ಬಾಗಲಕೋಟೆ / ದಾವಣಗೆರೆ : ರಾಜ್ಯದ ಎರಡು ಕ್ಷೇತ್ರಗಳಾದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ ಫಲಿತಾಂಶ ಇದೀಗ ಹೊರಬಿದ್ದಿದ್ದು, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಜಗದಗಲಕ್ಕೂ ಮೇ ದಿನಾಚರಣೆ ಸುದ್ದಿಯಲ್ಲ, ಯು.ಎಸ್ ಗೆ ಮೇ ದಿನ ಮರಳಿ ಬಂದಿರುವುದು ಸುದ್ದಿ
21ನೇ ಸುತ್ತಿನಲ್ಲಿ ಉಮೇಶ್ ಮೇಟಿ ಅವರಿಗೆ 21,866 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಉಮೇಶ್ ಮೇಟಿ ಅವರಿಗೆ ಒಟ್ಟು 97,841ಮತಗಳು ಬಂದಿದ್ದು ಇನ್ನು ಬಿಜೆಪಿ ಅಭ್ಯರ್ಥಿಯಾದ ವೀರಣ್ಣ ಚರಂತಿಮಠ ಅವರಿಗೆ 76,075 ಮತಗಳು ಬಂದಿವೆ.
ಅದೇ ರೀತಿಯಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ ಶಾಮನೂರು ಅವರು ಭರ್ಜರಿ ಗೆಲುವು ಕಂಡಿದ್ದಾರೆ. 6430 ಮತಗಳಿಂದ ಸಮರ್ಥ ಶಾಮನವರು ಅವರು ಗೆಲುವು ಸಾಧಿಸಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಅವರು ಸೋತಿದ್ದಾರೆ. ಇನ್ನು ಮೂರು EVM ಮಷೀನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತ ಎಣಿಕೆಯಲ್ಲಿ ವಿಳಂಬವಾಗುತ್ತಿದ್ದು ಈಗಾಗಲೇ ಸಮರ್ಥ ಶಾಮನೂರು ಬೆಂಬಲಿಗರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಧಿಕೃತ ಘೋಷಣೆ ಒಂದೇ ಬಾಕಿ ಇದೆ.
ಇದನ್ನೂ ಓದಿ: ಮಳೆ | ಬೌರಿಂಗ್ ಆಸ್ಪತ್ರೆ ದುರಂತ – ಎಚ್ಚೆತ್ತುಕೊಳ್ಳಬೇಕಿದೆ ಸರಕಾರ Janashakthi Media
