ಸ್ತೂರಿರಂಗನ್ ವರದಿ ವಿರುದ್ಧ ರೈತರ ಆಕ್ರೋಶ: ಹೆದ್ದಾರಿ ಬಂದ್, ಸಿಎಂ ಭೇಟಿಗೆ ಪಟ್ಟು

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಡಾ. ಕೆ. ಕಸ್ತೂರಿರಂಗನ್ ವರದಿ ವಿರೋಧಿಸಿ ಚಿಕ್ಕಮಗಳೂರು ಜಿಲ್ಲೆಯ ಸಾವಿರಾರು ರೈತರು ಸುಮಾರು 10 ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಿ ಶೃಂಗೇರಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಅಹವಾಲು ಆಲಿಸಬೇಕು ಎಂದು ಅವರು ಪಟ್ಟು ಹಿಡಿದರು.

ಬಾಳೆಹೊನ್ನೂರಿನಲ್ಲಿ ಮುಖ್ಯಮಂತ್ರಿ ಸಮಾವೇಶದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ, ಸಂಗಮೇಶ್ವರ ಪೇಟೆಯಿಂದ ರೈತರು ಮೆರವಣಿಗೆಯಲ್ಲಿ ತೆರಳಿದರು. ಬಳಿಕ ಶೃಂಗೇರಿ ರಸ್ತೆಯಲ್ಲಿ ಕುಳಿತು ಕಸ್ತೂರಿರಂಗನ್ ವರದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೆಳಗ್ಗೆಯಿಂದ ಬಿಸಿಲಿನಲ್ಲೇ ಕಾದು ಕುಳಿತ ರೈತರು, ಸಿಎಂ ತಮ್ಮನ್ನು ಭೇಟಿಯಾಗುವವರೆಗೆ ರಸ್ತೆ ತಡೆ ತೆರವುಗೊಳಿಸುವುದಿಲ್ಲ ಎಂದು ಎಚ್ಚರಿಸಿದರು. ಕಸ್ತೂರಿರಂಗನ್

ಮಧ್ಯಾಹ್ನ ಮುಖ್ಯಮಂತ್ರಿ ಹೆಲಿಕಾಪ್ಟರ್ ಮೂಲಕ ರಂಭಾಪುರಿ ಮಠದ ಸಮೀಪದ ಹೆಲಿಪ್ಯಾಡ್‌ಗೆ ಆಗಮಿಸಿದರೂ, ಮೊದಲು ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದರು. ಇದರಿಂದ ಸಮಾವೇಶದ ಸ್ಥಳಕ್ಕೆ ಅವರ ಆಗಮನ ವಿಳಂಬವಾಯಿತು. ಆದರೆ ರೈತರು ಸ್ಥಳದಿಂದ ಕದಲದೆ ಸಿಎಂ ಭೇಟಿಗೆ ಒತ್ತಾಯ ಮುಂದುವರಿಸಿದರು.

ಇದನ್ನೂ ಓದಿ : ಸೆ.22ರಿಂದ ‘ಎಸ್‌ಐಆರ್ ಪರಿಶೋಧನೆ-ಪ್ರತಿರೋಧ ಪ್ರವಾಸ’

ಕೊನೆಗೆ ಸಮಾವೇಶದ ಸ್ಥಳಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್, ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ರೈತರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮುಕ್ತ ಮನಸ್ಸಿನಿಂದ ಬಂದಿದ್ದು, ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಸೂಕ್ತ ಉತ್ತರ ನೀಡಲಾಗುವುದು ಎಂದು ಹೇಳಿದರು. ರೈತರ ಜೀವನ ಸುಧಾರಿಸುವುದು ತಮ್ಮ ಬದ್ಧತೆ ಎಂದು ಅವರು ತಿಳಿಸಿದರು.

ಈ ನಡುವೆ, ಕಸ್ತೂರಿರಂಗನ್ ವರದಿ ಕುರಿತು ರಾಜ್ಯ ಸರ್ಕಾರ ಏಕಪಕ್ಷೀಯ ಅಥವಾ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ. ಸೆ.27ರೊಳಗೆ ಕೇಂದ್ರದ ಕರಡು ಅಧಿಸೂಚನೆಗೆ ರಾಜ್ಯ ತನ್ನ ಆಕ್ಷೇಪಣೆ ಸಲ್ಲಿಸಬೇಕಿದ್ದು, ಸೆ.21ರಿಂದ ಆರಂಭವಾಗಿರುವ ವಿಶೇಷ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.

ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಮತ್ತು ಅಲ್ಲಿನ ರೈತರು, ಕೃಷಿಕರು ಹಾಗೂ ಸ್ಥಳೀಯ ಸಮುದಾಯಗಳ ಜೀವನೋಪಾಯದ ಪ್ರಶ್ನೆ ಇದೀಗ ರಾಜ್ಯದ ವಿಶೇಷ ಅಧಿವೇಶನದ ಪ್ರಮುಖ ವಿಚಾರವಾಗಿದೆ. ಕಸ್ತೂರಿರಂಗನ್

ಇದನ್ನೂ ನೋಡಿ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಮಾಜವನ್ನು ಬದಲಿಸಬಲ್ಲದೇ?” | ಅರ್ಚನ ಕಸ್ಮೀರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *