ಕೆ.ಆರ್. ಪುರಂ: ಕಾರ್ಮಿಕರ ಬದುಕಿನ ಜೊತೆ ಚಲ್ಲಾಟವಾಡಿದ ಡಬಲ್ ಎಂಜಿನ್ ಸರ್ಕಾರವನ್ನು ಈ ಚುನಾವಣೆಯಲ್ಲಿ ಕಿತ್ತೆಸೆಯಬೇಕು ಎಂದು ಸಿಪಿಐಎಂ ಪೊಲಿಟ್ ಬ್ಯೂರೋ…
Tag: ಸಿಪಿಐ(ಎಂ)
‘ಸತ್ಯಪಾಲ್ ಮಲಿಕ್ ಸಂದರ್ಶನ : ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೋದಿ ಸರ್ಕಾರ ಉತ್ತರಿಸಲೇಬೇಕು’
“ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ರಾಜ್ಯಪಾಲ ಶ್ರೀ . ಸತ್ಯಪಾಲ್ ಮಲಿಕ್ ಎತ್ತಿರುವ ಎಲ್ಲಾ ಗಂಭೀರ ಆರೋಪಗಳ ಬಗ್ಗೆ ಮೋದಿ ಸರ್ಕಾರವು ಸ್ಪಷ್ಟಗೊಳಿಸಬೇಕು, ಅವಕ್ಕೆಲ್ಲ ಉತ್ತರಿಸಬೇಕು” ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ. “40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕುರಿತಂತೆ ಆರೋಪಗಳು ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಯಾವುದೇ ಲೋಪವಾಗುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಪೊಲಿಟ್‍ಬ್ಯುರೊ ಹೇಳಿದೆ. ಇದು ಸರಕಾರದ ತಪ್ಪಿನಿಂದಾಗಿ ಸಂಭವಿಸಿರುವ ದುರಂತ, ಸಿಆರ್ ಪಿ ಎಫ್ ನವರು ಕೇಳಿದಂತೆ ದಳದ ಸದಸ್ಯರನ್ನು ಸಾಗಿಸಲು ಐದು ವಿಮಾನಗಳನ್ನು ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಪ್ರಧಾನ ಮಂತ್ರಿಗಳಿಗೆ ಹೇಳಿದಾಗ ಅವರು ಈಗ ಈ ಬಗ್ಗೆ ಸುಮ್ಮನಿರಿ ಎಂದು ಹೇಳಿದುದಾಗಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್ ರೊಂದಿಗೆ ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್ ಅವರು ಹೇಳಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು. ತನಗೆ ಅಷ್ಟು ಹೊತ್ತಿಗೆ ಗೊತ್ತಾಗಿ ಹೋಗಿತ್ತು, ಈ ಎಲ್ಲಾ ದೋಷ ಪಾಕಿಸ್ತಾನದ ಕಡೆಗೆ ತಿರುಗಿಸಬೇಕಾಗಿತ್ತು, ಆದ್ದರಿಂದ ಮಾತಾಡುವುದು ಬೇಡ ಎಂದು ಹೇಳಲಾಗಿತ್ತು ಎಂದೂ ಮಲಿಕ್ ಹೇಳಿದ್ದಾರೆ. ಈ ಘಟನೆಗೆ ಪ್ರತೀಕಾರವೆಂದು ಮುಂದೆ ಬಾಲಾಕೋಟ್ ವಿಮಾನ ದಾಳಿ ನಡೆಸಿ ಅದನ್ನು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಳಸಿಕೊಂಡದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. “ಸಂವಿಧಾನದ 370 ಮತ್ತು 35 ಎ ಕಲಮುಗಳನ್ನು ರದ್ದುಗೊಳಿಸಿದ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ರಾಜ್ಯವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ್ದಕ್ಕೆ ಸಂಬಂಧಿಸಿದ ಆರೋಪಗಳು ಕೂಡ ಅಷ್ಟೇ ಗಂಭೀರವಾಗಿವೆ” ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ ವ್ಯಕ್ತಪಡಿಸಿದೆ. ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯಿದ್ದು, ಅಲ್ಲಿಯ ಆಡಳಿತಕ್ಕೆ ಪೂರ್ಣ ಹೊಣೆಗಾರರಿದ್ದ ರಾಜ್ಯಪಾಲರಿಗೂ ಹಿಂದಿನ ರಾತ್ರಿಯ ವರೆಗೂ ಇದರ ಸುಳಿವಿರಲಿಲ್ಲ ಎಂದು ಈ ಸಂದರ್ಶನದಿಂದ ಈಗ ತಿಳಿದು ಬಂದಿದೆ. ಅಲ್ಲದೆ ಪ್ರಧಾನಿಗಳಿಗೆ ಕಾಶ್ಮೀರದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ, ಅದನ್ನು ಪಡೆದುಕೊಳ್ಳಬೇಕು ಎಂದನಿಸದಷ್ಟು ದರ್ಪ ಅವರಲ್ಲಿದ್ದಂತಿತ್ತು ಎಂದೂ ಸತ್ಪಾಲ್ ಮಲಿಕ್ ಸಂದರ್ಶನದಲ್ಲಿ ಸೂಚಿಸಿದ್ದಾರೆ ಎಂಬುದನ್ನು ಕೂಡ ಇಲ್ಲಿ ಗಮನಿಸಬಹುದು. “ಈ ವಿಷಯಗಳ ಬಗ್ಗೆ ಮೋದಿ ಸರ್ಕಾರದ ಮೌನವು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಐಕ್ಯತೆ ಮತ್ತು ಸಮಗ್ರತೆ ಕುರಿತಂತೆ ಬಹಳ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾಂವಿಧಾನಿಕ ಪಾವಿತ್ರ್ಯದ ಹಿತದೃಷ್ಟಿಯಿಂದ ಮೋದಿ ಸರ್ಕಾರ ಈ ಆರೋಪಗಳಿಗೆ ಉತ್ತರಿಸಬೇಕು. ಮೋದಿ ಸರ್ಕಾರ ಮೌನವಾಗಿರಲು ಸಾಧ್ಯವಿಲ್ಲ” ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಮುಂದುವರೆದು ಹೇಳಿದೆ.
ಹತ್ಯೆಗೀಡಾದ ಗೋ ವ್ಯಾಪಾರಿ ಇದ್ರಿಶ್ ಪಾಷಾ ಕುಟುಂಬಕ್ಕೆ ಪರಿಹಾರದ ಜೊತೆಗೆ ಸರ್ಕಾರಿ ಉದ್ಯೋಗ ನೀಡುವಂತೆ ಸಿಪಿಐಎಂ ಒತ್ತಾಯ
ಮಂಡ್ಯ : ಕೆಲವು ದಿನಗಳ ಹಿಂದೆಯಷ್ಟೇ ಪುನೀತ್ ಕೆರೆಹಳ್ಳಿ ಎಂಬುವವರಿಂ ಹತ್ಯೆಗೀಡಾದ ಎನ್ನಲಾದ ಗೋ ವ್ಯಾಪಾರಿ ಇದ್ರಿಶ್ ಪಾಷಾ ಅವರು ಕುಟುಂಬಕ್ಕೆ…
ಲೂಟಿಕೋರ ಕಾರ್ಪೋರೇಟ್ ಪರ ನೀತಿಗಳೇ ಮುಸ್ಲಿಂ – ನಾಗರೀಕರ ಮೇಲಿನ ದಾಳಿಗಳ ಮೂಲ : ಸಿಪಿಐಎಂ ಆರೋಪ
ಬೆಂಗಳೂರು : ಕನಕಪುರ ತಾಲೂಕಿನ ಸಾತನೂರು ಬಳಿ ಗೋರಕ್ಷಕ ಮುಸುಕಿನ ಕೊಲೆಗಡುಕ ಗೂಂಡಾ ಪಡೆ ಇದ್ರಿಶ್ ಪಾಷಾ ಎಂಬ ಬಡ ಕಾರ್ಮಿಕನನ್ನು…
ಐಎಎಸ್, ಐಪಿಎಸ್ ನೇಮಕಗಳಲ್ಲಿ 75ಶೇ.ದಷ್ಟಿರುವ ಸಮುದಾಯಗಳ ಪ್ರಾತಿನಿಧ್ಯ ಕೇವಲ 25% ದಷ್ಟು
ನವದೆಹಲಿ: ಐಎಎಸ್, ಐಪಿಎಸ್ ನೇಮಕಗಳಲ್ಲಿ 75ಶೇ.ದಷ್ಟಿರುವ ಸಮುದಾಯಗಳ ಪ್ರಾತಿನಿಧ್ಯ ಕೇವಲ 25% ದಷ್ಟು ಇದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ(ಪಿಎಂಒ)ಯು ಸಲ್ಲಿಸಿದ…
ಮೀಸಲಾತಿ ವಾಪಾಸು ಮುಸ್ಲಿಂ ಧ್ವೇಷದ ಭಾಗ : ಸಿಪಿಐಎಂ ಖಂಡನೆ
ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರ ಹಿಂದುಳಿದ ವರ್ಗ 2 ಬಿ ಅಡಿಯಲ್ಲಿ ಶೇ 4 ರಷ್ಠು ಮೀಸಲಾತಿ ಹೊಂದಿದ್ದ ಮುಸ್ಲಿಂ…
ಭಾರತೀಯರ ಒಡೆತನದ ಕಡಲಾಚೆಯ ʻಚಿಪ್ಪುʼ ಕಂಪನಿಗಳ ಬಗ್ಗೆ ಮೋದಿ ಸರ್ಕಾರದ ಬಳಿ ಮಾಹಿತಿಯಿಲ್ಲ?!
