ಪ್ರಗತಿಹೊಂದಲು ಅಡ್ಡಿಆತಂಕಗಳ ನಿವಾರಣೆ ಆಗಬೇಕೆಂದರೆ ಸರ್ಕಾರದ ವ್ಯವಸ್ಥೆಯಲ್ಲಿ ಶಿಕ್ಷಣ, ಉದ್ಯೋಗ ದೊರಕಬೇಕು. ಇಂದಿನ ಯುದ್ಧ ಮನಃಸ್ಥಿತಿಯನ್ನು ಒಪ್ಪಬಾರದು. ಏಕೆಂದರೆ ಯುದ್ಧ ನಮ್ಮ ಅಡುಗೆ ಮನೆ ಅನಿಲವನ್ನೂ ಒಳಗೊಂಡು ಜೀವನದ ಎಲ್ಲಾ ಹಂತದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಯಮುನಾ ಗಾಂವ್ಕರ್, ದೇಶ ವಿದೇಶದ ರಾಜಕೀಯ ಆರ್ಥಿಕ ಸಾಮಾಜಿಕ ವಿದ್ಯಮಾನಗಳು ಹಾಗೂ ದುಡಿಯುವ ಮಹಿಳೆಯರ ಪರಿಸ್ಥಿತಿ ಬಗ್ಗೆ ಹೇಳಿದರು.

ಮಹಿಳೆಯನ್ನು ಈ ಸಮಾಜ ಎಷ್ಟೇ ವಿಕೃತವಾಗಿ ಚಿತ್ರಿಸಿದರೂ ಅದನ್ನು ಮೌನವಾಗಿಯೇ ಅಳಿಸಿ ಹಾಕಿದ ಹೆಣ್ಣುಗಳು ಸಮಾನತೆಯ ಸಾಧನೆಯತ್ತ ಹೋರಾಟದ ಕಣದಲ್ಲಿ ಧುಮುಕಿದ್ದಾರೆ. ಹೆಣ್ಣಿಲ್ಲದ ವಿಶ್ವ ಕಲ್ಪಿಸಿಕೊಳ್ಳಲಾಗದು. ವಿಶ್ವದಲ್ಲಿ ನಡೆಯುತ್ತಿರುವ ದುರಾಕ್ರಮಣದ ಯುದ್ಧಕ್ಕೆ ಮಹಿಳೆಯರು ಮಕ್ಕಳು ಬಲಿಯಾಗುತ್ತಿದ್ದು, ಬೆಲೆ ಏರಿಕೆ ಹೆಚ್ಚುತ್ತಿದೆ. ಸಾಮ್ರಾಜ್ಯಶಾಹಿಗಳ ಧೋರಣೆ ಭಾರತಕ್ಕೆ ಅಪಾಯಕಾರಿ. ಇದು ಜೀವನೋಪಾಯದ ಮೇಲೆ ಭಾರೀ ಪರಿಣಾಮಬೀರುತ್ತದೆ ಎಂದರು.

ಮಂಜುಳಾ ಕಾಣಕೋಣಕರ್ ನಿರ್ವಹಿಸಿದರು. ಶೇಖಪ್ಪ ಅವರು ವಂದನಾರ್ಪಣೆ ಮಾಡಿದರು. ಸೇವಾ ನಿವೃತ್ತರಾದ ಮೋಹಿನಿ ನಮ್ಸೇಕರ್, ತಾರಾ ನಾಯ್ಕ, ಗೀತಾ ರಾಯ್ಕರ್, ಲತಾ ಕಳಸ್, ಮಂಗಲಾ ದೇಸಾಯಿ, ಗಂಗಾ ಗೌಡ, ಶೈಲಾ ನಾಯ್ಕ ಇವರಿಗೆ ಗೌರವಿಸಲಾಯಿತು. ವಿವಿಧ ರಂಗಗಳಲ್ಲಿ ದುಡಿಯುವ ಮಹಿಳೆಯರು ಮತ್ತು ಹಿರಿಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ ನಡೆಯಿತು. ಶಶಿಧರ್, ಯಲ್ಲಪ್ಪ, ಪ್ರದ್ಯುಮ್ನ, ಕಲ್ಪನಾ ಕೋಳಿ, ಪೂರ್ಣಿಮಾ ನಾಯ್ಕ, ಹಮೀದಾ, ಸರೋಜಾ ಗುನಗ ಸಹಕರಿಸಿದರು.

ಇದನ್ನೂ ನೋಡಿ: ಕೇರಳ ಚುನಾವಣೆ | ಎಲ್‌ಡಿಎಫ್ vs ಯುಡಿಎಫ್ – ಜನ ಒಪ್ಪುವ ಪ್ರಣಾಳಿಕೆ ಯಾರದ್ದು? Janashakthi Media

Donate Janashakthi Media

Leave a Reply

Your email address will not be published. Required fields are marked *