ಎಸ್ಎಫ್‌ಐ ಹಾವೇರಿ ಜಿಲ್ಲಾಧ್ಯಕ್ಷರಾಗಿ ಅರುಣ್ ಕುಮಾರ್ ನಗವತ, ಕಾರ್ಯದರ್ಶಿಯಾಗಿ ಚೈತ್ರಾ ಕೊರವರ ಆಯ್ಕೆ

ಹಾವೇರಿ: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್‌ಐ) ಹಾವೇರಿ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ನಗವತ ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ಚೈತ್ರಾ ಕೊರವರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಎಸ್ಎಫ್‌ಐ

ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಎಸ್ಎಫ್‌ಐ ಹಾವೇರಿ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನದ ಪ್ರತಿನಿಧಿ ಅಧಿವೇಶನದಲ್ಲಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಮಾನ ಗುಣಮಟ್ಟದ ಶಿಕ್ಷಣ, ಪ್ರಜಾಪ್ರಭುತ್ವದ ರಕ್ಷಣೆ, ಜಿಲ್ಲೆಯ ಸೌಹಾರ್ದತೆ ಹಾಗೂ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿನ ಡೊನೇಷನ್ ಹಾವಳಿಗೆ ಕಡಿವಾಣ ಹಾಕಬೇಕು. ಜಿಲ್ಲೆಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಸ್ವಂತ ಕಟ್ಟಡ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಜಿಲ್ಲೆಯಲ್ಲಿ ಕಾನೂನು ಕಾಲೇಜನ್ನು ಕೂಡಲೇ ಆರಂಭಿಸಬೇಕು ಎಂದು ಸಮ್ಮೇಳನ ಆಗ್ರಹಿಸಿತು.

ಆರ್‌ಟಿಇ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೊಸ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡುವುದರ ಜೊತೆಗೆ, ಈಗಿರುವ ಹಾಸ್ಟೆಲ್‌ಗಳ ವ್ಯವಸ್ಥೆಯನ್ನು ಬಲಪಡಿಸಬೇಕು. ಶಾಲಾ-ಕಾಲೇಜುಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ನಿವಾರಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು. ಎಸ್ಎಫ್‌ಐ

ಇದನ್ನೂ ಓದಿ : ವಿದ್ಯಾರ್ಥಿಗಳ ಸಮಸ್ಯೆ, ಶಿಕ್ಷಣ ಸುಧಾರಣೆಗೆ ಸಚಿವ ಸಂಪುಟ ಉಪಸಮಿತಿ ರಚನೆ: ಸಿಎಂ ಡಿಕೆ ಶಿವಕುಮಾರ್ 

ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಪ್ರಮುಖ ತಾಲೂಕು ನಗರಗಳಲ್ಲಿ ನಗರ ಸಾರಿಗೆ ವ್ಯವಸ್ಥೆ ಆರಂಭಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು. ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ, ಅವರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಬೇಕು ಹಾಗೂ ಲೈಂಗಿಕ ಕಿರುಕುಳ ತಡೆ ಸಮಿತಿಗಳನ್ನು ರಚಿಸಬೇಕು ಎಂದು ಸಮ್ಮೇಳನ ಆಗ್ರಹಿಸಿತು.

ಇದಲ್ಲದೆ ಜಿಲ್ಲೆಯಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂಬ ನಿರ್ಣಯವನ್ನೂ ಕೈಗೊಳ್ಳಲಾಯಿತು.

ಈ ನಿರ್ಣಯಗಳ ಜಾರಿಗಾಗಿ 31 ಸದಸ್ಯರ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಅರುಣ್ ಕುಮಾರ್ ನಗವತ, ಕಾರ್ಯದರ್ಶಿಯಾಗಿ ಚೈತ್ರಾ ಕೊರವರ, ಉಪಾಧ್ಯಕ್ಷರಾಗಿ ಶಂಭುಲಿಂಗ ಸವದತ್ತಿ, ದ್ಯಾಮಣ್ಣ ಆರೇರ್, ಸಿಂಧೂ ತಳವಾರ ಹಾಗೂ ವೀರನಗೌಡ ಆಯ್ಕೆಯಾದರು.

ಸಹ ಕಾರ್ಯದರ್ಶಿಗಳಾಗಿ ಪರಶುರಾಮ ಎಸ್., ಶೋಭಾ ದೇವರಮನೆ, ದೀಪಾ, ಶರಣು ಹಾಗೂ ಪೂಜಾ ಬಾರ್ಕಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ನಂಜುಂಡಿ ಬಳಿಗಾರ, ವಿಕಾಸ ದುರಗಣ್ಣನವರ, ಮಲ್ಲಿಕಾ ರೆಹನಾ, ಪ್ರಿಯಾಂಕಾ, ಸೂರೈ ಭಾನು, ಗುರುಕಿರಣ, ಮಹೇಶ್ವರಿ ಎನ್.ಪಿ., ಉಮಾ ಹಾರಾರಿ, ತನುಜಾ ಹೊಂಬರಡಿ, ಪೂಜಾ ವೈ.ಎಸ್., ಉದಯ ಖಾಜಿ, ಆದಿಲ್ ಷಾ ಬಸನಹಾಳ, ಖಲಂದರ್ ಕರ್ಜಗಿ, ಮಹಮ್ಮದ್ ಯಾಸಿನ್, ಅರ್ಜುನ ಲಮಾಣಿ ಹಾಗೂ ಜಯಪ್ಪ ಗೌಡ ಆಯ್ಕೆಯಾಗಿದ್ದಾರೆ.

ಎಸ್ಎಫ್‌ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್ ಹಾಗೂ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಎಸ್ಎಫ್‌ಐ

ಇದನ್ನೂ ನೋಡಿ :ಎಸ್‌ಐಆರ್‌ ವಿರುದ್ಧ ಸೆ.1ರಂದು ‘ಚುನಾವಣಾ ಆಯೋಗ ಚಲೋ’: ಪ್ರಕಾಶ್‌ ರಾಜ್‌ Janashakthi Media

Donate Janashakthi Media

Leave a Reply

Your email address will not be published. Required fields are marked *