ಮಾರ್ಚ್ 21ರಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ʻʻಭಾರತೀಯ ನಾಗರಿಕರ…
ಕ್ರಿಮಿನಲ್ ಮಾನನಷ್ಟದ ದಾರಿಗಿಳಿದ ಬಿಜೆಪಿಯ ನಿರ್ಲಜ್ಜ ಪ್ರದರ್ಶನ-ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ
ನವದೆಹಲಿ: ಪ್ರತಿಪಕ್ಷಗಳ ನಾಯಕರ ಮೇಲೆ ಗುರಿಯಿಡಲು ಮತ್ತು ಅವರನ್ನು ಸಂಸದರಾಗಿ ಅನರ್ಹಗೊಳಿಸಲು ಬಿಜೆಪಿ ಈಗ ಕ್ರಿಮಿನಲ್ ಮಾನನಷ್ಟ ಮಾರ್ಗವನ್ನು ಬಳಸಲು ಹೊರಟಿದೆ…
ಸರ್ಕಾರಿ ಹಾಸ್ಟೆಲ್-ವಸತಿ ಶಾಲಾ, ಕಾಲೇಜು ಹೊರಗುತ್ತಿಗೆ ಸಿಬ್ಬಂದಿಗಳ ರಾಜ್ಯ ಸಮ್ಮೇಳನ
ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಕಾಲೇಜುಗಳ ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳ 2ನೇ…
ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ-ಕಸ ವಿಲೇವಾರಿಗೆ ಕ್ರಮಕೈಗೊಳ್ಳಿ: ಸಿಪಿಐ(ಎಂ) ಒತ್ತಾಯ
ಮಂಗಳೂರು: ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಡಬೇಕೆಂದು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಪೌರಕಾರ್ಮಿಕರಿಗೆ ಸ್ಪಂದಿಸದ ಬಿಜೆಪಿ…
ಕೂಳೂರು ನದಿ ಸೇತುವೆ ಕಾಮಗಾರಿ ಸ್ಥಗಿತ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ
ಕೂಳೂರು: ನದಿ ಸೇತುವೆ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷ ಕಳೆದರೂ ಇನ್ನೂ ಪೂರ್ಣಗೊಳಿಸಿಲ್ಲ. ಅಲ್ಲದೆ, ಈಗಾಗಲೇ ಇರುವ ಹಳೆ ಸೇತುವೆ ಅಸಮರ್ಥವಾಗಿದೆ.…
ಉರೀಗೌಡ – ದೊಡ್ಡ ನಂಜೇಗೌಡ ಮಹಾಧ್ವಾರ ಫಲಕ ತೆರವುಗೊಳಿಸಿ: ಸಿಪಿಐ(ಎಂ) ಒತ್ತಾಯ
ಮಂಡ್ಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷವು ಕಪೋಲಕಲ್ಪಿತವಾದ ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಎಂಬ…
ಕರ್ನಾಟಕ ರಾಜ್ಯದಲ್ಲಿ ಶಾಂತಿಯುತ – ನಿಷ್ಪಕ್ಷಪಾತ ಚುನಾವಣೆಗೆ ಕ್ರಮವಹಿಸಲು ಸಿಪಿಐ(ಎಂ) ಮನವಿ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯು ಸಮೀಪಿಸುತ್ತಿದ್ದು, ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಕ್ರಮಕೈಗೊಳ್ಳಬೇಕು ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ…
ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ-ಮಂಡ್ಯ ಜನತೆಗೆ ಬಗೆಯುತ್ತಿರುವ ದ್ರೋಹ: ಸಿಪಿಐ(ಎಂ)
