ರಕ್ತದಾನವು ಜೀವದಾನ ಮಾಡುವ ಮಹತ್ವದ ಕಾರ್ಯ: ಪರಿಮಳ ಜೈನ

ಹಾವೇರಿ: ಸ್ಚಯಂ ಸೇವಾ ಸಂಸ್ಥೆಗಳು ಜನರ ಜೊತೆಗಿದ್ದು ಜನರೇಳಿಗೆಗಾಗಿ ಮಹತ್ವದ ಕೆಲಸ ಮಾಡುತ್ತಿವೆ. ಸಹಮತ ಸಂಸ್ಥೆಯು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಅಲ್ಪ ಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳ ಜೈನ್ ಹೇಳಿದರು. ಜೀವದಾನ

ಮಾರ್ಚ್‌ 29ರಂದು ತಾಲೂಕಿನ ದೇವಿಹೊಸೂರು ಗ್ರಾಮದ ಗ್ರಂಥಾಲಯದಲ್ಲಿ ಸಹಮತ ಸಂಸ್ಥೆ (ರಿ) ಹಾವೇರಿ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಹಾವೇರಿ ಜಿಲ್ಲಾ ಆಷ್ಪತ್ರೆಯ ರಕ್ತನಿಧಿ ಕೇಂದ್ರ, ಅಮ್ಮಾ ಸಂಸ್ಥೆ (ರಿ) ಹಿರೇಮುಗದೂರು, ಗ್ರಾಮ ಪಂಚಾಯತಿ ದೇವಿಹೊಸೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ದೇವಿಹೊಸೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಜೀವದಾನ

ಸಾಮಾನ್ಯ ಜನತೆಯು ಅನಾರೋಗ್ಯಕ್ಕೊಳಗಾಗಿ ರಕ್ತದ ಅವಶ್ಯಕತೆಯಿರುವಾಗ ರಕ್ತವನ್ನು ಒದಗಿಸುವುದು ಜೀವಪರ ಕೆಲಸವಾಗಿದೆ. ಇಂತಹ ಜನಪರ ಕೆಲಸ ಮಾಡುವ ಸಹಮತ ಸಂಸ್ಥೆಯು ಜನರಲ್ಲಿ ರಕ್ತದಾನದ ಜಾಗೃತಿಯನ್ನು ಮೂಡಿಸಿ ಶಿಬಿರ ಹಮ್ಮಿಕೊಂಡಿರುವುದು ಮಾದರಿ ಕೆಲಸವಾಗಿದೆ ಎಂದರು.

ಇದನ್ನೂ ಓದಿ: 6 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಟ್ಯಾಕ್ಸ್ ಡಿಸಿ ಲೋಕಾಯುಕ್ತ ಬಲೆಗೆ!

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾಷ್ಪತ್ರೆಯ ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿಗಳಾದ ಡಾ. ಬಸವರಾಜ ತಳವಾರ ಮಾತನಾಡಿ, ರಕ್ತದಾನದ ಮೂಲಕ ಜೀವವನ್ನು ಉಳಿಸುವ ಕಾರ್ಯ ಮಾಡುತ್ತಿರುವ ಸಹಮತ ಸಂಸ್ಥೆಯ ಕಾರ್ಯ ಅಭಿನಂದನಾರ್ಹವಾಗಿದೆ. ಒಂದು ಯೂನಿಟ್ ರಕ್ತದಿಂದ ಮೂರು ಜೀವಗಳನ್ನು ಉಳಿಸಲು ಸಾಧ್ಯವಿದೆ. ಹಾಗಾಗಿ ಜನತೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಹೇಳಿದರು.  ಜೀವದಾನ

ರಕ್ತದಾನ ಮಾಡುವ ಮೂಲಕ ರಕ್ತದಾನಿಗಳು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಬೇರೆಯವರಿಗೆ ಜೀವದಾನ ಮಾಡುವ ಜೊತೆಗೆ ರಕ್ತದಾನ ಮಾಡುವುದರಿಂದಾಗಿ ದೇಹದಲ್ಲಿ ಕೊಬ್ಬಿನಾಂಶ ಹಾಗೂ ಕಬ್ಬಿಣಾಂಶ ಹೆಚ್ಚುವರಿ ಶೇಖರಣೆಯಾಗುವುದು ತಪ್ಪುತ್ತದೆ. ಜನರು ಮೌಡ್ಯತೆಗಳಿಗೆ ಬಲಿಯಾಗದೇ ರಕ್ತದಾನ ಮಾಡಲು ಮುಂದಾಗಬೇಕು ಎಂದರು.

ಹಾವೇರಿ ಜಿಲ್ಲೆಯ ಜನಸಂಖ್ಯೆಗನುಗುಣವಾಗಿ ಹತ್ತೊಂಬತ್ತು ಸಾವಿರ ಯೂನಿಟ್ ರಕ್ತ ಅವಶ್ಯಕತೆಯಿದೆ. ಆದರೆ ಇದುವರೆಗೂ ಹತ್ತು ಸಾವಿರ ಯೂನಿಟ್ ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ಇನ್ನೂ ಒಂಬತ್ತು ಸಾವಿರ ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಬೇಕಿದೆ. ಸಹಮತ ಸಂಸ್ಥೆಗಳಂತೆ ಉಳಿದೆಲ್ಲ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಏರ್ಪಡಿಸಬೇಕು ಎಂದು ಕರೆ ನೀಡಿದರು.

ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಂದ ಐವತ್ತು ಯೂನಿಟ್ ರಕ್ತ ಸಂಗ್ರಹಿಸಲಾಯ್ತು. ರಕ್ತದಾನ ಮಾಡಿದವರಿಗೆ ಅಭಿನಂದನಾ ಪ್ರಶಂಸಾ ಪತ್ರ ನೀಡಿ ಗೌರವಿಸಿ ಅಭಿನಂದಿಸಲಾಯ್ತು. ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜಿಸಿದ ಸಂಸ್ಥಗಳಿಗೆ ಜಿಲ್ಲಾಷ್ಪತ್ರೆಯ ರಕ್ತನಿಧಿ ಕೇಂದ್ರದ ವತಿಯಿಂದ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯ್ತು.

ಸಹಮತ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಪೂಜಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಮತ ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಕಹಾರ ನಿರೂಪಿಸಿದರು. ಅಮ್ಮಾ ಸಂಸ್ಥೆಯ ಅಧ್ಯಕ್ಷರಾದ ನಿಂಗಪ್ಪ ಆರೇರ ವಂದಿಸಿದರು. ಜಿಲ್ಲಾ ರಕ್ತನಿಧಿ ಕೆಂದ್ರದ ರೇವಣೆಪ್ಪ, ಸಂತೋಷ ನೆಲ್ಲಿಕೊಪ್ಪ,  ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್, ಡಾ. ವಿಜಯ್, ದೇವಿಹೊಸೂರು ರಕ್ತದಾನಿಗಳ ಬಳಗದ ಮುಖ್ಯಸ್ಥರಾದ ಗಣೇಶಗೌಡ ಗಟ್ಟಿ, ಸಹಮತ ಸಂಸ್ಥೆಯ ಪದಾಧಿಕಾರಿಗಳಾದ ಬೀರಪ್ಪ ಸೂರಣಗಿ, ಲಕ್ಷ್ಮೀಪ್ರಭ ಎಸ್. ಹುಲ್ಲೂರು, ಸವಿತಾ ಗುಬ್ಬೇರ.

ಡಿಎಚ್ಎಸ್ ಜಿಲ್ಲಾ ಸಂಚಾಲಕರಾದ ವೀರಣ್ಣ ಗಡ್ಡಿಯವರ, ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷರಾದ ಅರುಣ ನಾಗಾವತ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಖಲಂದರ್ ಅಲ್ಲಿಗೌಡ್ರ, ಅಜಯಸಿಂಗ್ ರಜಪೂತ, ಪರಶುರಾಮ ಕಹಾರ್, ಸುಲ್ತಾನ ಹುಬ್ಬಳ್ಳಿ, ಆನಂದ ಕ್ಯಾಲಕೊಂಡ, ನಾಗನಗೌಡ ಹರ್ತಿ, ಜಾಕಿರಲಿ ದೇವಗೇರಿ, ಚಮನಸಾಬ್ ಮೆಳ್ಳೆಗಟ್ಟಿ, ಶಿವಯೋಗಿ ನಂದಿ, ಸಿದ್ಧರಾಮೇಶ ಸಿಂಧನೂರು, ವಿವೇಕ ಹುಲ್ಲೂರು, ನಿಂಗರಾಜ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಯುವತಲೆಮಾರಿಗೆ ಕುವೆಂಪು ಓದು; ಸಾಹಿತ್ಯ ಚಿಂತನೆಗಳ ಸಡಗರ Janashakthi Media

Donate Janashakthi Media

Leave a Reply

Your email address will not be published. Required fields are marked *