ಒಡಿಶಾ| ಹಣಕ್ಕಾಗಿ ಸಹೋದರಿಯ ಶವವನ್ನೇ ಬ್ಯಾಂಕ್‌ಗೆ ತಂದ ವ್ಯಕ್ತಿ!

ಡಿಶಾ: ಏಪ್ರಿಲ್ 28ರಂದು ಗ್ರಾಮೀಣ ಬ್ಯಾಂಕ್‌ ಮುಂದೆ ಜಿತು ಮುಂಡ ಎಂಬ ಬುಡಕಟ್ಟು ಜನಾಂಗದ ವ್ಯಕ್ತಿ ತನ್ನ ಸಹೋದರಿಯ ಹೆಣವನ್ನು ಸಮಾಧಿಯಿಂದ ಹೊರತೆಗೆದು ಬ್ಯಾಂಕ್ ಮುಂದೆ ತಂದು ಇಟ್ಟಿದ ಘಟನೆ ರಾಜ್ಯದಲ್ಲಿ ನಡೆದಿದೆ. ಒಡಿಶಾ

ಎರಡು ತಿಂಗಳ ಹಿಂದೆ ಮೃತಪಟ್ಟಿದ್ದ ತನ್ನ ಸಹೋದರಿ ಕರ್ಲ ಮುಂಡ ಎಂಬಾಕೆಯ ಖಾತೆಯಲ್ಲಿ 19300 ರೂ ಇತ್ತು. ಸಾಯುವ ಮುನ್ನ ಆಕೆ ಇದನ್ನು ವಿತ್‌ ಡ್ರಾ ಮಾಡಿಕೊಳ್ಳುವಂತೆ ಸಹೋದರನಿಗೆ ತಿಳಿಸಿದ್ದರು. ಅದರಂತೆ ಬ್ಯಾಂಕ್‌ಗೆ ತೆರಳಿದ ಜಿತುಗೆ ಬ್ಯಾಂಕ್ ಅಧಿಕಾರಿಗಳು ಖಾತೆದಾರರೇ ನೇರವಾಗಿ ಬರಬೇಕು ಎಂದಿದ್ದರು. ತನ್ನ ಸಹೋದರಿ ಸಾವನ್ನಪ್ಪಿದ್ದಾರೆ ಎಂದಾಗ ಮರಣ ಪತ್ರ ತರಬೇಕೆಂದು ತಿಳಿಸಿದರು.

ಇದನ್ನೂ ಓದಿ: “ಕಾಂಗ್ರೆಸ್–ಬಿಜೆಪಿ ಒಂದೇ ನಾಣ್ಯದ ಎರಡು ಮುಖ”: ವಿಜಯರಾಘವನ್ ಟೀಕೆ

ಕಡುಬಡವನಾಗಿದ್ದ ಜಿತು ಮುಂಡಗೆ ಮರಣ ಪತ್ರ ಪಡೆದುಕೊಳ್ಳುವುದು ಕಷ್ಟವಾಗಿತ್ತು. ಬ್ಯಾಂಕ್‌ನ ಈ ನಿಯಮದಿಂದ ಬೇಸತ್ತ ಜಿತು ಮುಂಡ ಸಮಾಧಿಯಿಂದ ತನ್ನ ಸಹೋದರಿಯ ಹೆಣವನ್ನು ಹೊರತೆಗೆದು ಸುಮಾರು ಐದು ಕಿಲೋಮೀಟರ್ ಹೆಗಲ ಮೇಲೆ ಹೊತ್ತು ಬ್ಯಾಂಕ್‌ಗೆ ತಂದು ಸಾಕ್ಷಿಯಾಗಿ ಸಿಬ್ಬಂದಿ ಮುಂದಿಟ್ಟಿದ್ದರು.

ಈ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಬ್ಯಾಂಕ್ ಸಿಬ್ಬಂದಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು. ಹೀಗೆ ತಮ್ಮ ಮೇಲೆ ಆರೋಪ ಕೇಳಿಬರುತ್ತಿದ್ದಂತೆ ಬ್ಯಾಂಕ್ ಇದರಲ್ಲಿ ತಮ್ಮ ತಪ್ಪಿಲ್ಲ, ಮೃತಪಟ್ಟ ಖಾತೆದಾರರ ಹಣವನ್ನು ಸರಿಯಾದ ಪತ್ರಗಳಿಲ್ಲದೇ ನೀಡಲಾಗುವುದಿಲ್ಲ, ಅದನ್ನೇ ಆ ವ್ಯಕ್ತಿಗೆ ಹೇಳಿಕಳುಹಿಸಲಾಗಿತ್ತು. ಆದರೆ ಆ ವ್ಯಕ್ತಿ ಹೆಣವನ್ನು ತಂದರು ಎಂದು ಹೇಳಿಕೊಂಡಿತ್ತು.

ಇದೀಗ ಇಷ್ಟೆಲ್ಲ ನಡೆದ ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ಪಾಲಿನ ಕೆಲಸಗಳನ್ನು ವೇಗವಾಗಿ ಮುಗಿಸಿಕೊಟ್ಟಿದ್ದು, ಕರ್ಲ ಮುಂಡ ಅವರ ಮರಣ ಪತ್ರವನ್ನು ಬ್ಯಾಂಕ್‌ಗೆ ಹಸ್ತಾಂತರಿಸಿದೆ. ಬಳಿಕ ಬ್ಯಾಂಕ್ ಜಿತು ಮುಂಡಗೆ ಹಣವನ್ನು ಊರಿನ ಜನತೆಯ ಸಮ್ಮುಖದಲ್ಲಿ ವಿತರಿಸಿದೆ.

ಇದನ್ನೂ ನೋಡಿ: ಗ್ರಾಮೀಣ ಕೂಲಿಕಾರರ ಸಂಕಷ್ಟಗಳಿಗೆ ಧ್ವನಿಯಾದ ಕೂಲಿಕಾರರ ಸಮ್ಮೇಳ Janashakthi Media

Donate Janashakthi Media

Leave a Reply

Your email address will not be published. Required fields are marked *