ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ನೇಮಕ

ಕೇರಳ: ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡಪಂಥೀಯ ಪ್ರಜಾಸತ್ತಾತ್ಮಕ ರಂಗದ ಸತತ ಎರಡನೇ ಅವಧಿಯನ್ನು ಕೊನೆಗೊಳಿಸಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತೆ ಅಧಿಕಾರಕ್ಕೆ ಬಂದ ಒಂದು ವಾರಕ್ಕೂ ಹೆಚ್ಚು ಸಮಯದ ನಂತರ, ಕೇರಳ ಮುಖ್ಯಮಂತ್ರಿ ಹುದ್ದೆಗೆ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಮೇ 14ರಂದು ಆಯ್ಕೆ ಮಾಡಿದೆ.

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು,. ಅಜಯ್ ಮೇಕನ್, ಮುಕುಲ್ ವಾಸ್ನೆಕ್, ದೀಪಾದಾಸ್ ಮುನ್ಶಿ, AICC ವೀಕ್ಷಕರಿಂದ ಮಹತ್ವದ ಸುದ್ದಿಗೋಷ್ಠಿಯಲ್ಲಿ ವಿಡಿ ಸತೀಶನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ .

ಕಳೆದ ಕೆಲವು ದಿನಗಳಿಂದ ಕೇರಳ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಅಂತಿಮವಾಗಿ ಸುಖಾಂತ್ಯ ಕಂಡಿದೆ. ಕಾಂಗ್ರೆಸ್ ಹೈಕಮಾಂಡ್ ಕೇರಳದ ನೂತನ ಮುಖ್ಯಮಂತ್ರಿಯಾಗಿ ಹಿರಿಯ ನಾಯಕ ವಿ.ಡಿ. ಸತೀಶನ್ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಿದೆ. ಈ ಮೂಲಕ ಹಲವು ದಿನಗಳ ಕಾಲ ನಡೆದ ಸಮಾಲೋಚನೆ ಮತ್ತು ಬಿಕ್ಕಟ್ಟಿಗೆ ತೆರೆ ಬಿದ್ದಂತಾಗಿದ್ದು, ಕೇರಳ ಕಾಂಗ್ರೆಸ್‌ನಲ್ಲಿ ಹೊಸ ಪರ್ವ ಆರಂಭವಾದಂತಾಗಿದೆ.

ಇದನ್ನೂ ಓದಿ: ನೀಟ್‌ನ ನೆರಳಲ್ಲಿ ಕುಸಿಯುತ್ತಿರುವ ಶಾಲಾ ಶಿಕ್ಷಣ

ದೆಹಲಿಯಲ್ಲಿ ನಡೆದ ಮಹತ್ವದ ಸುದ್ದಿಗೋಷ್ಠಿ

ನವದೆಹಲಿಯಲ್ಲಿ ಎಐಸಿಸಿ (AICC) ವೀಕ್ಷಕರು ಹಮ್ಮಿಕೊಂಡಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಅಜಯ್ ಮೇಕನ್, ಮುಕುಲ್ ವಾಸ್ನಿಕ್ ಮತ್ತು ಕೇರಳ ಉಸ್ತುವಾರಿ ದೀಪಾ ದಾಸ್ ಮುನ್ಶಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಶಾಸಕಾಂಗ ಪಕ್ಷದ ಅಭಿಪ್ರಾಯದಂತೆ ವಿ.ಡಿ. ಸತೀಶನ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಕ್ಲೈಮಾಕ್ಸ್ ಹಂತ ತಲುಪಿದ್ದ ಆಯ್ಕೆ ಪ್ರಕ್ರಿಯೆ

ಸಿಎಂ ಗಾದಿಗಾಗಿ ಕೇರಳದ ಘಟಾನುಘಟಿ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮ ಹಂತದವರೆಗೂ ಕುತೂಹಲ ಮೂಡಿಸಿದ್ದ ಈ “ರಾಜಕೀಯ ಕ್ಲೈಮಾಕ್ಸ್” ಹಲವು ಸುತ್ತಿನ ಸಭೆಗಳಿಗೆ ಸಾಕ್ಷಿಯಾಗಿತ್ತು.

ರಾಜ್ಯದ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲು ದೆಹಲಿಯಿಂದ ಬಂದಿದ್ದ ವೀಕ್ಷಕರು, ಪ್ರತಿಯೊಬ್ಬ ಶಾಸಕರ ಜೊತೆ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದರು. ಅಂತಿಮವಾಗಿ ಯುವ ಸಮೂಹ ಮತ್ತು ಹಿರಿಯ ನಾಯಕರ ಬೆಂಬಲ ಗಳಿಸುವಲ್ಲಿ ಸತೀಶನ್ ಯಶಸ್ವಿಯಾಗಿದ್ದಾರೆ.

ಸತೀಶನ್ ಆಯ್ಕೆಗೆ ಕಾರಣಗಳೇನು?

ವಿ.ಡಿ. ಸತೀಶನ್ ಅವರು ತಮ್ಮ ಸಂಸದೀಯ ಪಟುತ್ವ ಮತ್ತು ಆಡಳಿತ ಪಕ್ಷವನ್ನು ಸದನದಲ್ಲಿ ಸಮರ್ಥವಾಗಿ ಎದುರಿಸುವ ಶೈಲಿಯಿಂದಾಗಿ ಹೈಕಮಾಂಡ್ ಗಮನ ಸೆಳೆದಿದ್ದರು.

ಪಕ್ಷದ ಪುನಶ್ಚೇತನಕ್ಕೆ ಸತೀಶನ್ ಅವರಂತಹ ಕ್ರಿಯಾಶೀಲ ನಾಯಕನ ಅಗತ್ಯವಿದೆ ಎಂದು ಹೈಕಮಾಂಡ್ ನಂಬಿದೆ. ಇವರ ಆಯ್ಕೆಯು ಕೇರಳ ಕಾಂಗ್ರೆಸ್‌ನಲ್ಲಿ ತಳಮಟ್ಟದ ಕಾರ್ಯಕರ್ತರಿಗೆ ಹೊಸ ಉತ್ಸಾಹ ತುಂಬಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ನೋಡಿ: ಬಿಡದಿ ಉಪನಗರ ಯೋಜನೆಗೆ ವಿರೋಧ – ದಿನವಿಡೀ ರಸ್ತೆ ಬಂದ್‌ ಮಾಡಿದ ರೈತರು Janashakthi Media

Donate Janashakthi Media

Leave a Reply

Your email address will not be published. Required fields are marked *