ಅನ್ನಭಾಗ್ಯ ಅಕ್ಕಿ ಅವ್ಯವಹಾರ ತನಿಖೆಗೆ ಲೋಕಾಯುಕ್ತ ವಿಶೇಷ ಸಮಿತಿ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಆಗುವ ಅಕ್ಕಿಯ ಸರಬರಾಜು ಶೃಂಖಲೆ ಹಾಗೂ ಗುಣಮಟ್ಟದಲ್ಲಿ ನಡೆದಿರುವ ಅಕ್ರಮಗಳ ಪರಿಶೀಲನೆಗಾಗಿ ಲೋಕಾಯುಕ್ತವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಅನ್ನಭಾಗ್ಯ

ಈ ಸಮಿತಿಯು ಆಡಳಿತ ದೋಷಗಳಿಂದ ಸರ್ಕಾರದ ಖಜಾನೆಗೆ ಉಂಟಾಗಿರುವ ನಷ್ಟ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ಜನರಿಗೆ ಸಿಗಬೇಕಾದ ಹಕ್ಕಿನ ಅಕ್ಕಿ ವಂಚನೆ ಕುರಿತು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಶಿಫಾರಸು ಮಾಡಲಿದೆ.

ಇದನ್ನೂ ಓದಿ: ಅಂಗುಲ್ ಅರಣ್ಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಗ್ರೀನ್ ಸಿಗ್ನಲ್: 3.3 ಲಕ್ಷ ಮರಗಳ ಕಡಿತ ಆತಂಕ!

ಸಮಿತಿಯ ಅಧ್ಯಕ್ಷರಾಗಿ ಆಡಳಿತ ಸುಧಾರಣಾ ಇಲಾಖೆ (DPAR) ಮುಖ್ಯ ಕಾರ್ಯದರ್ಶಿ ಹರ್ಷ ಗುಪ್ತಾ ನೇಮಕಗೊಂಡಿದ್ದು, ಸದಸ್ಯರಾಗಿ ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ಮಹಾನಿರ್ದೇಶಕ ಪೊಲೀಸ್ ಮನೀಷ್ ಖಾಬಿಕರ್ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಕನಗವಳ್ಳಿ ಇದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತನಿಖೆಯ ವೇಳೆ ಪತ್ತೆಯಾದ ಪ್ರಾಥಮಿಕ ಅಕ್ರಮಗಳು ಮತ್ತು ಅನಿಯಮಿತತೆಗಳನ್ನು ಪರಿಗಣಿಸಿ ವ್ಯವಸ್ಥೆಯನ್ನು ಸುಧಾರಿಸುವ ಮಾರ್ಗಗಳ ಬಗ್ಗೆ ಸಮಿತಿ ವರದಿ ಸಿದ್ಧಪಡಿಸಿ ಆಗಸ್ಟ್ 20ರೊಳಗೆ ಸಲ್ಲಿಸಲಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಬಳಿಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ. ವೀರಪ್ಪ ಅವರ ಮಾರ್ಗದರ್ಶನದಲ್ಲಿ ಜೂನ್ 12ರಂದು 27 ತಂಡಗಳನ್ನು ರಚಿಸಿ ದಿಢೀರ್ ದಾಳಿಗಳನ್ನು ನಡೆಸಲಾಗಿತ್ತು. ಲೋಕಾಯುಕ್ತ ಪೊಲೀಸರು ಮತ್ತು ನ್ಯಾಯಾಂಗ ಅಧಿಕಾರಿಗಳಿಂದ ನಡೆದ ಈ ಪರಿಶೀಲನೆ ವೇಳೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ.

ಇದನ್ನೂ ನೋಡಿ: ಮಫ್ತಿ ಪೊಲೀಸರ ಕಾರ್ಯಾಚರಣೆ! ಸೋನಂ ವಾಂಗ್‌ಚುಕ್‌ರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ ಕೇಂದ್ರದ ವಿರುದ್ಧ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *