ತೀರ್ಥಹಳ್ಳಿ: ಉಳುವವನೇ ಭೂಮಿ ಒಡೆಯ ಎಂಬ ಆಶಯದ ಸಮಾಜವಾದಿ ಚಳವಳಿಯ ಜೀವಂತ ದಂತಕಥೆ, ತೀರ್ಥಹಳ್ಳಿ ತಾಲ್ಲೂಕಿನ ಕೀರ್ತಿ ಕಳಸವಾಗಿರುವ ಮಾಜಿ ಶಾಸಕರು ಹಾಗೂ ಹಿರಿಯ ಹೋರಾಟಗಾರರು ಆದ ಸನ್ಮಾನ್ಯಶ್ರೀ ಕೋಣಂದೂರು ಲಿಂಗಪ್ಪ ರವರ ಕಾನೂನು ಬದ್ದವಾಗಿ ಮಂಜೂರಾತಿ ಪಡೆದಿರುವ ಕೃಷಿ ಭೂಮಿ ಮೇಲೆ ಅಕ್ರಮ ಹಾಗೂ ಅತಿಕ್ರಮ ಪ್ರವೇಶ ಮಾಡಿ ಬೃಹತ್ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳನ್ನು ಬಳಸಿ ಅರಣ್ಯ ಇಲಾಖೆ ದೌರ್ಜನ್ಯ ನಡೆಸಿ ಟ್ರಂಚ್ ತೆಗೆದು, ಹನಿ ನೀರಾವರಿ ಕೃಷಿ ಉಪಕರಣಗಳು ಹಾಗೂ ಅಮೂಲ್ಯ ಬೆಳೆ ನಾಶ ಮಾಡಿರುವ ಪರಿಸ್ಥಿತಿಯನ್ನು ಇಂದು ಮೇಲಿನ ಕಡಗೋಡು ಗ್ರಾಮದ ಸರ್ವೆ ನಂಬರ್ 48 ಹಾಗೂ 51 ರ ಕೃಷಿ ಭೂಮಿಗೆ ಭೇಟಿ ಕೊಟ್ಟ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ ರವರ ನೇತೃತ್ವದ ನಿಯೋಗ ಪರಿಶೀಲಿಸಿತು.
ಸದರಿ ಭೂಮಿ 1960 ರ ದಶಕದಲ್ಲೇ ಮಂಜೂರಾಗಿ ಪೋಡಿ ಆಗಿರುವ ಸಾಗುವಳಿ ಕೃಷಿ ಭೂಮಿಯಾಗಿದ್ದು ಅರಣ್ಯ ಇಲಾಖೆಯ ವಸಾಹತುಶಾಹಿ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಕರ್ನಾಟಕ ಪ್ರಕಾಶಕರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ; ಯಮುನಾ ಗಾಂವ್ಕರ್ ಆಯ್ಕೆ
ಶಿವಮೊಗ್ಗ ಜಿಲ್ಲೆಯ ರೈತ -ಕಾರ್ಮಿಕ ಮುಖಂಡರುಗಳಾದ ಕಾಂ.ಎಂ ನಾರಾಯಣ ,ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕಾಂ.ಅನಂತರಾಮು ,ವಿಐಎಸ್ ಎಲ್ ಕಾರ್ಮಿಕ ಮುಖಂಡ ಕಾಂ.ಮಂಜಣ್ಣ ಹಾಗೂ ಹುಂಚ ಗ್ರಾಮದ ಸಿಪಿಐಎಂ ಪಕ್ಷದ ಹಿತೈಷಿ ಯುವರಾಜ ರವರು ಇದ್ದರು.

ಕೋಣಂದೂರು ಲಿಂಗಪ್ಪ ರವರ ಮಗ ಡಾ.ಫಣಿರಾಜ್ ತಮ್ಮ ಕುಟುಂಬಕ್ಕೆ ಆದ ದೌರ್ಜನ್ಯವನ್ನು ವಿವರಿಸಿದರು.
ನಂತರ ಸದ್ಯ ಶಿವಮೊಗ್ಗದ ಮನೆಯಲ್ಲಿ ವಾಸ ಇರುವ 90 ವರ್ಷ ವಯಸ್ಸಿನ ಕೋಣಂದೂರು ಲಿಂಗಪ್ಪ ರವರನ್ನು ಭೇಟಿ ಮಾಡಿ ಜಮೀನಿನ ಕಂದಾಯ ದಾಖಲೆಗಳ ವಿವರ ಪಡೆದು ಮಾನ್ಯ ಮುಖ್ಯಮಂತ್ರಿ ಕಛೇರಿ ಹಾಗೂ ಅರಣ್ಯ ಸಚಿವಾಲಯದ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು.
ಇದನ್ನೂ ನೋಡಿ: ಕಮ್ಯೂನಿಸ್ಟ್‌ರೇ ನನ್ನ ದೊಡ್ಡ ಮಿತ್ರ ಶಕ್ತಿ – ಬಿ.ಆರ್. ಅಂಬೇಡ್ಕರ್ | ಬಿ.ಆರ್. ಮಂಜುನಾಥ್ Janashakthi Media
