ಪಶ್ಚಿಮ ಬಂಗಾಳ: ರಾಜ್ಯದಲ್ಲಿ ಏಪ್ರಿಲ್ 29ರಂದು ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಬಿರುಸಿನಿಂದ ಸಾಗುತ್ತಿದೆ. ಪ್ರಮುಖ ಜಿಲ್ಲೆಗಳಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ 61.11 ರಷ್ಟು ದಾಖಲೆ ಮಟ್ಟದ ಮತದಾನವಾಗಿದೆ. ಬಂಗಾಳ
ಇದನ್ನೂ ಓದಿ: ಹೊಸ ಆದಾಯ ತೆರಿಗೆ ನಿಯಮಗಳು: ಫಾರ್ಮ್ 13 ಬದಲು ಫಾರ್ಮ್ 128 ಜಾರಿ
ಮತದಾನದ ಇತ್ತೀಚಿನ ಅಂಕಿ-ಅಂಶಗಳು
1. ಸಮಯ: ಮಧ್ಯಾಹ್ನ 1:00 ಗಂಟೆಯವರೆಗೆ.
2. ಒಟ್ಟು ಮತದಾನ: ಶೇ 61.11%.
3. ಒಟ್ಟು ಕ್ಷೇತ್ರಗಳು: 142 ವಿಧಾನಸಭಾ ಕ್ಷೇತ್ರಗಳು.
4. ಮತದಾರರ ವಿವರ: ಒಟ್ಟು 3.21 ಕೋಟಿ (1.57 ಕೋಟಿ ಮಹಿಳೆಯರು, 792 ಲಿಂಗತ್ವ ಅಲ್ಪಸಂಖ್ಯಾತರು).
ಪ್ರಮುಖ ಜಿಲ್ಲೆಗಳು
ಬೆಳಿಗ್ಗೆ 7 ಗಂಟೆಯಿಂದಲೇ ಈ ಕೆಳಗಿನ ಜಿಲ್ಲೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ:
1. ಕೋಲ್ಕತ್ತ
2 .ಉತ್ತರ ಮತ್ತು ದಕ್ಷಿಣ 24 ಪರಗಣ
3. ಹೂಗ್ಲಿ
4. ಹೌರಾ
5. ಪುರ್ಬಾ ಬರ್ಧಮಾನ್
ಹಿನ್ನೆಲೆ: 2021ರ ಚುನಾವಣೆಯಲ್ಲಿ ಈ 142 ಕ್ಷೇತ್ರಗಳ ಪೈಕಿ ಟಿಎಂಸಿ 123 ಮತ್ತು ಬಿಜೆಪಿ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಹಾಲಿ ಸ್ಥಿತಿ: ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಕಂಡುಬರುತ್ತಿದೆ.
ಘಟನೆಗಳು: ಎರಡನೇ ಹಂತದ ಮತದಾನದ ವೇಳೆ ಅಲ್ಲಲ್ಲಿ ಸಣ್ಣಪುಟ್ಟ ಘರ್ಷಣೆ ಹಾಗೂ ಹಿಂಸಾಚಾರ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ದಿನಾಂಕಗಳು
- ಮೊದಲ ಹಂತದ ಮತದಾನ: ಏಪ್ರಿಲ್ 23 (ಶೇ 93.19% ಮತದಾನವಾಗಿತ್ತು).
- ಎರಡನೇ ಹಂತದ ಮತದಾನ: ಏಪ್ರಿಲ್ 29 (ಇಂದು).
- ಫಲಿತಾಂಶ:ಮೇ 4, 2026.
ಇದನ್ನೂ ನೋಡಿ: ಪಕ್ಷಾಂತರನಿಷೇಧ ಕಾಯ್ದೆ: ಪ್ರಜಾಪ್ರಭುತ್ವದ ರಕ್ಷಕವೇ, ಪಕ್ಷಾಂತರದ ದ್ವಾರವೇ? Janashakthi Media
