ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ನಕಲಿ ದೇವಮಾನವ ಮತ್ತು ಜ್ಯೋತಿಷಿ ಅಶೋಕ್ ಖರತ್ ಕಾಮಕಾಂಡ ಪ್ರಕರಣದಲ್ಲಿ, ಕೇವಲ 50 ಅಲ್ಲ, 150ಕ್ಕೂ ಹೆಚ್ಚು ಮಹಿಳೆಯರು ಆರೋಪಿಯಿಂದ ಶೋಷಣೆಗೆ ಒಳಗಾಗಿದ್ದಾರೆ ಎಂದು ವಿಶೇಷ ತನಿಖಾ ತಂಡ (SIT ) ತನಿಖೆಯಲ್ಲಿ ಬಹಿರಂಗವಾಗಿದೆ.
ಸೋಮವಾರ ಎಸ್‌ಐಟಿ ತಂಡವು ನಾಸಿಕ್‌ನಲ್ಲಿರುವ ಆರೋಪಿ ಖರತ್ ಕಚೇರಿಗೆ ಭೇಟಿ ನೀಡಿ ಎರಡು ಲ್ಯಾಪ್‌ಟಾಪ್‌ಗಳು ಮತ್ತು ಒಂದು ಮೊಬೈಲ್ ಅನ್ನು ವಶಪಡಿಸಿಕೊಂಡಿದೆ. ಅದರಲ್ಲಿರುವ ಮಾಹಿತಿ ಪ್ರಕಾರ, ನಕಲಿ ದೇವಮಾನವನು 150ಕ್ಕೂ ಹೆಚ್ಚು ಮಹಿಳೆಯರ ಜೀವನವನ್ನು ಸುಧಾರಿಸುವ ಮತ್ತು ಅವರ ವೈಯಕ್ತಿಕ ಮತ್ತು ವೃತ್ತಿ ಸಮಸ್ಯೆಗಳನ್ನು ಪರಿಹರಿಸುವ ನೆಪದಲ್ಲಿ ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ ಎಂದು ಕಂಡುಕೊಂಡಿದೆ.
ಎಸ್‌ಐಟಿ ಪೊಲೀಸರು ಖರತ್ ಅವರ ಕಚೇರಿ ಮತ್ತು ಆಸ್ತಿಗಳನ್ನು ಸೀಲ್ ಮಾಡಿದ್ದು, ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. ಆರೋಪಿಯ ಹಣದ ವಹಿವಾಟಿನ ಜಾಡು ಕೂಡ ತನಿಖೆ ನಡೆಸುತ್ತಿದ್ದು, ಹಾಗೆಯೇ ಆರೋಪಿಯ ಮೊಬೈಲ್ನಿಂದ ಪಡೆದ ದತ್ತಾಂಶ ಪಡೆದಿದ್ದಾರೆ. ಆ ಮಾಹಿತಿ ಪ್ರಕಾರ ಮಹಿಳೆಯರು ಸೇರಿದಂತೆ ಉನ್ನತ ವ್ಯಕ್ತಿಗಳನ್ನು ಸಂಪರ್ಕಿಸಲು ವಿಭಿನ್ನ ಮೊಬೈಲ್‌ಗಳನ್ನು ಬಳಸುತ್ತಿದ್ದರು ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ಅಸ್ಸಾಂ ಯುವಕರಿಗೆ ಉದ್ಯೋಗ ಭರವಸೆ: ಡಿ.ಕೆ. ಶಿವಕುಮಾರ್ ಹೇಳಿಕೆ
ಇನ್ನೂ ನಕಲಿ ದೇವಮಾನವ ಮಹಿಳೆಯರಿಗೆ ನೀಡಲಾಗುವ ಪಾನೀಯಗಳು ಮತ್ತು ಸಿಹಿತಿಂಡಿಗಳಲ್ಲಿ ಸ್ಪೈಕ್ ಮಾಡುತ್ತಿದ್ದನು. ನಂತರ ಅವರನ್ನು ಕೆಲವೊಮ್ಮೆ ಸಂಮೋಹನಗೊಳಿಸಿದ ನಂತರ ಶೋಷಿಸುತ್ತಿದ್ದರು ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಇನ್ನೂ ನಕಲಿ ದೇವಮಾನವನ ಕೃತ್ಯದಿಂದ ಮಹಾರಾಷ್ಟ್ರ ರಾಜಕೀಯದಲ್ಲೂ ಕೂಡ ಬಿರುಗಾಳಿ ಎಬ್ಬಿಸಿದ್ದು, ಆಡಳಿತರೂಢ ಬಿಜೆಪಿಗೆ ಮುಜುಗರ ತರಿಸಿದೆ. ಇನ್ನೂ ಆರೋಪಿ ಖರತ್ ಜೊತೆ ಸಂಪರ್ಕ ಇಟ್ಟುಕೊಂಡ ಹಿನ್ನೆಲೆ ಎನ್ಸಿಪಿ ಶಾಸಕಿ ರೂಪಾಲಿ ಚಕಂಕರ್ ಅವರು, ಮಹಾರಾಷ್ಟ್ರ ಮಹಿಳಾ ಆಯೋಗ ಮತ್ತು ಎನ್ಸಿಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶಿವಸೇನೆಯ ಮಾಜಿ ಸಚಿವ ದೀಪಕ್ ಕೇಸರ್ಕರ್ ಅವರು ಶಿಕ್ಷಣ ಸಚಿವರಾಗಿದ್ದಾಗ ಅಶೋಕ್ ಖರತ್ ಅವರ ಸಹೋದರ ದಿಲೀಪ್ ಖರತ್ ಅವರ ಶಾಲಾ ಮತ್ತು ಕಾಲೇಜುಗಳಿಗೆ ಸರ್ಕಾರಿ ಅನುಮೋದನೆ ಪಡೆಯಲು ನಕಲಿ ದಾಖಲೆಗಳ ಮೂಲಕ ಸಹಾಯ ಮಾಡಿದ್ದಾರೆ ಎಂಬ ಆರೋಪವು ಕೇಳಿಬಂದಿದೆ. ಈ ಬಗ್ಗೆ ವಿಪಕ್ಷಗಳು ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿವೆ.
ಸೆಕ್ಸ್ ರಾಕೆಟ್ ನಡೆಸುತ್ತಿರುವ ಆರೋಪ
ಏತನ್ಮಧ್ಯೆ, ಮಹಾರಾಷ್ಟ್ರ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್, ಆರೋಪಿ ಖರತ್ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಎಂದು ಆರೋಪಿಸಿದ್ದಾರೆ. ಅನೇಕ ಸರ್ಕಾರಿ ಅಧಿಕಾರಿಗಳು ತಮ್ಮ ಪತ್ನಿಯರೊಂದಿಗೆ ಅಶೋಕ್ ಖರತ್ ಅವರನ್ನು ಭೇಟಿ ಮಾಡುತ್ತಿದ್ದರು. ಅಧಿಕಾರಿಗಳು ಅವರ ಕಚೇರಿ ಕ್ಯಾಬಿನ್ ಹೊರಗೆ ಕುಳಿತಿದ್ದರೆ, ದೇವಮಾನವ ಅವರ ಪತ್ನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಿದ್ದಾರೆ.
ಮುಂದುವರೆದು, ದೇವಮಾನವನ ಅನೇಕ ಉನ್ನತ ಭಕ್ತರು ಸಹ ಅವನ ಸಹಾಯದಿಂದ ಪತ್ನಿಯರನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಭಾಗಿಯಾಗಿದ್ದಾರೆ ಎಂದು ಸೆಕ್ಸ್ ರಾಕೆಟ್ ನಡೆಸುತ್ತಿದ್ದರು ಎಂದು ಕಿಡಿಕಾರಿದ್ದಾರೆ
ಇದನ್ನೂ ನೋಡಿ: ಉನ್ನತ ಶಿಕ್ಷಣ ‘ಉದ್ಯಮ’ವಾಗುತ್ತಿದೆ: ಬರಗೂರು ರಾಮಚಂದ್ರಪ್ಪ ಟೀಕೆ Janashakthi Media
