ರೈತ ವಿರೋಧಿ ಧೋರಣೆ ಮುಂದುವರಿಸಿದ ಕಾಂಗ್ರೆಸ್ ಸರಕಾರ; 132 ರೈತ ಹೋರಾಟಗಾರರ ಬಂಧನ – ಸಿಪಿಐ(ಎಂ) ಖಂಡನೆ

ಬಳ್ಳಾರಿ: ಜಿಲ್ಲಾ, ಬಳ್ಳಾರಿ ತಾಲೂಕಾ ವಿಜಯನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಕುಡಿತಿನಿ, ಹರಗಿನಡೋಣಿ, ವೇಣಿ ವೀರಾಪುರ, ಜಾನೆಕುಂಟೆ, ಕೊಳಗಲ್ಲು ಹಾಗು ರ‍್ರಂಗಳ್ಳಿ, ಸಿದ್ದಮ್ಮನಹಳ್ಳಿ ಗ್ರಾಮಗಳ ಸುಮಾರು 5,000 ಕುಟುಂಬಗಳ ಸುಮಾರು 13,000 ಎಕರೆ ಜಮೀನುಗಳನ್ನು ಅರ್ಸೆಲರ್ ಮಿತ್ತಲ್, ಭ್ರಾಹ್ಮಿಣಿ ಸ್ಟೀಲ್ಸ್, NMDC ಸಂಸ್ಥೆಗಳ ಉಕ್ಕಿನ ಕೈಗಾರಿಕೆಗಳಿಗೆ ಬಲವಂತವಾಗಿ ಮತ್ತು ಮೋಸದ ಭೂ ಬೆಲೆಗೆ ಮಾರಾಟ ಮಾಡಿರುವುದನ್ನು ಖಂಡಿಸಿ ಹಾಗೂ ರೈತರಿಗೆ ಸುಪ್ರೀಂ ಕೋರ್ಟ್ ಆದೇಶದನ್ವಯ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದ ಹೋರಾಟಗಾರರನ್ನು ಬಂಧಿಸಿರುವುದನ್ನು ಸಿಪಿಐ(ಎಂ) ರಾಜ್ಯ ಸಮಿತಿ ಖಂಡಿಸುತ್ತದೆ. ಒಟ್ಟು 21 ಮಹಿಳೆಯರು ಸೇರಿದಂತೆ 132 ಜನ ರೈತರನ್ನು ಬಂಧಿಸಲಾಗಿದೆ. ಕಾಂಗ್ರೆಸ್

ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಕಾಂಗ್ರೆಸ್ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರದಂತೆ ರೈತರಿಂದ ಎಕರೆಗೆ ಕೇವಲ ೮ ಲಕ್ಷ ರೂಪಾಯಿಗಳ ವಂಚಕ ಬೆಲೆಗೆ ಖರೀದಿಸಿ ಕೆಐಎಡಿಬಿಯ ಮೂಲಕ ಎಕರೆಗೆ ಒಂದೂವರೆ ಕೋಟಿ ರೂಪಾಯಿಗೆ ಮಾರಾಟ ಮಾಡುತ್ತಿದೆ. ಇದರಿಂದ ರೈತರು ಆಘಾತಕ್ಕೆ ಒಳಗಾಗಿದ್ದಾರೆ.

ಅರ್ಸೆಲರ್ ಮಿತ್ತಲ್, ಭ್ರಾಹ್ಮಿಣಿ ಸ್ಟೀಲ್ಸ್, NMDC ಮೊದಲಾದ ಕಂಪನಿಗಳಿಗೆ ನೀಡಬೇಕೆಂದು ಹಿಂದಿನ ಬಿಜೆಪಿ ಸರ್ಕಾರ 13,000 ಎಕರೆ ಜಮೀನು ಖರೀದಿಸಿತ್ತು. ಅದರಲ್ಲಿ 200 ಎಕರೆ ಪ್ರದೇಶದ ರೈತರು ನ್ಯಾಯಾಂಗ ಹೋರಾಟ ನಡೆಸಿ ಸುಪ್ರೀಂ ಕೋರ್ಟ್ನಿಂದ ಎಕರೆಗೆ 1.5 ರೂ. ಕೋಟಿ ಪರಿಹಾರ ಕೊಡಬೇಕೆಂದು ಆದೇಶ ಪಡೆದಿರುತ್ತಾರೆ.

ಇದನ್ನೂ ಓದಿ: ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಇದರಿಂದ ಉಳಿದ ರೈತರು ಸುಮಾರು ೪ ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕ ಪ್ರಾಂತ ರೈತ ಸಂಘ, ಭೂ ಸಂತ್ರಸ್ತರ ಹೋರಾಟ ಸಮಿತಿ ಆರಂಭದಿಂದಲೂ ಹೋರಾಟದ ನೇತೃತ್ವ ವಹಿಸಿದ್ದು, ಸಿಐಟಿಯು, ದೇವದಾಸಿ, ಜನವಾದಿ ಮಹಿಳಾ ಸಂಘಟನೆ ಮತ್ತು ಕೆಲವು ಕನ್ನಡ ಪರ ಸಂಘಗಳು ಸಹ ಹೋರಾಟದಲ್ಲಿ ನಿರತರಾಗಿವೆ.

ಅದರಲ್ಲಿ ಅರ್ಸೆಲ್ ಮಿತ್ತಲ್ ಕಂಪೆನಿ ತಾನು ಕೈಗಾರಿಕೆ ಸ್ಥಾಪಿಸುವುದಿಲ್ಲ ಎಂದು ಹೇಳಿ 2025 ರಲ್ಲಿ 5,000 ಎಕರೆ ಜಮೀನನ್ನು ವಾಪಸ್ ನೀಡಿದೆ. ಸದರಿ ಜಮೀನಿನಲ್ಲಿ ಯಾವುದೇ ಭೂ ಸಂತ್ರಸ್ಥರ ಗಮನಕ್ಕೆ ತಾರದೆ 204 ಎಕರೆ ಜಮೀನನ್ನು ಕೆಐಎಡಿಬಿಯು ಜಿಂದಾಲ್ ಕಂಪೆನಿಗೆ ಅಕ್ರಮವಾಗಿ ಮಾರಾಟ ಮಾಡಿ ಅದನ್ನು ವರ್ಗಾಯಿಸಲು ಪ್ರಯತ್ನಿಸಿದಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತರು ಪ್ರತಿಭಟನೆ ನಡೆಸಿದ್ದಾರೆ.

ಈಗಾಗಲೇ 2 ಬಾರಿ ಉನ್ನತ ಮಟ್ಟದ ಸಮಿತಿಯೊಂದಿಗೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದ್ದು. ಮುಂದಿನ ಮಾತುಕತೆಯ ದಿನಾಂಕ ಏಪ್ರಿಲ್ ೪ನೇ ತಾರೀಕಿಗೆ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಂಸತ್ ಸದಸ್ಯ ಇ. ತುಕಾರಾಂ ರವರು ಜಿಂದಾಲ್ ಕಂಪನಿಯೊಂದಿಗೆ ಶಾಮೀಲಾಗಿ ಅಧಿಕಾರಿಗಳನ್ನು ಛೂ ಬಿಟ್ಟಿದ್ದಾರೆ. ಇದರಿಂದಾಗಿ 21 ಮಹಿಳೆಯರೂ ಸೇರಿದಂತೆ 132 ಜನ ರೈತರನ್ನು, ಬೆಂಬಲಿಸಿದ ಸಂಘ ಸಂಸ್ಥೆಗಳ ಮುಖಂಡರನ್ನು ಬಂಧಿಸಿದ್ದಾರೆ. ಈ ಅಮಾನುಷ ಕೃತ್ಯವನ್ನು ಸಿಪಿಐ(ಎಂ) ರಾಜ್ಯ ಸಮಿತಿ ಖಂಡಿಸುತ್ತದೆ.

ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಸಿಪಿಐ(ಎಂ) ಆಗ್ರಹಿಸುತ್ತದೆ. ಇಲ್ಲವಾದಲ್ಲಿ, ಕಾಂಗ್ರೆಸಿಗೂ ಮತ್ತು ಬಿಜೆಪಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂಬುದಾಗಿ ಪರಿಗಣಿಸಬೇಕಾಗುತ್ತದೆ ಎಂದು ಸಿಪಿಐ(ಎಂ) ಎಚ್ಚರಿಕೆ ನೀಡುತ್ತದೆ.

ಇದಾದ ನಂತರ ಕಾಂ.ಶಿವಶಂಕರ್, ಕಾಂ.ಬಿ.ಮಾಳಮ್ಮ ಮತ್ತು ಕಾಂ.ಸ್ವಾಮಿ ಮೊದಲಾದವರ ನೇತೃತ್ವದಲ್ಲಿ ಜಿಂದಾಲ್ ಅತಿಕ್ರಮಣ ವಿರೋದಿಸಿ ಮರಳಿ ೫೦೦ ಕ್ಕೂ ಅಧಿಕ ರೈತರು, ಮಹಿಳೆಯರು ಧರಣಿಯನ್ನು ಮುಂದುವರೆಸಿರುವುದನ್ನು ಸಿಪಿಐ(ಎಂ) ಸ್ವಾಗತಿಸುತ್ತದೆ. ಹಾಗೂ ಮಣ್ಣಿನ ಪರೀಕ್ಷೆಯ ಹೆಸರಿನಲ್ಲಿ ಜಪಾನ್ ಕಂಪನಿಗೆ ಸೇರಿದ ಕೆಲವರು ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಲು ರೈತರಿಗೆ ಸಾಧ್ಯವಾಗಿದೆ.

ಕರ್ನಾಟಕದ ಕಾಂಗ್ರೆಸ್ ಸರಕಾರ ರೈತರ ಒತ್ತಾಯವನ್ನು ಪರಿಗಣಿಸದೆ, ಜಿಂದಾಲ್ ಕಂಪನಿ ಜೊತೆ ಶಾಮೀಲಾಗಿರುವುದು ರೈತರಲ್ಲಿ ಮತ್ತಷ್ಠು ಆಕ್ರೋಶ ಉಂಟು ಮಾಡಿದೆ.

ಇದನ್ನೂ ನೋಡಿ: ದೇಹ ರಾಜಕಾರಣ ಮತ್ತು ಲೈಂಗಿಕ ದೌರ್ಜನ್ಯ – ಡಾ. ವಿನಯಾ ಒಕ್ಕುಂದ Janashakthi Media

Donate Janashakthi Media

Leave a Reply

Your email address will not be published. Required fields are marked *