ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ

ಬೆಂಗಳೂರು: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಗಮನಾರ್ಹ ಕೃತಿಗಳನ್ನು ರಚಿಸಿದ ಲೇಖಕರನ್ನು ಈ ಬಾರಿ ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ತಿಳಿಸಿದ್ದು, ಲೇಖಕಿ ಡಾ.ವಸುಂಧರಾ ಭೂಪತಿ, ಪ್ರೊ.ಶಿವರಾಮಯ್ಯ, ಚಂದ್ರಶೇಖರ ತಾಳ್ಯ, ಡಾ.ಚಂದ್ರಕಾಂತ ಪೋಕಳೆ,  ಡಾ.ಎಸ್.ತುಕಾರಾಂ ಅವರು 2025ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಡಾ.ನಿಷ್ಠಿ ರುದ್ರಪ್ಪ, ಡಾ.ವೀರೇಶ ಬಡಿಗೇರ, ಡಾ.ಸಿ.ಜಿ.ಲಕ್ಷ್ಮೀಪತಿ, ಕಂನಾಡಿಗ ನಾರಾಯಣ, ರೂಪ ಹಾಸನ, ಜಯರಾಮ್ ರಾಯಪುರ, ಕುಮುದಾ ಸುಶೀಲ್, ಡಾ.ಓ.ನಾಗರಾಜು, ಬಿ.ಎಂ.ಬಶೀರ್, ಡಾ.ಜ್ಯೋತಿ ಅವರಿಗೆ 2025ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.

ಇದನ್ನೂ ಓದಿ : ಅವಧಿಗೂ ಮುನ್ನ ಶಾಸಕರ ಫೋಟೋ ಶೂಟ್: ವಿಧಾನಸಭೆಯಲ್ಲಿ ರಾಜಕೀಯ ಗದ್ದಲ

2024ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಭಾರತೀದೇವಿ.ಪಿ ಅವರ ಚಲಿಸುತ್ತಿವೆ ಚುಕ್ಕಿಗಳು, ಶಶಿ ತರೀಕೆರೆ ಅವರ ಪ್ಯೂಪಾ, ವೈ.ಎಸ್.ಹರಗಿ ಅವರ ಇಮಾಮ್ ಸಾಹೇಬರ ಕುದುರೆ, ಅನಿಲ್ ಗುನ್ನಾಪೂರ ಅವರ ಸರ್ವೆ ನಂಬರ್-97, ಡಾ.ಚಂದ್ರು ಕಾಳೇನಹಳ್ಳಿ ಅವರ ಗಂಧವತಿ, ಡಾ.ಶಿವರಾಜ ಬ್ಯಾಡರಹಳ್ಳಿ ಅವರ ಒಂದು ತಲೆ ಚವುರದ ಕಥೆ, ಮಲ್ಲಿಕಾರ್ಜುನ ಹುಲಗಬಾಳಿ ಅವರ ತಿರುಗಾಟ, ಎಂ.ಜಿ.ಹೆಗಡೆ ಅವರ ಆತ್ಮಕಥೆ ಚಿಮಣಿ ಬೆಳಕಿನಿಂದ, ಮಹಾಂತೇಶ ಪಾಟೀಲ ಅವರ ಬೆಳಕು ಬೆಳೆಯುವ ಹೊತ್ತು, ರಾಜಶೇಖರ ಕುಕ್ಕುಂದಾ ಅವರ ಬಿಸಿ ಬಿಸಿ ಬಾತು, ಶ್ರೀಧರ ತುಮರಿ ಅವರ ಪಕ್ಷಿಗಳ ವಿಸ್ಮಯ ವಿಶ್ವ, ಡಾ.ಎನ್.ಎನ್.ಚಿಕ್ಕಮಾದು ಅವರ ಪ್ರಜಾಮಾತೆ, ಡಾ.ಹಂಪನಹಳ್ಳಿ ತಿಮ್ಮೇಗೌಡರ ದಾಸೊಕ್ಕಲಿಗರು, ದು.ಸರಸ್ವತಿ ಅವರ ಜಾತಿ ಮತ್ತು ಲಿಂಗತ್ವ ಕೃತಿ, ಡಾ.ಹುಲಿಕುಂಟೆ ಮೂರ್ತಿ ಅವರ ನುಡಿ ಕಂಡಾಯ, ಲಕ್ಷ್ಮಣ ಶರೆಗಾರ ಅವರ ತಿದಿಯ ತುದಿಯ ಬೆಂಕಿಯ ಉಗುಳು, ಡಾ.ಪ್ರದೀಪ್ ಕೆಂಜಿಗೆ ಅವರ ನರವಾನರ ಕೃತಿ ಆಯ್ಕೆಯಾಗಿವೆ ಎಂದು ಮಾಹಿತಿ ನೀಡಿದರು.

ವಿವರಣೆಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಗೌರವ ಪ್ರಶಸ್ತಿ 50 ಸಾವಿರ ರೂ., ಸಾಹಿತ್ಯಶ್ರೀ ಪ್ರಶಸ್ತಿಗೆ 25 ಸಾವಿರ ರೂ., ಪುಸ್ತಕ ಬಹುಮಾನ 25 ಸಾವಿರ ರೂ., ಪುಸ್ತಕ ದತ್ತಿ ಬಹುಮಾನ 10 ಸಾವಿರ ರೂ. ನಗದು ಫಲಕ, ಶಾಲು, ಹಾರ, ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದರು.

ಇದನ್ನೂ ನೋಡಿ : “ನಮ್ಮ ಆರೋಗ್ಯ ಮತ್ತು ಕರ್ನಾಟಕ ಬಜೆಟ್ 2026–27” Janashakthi Media

Donate Janashakthi Media

Leave a Reply

Your email address will not be published. Required fields are marked *