ಮಂಡ್ಯ: ಲೋಕಸಭಾ ಸದಸ್ಯರು, ಸಿನಿಮಾ ನಟರೂ ಆದ ಶ್ರೀಮತಿ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲಿಸಲು ತೀರ್ಮಾನಿಸಿರುವುದು ಮಂಡ್ಯ ಜಿಲ್ಲೆಯ ಜನತೆಗೆ ಬಗೆದ…
ತ್ರಿಪುರಾ: ಬಿಜೆಪಿ ಮೈತ್ರಿಕೂಟಕ್ಕೆ ಸಿಕ್ಕಿರುವುದು ಸರಳ ಬಹುಮತ
ಎ. ಅನ್ವರ್ ಹುಸೇನ್ 2021ರ ಅಂತ್ಯದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಅದು ಶೇ. 60ರಷ್ಟು…
ತ್ರಿಪುರಾದಲ್ಲಿ ಬಿಜೆಪಿಯಿಂದ ಚುನಾವಣೋತ್ತರ ಭಯೋತ್ಪಾದನೆ: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಪೊಲಿಟ್ ಬ್ಯೂರೋ ಕರೆ
ನವದೆಹಲಿ: ಬಿಜೆಪಿ ಪಕ್ಷವು ತ್ರಿಪುರಾದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಎಡರಂಗ ಮತ್ತು ಪ್ರತಿಪಕ್ಷದ ಕಾರ್ಯಕರ್ತರ ವಿರುದ್ಧ ಚುನಾವಣೋತ್ತರ ಹಿಂಸಾಚಾರವನ್ನುನಡೆಸುತ್ತಿದೆ ಎಂದು…
ತ್ರಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಸಿಪಿಐಎಂಗೆ ಮತ ಹಾಕಿದ್ದಾರೆಂದು ಬಿಜೆಪಿ ಬೆಂಬಲಿಗರ ಗೂಂಡಾದಾಳಿ
ಅಗರ್ತಾಲ: ಇತ್ತೀಚಿಗೆ ವಿಧಾನಸಭಾ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದ್ದು, ಈ ವೇಳೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷಕ್ಕೆ ಮತ್ತು ವಿರೋಧ…
ಚುನಾವಣಾ ಆಯುಕ್ತರುಗಳ ನೇಮಕಕ್ಕೆ ಸಮಿತಿ-ಸುಪ್ರಿಂ ಕೋರ್ಟ್‍ನ ಮಹತ್ವದ ಆದೇಶ
ನವದೆಹಲಿ: ಭಾರತದ ಚುನಾವಣಾ ಆಯೋಗದ (ಇಸಿಐ)ಸದಸ್ಯರ ನೇಮಕವನ್ನು ನಿರ್ಧರಿಸಲು ಭಾರತದ ಮುಖ್ಯ ನ್ಯಾಯಾಧೀಶರು, ಪ್ರಧಾನ ಮಂತ್ರಿಗಳು ಮತ್ತು ಲೋಕಸಭೆಯ ವಿರೋಧ ಪಕ್ಷದ…
ಅಡುಗೆ ಅನಿಲ ಬೆಲೆಗಳಲ್ಲಿ ಮತ್ತೊಮ್ಮೆ ಏರಿಕೆ: ಈ ಕ್ರೂರ ಏರಿಕೆಯನ್ನು ವಾಪಾಸು ಪಡೆಯಬೇಕು -ಸಿಪಿಐ(ಎಂ) ಪೊಲಿಟ್ ಬ್ಯುರೊ
ನವದೆಹಲಿ: ಗೃಹಬಳಕೆಯ ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್‌ನ ಬೆಲೆಯನ್ನು ಇಂದಿನಿಂದ ಮತ್ತೊಮ್ಮೆ 50 ರೂ. ಹೆಚ್ಚಿಸಿರುವುದು ಒಂದು ಕ್ರೂರ ಏರಿಕೆ ಎಂದು ಭಾರತ…
ದಿಲ್ಲಿ ಉಪಮುಖ್ಯಮಂತ್ರಿ ಸಿಸೋಡಿಯ ಬಂಧನ: ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿಸಿಕೊಳ್ಳುವ ಯೋಜನೆಯ ಭಾಗ-ಸಿಪಿಐ(ಎಂ)ಪೊಲಿಟ್‍ಬ್ಯುರೊ ಖಂಡನೆ
ನವದೆಹಲಿ: ಪ್ರಜಾಸತ್ತಾತ್ಮಕ ವಿಧಾನಗಳಿಂದ ಚುನಾವಣೆಗಳನ್ನು ಗೆಲ್ಲಲು ವಿಫಲವಾದ ಮೋದಿ ಆಡಳಿತವು ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದೆ…