NEET ಪೇಪರ್ ಲೀಕ್ : NTA ರದ್ದು, ಶಿಕ್ಷಣ ಸಚಿವ ರಾಜೀನಾಮೆಗೆ SFI ಆಗ್ರಹ – ಪ್ರತಿಭಟನೆಕಾರರ ಬಂಧನ

ಬೆಂಗಳೂರು: ನೀಟ್ ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎನ್‌ಟಿಎ ರದ್ದುಗೊಳಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ SFI ಕಾರ್ಯಕರ್ತರು ಟೌನ್‌ ಹಾಲ್‌ ಮುಂಭಾಗ ಪ್ರತಿಭಟನೆ ನಡೆಸಲು ಮುಂದಾದಾಗ ಎಸ್‌ಎಫ್‌ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. NEET

ನಾಲ್ಕು ತಂಡವಾಗಿ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಒತ್ತಾಯವಾಗಿ ವಿದ್ಯಾರ್ಥಿ ಮುಖಂಡರನ್ನು ಬಸ್‌ನೊಳೊಗೆ ತಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು. ಪರೀಕ್ಷಾ ನಿರ್ವಹಣೆಯಲ್ಲಿ ಎನ್‌ಟಿಎ ಮತ್ತೊಮ್ಮೆ ತನ್ನ ಅಸಮರ್ಥತೆಯನ್ನು ಸಾಬೀತುಪಡಿಸಿದೆ ಎಂದು ಆರೋಪಿಸಿದರು. ಈ ಹಿಂದೆ ಕೂಡ ಹಲವು ಪರೀಕ್ಷೆಗಳಲ್ಲಿ ಅಕ್ರಮಗಳು ಮತ್ತು ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ. ಹೀಗಾಗಿ ಎನ್‌ಟಿಎಯನ್ನು ರದ್ದುಗೊಳಿಸಿ ಪಾರದರ್ಶಕ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಎಸ್‌ಎಫ್‌ಐ ನಾಯಕರು ಆಗ್ರಹಿಸಿದರು.

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮೇ. 3ರಂದು ನಡೆಸಲಾದ NEET UG 2026 ಪರೀಕ್ಷೆಯಲ್ಲಿ ಸುಮಾರು 22 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಆದರೆ, ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ರಾಜಸ್ಥಾನದಲ್ಲಿ ಸೋರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ NTA ಈ ನೀಟ್‌ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಮರುಪರೀಕ್ಷೆ ಮಾಡುವುದಾಗಿ ಘೋಷಣೆ ಮಾಡಿದೆ. ಪೇಪರ್

ಮೇ 3 ರ ಪರೀಕ್ಷೆಯನ್ನು ರದ್ದುಗೊಳಿಸಲು ಕಾರಣವಾದ ನೀಟ್ ಯುಜಿ 2026 ಪರೀಕ್ಷೆಯ ಪ್ರಮುಖ ಪ್ರಶ್ನೆಪತ್ರಿಕೆ ಸೋರಿಕೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ ಕರ್ನಾಟಕ ರಾಜ್ಯ ಸಮಿತಿ ಖಂಡಿಸಿತ್ತದೆ. ಆರಂಭದಿಂದಲೂ ಪರೀಕ್ಷೆಗಳ ದುರುಪಯೋಗಕ್ಕೆ ಕುಖ್ಯಾತವಾಗಿರುವ ಎನ್‌ಟಿಎ, ಪರೀಕ್ಷೆಗಳ ನಿರ್ವಹಣೆಯಲ್ಲಿ ತನ್ನ ಅಸಮರ್ಥತೆಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಈ ಹಿಂದೆ ಹಲವಾರು ಅಕ್ರಮ ಮಾಡಿರುವುದು ಬೆಳಕಿಗೆ ಬಂದಿದೆ ಇಂತಹ ಅಸಮರ್ಥ NTA ಸಂಸ್ಥೆಯನ್ನು ರದ್ದುಗೊಳಿಸಬೇಕು ಎಂದು ಎಸ್‌ಎಫ್‌ಐ ಕಾರ್ಯಕರ್ತರು ಆಗ್ರಹಿಸದರು. NEET

ಇದನ್ನೂ ಓದಿ: ಸರ್ಕಾರಿ ಶಾಲೆಯ ವಿಭಿನ್ನ ಪ್ರಯತ್ನ: ಪ್ರವೇಶ ಪಡೆದ ಮಕ್ಕಳಿಗೆ ₹1000 ಪ್ರೋತ್ಸಾಹ ಧನ

ವರದಿಗಳ ಪ್ರಕಾರ, ಒಟ್ಟು 720 ಅಂಕಗಳಲ್ಲಿ ಸುಮಾರು 600 ಅಂಕಗಳ ಪ್ರಶ್ನೆಗಳು ಸೋರಿಕೆಯಾಗಿದೆ. ಪರೀಕ್ಷೆಯಲ್ಲಿನ 180 ಪ್ರಶ್ನೆಗಳಲ್ಲಿ ಸುಮಾರು 15 ಪ್ರಶ್ನೆಗಳನ್ನು ಸಂಭಾವ್ಯ ಪ್ರಶ್ನೆಪತ್ರಿಕೆಯ ಮೂಲಕ ಮುಂಚಿತವಾಗಿ ಪ್ರಸಾರ ಮಾಡಲಾಗಿದೆ ಮತ್ತು ರಸಾಯನಶಾಸ್ತ್ರ ವಿಭಾಗದಿಂದ ಸುಮಾರು 120 ಪ್ರಶ್ನೆಗಳನ್ನು ಅಕ್ಷರಶಃ ಸೋರಿಕೆ ಮಾಡಲಾಗಿತ್ತು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದಕ್ಕೆ ಮೋದಿ ಸರ್ಕಾರ ನೇರ ಹೊಣೆಯಾಗಿದೆ. ಪರೀಕ್ಷೆ ನಡೆಸುವ ವಿವಿಧ ಸಂಸ್ಥೆಗಳ ಮಾನದಂಡಗಳು ಮತ್ತು ಅವಶ್ಯಕತೆಗಳನ್ನು ನಿರ್ಲಕ್ಷಿಸಿ ಪರೀಕ್ಷಾ ವ್ಯವಸ್ಥೆಯನ್ನು ಕೇಂದ್ರೀಕರಿಸಲು ಮೋದಿ ಸರ್ಕಾರ ತೆಗೆದುಕೊಂಡ ಕ್ರಮಗಳ ದುಷ್ಪರಿಣಾಮಗಳನ್ನು SFI ಮತ್ತು ಸಮಾಜದ ಇತರ ವಿಭಾಗಗಳು ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು ಆರಂಭದಿಂದಲೂ ಎತ್ತಿ ತೋರಿಸಿದ್ದವು. NEET

ಇದರಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮತ್ತು ದೂರಾಡಳಿತದಿಂದ NTA ನಡೆಸುವ ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳಲ್ಲಿ ನಿಜವಾಗಿದೆ ಎಂದು ಸಾಬೀತಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಹಲವಾರು ಪರೀಕ್ಷಾ ಮಾಫಿಯಾಗಳು ಹುಟ್ಟಿಕೊಳ್ಳಲು ಮೋದಿ ಸರ್ಕಾರದ ಕೇಂದ್ರೀಕರಣ ಪ್ರಯತ್ನಗಳು ಮತ್ತು ದುಷ್ಪರಿಣಾಮಗಳು ಕಾರಣವಾಗಿವೆ. ಇದು ಭಾರತದ ಮಧ್ಯಮ ವರ್ಗವನ್ನು ಶೋಷಣೆ ಮತ್ತು ಅಭದ್ರತೆಗೆ ಹಾಗೂ ತಳ್ಳಿದ ದೊಡ್ಡ ಪ್ರಮಾಣದ ಕೋಚಿಂಗ್ (ಪ್ರವೇಶ ತರಬೇತಿ) ಮಾಫಿಯಾವನ್ನು ಉತ್ತೇಜಿಸಿದೆ ಎಂದು ಆರೋಪಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಸರಿಯಾದ ತನಿಖೆಗೆ SFI ಒತ್ತಾಯಿಸುತ್ತದೆ. NDA ಯ ದುರಾಡಳಿತ ವಿದ್ಯಾರ್ಥಿಗಳಿಗೆ ಆತಂಕವನ್ನು ಉಂಟುಮಾಡಿದೆ, ಇದಕ್ಕಾಗಿ NTA ಸಂಸ್ಥೆ ವಿದ್ಯಾರ್ಥಿಗಳಿಗೆ ಪರಿಹಾರವನ್ನು ನೀಡಬೇಕು. ಇದಲ್ಲದೆ, ಕೇಂದ್ರ ಸರ್ಕಾರವು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತನ್ನ ಅವೈಜ್ಞಾನಿಕ ಮತ್ತು ಅಸಮರ್ಥ ಕೇಂದ್ರೀಕರಣ ಪ್ರಯತ್ನಗಳನ್ನು ನಿಲ್ಲಿಸಬೇಕು ಮತ್ತು NTA ಅನ್ನು ರದ್ದುಗೊಳಿಸಬೇಕೆಂದು ಹಾಗೂ ದರ್ಮೆಂದ್ರ ಪ್ರದಾನ್ ಅವರು ರಾಜೀನಾಮೆ ನೀಡಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸಿದೆ.

ಪ್ರತಿಭಟನೆಯಲ್ಲಿ ಅಖಿಲ ಭಾರತ ಅಧ್ಯಕ್ಷ ಆದರ್ಶ ಸಾಜಿ, ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್‌, ರಾಜ್ಯ ಕಾರ್ಯದರ್ಶಿ ವಿಜಯ್‌ ಮುಖಂಡರಾದ ಗಣೇಶ್‌ ರಾಠೋಡ್‌, ಸುಜಾತಾ, ಡಾ. ಬಸವರಾಜ ಗುಳೇದಾಳ್ ಬಾಲಾಜಿ, ಚಂದ್ರು ರಾಠೋಡ್‌, ವೆಂಕಟೇಶ್‌, ಅರ್ಪಿತಾ, ಮಹಾಲಿಂಗ್‌ , ಅಭಿಷೇಕ್‌, ವರಲಕ್ಷ್ಮಿ ಸೇರಿದಂತೆ ಅನೇಕರಿದ್ದರು.

ಇದನ್ನೂ ನೋಡಿ: ಹಾಸ್ಟೆಲ್‌ ನೌಕರರ ಕಣ್ಣೀರ ಕಥೆ | ಬೆಂಗಳೂರಿನಲ್ಲಿ ಸಾವಿರಾರು ಜನರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *