ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ವಿವಾದದಲ್ಲಿ ಇರುವಾಗ ರೈತರ ಜೊತೆ ಮಾತಾನಾಡಿ ಯೋಜನೆಯ ಭವಿಷ್ಯದ ಬಗ್ಗೆ ನಿರ್ಧರಿಸದೇ ಸರ್ವಾಧಿಕಾರಿ ರೀತಿಯಲ್ಲಿ ಪೊಲೀಸ್ ಬಲದಲ್ಲಿ ಸರ್ವೆ ಮಾಡುವುದನ್ನು ರೈತ ಸಂಘಟನೆಗಳು ವಿರೋಧಿಸಿವೆ. ಪೊಲೀಸ್
ನಿನ್ನೆ ಬಿಡದಿಯ ಮಂದಲ ಹಳ್ಳಿಯಲ್ಲಿ ಪೋಲೀಸ್ ಬಲದೊಂದಿಗೆ JMC ಮಾಡಲು ಅಧಿಕಾರಿಗಳು ಮುಂದಾದ್ದರಿಂದ ರೈತರು ಅದನ್ನು ಪ್ರತಿಭಟಿಸಿದ್ದಾರೆ. ರೈತರು ಕಳೆದ ಒಂದುವರೆ ವರ್ಷದಿಂದ ನಿರಂತರವಾಗಿ ಈ ಯೋಜನೆಗೆ ನಮ್ಮ ಸಮ್ಮತಿ ಇಲ್ಲ ಎಂದು ಪ್ರತಿಭಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ ಎಂದು ರೈತಸಂಘಟನೆಗಳು ತಿಳಿಸಿವೆ. ಪೊಲೀಸ್
ಇತ್ತೀಚಿಗೆ ಶಾಸಕರು ಸಭೆ ಕರೆದು ಏನು ಬೆಲೆ ಬೇಕು ಹೇಳಿಎಂದು ಕೇಳಿದಾಗಲೂ, ಬೆಲೆ ವಿಚಾರ ಮಾತನಾಡಲು ನಮಗೇನೂ ಇಲ್ಲ, ನಾವು ಭೂಮಿ ಮಾರಲು ಸಿದ್ಧರಿಲ್ಲ. “ಭೂಸ್ವಾಧೀನ ಕೈ ಬಿಡಬೇಕು” ಎಂಬ ಏಕೈಕ ಬೇಡಿಕೆ ಹೊರತಾಗಿ ಬೇರೆ ಯಾವ ಮಾತುಕತೆಗೂ ನಾವು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಧಿಕಾರಿಗಳು “ಹಾಗಾದರೆ ಈ ವಿಚಾರ ಮುಖ್ಯಮಂತ್ರಿಗಳೇ ತೀರ್ಮಾನಿಸಬೇಕು. ಅವರ ಜೊತೆ ಸಭೆ ನಿಗದಿ ಮಾಡುತ್ತೇವೆ” ಎಂದು ಮಾತುಕೊಟ್ಟಿದ್ದರು.
ಇದನ್ನೂ ಓದಿ: ರಸ್ತೆ, ಶಾಲೆ, ಉದ್ಯೋಗದ ಕನಸು ಹೊತ್ತ ಮಾಲ್ಡಾ ಗಡಿ ಗ್ರಾಮಗಳು
ಈಗ ಇದ್ದಕ್ಕಿದ್ದಂತೆ ಪೋಲೀಸ್ ಬಲಗಳೊಂದಿಗೆ ಜಂಟಿ ಸರ್ವೆ ಮಾಡಲು ಮುಂದಾಗಿರುವುದು ಒಪ್ಪತಕ್ಕದ್ದಲ್ಲ. ಇದನ್ನು ಸಂಯುಕ್ತ ಹೋರಾಟದ ಕರ್ನಾಟಕದ ಎಲ್ಲಾ ಸಹಭಾಗಿ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತೇವೆ.
ಯಾವುದೇ ಕಾರಣಕ್ಕೂ ಬಲವಂತದ ಸ್ವಾಧೀನಕ್ಕೆ ಸರ್ಕಾರ ಮುಂದಾಗಬಾರದು, ಕೂಡಲೇ ಮುಖ್ಯಮಂತ್ರಿಗಳು ರೈತರೊಂದಿಗೆ ಸಭೆ ಕರೆದು ಸಮಸ್ಯೆಯನ್ನು ಇತ್ಯಾರ್ಥಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ.
ಸರ್ಕಾರ ಒಂದು ವೇಳೆ ಬಲಂವಂತದ ಭೂಸ್ವಾಧೀನಕ್ಕೆ ಮುಂದಾದರೆ ಇದು ಕೇವಲ ಬಿಡದಿ ರೈತರ ಹೋರಾಟವಾಗಿ ಉಳಿಯುವುದಿಲ್ಲ. ಇಡೀ ರಾಜ್ಯದ ರೈತ ಕುಲ ತಿರುಗಿಬೀಳುತ್ತದೆ. ಇದರ ರಾಜಕೀಯ ಪರಿಣಾಮಗಳು ತೀವ್ರ ತರನದಾಗಿರುತ್ತವೆ. ಸರ್ಕಾರ ಈ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಎಚ್ಚರಿಸುತ್ತಿದ್ದೇವೆ.
ನಿನ್ನೆ ಅಧಿಕಾರಿಗಳು ಹೆಚ್ಚಿನ ಪೋಲೀಸ್ ಬಲಗಳನ್ನು ತಂದಾಗ ಇನ್ನೇನು ನಮ್ಮ ಭೂಮಿಯನ್ನು ವಶಪಡಿಸಿಕೊಂಡು ಬಿಡುತ್ತಾರೆ ಎಂಬ ಆತಂಕದಲ್ಲಿ ರೈತ ಮಹಿಳೆಯರು ಪೊರಕೆಗಳ ಜೊತೆ ಪ್ರತಿಭಟಿಸಿದ್ದಾರೆ.
ಕೆಲವರು ಅಧಿಕಾರಿಗಳ ಜೊತೆಯೂ ತಳ್ಳಾಟ ನಡೆದಿದೆ. ಇದಕ್ಕಾಗಿ ವಿಷಾದಿಸುತ್ತೇವೆ. ಆದರೆ ಈ ಸಂದರ್ಭ ಏರ್ಪಡಲು ಸರ್ಕಾರದ ನಡೆಯೇ ಮುಖ್ಯಕಾರಣವಾಗಿದೆ. ಏನೇ ಇದ್ದರೂ ರೈತರಾಗಿ ನಾವು ಸಂಯಮ ಕಾಪಾಡಿಕೊಳ್ಳೋಣ.
ದಿಟ್ಟವಾಗಿ ಆದರೆ ಶಾಂತಿಯುತವಾಗಿ ನಮ್ಮ ಹೋರಾಟ ಮುಂದುವರಿಯಲಿದೆ, ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಡದೆ ಉಳಿಸಿಕೊಳ್ಳುತ್ತೇವೆ ಎಂದು ರೈತಪರ ಸಂಘಟನೆಗಳ ಮುಖಂಡರಾದ ಹೆಚ್. ಆರ್. ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡ ಸ್ವಾಮಿ, ಟಿ.ಯಶವಂತ ತಿಳಿಸಿದ್ದಾರೆ.
ಇದನ್ನೂ ನೋಡಿ: ಚೇಳುಗಳ ವಿಸ್ಮಯ ಜಗತ್ತು: ಗೊತ್ತಿಲ್ಲದ ಅಚ್ಚರಿಯ ಸತ್ಯಗಳು | ಡಾ: ಎನ್.ಬಿ.ಶ್ರೀಧರ Janashakthi Media
