ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಗೆ ಹಿನ್ನಡೆಯಾಗಿರುವ ಕುರಿತು ಮೊದಲ ಪ್ರತಿಕ್ರಿಯೆ ನೀಡಿರುವ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಮತ ಎಣಿಕೆ ಕೇಂದ್ರಗಳನ್ನು ತೊರೆಯದಿರಿ. ಅಂಕಿ-ಸಂಖ್ಯೆಗಳು ನಕಲಿಯಾಗಿವೆ ಎಂದು ಹೇಳಿದ್ದಾರೆ.
ಸೋಮವಾರ ಮಧ್ಯಾಹ್ನ ಈ ಸಂಬಂಧ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಮಮತಾ ಬ್ಯಾನರ್ಜಿ, “ಮತ ಎಣಿಕೆ ಕೇಂದ್ರಗಳನ್ನು ತೊರೆಯದಿರಿ. ಮುಂದಿನ ಸುತ್ತುಗಳ ಮತ ಎಣಿಕೆಯಲ್ಲಿ ಬಿಜೆಪಿಯ ವಿರುದ್ಧ ಟಿಎಂಸಿ ಮುನ್ನಡೆ ಸಾಧಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಾಮ್ರಾಜ್ಯಶಾಹಿ ಯು.ಎಸ್ ವಿರುದ್ಧ ಇರಾನ್ ಪ್ರತಿರೋಧ ಜಾಗತಿಕವಾಗಿ ಮನ್ನಣೆ – ರಾಘವಲು
ಟಿಎಂಸಿ ಈಗಲೂ ಸುಮಾರು 100 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಆದರೆ, ಇತ್ತೀಚಿನ ಅಂಕಿ-ಸಂಖ್ಯೆಗಳನ್ನು ಬಹಿರಂಗಪಡಿಸಲಾಗಿಲ್ಲ. ಟಿಎಂಸಿ ಮುನ್ನಡೆಯಲ್ಲಿರುವ ಸ್ಥಾನಗಳಲ್ಲಿನ ಟ್ರೆಂಡ್ ಗಳನ್ನು ಬಿಜೆಪಿ ಹಾಗೂ ಚುನಾವಣಾ ಆಯೋಗ ತೋರಿಸುತ್ತಿಲ್ಲ. ನೀಡಲಾಗುತ್ತಿರುವ ಅಂಕಿ-ಸಂಖ್ಯೆಗಳು ನಕಲಿಯಾಗಿವೆ. 14 ರಿಂದ 18 ಸುತ್ತುಗಳ ಮತ ಎಣಿಕೆಯ ಬಳಿಕ ಟ್ರೆಂಡ್ ಬದಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮತ ಎಣಿಕೆ ಮುಂದುವರಿದಂತೆ ವಿಧಾನಸಭಾ ಸ್ಥಾನಗಳ ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ, ಸದ್ಯ 181 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತೀಚಿನ ದತ್ತಾಂಶಗಳ ಪ್ರಕಾರ, ಟಿಎಂಸಿ ಸುಮಾರು 90 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನೂ ನೋಡಿ: ಮೇ ದಿನ | ದುಡಿಯುವ ಕೈಗಳ ಹಕ್ಕಿನ ಘೋಷಣೆ | ವಿಶ್ಲೇಷಣೆ – ಎಸ್ ವರಲಕ್ಷ್ಮಿ Janashakthi Media
