ಬಳ್ಳಾರಿ: ಎಪಿಎಂಸಿ ಪೊಲೀಸರು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಳ್ಳಾರಿಯ ಕಚೇರಿಯಲ್ಲಿ ನಡೆದ 16 ಕೋಟಿ ರೂಪಾಯಿಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಪ್ರಕಟಣೆ ಹೊರಡಿಸಿದ್ದಾರೆ. ಬಂಧಿತ ಆರೋಪಿಯನ್ನು ಸಂತೋಷ್ ಕುಮಾರ್ (33) ಎಂದು ಗುರುತಿಸಲಾಗಿದೆ.
2022ರಿಂದ 2026ರ ಮಾರ್ಚ್ವರೆಗಿನ ಅವಧಿಯಲ್ಲಿ (ಮೂವರು ಕಾರ್ಯಪಾಲಕ ಅಭಿಯಂತರರ ಅವಧಿಯಲ್ಲಿ) ಈ ವಂಚನೆ ನಡೆದಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುಹಂಚಿಕೆ: ಬಿಜೆಪಿಯ ಸೀಮಿತ ರಾಜಕೀಯ ಅಜೆಂಡಾಗೆ ಕುಗ್ಗಿಸಬಾರದು
ಕೆಐಎಡಿಬಿ ಬಳ್ಳಾರಿ ವಲಯ ಕಚೇರಿಯ ಗುತ್ತಿಗೆ ನೌಕರ ಹಾಗೂ ಖಾಯಂ ನೌಕರರು ಮತ್ತು ಬ್ಯಾಂಕ್ ಸಿಬ್ಬಂದಿಯವರು ಸೇರಿಕೊಂಡು, ನಕಲಿ ಸಹಿ ಬಳಸಿ, ಮಂಡಳಿಯ ಖಾತೆಯಿಂದ 16.17 ಕೋಟಿ ರೂ. ಹಣವನ್ನು, ಮಂಡಳಿಗೆ ಸಂಬಂಧವಿಲ್ಲದವರ ಖಾತೆಗಳಿಗೆ ವರ್ಗಾವಣೆ ಮಾಡಿರುವ ಆರೋಪ ಇದಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ, ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳ ಮಾರ್ಚ್ 19ರಂದು, ಅಪರಾಧ ಸಂಖ್ಯೆ 65/2026 ಕಲಂ 316(2), 316(4), 316 (5), 318 (4), 336 (2), 336 (3), 340 (2), 3(5), ಬಿಎನ್‌ಎಸ್ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಎಪಿಎಂಸಿ ಠಾಣೆ ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಂತೋಷ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಮುಂದುವರೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ನೋಡಿ: SC ಒಳಮೀಸಲಾತಿ| ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಸಿಪಿಐ(ಎಂ) ಆಗ್ರಹ Janashakthi Media
