ನವದೆಹಲಿ: ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗಿದ್ದು, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಅಂಕಿಅಂಶಗಳು ಗಂಭೀರ ಚಿತ್ರಣವನ್ನು ಹೊರಹಾಕಿವೆ. ವಿದ್ಯಾರ್ಥಿ
ಎನ್ಸಿಆರ್ಬಿ ವರದಿ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಶೇ. 65ರಷ್ಟು ಏರಿಕೆಯಾಗಿದೆ. 2013ರಲ್ಲಿ 8,423 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2023ರಲ್ಲಿ ಈ ಸಂಖ್ಯೆ 13,892ಕ್ಕೆ ಏರಿಕೆಯಾಗಿದೆ.
ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ವಿದ್ಯಾರ್ಥಿಗಳ ಪಾಲು ಕೂಡ ಹೆಚ್ಚಾಗಿದ್ದು, 2023ರಲ್ಲಿ ದೇಶದಲ್ಲಿ ನಡೆದ ಆತ್ಮಹತ್ಯೆಗಳ ಪೈಕಿ ಸುಮಾರು ಶೇ. 8ರಷ್ಟು ವಿದ್ಯಾರ್ಥಿಗಳದ್ದೇ ಆಗಿದೆ ಎಂದು ವರದಿ ತಿಳಿಸಿದೆ.
ಶೈಕ್ಷಣಿಕ ಒತ್ತಡ, ಅಂಕಗಳ ಸ್ಪರ್ಧೆ, ನಿರುದ್ಯೋಗ ಭೀತಿ, ಕುಟುಂಬದ ನಿರೀಕ್ಷೆಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ನಂತರ ಈ ಸಮಸ್ಯೆ ಮತ್ತಷ್ಟು ಗಂಭೀರಗೊಂಡಿದೆ ಎನ್ನಲಾಗುತ್ತಿದೆ. ವಿದ್ಯಾರ್ಥಿರ್ಥಿ
ಇದನ್ನೂ ಓದಿ : ಮಹಿಳಾ ಸುರಕ್ಷತೆಯಲ್ಲಿ ಮತ್ತೆ ಕಳವಳ | ಅಪರಾಧ ಪ್ರಕರಣಗಳಲ್ಲಿ ಬೆಂಗಳೂರಿಗೆ ದೇಶದಲ್ಲೇ 3ನೇ ಸ್ಥಾನ
ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಪರೀಕ್ಷಾ ವೈಫಲ್ಯ ಮತ್ತು ಭವಿಷ್ಯದ ಆತಂಕವೂ ಪ್ರಮುಖ ಕಾರಣಗಳಾಗಿ ಗುರುತಿಸಲಾಗಿದೆ.
ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, ಅನೇಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಹೆದರುತ್ತಿದ್ದಾರೆ. ಶಾಲೆ ಮತ್ತು ಕಾಲೇಜುಗಳಲ್ಲಿ ಸಮರ್ಪಕ ಸಮಾಲೋಚನಾ ವ್ಯವಸ್ಥೆಗಳ ಕೊರತೆಯೂ ದೊಡ್ಡ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳ ಮೇಲೆ ಅತಿಯಾದ ಒತ್ತಡ ಹೇರುವ ಶಿಕ್ಷಣ ವ್ಯವಸ್ಥೆ ಮತ್ತು ಹೋಲಿಕೆ ಸಂಸ್ಕೃತಿ ಬದಲಾಗಬೇಕಿದೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿ
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಸರ್ಕಾರ ‘ಮನೋದರ್ಪಣ’ ಮತ್ತು ‘ಟೆಲಿ ಮಾನಸ್’ ಸೇರಿದಂತೆ ಹಲವು ಸಹಾಯವಾಣಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ಇದನ್ನೂ ನೋಡಿ : “(ಲೇಬರ್ ಕೋಡ್ಸ್) ಶ್ರಮ ಸಂಹಿತೆಗಳ ಜಾರಿ: ರಾಜ್ಯಗಳ ಮುಂದಿನ ದಾರಿ ಯಾವುದು?” Janashakthi Media
