ಪಾಟ್ನಾ: ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದ ಖ್ಯಾತಿಯ ನಿತೀಶ್ ಕುಮಾರ್ ರಾಜೀನಾಮೆ ನೀಡಲು ವೇದಿಕೆ ಸಿದ್ದವಾಗಿದೆ. ಮೂಲಗಳ ಪ್ರಕಾರ, ಏಪ್ರಿಲ್ 14ರಂದು ಅವರು ಸಿಎಂ ಹುದ್ದೆಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ. ಬಿಹಾರ
ಏಪ್ರಿಲ್ 8ರಂದು ನಿತೀಶ್ ಕುಮಾರ್ ದೆಹಲಿಗೆ ಪ್ರಯಾಣಿಸಲಿದ್ದಾರೆ. ಏಪ್ರಿಲ್ 10ರಂದು ರಾಜ್ಯಸಭಾ ಸದಸ್ಯರಾಗಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಹುದ್ದೆಯನ್ನು ತುಂಬಾ ದಿನ ಖಾಲಿ ಇಡಬಾರದು ಎಂದು ಬಿಜೆಪಿಯ ವರಿಷ್ಠರಿಗೆ ನಿತೀಶ್, ಸಲಹೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಶೇ. 84ರಷ್ಟು ರಿಸಲ್ಟ್
ಏಪ್ರಿಲ್ 13ರಂದು ನಡೆಯುವ ಶಾಸಕಾಂಗ ಪಕ್ಷದ ಸಭೆ
ನಿತೀಶ್ ಕುಮಾರ್ ಏಪ್ರಿಲ್ ಹದಿನಾಲ್ಕಕ್ಕೆ ರಾಜೀನಾಮೆ ನೀಡಲಿದ್ದಾರೆ. ಏಪ್ರಿಲ್ ಹದಿಮೂರಂದು ಮೈತ್ರಿಕೂಟದ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲು ನಿರ್ಧರಿಸಲಾಗಿದೆ.
ಇದಕ್ಕೂ ಮುನ್ನ, ಕ್ಯಾಬಿನೆಟ್ ಮೀಟಿಂಗ್ ನಡೆಯುವ ಸಾಧ್ಯತೆಯಿದೆ. ಪಾಟ್ನಾದಲ್ಲಿ ನಡೆಯುವ ಸಭೆಯಲ್ಲಿ, ನೂತನ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಬಹುತೇಕ, ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕರೂ ಆಗಿರುವ ಸಮರ್ಥ್ ಚೌಧುರಿ, ಮುಂದಿನ ಮುಖ್ಯಮಂತ್ರಿ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.ಮುಂದಿನ ಮುಖ್ಯಮಂತ್ರಿಯಾಗಿ ಸಮರ್ಥ್ ಚೌಧುರಿ
ಮೂಲಗಳ ಪ್ರಕಾರ, ಏಪ್ರಿಲ್ ಹದಿನೈದರಂದು ನೂತನ ಮುಖ್ಯಮಂತ್ರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ತಮ್ಮ ಸರ್ಕಾರದಲ್ಲಿ ಡಿಸಿಎಂ ಆಗಿರುವ ಸಮರ್ಥ್ ಚೌಧುರಿ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎನ್ನುವ ಶಿಫಾರಸನ್ನು ನಿತೀಶ್ ಕುಮಾರ್ ಮಾಡಿದ್ದಾರೆ.
ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್
ಹೊಸದಾಗಿ ರಚನೆಯಾಗುವ ಕ್ಯಾಬಿನೆಟ್’ನಲ್ಲಿ ಹೊಸ ಮುಖಗಳಿಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಜೊತೆಗೆ ಇವರನ್ನು ಡಿಸಿಎಂ ಆಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಹೊಸ ಸರ್ಕಾರದ ಪ್ರಮಾಣವಚನದ ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆದಿಯಾಗಿ, ಬಿಜೆಪಿಯ ಹಿರಿಯ ನಾಯಕರು ಭಾಗವಹಿಸುವ ಸಾಧ್ಯತೆಯಿದೆ.ನಿತೀಶ್ ಕುಮಾರ್ ಶಿಫಾರಸು ಮಾಡಿರುವ ಹೆಸರು
ಡಿಸಿಎಂ ಸಮರ್ಥ್ ಚೌಧುರಿ ಅವರು ಮುಂದಿನ ಬಿಹಾರದ ಮುಖ್ಯಮಂತ್ರಿಯಾಗುವ ಸಾಧ್ಯತೆಯೇ ಹೆಚ್ಚು. ಇವರ ಹೆಸರನ್ನೇ ನಿತೀಶ್ ಕುಮಾರ್ ಕೂಡಾ ಶಿಫಾರಸು ಮಾಡಿದ್ದಾರೆ ಕೂಡಾ.
ಇವರು, ಬಿಜೆಪಿಯ (ಜುಲೈ 2024) ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು. ಸಮರ್ಥ್ ಅವರ ಹೆಸರೇ ಮಂಚೂಣಿಯಲ್ಲಿದ್ದರೂ, ಬಿಜೆಪಿ ನಾಯಕರು ಕೊನೇ ಕ್ಷಣದಲ್ಲಿ ಸರ್ಪ್ರೈಸ್ ಕೊಟ್ಟರೂ ಕೊಡಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ನೋಡಿ: 1 ಲಕ್ಷ ಶಿಕ್ಷಕರು ಜನಗಣತಿಗೆ: ಶಿಕ್ಷಣ ವ್ಯವಸ್ಥೆಗೆ ದೊಡ್ಡ ಹೊಡೆತ? Janashakthi Media
