ಎಲ್‌ಪಿಜಿ ಸಿಲಿಂಡರ್ ಕೊರತೆ; ಸಾಲದ ಒತ್ತಡ: ಹೊಟೇಲ್ ಮಾಲೀಕ ಆತ್ಮಹತ್ಯೆ

ಬೆಳಗಾವಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಹೋಟೆಲ್​ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಾಣಿಜ್ಯ ಸಿಲಿಂಡರ್ ಸಿಗದೇ ಅದೆಷ್ಟೋ ಹೋಟೆಲ್​ಗಳು ಬಂದ್ ಆಗಿದೆ, ಹೋಟೆಲ್​​ ಅನ್ನೇ ನಂಬಿ ಬದುಕುತ್ತಿದ್ದ ಜನರ ಜೀವನ ಬೀದಿಗೆ ಬಂದಿದೆ. ಕೊರತೆ

ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ಸಾಲದ ಒತ್ತಡದಿಂದ ಮನನೊಂದು ಹೊಟೇಲ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿರುವುದು ವರದಿಯಾಗಿದೆ.

ಚಿಕ್ಕೋಡಿ ತಾಲೂಕಿನ ಹುಕ್ಕೇರಿ ಪಟ್ಟಣದಲ್ಲಿ ಹಳೇ ಬಸ್ ನಿಲ್ದಾಣದ ಬಳಿ ʼಹನುಮಾನ್ ಹೊಟೇಲ್ʼ ನಡೆಸುತ್ತಿದ್ದ ಮಾಲೀಕ ರಾಮ ಹಳ್ಳೂರಿ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಿಗದ ಕಾರಣ ಹೊಟೇಲ್ ಮುಚ್ಚಿದ್ದೂ, ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ.

ಇದನ್ನೂ ಓದಿ: ಗ್ಯಾಸ್ ಪೂರೈಕೆ ವಿವಾದ: ಹೋಟೆಲ್ ಅರ್ಜಿ ಹೈಕೋರ್ಟ್ ವಜಾ

ಸಿಲಿಂಡರ್ಸಿಗದೇ ಹೋಟೆಲ್ಮಾಲೀಕ ಆತ್ಮಹತ್ಯೆ

ಹೋಟೆಲ್​ ನಂಬಿ ಜೀವನ ಸಾಗಿಸುತ್ತಿದ್ದ ಮಾಲೀಕ ರಾಮ ಹಳ್ಳೂರಿ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಸಾಲದ ಬ್ಯಾಂಕ್ ಬಡ್ಡಿ ಮತ್ತು ಹಣದ ಕೊರತೆಯ ಒತ್ತಡ ತಾಳಲಾರದೆ ಅವರು ತಮ್ಮದೇ ಹೊಟೇಲ್‌ನಲ್ಲಿ ನೇಣು ಬಿಗಿದುಕೊಂಡು ಜೀವ ತೆತ್ತಿದ್ದಾರೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಿಗದ ಕಾರಣ ಹೊಟೇಲ್ ಮುಚ್ಚಿದ್ದರು, ಇದರಿಂದ ಅವರು ಹೆಚ್ಚು ಸಾಲದಲ್ಲಿ ಸಿಲುಕಿದ್ದು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಮನನೊಂದ ರಾಮಪ್ಪ ತಮ್ಮ ಹೋಟೆಲ್​ನಲ್ಲೇ ನೇಣು ಬಿಗಿದುಕೊಂಡಿದ್ದಾರೆ.

