ಕರ್ನಾಟಕ SIR: 2002ರ ಮತದಾರರ ಪಟ್ಟಿಯಲ್ಲಿ ಹೆಸರು ಸಿಗದವರಿಗೂ ಅವಕಾಶ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪರಿಷ್ಕರಣೆ (SIR) ವೇಳೆ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಕಾಣಿಸದಿರುವ ಗೊಂದಲ ಮುಂದುವರಿದಿರುವ ಹಿನ್ನೆಲೆಯಲ್ಲಿ, ತಮ್ಮ ಅಥವಾ ಪೋಷಕರ ವಿವರಗಳನ್ನು ಪತ್ತೆಹಚ್ಚಲು ಸಾಧ್ಯವಾಗದ ಮತದಾರರು ಲಭ್ಯವಿರುವ ಮಾಹಿತಿಯೊಂದಿಗೆ ಸಹಿ ಮಾಡಿದ ಗಣತಿ ಅರ್ಜಿಯನ್ನು ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕ್ಕುಮಾರ್ ಮನವಿ ಮಾಡಿದ್ದಾರೆ.

ಸಹಿ ಮಾಡಿದ ಗಣತಿ ಅರ್ಜಿಯನ್ನು ಸಲ್ಲಿಸುವುದರಿಂದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಪರಿಗಣಿಸಲು ಸಾಕಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಕರ್ನಾಟಕ 

ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರಂದು ಪ್ರಕಟಿಸಲಾಗಲಿದ್ದು, ಬಳಿಕ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ, ತಪ್ಪುಗಳಿದ್ದರೆ ಆಕ್ಷೇಪಣೆ ಅಥವಾ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಕರ್ನಾಟಕ 

ಇದನ್ನೂ ಓದಿ: ಶಿಮ್ಲಾ| ಮಳೆ ಅಬ್ಬರ: ಭೂಸ್ಖಲನದಿಂದ ಪ್ರಮುಖ ರಸ್ತೆ ಬಂದ್; ಭೂಕುಸಿತ ಭೀತಿ ಹೆಚ್ಚಳ

ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, 2002ರ ಮತದಾರರ ಪಟ್ಟಿಯೊಂದಿಗೆ ತಕ್ಷಣ ಹೊಂದಾಣಿಕೆ ಆಗದಿದ್ದರೂ, ಬೂತ್ ಮಟ್ಟದ ಅಧಿಕಾರಿ (BLO)ಗೆ ಸಹಿ ಮಾಡಿದ ಗಣತಿ ಅರ್ಜಿ ಸಲ್ಲಿಸುವುದು ಹೆಸರು ಸೇರ್ಪಡೆಗೆ ಅತ್ಯಂತ ವಿಶ್ವಾಸಾರ್ಹ ಮಾರ್ಗವಾಗಿದೆ.

2002ರ ಮತದಾರರ ಪಟ್ಟಿಯಲ್ಲಿ ಇದ್ದ ಮತದಾರರು ಹಾಗೂ ನಂತರದ ವರ್ಷಗಳಲ್ಲಿ ಮತದಾನದ ಅರ್ಹತೆ ಪಡೆದ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸುವ ಮತದಾರರ ಮ್ಯಾಪಿಂಗ್ ಕಾರ್ಯವನ್ನು ಚುನಾವಣಾ ಆಯೋಗ ಪೂರ್ಣಗೊಳಿಸುವ ಹಂತದಲ್ಲಿದೆ. ಈವರೆಗೆ ಶೇ.90ಕ್ಕೂ ಹೆಚ್ಚು ಕಾರ್ಯ ಪೂರ್ಣಗೊಂಡಿದ್ದು, ಪರಿಶೀಲನೆ ವೇಳೆ ಉಂಟಾಗುವ ಅಸಂಗತತೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ 2002ರ ಪಟ್ಟಿಯಲ್ಲಿ ಹೆಸರು ಪತ್ತೆಯಾಗದ ಅಥವಾ ಅಧಿಕೃತ ದಾಖಲೆಗಳೊಂದಿಗೆ ವಿವರಗಳು ಹೊಂದಾಣಿಕೆಯಾಗದ ಮತದಾರರಿಗೆ ಚುನಾವಣಾ ನೋಂದಣಿ ಅಧಿಕಾರಿಗಳು (ERO) ಲಿಖಿತ ನೋಟಿಸ್ ನೀಡಲಿದ್ದಾರೆ. ಅಂತಹ ಮತದಾರರು ಗಣತಿ ಅರ್ಜಿಯ ಹಿಂಭಾಗದಲ್ಲಿ ನೀಡಿರುವ ಪಟ್ಟಿಯಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಬಳಿಕ ERO ದಾಖಲೆಗಳನ್ನು ಪರಿಶೀಲಿಸಿ ಪ್ರಕರಣದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಶುಕ್ರವಾರದವರೆಗೆ ರಾಜ್ಯದ 5.5 ಕೋಟಿ ಗಣತಿ ಅರ್ಜಿಗಳ ಪೈಕಿ ಶೇ.89ರಷ್ಟು ಅರ್ಜಿಗಳನ್ನು ವಿತರಿಸಲಾಗಿದೆ. ರಾಜ್ಯದ 59,050 ಮತಗಟ್ಟೆಗಳ ಪೈಕಿ ಶೇ.51ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೇ.100ರಷ್ಟು ಅರ್ಜಿ ವಿತರಣೆ ಪೂರ್ಣಗೊಂಡಿದೆ. ಆದರೆ ವಿತರಿಸಲಾದ ಅರ್ಜಿಗಳಲ್ಲಿ ಶೇ.19.3ರಷ್ಟು ಮಾತ್ರ ಭರ್ತಿ ಮಾಡಿ ಡಿಜಿಟಲೀಕರಣ ಮಾಡಲಾಗಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಮಾಣ ತೀರಾ ಕಡಿಮೆಯಾಗಿದ್ದು, ಒಟ್ಟು ಅರ್ಜಿಗಳಲ್ಲಿ ಶೇ.0.3ರಷ್ಟಿದೆ. ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ವಿವರಗಳಲ್ಲಿ ಹೊಂದಾಣಿಕೆ ಸಮಸ್ಯೆಯಿಂದ ಆನ್‌ಲೈನ್ ಪರಿಶೀಲನೆಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಚುನಾವಣಾ ಆಯೋಗವು 3.3 ಲಕ್ಷಕ್ಕೂ ಹೆಚ್ಚು ಮತದಾರರನ್ನು ಗೈರು, ಪತ್ತೆಯಾಗದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಅಥವಾ ಇತರೆ ವರ್ಗಗಳಿಗೆ ಸೇರಿರುವವರು ಎಂದು ಗುರುತಿಸಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಮೊದಲು ಈ ಪ್ರಕರಣಗಳನ್ನು ಬೂತ್ ಮಟ್ಟದ ಏಜೆಂಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಿ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ.

ಇದನ್ನೂ ನೋಡಿ: “ವೋಟ್ ಬೇಕಾದಾಗ ನಾವು ಬೇಕು, ವ್ಯಾಪಾರಕ್ಕೆ ಜಾಗ ಕೇಳಿದರೆ ಬೇಡವೇ?” Janashakthi Media

Donate Janashakthi Media

Leave a Reply

Your email address will not be published. Required fields are marked *