ನವದೆಹಲಿ: ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಉಪವಾಸದ ನಡುವೆ, ಶಿಕ್ಷಣತಜ್ಞ ಹಾಗೂ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ವಿರೋಧ ಪಕ್ಷಗಳ ನಾಯಕರು ಉಪವಾಸವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ಅವರು ನಡೆಸುತ್ತಿರುವ ಪ್ರತಿಭಟನೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋನಂ
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಘೋಷಿಸಿ, ವಾಂಗ್ಚುಕ್ ತಮ್ಮ ಉಪವಾಸವನ್ನು ಅಂತ್ಯಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಗುರುವಾರ ಸಂಜೆ 5 ಗಂಟೆಗೆ ಜಂತರ್ ಮಂತರ್ಗೆ ಭೇಟಿ ನೀಡಿ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ಸೋನಂ
“ಸೋನಂ ವಾಂಗ್ಚುಕ್ ಕೆಲ ದಿನಗಳಿಂದ ಉಪವಾಸದಲ್ಲಿದ್ದಾರೆ, ಅವರ ಆರೋಗ್ಯ ಹದಗೆಡುತ್ತಿದೆ. ಅವರು ದೇಶದ ಅಮೂಲ್ಯ ಸಂಪತ್ತು. ಹೋರಾಟಕ್ಕೆ ಇನ್ನೂ ಹಲವು ಮಾರ್ಗಗಳಿವೆ,” ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದೇ ವೇಳೆ, NEET ಪರೀಕ್ಷಾ ಅವ್ಯವಸ್ಥೆಗಳನ್ನು ತಡೆಗಟ್ಟಲು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: TET ಅಕ್ರಮದ ವಿರುದ್ಧ ರಾಹುಲ್ ಗಾಂಧಿ ಕಿಡಿ: ‘ಪ್ರಾಮಾಣಿಕವಾಗಿ ಓದಿದವರೇ ಸಂಕಷ್ಟದಲ್ಲಿದ್ದಾರೆ’
AAP ನಾಯಕಿ ಆತಿಶಿ ಅವರು ಸೋಮವಾರ ವಾಂಗ್ಚುಕ್ ಅವರನ್ನು ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿದ್ದರು.
ಇನ್ನೊಂದೆಡೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ವಾಂಗ್ಚುಕ್ ಅವರಿಗೆ ಉಪವಾಸ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. “ಅವರ ಜೀವನವು ಅಮೂಲ್ಯ. ಆದರೆ ಸಂವೇದನಾಶೀಲತೆ ಇಲ್ಲದ ಸರ್ಕಾರದ ಮೇಲೆ ಇಂತಹ ತ್ಯಾಗ ಪರಿಣಾಮ ಬೀರುವುದಿಲ್ಲ,” ಎಂದು ಅವರು ಹೇಳಿದ್ದಾರೆ.
ಹೋರಾಟದ 24ನೇ ದಿನ ಮತ್ತು ವಾಂಗ್ಚುಕ್ ಉಪವಾಸದ 17ನೇ ದಿನದ ವೇಳೆ ಈ ಮನವಿಗಳು ಬಂದಿವೆ. ಸಿಜೆಪಿ ಸ್ಥಾಪಕ ಅಭಿಜೀತ್ ದಿಪ್ಕೆ ಅವರ ಪ್ರಕಾರ, ವಾಂಗ್ಚುಕ್ ದೇಹದ ತೂಕ ಕುಸಿಯುತ್ತಿದ್ದು ತೀವ್ರ ನೋವನ್ನು ಅನುಭವಿಸುತ್ತಿದ್ದಾರೆ. ಉಪವಾಸ ನಿಲ್ಲಿಸುವಂತೆ ಕೇಳಿದಾಗ, “ನನ್ನನ್ನು ಉಪವಾಸ ನಿಲ್ಲಿಸಲು ಕೇಳಬೇಡಿ, ಸರ್ಕಾರ ಏಕೆ ಸಂವಾದಕ್ಕೆ ಬರುವುದಿಲ್ಲ ಎಂದು ಕೇಳಿ,” ಎಂದು ವಾಂಗ್ಚುಕ್ ಪ್ರತಿಕ್ರಿಯಿಸಿದ್ದಾರೆ.
ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿ, ವಾಂಗ್ಚುಕ್ ಜೀವನ ಅಮೂಲ್ಯವಾಗಿರುವುದರಿಂದ ಉಪವಾಸ ನಿಲ್ಲಿಸಲು ಮನವಿ ಮಾಡಿದ್ದಾರೆ.
ಸಂಘಟಕರ ಪ್ರಕಾರ, ಉಪವಾಸ ಆರಂಭಿಸಿದ ನಂತರ ವಾಂಗ್ಚುಕ್ ಸುಮಾರು 8.2 ಕೆ.ಜಿ ತೂಕ ಕಳೆದುಕೊಂಡಿದ್ದಾರೆ.
NEET ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಸಿಜೆಪಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಜೂನ್ 28ರಂದು ವಾಂಗ್ಚುಕ್ ಈ ಹೋರಾಟಕ್ಕೆ ಸೇರ್ಪಡೆಗೊಂಡಿದ್ದು, ಜುಲೈ 20ರಂದು ಸಂಸತ್ವರೆಗೆ ಮೆರವಣಿಗೆ ನಡೆಸುವುದಾಗಿ ಸಂಘಟನೆ ಘೋಷಿಸಿದೆ.
ಇದನ್ನೂ ನೋಡಿ: SIR ಕರ್ನಾಟಕ | ಕೆಲಸದ ಒತ್ತಡ, ಅಪಪ್ರಚಾರ: ಎಸ್ಐಆರ್ ಕೆಲಸದ ನೋವು ಬಿಚ್ಚಿಟ್ಟ ಬಿಎಲ್ಒ Janashakthi Media
