ರಾಷ್ಟ್ರಪತಿ ಆಡಳಿತ ತಡೆಯಲು ಟಿವಿಕೆಗೆ ಬೆಂಬಲ: ತಿರುಮಾವಳವನ್

ಚೆನ್ನೈ: ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಕಾರಣದಿಂದ ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ನೀಡಿರುವುದಾಗಿ ವಿಸಿಕೆ ನಾಯಕ ತೋಲ್ ತಿರುಮಾವಳವನ್ ಹೇಳಿದ್ದಾರೆ. ರಾಷ್ಟ್ರಪತಿ 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಜನರು ನೀಡಿರುವ ಜನಾದೇಶಕ್ಕೆ ಗೌರವ ನೀಡಿ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಟಿವಿಕೆಗೆ ನೀಡಿರುವ ಬೆಂಬಲವು ಡಿಎಂಕೆಯೊಂದಿನ ಮೈತ್ರಿ ಸಂಬಂಧಕ್ಕೆ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ತಿರುಮಾವಳವನ್, “ಬಿಜೆಪಿಯ ರಾಜಕೀಯ ಹಸ್ತಕ್ಷೇಪ ತಡೆಯುವುದು ಈಗ ಪ್ರಮುಖ ಅಗತ್ಯ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ತಮಿಳುನಾಡು ರಾಜಕೀಯ ಬೆಳವಣಿಗೆ | ಟಿವಿಕೆ ಸರ್ಕಾರ ರಚನೆಗೆ ಇನ್ನೂ ಎರಡು ಸ್ಥಾನಗಳ ಕೊರತೆ

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಆರಂಭದಲ್ಲಿ ಬಹುಮತಕ್ಕೆ ಅಗತ್ಯ ಸಂಖ್ಯಾಬಲದ ಕೊರತೆ ಎದುರಿಸಿತ್ತು. ಕಾಂಗ್ರೆಸ್, ಎಡಪಕ್ಷಗಳು ಹಾಗೂ ಬಳಿಕ ವಿಸಿಕೆ ಮತ್ತು ಐಯುಎಂಎಲ್ ಬೆಂಬಲ ನೀಡಿದ ನಂತರ ವಿಜಯ್ ನೇತೃತ್ವದ ಮೈತ್ರಿಗೆ ಬಹುಮತ ಸಿಕ್ಕಿದೆ ಎಂದು ವರದಿಗಳು ತಿಳಿಸಿವೆ.

ರಾಜ್ಯಪಾಲರು ತಕ್ಷಣ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ವಿಸಿಕೆ ಮತ್ತು ಎಡಪಕ್ಷಗಳು ಆಗ್ರಹಿಸಿವೆ. ರಾಜ್ಯದಲ್ಲಿ ಅನಗತ್ಯ ರಾಜಕೀಯ ಗೊಂದಲ ಸೃಷ್ಟಿಸುವ ಪ್ರಯತ್ನಗಳನ್ನು ಜನತೆ ಒಪ್ಪುವುದಿಲ್ಲ ಎಂದು ತಿರುಮಾವಳವನ್ ಎಚ್ಚರಿಸಿದ್ದಾರೆ.

ವಿಡಿಯೋ ನೋಡಿ :ಕರಾವಳಿ ಪ್ರವಾಸೋದ್ಯಮ : ಸ್ಥಳೀಯರ ಬದುಕು ಉಳಿಯಬೇಕೇ ಹೊರತು ಕಾರ್ಪೊರೇಟ್ ಲಾಭಕ್ಕಲ್ಲ – ಮುನೀರ್ ಕಾಟಿಪಳ್ಳ

Donate Janashakthi Media

Leave a Reply

Your email address will not be published. Required fields are marked *