ರಾಮ ಹಳ್ಳೂರಿ ಅವರು ಹುಕ್ಕೇರಿ ಪಟ್ಟಣದ ಹಳೆಯ ಬಸ್ ನಿಲ್ದಾಣದ ಬಳಿ ‘ಹನುಮಾನ್ ಹೊಟೇಲ್’ ನಡೆಸುತ್ತಿದ್ದರು. ಕಳೆದ ಹಲವು ದಿನಗಳಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಿಗದ ಕಾರಣ ಹೊಟೇಲ್ ಬಂದ್ ಮಾಡಿದ್ದರು. ಹೊಟೇಲ್ ಮುಚ್ಚಿದ ನಂತರ ಆದಾಯವೇ ಇಲ್ಲದೆ ಹೋಗಿ, ಬ್ಯಾಂಕ್ ಸಾಲದ ಬಡ್ಡಿ ಮತ್ತು ಇತರ ಸಾಲಗಳು ಹೆಚ್ಚಾಗಿ ಮನಸ್ಸಿಗೆ ತುಂಬಾ ಒತ್ತಡವಾಯಿತು. ಇದೀಗ ಈ ಒತ್ತಡ ತಡೆಯಲಾರದೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗ್ಯಾಸ್ಇಲ್ಲದೇ ಹೋಟೆಲ್ಮುಚ್ಚಿದ್ದ ಮಾಲೀಕ!

ಪೊಲೀಸ್ ಮೂಲಗಳ ಪ್ರಕಾರ, ರಾಮ ಹಳ್ಳೂರಿ ಹಲವು ವರ್ಷಗಳಿಂದ ಹೊಟೇಲ್ ನಡೆಸುತ್ತಿದ್ದರು. ಕುಟುಂಬ ನಡೆಸಲು ಮತ್ತು ಹೊಟೇಲ್ ನಡೆಸಲು ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಕಳೆದ ಕೆಲವು ದಿನಗಳಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿತ್ತು. ಇದರಿಂದ ಗ್ಯಾಸ್​ ಇಲ್ಲದೇ ಹೋಟೆಲ್​ ಬಂದ್​ ಮಾಡುವ ಪರಿಸ್ಥಿತಿ ಎದುರಾಗಿತ್ತು. ರಾಮ ಹಳ್ಳೂರಿ ಅವರು ಹೊಟೇಲ್ ಮುಚ್ಚಿದ ನಂತರ ಆದಾಯವೇ ನಿಂತುಹೋಯಿತು. ಬ್ಯಾಂಕ್ ಬಡ್ಡಿ, ಸಾಲಗಾರರ ಒತ್ತಡ, ಕುಟುಂಬದ ಖರ್ಚು, ಎಲ್ಲವೂ ಒಟ್ಟಾಗಿ ಮನಸ್ಸಿಗೆ ಭಾರವಾಗಿದ್ದು, ಕೊನೆಗೆ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ.

ಈ ಘಟನೆಯಿಂದ ಹುಕ್ಕೇರಿ ಪಟ್ಟಣದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ‘ಸರ್ಕಾರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆ ಹೆಚ್ಚಿಸದಿದ್ದರೆ ಇನ್ನೂ ಅನೇಕ ಉದ್ಯಮಿಗಳು ಇಂತಹ ದುರಂತಕ್ಕೆ ತುತ್ತಾಗುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೊಟೇಲ್ ಉದ್ಯಮಿಗಳ ಸಂಘಗಳು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ‘ಕನಿಷ್ಠ 50% ವಾಣಿಜ್ಯ ಸಿಲಿಂಡರ್ ನೀಡಿ. ಇಲ್ಲದಿದ್ದರೆ ಹೊಟೇಲ್ ಉದ್ಯಮವೇ ನಿಂತುಹೋಗುತ್ತದೆ’ ಎಂದು ಒತ್ತಾಯಿಸುತ್ತಿದ್ದಾರೆ. ಗೇಲ್ ಕಂಪನಿಯಲ್ಲಿ ನೋಂದಣಿ ಕಡ್ಡಾಯಗೊಳಿಸಿದ್ದರೂ, ಸಿಲಿಂಡರ್ ಪೂರೈಕೆ ಹೆಚ್ಚಿಸದಿದ್ದರೆ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಹೇಳುತ್ತಿದ್ದಾರೆ.

ಇದನ್ನೂ ನೋಡಿ: “ಯುದ್ಧದಿಂದ ಅಡುಗೆಮನೆಗೆ: ಹೊರೆ ಯಾರಿಗೆ?” Janashakthi Media

Donate Janashakthi Media

Leave a Reply

Your email address will not be published. Required fields are marked *